Boycott Anganwadi; ಸ್ಥಳೀಯರನ್ನು ಬಿಟ್ಟು ಬೇರೆ ಗ್ರಾಮದವರನ್ನು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕ ಮಾಡಿರೋ ಕಾರಣಕ್ಕೆ, ಮುಂಡಗೋಡ ತಾಲೂಕಿನ ನಂದಿಪುರ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸದೇ ಬಹಿಷ್ಕರಿಸಿದ್ದಾರೆ. ಹೀಗಾಗಿ, ಕಳೆದ ನಾಲ್ಕೈದು ದಿನಗಳಿಂದ ನಂದಿಪುರದ ಅಂಗನವಾಡಿ ಕೇಂದ್ರ ಮಕ್ಕಳಿಲ್ಲದೇ ಇಂದು ಬೀಕೋ ಎನ್ನುತ್ತಿತ್ತು. ಅಂದಹಾಗೆ, ನಂದಿಪುರದ ಅಂಗನವಾಡಿಯಲ್ಲಿ ಕಾರ್ಯಕರ್ತೆಯ ಹುದ್ದೆ ಖಾಲಿಯಾಗಿತ್ತು. ಹೀಗಾಗಿ, ನೂತನವಾಗಿ ಕಾರ್ಯಕರ್ತೆಯ ಆಯ್ಕೆ ನಡೆದಿದೆ. ಈ ವೇಳೆ ಗ್ರಾಮದಿಂದ ಸುಮಾರು ಆರು ಕೀಮಿ ದೂರವಿರೋ ಮಹಿಳೆಯೊಬ್ಬರಿಗೆ ಅಂಗನವಾಡಿ ಕಾರ್ಯಕರ್ತೆಯ ಹುದ್ದೆ ನೀಡಲಾಗಿದೆ. ಸ್ಥಳೀಯವಾಗಿ ಅರ್ಹರು ಇದ್ದರೂ ಅವ್ರಿಗೆ ಹುದ್ದೆ ನೀಡಲಾಗಿಲ್ಲ. ಹೀಗಾಗಿ, ಇದನ್ನು ಖಂಡಿಸಿರೋ ಗ್ರಾಮಸ್ಥರು ಅಂಗನವಾಡಿಗೆ ತಮ್ಮ ಮಕ್ಕಳನ್ನು ಕಳಿಸದೇ ಬಹಿಷ್ಕರಿಸಿದ್ದಾರೆ.
Top Stories
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಇಂದೂರು ಕೊಪ್ಪದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣು..!
Crime News; ಮುಂಡಗೋಡ ತಾಲೂಕಿನ ಕೊಪ್ಪ (ಇಂದೂರು) ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಪ್ಪ ಗ್ರಾಮದ ರವಿ ಯಲ್ಲಪ್ಪ ಎಗೇನವರ (34) ಎಂಬುವವನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ವ್ಯಕ್ತಿಯಾಗಿದ್ದಾನೆ. ಇಂದು ಬೆಳಿಗ್ಗೆ ಪಕ್ಕದ ಮನೇಲಿ ಇದ್ದ ತಾಯಿ ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಆದ್ರೆ, ನೇಣಿಗೆ ಶರಣಾಗಿದ್ದು ಯಾವಾಗ ಅನ್ನೋದು ಖಚಿತವಾಗಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕ್ಷೇತ್ರ ಸಮನ್ವಯಾಧಿಕಾರಿ ಹುದ್ದೆಯಿಂದ ರಮೇಶ್ ಅಂಬಿಗೇರಗೆ ಕೋಕ್..! ಪರಶುರಾಮ್ ಅಟ್ಟಣಗಿ ನೂತನ ಸಮನ್ವಯಾಧಿಕಾರಿ, DDPI ಆದೇಶ..!
