ಮುಂಡಗೋಡಿನಲ್ಲಿ ಅರ್ಥಪೂರ್ಣ “ವಾಲ್ಮೀಕಿ ಜಯಂತಿ”

ಮುಂಡಗೋಡಿನಲ್ಲಿ ಅರ್ಥಪೂರ್ಣ “ವಾಲ್ಮೀಕಿ ಜಯಂತಿ”

Valmiki Jayanti News: ಮುಂಡಗೋಡ:ಮಹಾಪುರುಷರ ಜಯಂತಿಗಳನ್ನು ಎಲ್ಲಾ ಸಮುದಾಯದವರು ಸೇರಿ ಒಟ್ಟಾಗಿ ಆಚರಣೆ ಮಾಡಬೇಕು ಬಹುತೇಕ ಎಲ್ಲ ಸಮುದಾಯದ ಜನಾಂಗಗಳಲ್ಲಿ ಮಹಾತ್ಮರು ಹುಟ್ಟಿ ಸಮಾಜ ಸುಧಾರಣೆಗಾಗಿ ತಮ್ಮ ಜೀವನ ಮುಡಿಪಾಗಿ ಇಟ್ಟಿದ್ದಾರೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ ಹೇಳಿದರು. ಪಟ್ಟಣದ ಟೌನ್‌ ಹಾಲ್ ನಲ್ಲಿ ಮಂಗಳವಾರ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಿಗೆ ಜೀವನದಲ್ಲಿ ಸಾಧನೆ ಮುಖ್ಯ. ಅನೇಕ ಮಹಾಪುರುಷರು ಬಡತನದಲ್ಲಿ ಹುಟ್ಟಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಾಧನೆ ಮಾಡಿದ್ದಾರೆ. ವಾಲ್ಮೀಕಿಯವರು ಬೇಟೆಯಾಡಿ ಜೀವನ ನಡೆಸುತ್ತಿದ್ದರು. ನಂತರ ತಪಸ್ಸು ಮಾಡಿ ರಾಮಾಯಣ ಗ್ರಂಥ ಬರೆದರು. ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು. ಉಪನ್ಯಾಸಕರ ಮಾತು..! ಅಣ್ಣಪ್ಪ ತಳವಾರ ಉಪನ್ಯಾಸ ನೀಡಿ ಮಹರ್ಷಿ ವಾಲ್ಮೀಕಿ ರಾಮಾಯಣದ ಬಗ್ಗೆ ಸಮುದಾಯದ ಎಷ್ಟೋ ಬಂಧುಗಳಿಗೆ ಗೊತ್ತಿಲ್ಲ. ರಾಮನ ಆಯಣ ಅಥವಾ ಚರಿತ್ರೆಯೇ ರಾಮಾಯಣ. ಜಗತ್ತಿನಲ್ಲಿಯೇ ಅತೀ ಶ್ರೇಷ್ಟ ಗ್ರಂಥಗಳಲ್ಲಿ ಒಂದು. 24 ಸಾವಿರ ಶ್ಲೋಕಗಳನ್ನು ಒಳಗೊಂಡಿದೆ. ರಾಮಾಯಣದ ಶ್ಲೋಕಗಳು...

ಬೋಧಕೇತರ ನೌಕರರು ಸಂಘಟಿತರಾಗಿರುವುದು ಖುಷಿ ತಂದಿದೆ”- ಡಿಡಿಪಿಐ ಎಂ ಎನ್ ದಂಡಿನ ಶ್ಲಾಘನೆ

ಬೋಧಕೇತರ ನೌಕರರು ಸಂಘಟಿತರಾಗಿರುವುದು ಖುಷಿ ತಂದಿದೆ”- ಡಿಡಿಪಿಐ ಎಂ ಎನ್ ದಂಡಿನ ಶ್ಲಾಘನೆ

Education Department; ಹಾವೇರಿ; ಬೋಧಕೇತರರ ನೌಕರರು ತಮ್ಮ ಸೇವೆಯನ್ನು ಇಲಾಖೆಗೆ ಸಲ್ಲಿಸುತ್ತಿದ್ದು ಅವರ ಮೂಲಕ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಪ್ರತಿಯೊಬ್ಬ ಬೋಧಕೇತರ ನೌಕರನು ಇಲಾಖೆಯ ಎಲ್ಲ ಯೋಜನೆಗಳ ಮಾಹಿತಿ ಮತ್ತು ಕಾನೂನಿನ ನಿಯಮಗಳನ್ನು ಮನದಟ್ಟು ಮಾಡಿಕೊಂಡು ನಿಯಮಾನುಸಾರ ಕಾರ್ಯ ನಿರ್ವಹಿಸಿಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ ಎನ್ ದಂಡಿನ ಹೇಳಿದ್ರು. ಅವರು ರವಿವಾರ ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಲಿಪಿಕ ನೌಕರರ ವಾಹನ ಚಾಲಕರ ಮತ್ತು ಡಿ ಗ್ರೂಪ್ ನೌಕರರ ಸಂಘ ಹಾವೇರಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೋಧಕೇತರ ನೌಕರರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಹಾವೇರಿ ಜಿಲ್ಲಾ ಡಯಟ್ ಪ್ರಾಂಶುಪಾಲ ಝಡ್ ಎಂ ಖಾಜಿ ಸರ್ಕಾರದ ಯೋಜನೆಗಳು ಸಾರ್ವಜನಿಕರನ್ನು ತಲುಪಿಸುವಲ್ಲಿ ಬೋಧಕೇತರ ನೌಕರರದೆ ಪ್ರಮುಖಪಾತ್ರವಾಗಿದ್ದು. ಇಲಾಖೆಯ ಯಶಸ್ಸಿನಲ್ಲಿ ಹೆಚ್ಚಿನ ಪಾತ್ರ ಅವರದೇ ಆಗಿದೆ ಎಂದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಬೊಂಗಾಳೆಯವರ ಅಧ್ಯಕ್ಷತೆಯಲ್ಲಿ ನಡೆದ...

ನಂದಿಪುರದಲ್ಲಿ ಗ್ರಾಮಸ್ಥರಿಂದ ಅಂಗನವಾಡಿಗೆ ಮಕ್ಕಳನ್ನು ಕಳಿಸದೇ ಬಹಿಷ್ಕಾರ

ನಂದಿಪುರದಲ್ಲಿ ಗ್ರಾಮಸ್ಥರಿಂದ ಅಂಗನವಾಡಿಗೆ ಮಕ್ಕಳನ್ನು ಕಳಿಸದೇ ಬಹಿಷ್ಕಾರ

 Boycott Anganwadi; ಸ್ಥಳೀಯರನ್ನು ಬಿಟ್ಟು ಬೇರೆ ಗ್ರಾಮದವರನ್ನು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕ ಮಾಡಿರೋ ಕಾರಣಕ್ಕೆ, ಮುಂಡಗೋಡ ತಾಲೂಕಿನ ನಂದಿಪುರ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸದೇ ಬಹಿಷ್ಕರಿಸಿದ್ದಾರೆ. ಹೀಗಾಗಿ, ಕಳೆದ ನಾಲ್ಕೈದು ದಿನಗಳಿಂದ ನಂದಿಪುರದ ಅಂಗನವಾಡಿ ಕೇಂದ್ರ ಮಕ್ಕಳಿಲ್ಲದೇ ಇಂದು ಬೀಕೋ ಎನ್ನುತ್ತಿತ್ತು. ಅಂದಹಾಗೆ, ನಂದಿಪುರದ ಅಂಗನವಾಡಿಯಲ್ಲಿ ಕಾರ್ಯಕರ್ತೆಯ ಹುದ್ದೆ ಖಾಲಿಯಾಗಿತ್ತು. ಹೀಗಾಗಿ, ನೂತನವಾಗಿ ಕಾರ್ಯಕರ್ತೆಯ ಆಯ್ಕೆ ನಡೆದಿದೆ. ಈ ವೇಳೆ ಗ್ರಾಮದಿಂದ ಸುಮಾರು ಆರು ಕೀಮಿ ದೂರವಿರೋ ಮಹಿಳೆಯೊಬ್ಬರಿಗೆ ಅಂಗನವಾಡಿ ಕಾರ್ಯಕರ್ತೆಯ ಹುದ್ದೆ ನೀಡಲಾಗಿದೆ. ಸ್ಥಳೀಯವಾಗಿ ಅರ್ಹರು ಇದ್ದರೂ ಅವ್ರಿಗೆ ಹುದ್ದೆ ನೀಡಲಾಗಿಲ್ಲ‌. ಹೀಗಾಗಿ, ಇದನ್ನು ಖಂಡಿಸಿರೋ ಗ್ರಾಮಸ್ಥರು ಅಂಗನವಾಡಿಗೆ ತಮ್ಮ‌ ಮಕ್ಕಳನ್ನು ಕಳಿಸದೇ ಬಹಿಷ್ಕರಿಸಿದ್ದಾರೆ.  