Education Department: ಮುಂಡಗೋಡ: ಕಾತೂರಿನ ಪ್ರೌಢ ಶಾಲೆಯಲ್ಲಿ ಕ್ರೀಡಾ ಸಾಮಗ್ರಿ ಸೇರಿದಂತೆ ವಿವಿಧ ಅನುದಾನವನ್ನು ಸಮರ್ಪಕವಾಗಿ ನಿರ್ವಹಿಸದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಪ್ರಬಾರ ಹುದ್ದೆಯಲ್ಲಿದ್ದ ಸನ್ಮಾನ್ಯ ಶ್ರೀ ರಮೇಶ್ ಅಂಬಿಗೇರ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಿ ಕಾತೂರಿನ ಸಹ ಶಿಕ್ಷಕ ಪರಶುರಾಮ ಅಟ್ಟಣಗಿ ಅವರನ್ನು ಆ ಹುದ್ದೆಗೆ ನೇಮಿಸಿ ಶಿರಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ಹಿಂದೆಯಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಹುದ್ದೆಯಲ್ಲಿದ್ದ ಜಿ.ಎನ್ ನಾಯ್ಕ ಅವರು ನಿವೃತ್ತಿ ಆಗಿದ್ದರಿಂದ ತೆರವುವಾಗಿದ್ದ ಹುದ್ದೆಗೆ ಕಾತೂರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಮೇಶ ಅಂಬಿಗೇರ ಅವರಿಗೆ ಹೆಚ್ಚುವರಿಯಾಗಿ ಪ್ರಭಾರ ಹುದ್ದೆ ನೀಡಲಾಗಿತ್ತು. ಆದರೆ ಕಾತೂರಿನ ಸರಕಾರಿ ಪ್ರೌಡ ಶಾಲೆಯಲ್ಲಿ 2024 -25 ರ ಸಾಲಿನಲ್ಲಿ ಅಟಲ್ ಟೆಂಕರಿಂಗ್ ಲ್ಯಾಬ್ ಅನುದಾನ, ಕರಾಟೆ, ಕ್ರೀಡಾ ಸಾಮಗ್ರಿ ರಂಗೋತ್ಸವ, ಗ್ರಂಥಾಲಯ ಅನುದಾನದ ಹಣಕಾಸಿನ ವ್ಯವಹಾರವನ್ನು ವ್ಯವಸ್ಥಿತವಾಗಿ ನಿರ್ವಹಿಸದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಹಿನ್ನೆಲೆಯಲ್ಲಿ ತಾಲೂಕಾ ಮಟ್ಟದ ಹುದ್ದೆಯಾದ...
ಮುಂಡಗೋಡಿಗೆ ಮತ್ತೊಮ್ಮೆ PSI ಆಗಿ ಯಲ್ಲಾಲಿಂಗ್ ಕುನ್ನೂರು, ಮಹಾಂತೇಶ್ ವಾಲ್ಮೀಕಿ ವರ್ಗಾವಣೆ ಕ್ಯಾನ್ಸಲ್..!
Police Transfer News; ಮುಂಡಗೋಡಿಗೆ PSI ಆಗಿ ವರ್ಗಾವಣೆಗೊಂಡಿದ್ದ ಮಹಾಂತೇಶ್ ವಾಲ್ಮೀಕಿಯವರ ವರ್ಗಾವಣೆ ಆದೇಶ ಕೊನೆಗೂ ರದ್ದಾಗಿದೆ. ಈಗ ಹೊಸ ಆದೇಶದ ಪ್ರಕಾರ ಯಲ್ಲಾಲಿಂಗ್ ಕುನ್ನೂರ್ ಮುಂಡಗೋಡಿಗೆ ಮತ್ತೊಮ್ಮೆ PSI ಆಗಿ ಬರಲಿದ್ದಾರೆ. ಸೋಮವಾರವಷ್ಟೇ ಮುಂಡಗೋಡಿಗೆ ನೂತನ PSI ಆಗಿ ಮಹಾಂತೇಶ್ ವಾಲ್ಮೀಕಿ ಎಂಬುವವರು, ಚಿತ್ತಾಕುಲ ಪೊಲೀಸ್ ಠಾಣೆಯಿಂದ ವರ್ಗವಾಗಿದ್ದ ಆದೇಶ ಹೊರಬಿದ್ದಿತ್ತು. ಆದ್ರೆ, ಅದಾದ ಎರಡೇ ದಿನದಲ್ಲಿ ಮತ್ತೆ ಆದೇಶ ಬದಲಾಗಿದೆ. ಇದೀಗ ಈ ಮೊದಲು ಇಲ್ಲೇ ಕೆಲಸ ಮಾಡಿ ಹೋಗಿದ್ದ ಯಲ್ಲಾಲಿಂಗ ಕುನ್ನೂರು ಮತ್ತೊಮ್ಮೆ ಮುಂಡಗೋಡಿಗೆ ಬಂದಿದ್ದಾರೆ. ಇದನ್ನೂ ಓದಿ👉PSI ಮಹಾಂತೇಶ್ ವಾಲ್ಮೀಕಿ ಮುಂಡಗೋಡಿಗೆ ವರ್ಗ..! ವರ್ಗಾವಣೆ ಕ್ಯಾನ್ಸಲ್ ಮಾಡಿಸೋಕೆ ಕಾಣದ ಕೈಗಳ “ಜಂ”ಪಾಠ..! ಛೇ, ಹೀಗೂ ಇದೆಯಾ ವ್ಯವಸ್ಥೆ..?
PSI ಮಹಾಂತೇಶ್ ವಾಲ್ಮೀಕಿ ಮುಂಡಗೋಡಿಗೆ ವರ್ಗ..! ವರ್ಗಾವಣೆ ಕ್ಯಾನ್ಸಲ್ ಮಾಡಿಸೋಕೆ ಕಾಣದ ಕೈಗಳ “ಜಂ”ಪಾಠ..! ಛೇ, ಹೀಗೂ ಇದೆಯಾ ವ್ಯವಸ್ಥೆ..?
Police Transfer News; ಮುಂಡಗೋಡಿಗೆ PSI ಆಗಿ ಮಹಾಂತೇಶ್ ವಾಲ್ಮೀಕಿ ವರ್ಗಾವಣೆಗೊಂಡಿದ್ದಾರೆ. ಎಲ್ಲವೂ ಸರಿಯಾಗಿದ್ದಿದ್ದರೆ ಇಷ್ಟೊತ್ತಿಗಾಗಲೇ ಅಂದ್ರೆ ನಿನ್ನೆ ಮಂಗಳವಾರವೇ ಅವ್ರು ಮುಂಡಗೋಡಿಗೆ ಬಂದು ಅಧಿಕಾರ ಸ್ವೀಕರಿಸಬೇಕಾಗಿತ್ತು ಆದ್ರೆ, ಮಹಾಂತೇಶ್ ವಾಲ್ಮೀಕಿಯವರಿಗೆ ಇಲ್ಲಿಗೆ ಬರದಂತೆ ತಡೆಯಲು ಕಾಣದ ಕೈಗಳ ತಂಡವೊಂದು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ ಅನ್ನೋ ರೂಮರ್ರು ಇಡೀ ತಾಲೂಕಾಧ್ಯಂತ ಹರಿದಾಡ್ತಿದೆ. ಅದೇನೋ ಗೊತ್ತಿಲ್ಲ, ಸದ್ಯ ಕೇಳಿ ಬರ್ತಿರೋ ರೋಚಕ ಮಾಹಿತಿ ಆಧಾರದಲ್ಲಿ ಹೇಳೋದಾದ್ರೆ ಮತ್ತದೇ ಹಳಬರೊಬ್ರು ಮುಂಡಗೋಡಿನಲ್ಲಿ ಮತ್ತೊಮ್ಮೆ ಪ್ರತಿಷ್ಟಾಪನೆಗೊಳ್ಳಲು ಹರಸಾಹಸ ಪಡ್ತಿದಾರಂತೆ, ಹೀಗಾಗಿನೇ ಆ ಚೆಂಡು ಈಗ ಶಾಸಕ ಶಿವರಾಮ್ ಹೆಬ್ಬಾರ್ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ ಎನ್ನಲಾಗ್ತಿದೆ. ಆದ್ರೆ, ಯಲ್ಲಾಪುರ ಕ್ಷೇತ್ರದ ಪ್ರಭುದ್ಧ ಶಾಸಕ, ಎಲ್ಲವನ್ನೂ ಸೂಕ್ಷ್ಮವಾಗೇ ಗಮನಿಸುವ ಗುಣವಿರೋ ಕಾರಣಕ್ಕೆ ಅಳೆದು ತೂಗಿ ತೀರ್ಮಾನಿಸ್ತಾರೆ ಅನ್ನೋ ನಂಬಿಕೆಯಲ್ಲಿದ್ದಾರೆ ಜನ.. ಅವಧಿಗೂ ಮುನ್ನವೇ..! ಅಸಲು, ಸದ್ಯ ಮುಂಡಗೋಡಿನಿಂದ ವರ್ಗಾವಣೆಗೊಂಡಿರೋ PSI ಪರಶುರಾಮ್ ಮಿರ್ಜಿಗಿ ಒಂದರ್ಥದಲ್ಲಿ ಜನಮನ್ನಣೆ ಗಳಿಸಿಕೊಂಡಿದ್ದರು, ಅವ್ರು ಠಾಣೆಯಲ್ಲಿ ಅದು ಹೇಗಿದ್ರೋ ಗೊತ್ತಿಲ್ಲ, ಆದ್ರೆ ಜನಸಮಾನ್ಯರಲ್ಲಿ ಆತ್ಮೀಯತೆ...
ಹಳೂರು- ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೋ ನಡುವೆ ಅಪಘಾತ, ಐವರಿಗೆ ಸಣ್ಣಪುಟ್ಟ ಗಾಯ..!
Accident News; ಮುಂಡಗೋಡ ತಾಲೂಕಿನ ಹಳೂರು ಹಾಗೂ ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೊಇ ನಡುವೆ ಅಪಘಾತವಾಗಿದೆ. ಪರಿಣಾಮ ಐವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಹಳೂರಿನಿಂದ ಕ್ಯಾಸನಕೇರಿಗೆ ಹೋಗುವ ಮಾರ್ಗದಲ್ಲಿ ಓವರ್ ಟೇಕ್ ಮಾಡಲು ಹೋಗಿ ಇಂತಹದ್ದೊಂದು ಅಪಘಾತವಾಗಿದೆ ಅಂತಾ ತಿಳಿದು ಬಂದಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!
Hubli Crime News; ಹುಬ್ಬಳ್ಳಿ: ಯುವಕನೊಬ್ಬನನ್ನು ಮನೆಯಲ್ಲಿ ಮಲಗಿದ್ದವನನ್ನು ಕರೆಯಿಸಿ ಪುಂಡರ ಗ್ಯಾಂಗ್ ಒಂದು ರಾಡ್, ತಲ್ವಾರನಿಂದ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯ ಸೆಟ್ಲಮೆಂಟ್ ಏರಿಯಾದಲ್ಲಿ ನಡೆದಿದೆ. ಮಹೇಶ ಭಾರ್ಕೆರ ಎಂಬಾತನೇ ಹಲ್ಲೆಗೊಳಗಾದ ಯುವಕ, ಈತ ಮನೆಯಲ್ಲಿ ಮಲಗಿದ್ದಾಗ, ಯುವಕರ ಗ್ಯಾಂಗ್ ಒಂದು ಅವನನ್ನು ಕರೆದು ಕುತ್ತಿಗೆಗೆ ಚಾಕು ಹಾಕಿ, ತಲೆಗೆ ರಾಡ್, ತಲ್ವಾರ್‌ನಿಂದ ಹಲ್ಲೆ ಮಾಡಿದ್ದಾರೆ. ಆಗ ಮಹೇಶ ಭಾರ್ಕೆರ ಅವರಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾನೆ. ಪೊಲೀಸರು ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!