ಇಂದೂರು ಕೊಪ್ಪದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣು..!

ಇಂದೂರು ಕೊಪ್ಪದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣು..!

Crime News; ಮುಂಡಗೋಡ ತಾಲೂಕಿನ ಕೊಪ್ಪ (ಇಂದೂರು) ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಪ್ಪ ಗ್ರಾಮದ ರವಿ ಯಲ್ಲಪ್ಪ ಎಗೇನವರ (34) ಎಂಬುವವನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ವ್ಯಕ್ತಿಯಾಗಿದ್ದಾನೆ. ಇಂದು ಬೆಳಿಗ್ಗೆ ಪಕ್ಕದ ಮನೇಲಿ ಇದ್ದ ತಾಯಿ ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಆದ್ರೆ, ನೇಣಿಗೆ ಶರಣಾಗಿದ್ದು ಯಾವಾಗ ಅನ್ನೋದು ಖಚಿತವಾಗಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕ್ಷೇತ್ರ ಸಮನ್ವಯಾಧಿಕಾರಿ ಹುದ್ದೆಯಿಂದ ರಮೇಶ್ ಅಂಬಿಗೇರಗೆ ಕೋಕ್..! ಪರಶುರಾಮ್ ಅಟ್ಟಣಗಿ ನೂತನ ಸಮನ್ವಯಾಧಿಕಾರಿ, DDPI ಆದೇಶ..!

ಕ್ಷೇತ್ರ ಸಮನ್ವಯಾಧಿಕಾರಿ ಹುದ್ದೆಯಿಂದ ರಮೇಶ್ ಅಂಬಿಗೇರಗೆ ಕೋಕ್..! ಪರಶುರಾಮ್ ಅಟ್ಟಣಗಿ ನೂತನ ಸಮನ್ವಯಾಧಿಕಾರಿ, DDPI ಆದೇಶ..!

Education Department: ಮುಂಡಗೋಡ: ಕಾತೂರಿನ ಪ್ರೌಢ ಶಾಲೆಯಲ್ಲಿ ಕ್ರೀಡಾ ಸಾಮಗ್ರಿ ಸೇರಿದಂತೆ ವಿವಿಧ ಅನುದಾನವನ್ನು ಸಮರ್ಪಕವಾಗಿ ನಿರ್ವಹಿಸದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಪ್ರಬಾರ ಹುದ್ದೆಯಲ್ಲಿದ್ದ  ಸನ್ಮಾನ್ಯ ಶ್ರೀ ರಮೇಶ್ ಅಂಬಿಗೇರ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಿ ಕಾತೂರಿನ ಸಹ ಶಿಕ್ಷಕ ಪರಶುರಾಮ ಅಟ್ಟಣಗಿ ಅವರನ್ನು ಆ ಹುದ್ದೆಗೆ ನೇಮಿಸಿ ಶಿರಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ಹಿಂದೆಯಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಹುದ್ದೆಯಲ್ಲಿದ್ದ ಜಿ.ಎನ್ ನಾಯ್ಕ ಅವರು ನಿವೃತ್ತಿ ಆಗಿದ್ದರಿಂದ ತೆರವುವಾಗಿದ್ದ ಹುದ್ದೆಗೆ ಕಾತೂರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಮೇಶ ಅಂಬಿಗೇರ ಅವರಿಗೆ ಹೆಚ್ಚುವರಿಯಾಗಿ ಪ್ರಭಾರ ಹುದ್ದೆ ನೀಡಲಾಗಿತ್ತು. ಆದರೆ ಕಾತೂರಿನ ಸರಕಾರಿ ಪ್ರೌಡ ಶಾಲೆಯಲ್ಲಿ 2024 -25 ರ ಸಾಲಿನಲ್ಲಿ ಅಟಲ್ ಟೆಂಕರಿಂಗ್ ಲ್ಯಾಬ್ ಅನುದಾನ, ಕರಾಟೆ, ಕ್ರೀಡಾ ಸಾಮಗ್ರಿ ರಂಗೋತ್ಸವ, ಗ್ರಂಥಾಲಯ ಅನುದಾನದ ಹಣಕಾಸಿನ ವ್ಯವಹಾರವನ್ನು ವ್ಯವಸ್ಥಿತವಾಗಿ ನಿರ್ವಹಿಸದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಹಿನ್ನೆಲೆಯಲ್ಲಿ ತಾಲೂಕಾ ಮಟ್ಟದ ಹುದ್ದೆಯಾದ...

ಮುಂಡಗೋಡಿಗೆ ಮತ್ತೊಮ್ಮೆ PSI ಆಗಿ ಯಲ್ಲಾಲಿಂಗ್ ಕುನ್ನೂರು, ಮಹಾಂತೇಶ್ ವಾಲ್ಮೀಕಿ ವರ್ಗಾವಣೆ ಕ್ಯಾನ್ಸಲ್..!

ಮುಂಡಗೋಡಿಗೆ ಮತ್ತೊಮ್ಮೆ PSI ಆಗಿ ಯಲ್ಲಾಲಿಂಗ್ ಕುನ್ನೂರು, ಮಹಾಂತೇಶ್ ವಾಲ್ಮೀಕಿ ವರ್ಗಾವಣೆ ಕ್ಯಾನ್ಸಲ್..!

Police Transfer News; ಮುಂಡಗೋಡಿಗೆ PSI ಆಗಿ ವರ್ಗಾವಣೆಗೊಂಡಿದ್ದ ಮಹಾಂತೇಶ್ ವಾಲ್ಮೀಕಿಯವರ ವರ್ಗಾವಣೆ ಆದೇಶ ಕೊನೆಗೂ ರದ್ದಾಗಿದೆ. ಈಗ ಹೊಸ ಆದೇಶದ ಪ್ರಕಾರ ಯಲ್ಲಾಲಿಂಗ್ ಕುನ್ನೂರ್ ಮುಂಡಗೋಡಿಗೆ ಮತ್ತೊಮ್ಮೆ PSI ಆಗಿ ಬರಲಿದ್ದಾರೆ. ಸೋಮವಾರವಷ್ಟೇ ಮುಂಡಗೋಡಿಗೆ ನೂತನ PSI ಆಗಿ ಮಹಾಂತೇಶ್ ವಾಲ್ಮೀಕಿ ಎಂಬುವವರು, ಚಿತ್ತಾಕುಲ ಪೊಲೀಸ್ ಠಾಣೆಯಿಂದ ವರ್ಗವಾಗಿದ್ದ ಆದೇಶ ಹೊರಬಿದ್ದಿತ್ತು. ಆದ್ರೆ, ಅದಾದ ಎರಡೇ ದಿನದಲ್ಲಿ ಮತ್ತೆ ಆದೇಶ ಬದಲಾಗಿದೆ. ಇದೀಗ ಈ ಮೊದಲು ಇಲ್ಲೇ ಕೆಲಸ ಮಾಡಿ ಹೋಗಿದ್ದ ಯಲ್ಲಾಲಿಂಗ ಕುನ್ನೂರು ಮತ್ತೊಮ್ಮೆ ಮುಂಡಗೋಡಿಗೆ ಬಂದಿದ್ದಾರೆ. ಇದನ್ನೂ ಓದಿ👉PSI ಮಹಾಂತೇಶ್ ವಾಲ್ಮೀಕಿ ಮುಂಡಗೋಡಿಗೆ ವರ್ಗ..! ವರ್ಗಾವಣೆ ಕ್ಯಾನ್ಸಲ್ ಮಾಡಿಸೋಕೆ ಕಾಣದ ಕೈಗಳ “ಜಂ”ಪಾಠ..! ಛೇ, ಹೀಗೂ ಇದೆಯಾ ವ್ಯವಸ್ಥೆ..?

PSI ಮಹಾಂತೇಶ್ ವಾಲ್ಮೀಕಿ ಮುಂಡಗೋಡಿಗೆ ವರ್ಗ..! ವರ್ಗಾವಣೆ ಕ್ಯಾನ್ಸಲ್ ಮಾಡಿಸೋಕೆ ಕಾಣದ ಕೈಗಳ “ಜಂ”ಪಾಠ..! ಛೇ, ಹೀಗೂ ಇದೆಯಾ ವ್ಯವಸ್ಥೆ..?

PSI ಮಹಾಂತೇಶ್ ವಾಲ್ಮೀಕಿ ಮುಂಡಗೋಡಿಗೆ ವರ್ಗ..! ವರ್ಗಾವಣೆ ಕ್ಯಾನ್ಸಲ್ ಮಾಡಿಸೋಕೆ ಕಾಣದ ಕೈಗಳ “ಜಂ”ಪಾಠ..! ಛೇ, ಹೀಗೂ ಇದೆಯಾ ವ್ಯವಸ್ಥೆ..?

Police Transfer News; ಮುಂಡಗೋಡಿಗೆ PSI ಆಗಿ ಮಹಾಂತೇಶ್ ವಾಲ್ಮೀಕಿ ವರ್ಗಾವಣೆಗೊಂಡಿದ್ದಾರೆ. ಎಲ್ಲವೂ ಸರಿಯಾಗಿದ್ದಿದ್ದರೆ ಇಷ್ಟೊತ್ತಿಗಾಗಲೇ ಅಂದ್ರೆ ನಿನ್ನೆ ಮಂಗಳವಾರವೇ ಅವ್ರು ಮುಂಡಗೋಡಿಗೆ ಬಂದು ಅಧಿಕಾರ ಸ್ವೀಕರಿಸಬೇಕಾಗಿತ್ತು ಆದ್ರೆ, ಮಹಾಂತೇಶ್ ವಾಲ್ಮೀಕಿಯವರಿಗೆ ಇಲ್ಲಿಗೆ ಬರದಂತೆ ತಡೆಯಲು ಕಾಣದ ಕೈಗಳ ತಂಡವೊಂದು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ ಅ‌ನ್ನೋ ರೂಮರ್ರು ಇಡೀ ತಾಲೂಕಾಧ್ಯಂತ ಹರಿದಾಡ್ತಿದೆ‌. ಅದೇನೋ ಗೊತ್ತಿಲ್ಲ, ಸದ್ಯ ಕೇಳಿ ಬರ್ತಿರೋ ರೋಚಕ ಮಾಹಿತಿ ಆಧಾರದಲ್ಲಿ ಹೇಳೋದಾದ್ರೆ ಮತ್ತದೇ ಹಳಬರೊಬ್ರು ಮುಂಡಗೋಡಿನಲ್ಲಿ ಮತ್ತೊಮ್ಮೆ ಪ್ರತಿಷ್ಟಾಪನೆಗೊಳ್ಳಲು ಹರಸಾಹಸ ಪಡ್ತಿದಾರಂತೆ, ಹೀಗಾಗಿನೇ ಆ ಚೆಂಡು ಈಗ ಶಾಸಕ ಶಿವರಾಮ್ ಹೆಬ್ಬಾರ್ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ ಎನ್ನಲಾಗ್ತಿದೆ. ಆದ್ರೆ, ಯಲ್ಲಾಪುರ ಕ್ಷೇತ್ರದ ಪ್ರಭುದ್ಧ ಶಾಸಕ, ಎಲ್ಲವನ್ನೂ ಸೂಕ್ಷ್ಮವಾಗೇ ಗಮನಿಸುವ ಗುಣವಿರೋ ಕಾರಣಕ್ಕೆ ಅಳೆದು ತೂಗಿ ತೀರ್ಮಾನಿಸ್ತಾರೆ ಅನ್ನೋ ನಂಬಿಕೆಯಲ್ಲಿದ್ದಾರೆ ಜನ.. ಅವಧಿಗೂ ಮುನ್ನವೇ..! ಅಸಲು, ಸದ್ಯ ಮುಂಡಗೋಡಿನಿಂದ ವರ್ಗಾವಣೆಗೊಂಡಿರೋ PSI ಪರಶುರಾಮ್‌ ಮಿರ್ಜಿಗಿ ಒಂದರ್ಥದಲ್ಲಿ ಜನಮನ್ನಣೆ ಗಳಿಸಿಕೊಂಡಿದ್ದರು, ಅವ್ರು ಠಾಣೆಯಲ್ಲಿ ಅದು ಹೇಗಿದ್ರೋ ಗೊತ್ತಿಲ್ಲ, ಆದ್ರೆ ಜನಸಮಾನ್ಯರಲ್ಲಿ ಆತ್ಮೀಯತೆ...