Best Teacher Award; ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಮುಂಡಗೋಡ ತಾಲೂಕಿನ ಮೂವರು ಶಿಕ್ಷಕರನ್ನು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿಭಾಗ ಸೇರಿ ಒಟ್ಟೂ ಮೂರು ವಿಭಾಗಗಳಲ್ಲೂ ತಲಾ 6 ಜನರಂತೆ ಒಟ್ಟೂ 18 ಶಿಕ್ಷಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಅದ್ರಲ್ಲಿ ಮುಂಡಗೋಡ ತಾಲೂಕಿನ ಮೂವರಿಗೆ ಪ್ರಶಸ್ತಿ ಲಭಿಸಿದೆ. ಕಿರಿಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ತಟ್ಟಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುನೀತಾ ಕೃಷ್ಣಪ್ಪ ಪವಾರ್ ಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಇನ್ನು, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹಿರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪೂರ್ಣಿಮಾ ಕೈಟಕರ್ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಮಳಗಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ದೈಹಿಕ ಶಿಕ್ಷಕ ಅಶೋಕ ಸಂಕ್ರಿಕೊಪ್ಪ ಆಯ್ಕೆಯಾಗಿದ್ದಾರೆ.
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!
Bhimatheera Murder News; ವಿಜಯಪುರದ ಭೀಮಾತೀರದಲ್ಲಿ ಗುಂಡಿನ ಸದ್ದು ಮತ್ತೆ ರಕ್ತ ಹರಿಸಿದೆ. ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಫೈರಿಂಗ್ ಆಗಿದ್ದು, ರೌಡಿ ಶೀಟರ್ ಭೀಮನಗೌಡ ಬಿರಾದಾರ್ ಎಂಬುವ ಗ್ರಾಪಂ ಅಧ್ಯಕ್ಷನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಭೀಮಾತೀರದ ಮಹಾದೇವ ಬೈರಗೊಂಡನ ಪರಮಾಪ್ತ ಹಾಗೂ ಬಲಗೈ ಬಂಟನಾಗಿದ್ದ ಭೀಮನಗೌಡ, ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್ ನಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ಆಗಮಿಸಿದ್ದ, ಇದೇ ವೇಳೆ ಮೂರರಿಂದ ನಾಲ್ಕು ಜನ ಮುಸುಕುಧಾರಿಗಳು ಏಕಾಏಕಿ ದಾಳಿ ಮಾಡಿ, ಕಟಿಂಗ್ ಮಾಡುವವನ ಕಣ್ಣಿಗೆ ಕಾರದ ಪುಡಿ ಎರಚಿ, ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಹೀಗಾಗಿ, ಗುಂಡುಗಳು ತಲೆ ಹಾಗೂ ಎದೆಗೆ ತಗುಲಿದ್ದು ಭೀಮನಗೌಡ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಹೀಗಾಗಿ, ಶವವನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗುಂಡು ಹಾರಿಸಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಳೆಯ ವೈಷಮ್ಯದ ಹಿನ್ನಲೆ ಗುಂಡು ಹಾರಿಸಿರೋ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಡಚಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಬೆಂಡೆಗುಂಬಳ್ ಹಾಗೂ ಇನ್ನಿತರ ಅಧಿಕಾರಿಗಳು...
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..! ಅಷ್ಟಕ್ಕೂ, ಪೊಲೀಸ್ ಅಧಿಕಾರಿಯ ಮಗಳಿಗೆ ಏನಾಯ್ತು..?
Student Suicide; ಶಿರಸಿ ತಾಲೂಕಿನ ಇಸಳೂರು ಗ್ರಾಮದಲ್ಲಿ ವಿದ್ಯಾರ್ಥಿನಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ ಸ್ನೇಹಾ (17) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡುವ ಮೊದಲು ಆಕೆ ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದರೆ ವಿದ್ಯಾರ್ಥಿನಿಯ ಆತ್ಮಹತ್ಯೆಯ ಬಗ್ಗೆ, ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ನೇಹಾ ಅವರ ತಂದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿಎಸ್‌ಐ ಸಂತೋಷಕುಮಾರ್ ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.