ಹಳೂರು- ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೋ ನಡುವೆ ಅಪಘಾತ, ಐವರಿಗೆ ಸಣ್ಣಪುಟ್ಟ ಗಾಯ..!

ಹಳೂರು- ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೋ ನಡುವೆ ಅಪಘಾತ, ಐವರಿಗೆ ಸಣ್ಣಪುಟ್ಟ ಗಾಯ..!

Accident News; ಮುಂಡಗೋಡ ತಾಲೂಕಿನ ಹಳೂರು ಹಾಗೂ ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೊಇ ನಡುವೆ ಅಪಘಾತವಾಗಿದೆ. ಪರಿಣಾಮ ಐವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಹಳೂರಿನಿಂದ ಕ್ಯಾಸನಕೇರಿಗೆ ಹೋಗುವ ಮಾರ್ಗದಲ್ಲಿ ಓವರ್ ಟೇಕ್ ಮಾಡಲು ಹೋಗಿ ಇಂತಹದ್ದೊಂದು ಅಪಘಾತವಾಗಿದೆ ಅಂತಾ ತಿಳಿದು ಬಂದಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!

ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!

Hubli Crime News; ಹುಬ್ಬಳ್ಳಿ: ಯುವಕನೊಬ್ಬನನ್ನು ಮನೆಯಲ್ಲಿ ಮಲಗಿದ್ದವನನ್ನು ಕರೆಯಿಸಿ ಪುಂಡರ ಗ್ಯಾಂಗ್ ಒಂದು ರಾಡ್, ತಲ್ವಾರನಿಂದ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯ ಸೆಟ್ಲಮೆಂಟ್‌ ಏರಿಯಾದಲ್ಲಿ ನಡೆದಿದೆ. ಮಹೇಶ ಭಾರ್ಕೆರ ಎಂಬಾತನೇ ಹಲ್ಲೆಗೊಳಗಾದ ಯುವಕ, ಈತ ಮನೆಯಲ್ಲಿ ಮಲಗಿದ್ದಾಗ, ಯುವಕರ ಗ್ಯಾಂಗ್ ಒಂದು ಅವನನ್ನು ಕರೆದು ಕುತ್ತಿಗೆಗೆ ಚಾಕು ಹಾಕಿ, ತಲೆಗೆ ರಾಡ್, ತಲ್ವಾರ್‌ನಿಂದ ಹಲ್ಲೆ ಮಾಡಿದ್ದಾರೆ. ಆಗ ಮಹೇಶ ಭಾರ್ಕೆರ ಅವರಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾನೆ. ಪೊಲೀಸರು ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!

ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!

Best Teacher Award; ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಮುಂಡಗೋಡ ತಾಲೂಕಿನ ಮೂವರು ಶಿಕ್ಷಕರನ್ನು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿಭಾಗ ಸೇರಿ ಒಟ್ಟೂ ಮೂರು ವಿಭಾಗಗಳಲ್ಲೂ ತಲಾ 6 ಜನರಂತೆ ಒಟ್ಟೂ 18 ಶಿಕ್ಷಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಅದ್ರಲ್ಲಿ ಮುಂಡಗೋಡ ತಾಲೂಕಿನ ಮೂವರಿಗೆ ಪ್ರಶಸ್ತಿ ಲಭಿಸಿದೆ. ಕಿರಿಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ತಟ್ಟಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುನೀತಾ ಕೃಷ್ಣಪ್ಪ ಪವಾರ್ ಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಇನ್ನು, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹಿರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪೂರ್ಣಿಮಾ ಕೈಟಕರ್ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಮಳಗಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ದೈಹಿಕ ಶಿಕ್ಷಕ ಅಶೋಕ ಸಂಕ್ರಿಕೊಪ್ಪ ಆಯ್ಕೆಯಾಗಿದ್ದಾರೆ.

error: Content is protected !!