International News:ಹನಾಯ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರಿಗೆ ಅವರ ಪತ್ನಿಯೇ ಕೆನ್ನೆಗೆ ಬಾರಿಸಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಆಗ್ನೇಯ ಏಷ್ಯಾ ಪ್ರವಾಸದ ಭಾಗವಾಗಿ ಮ್ಯಾಕ್ರಾನ್ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ಅವರೊಂದಿಗೆ ಭಾನುವಾರ ಸಂಜೆ ವಿಯೆಟ್ನಾಂನ ಹನಾಯ್ಗೆ ಬಂದಿಳಿದಿದ್ದರು. ವಿಮಾನದ ಬಾಗಿಲು ತೆರೆಯುತ್ತಿದ್ದಂತೆ ಪತ್ನಿ ತಮ್ಮ ಎರಡೂ ಕೈಗಳಿಂದ ಮ್ಯಾಕ್ರಾನ್ ಅವರ ಮುಖಕ್ಕೆ ತಿವಿದು ಅವರನ್ನು ಹಿಂದಕ್ಕೆ ತಳ್ಳಿದ್ದಾರೆ. ಇದರಿಂದ ಅರೆಕ್ಷಣ ವಿಚಲಿತರಾದಂತೆ ಕಂಡ ಮ್ಯಾಕ್ರಾನ್ ತಕ್ಷಣವೇ ಸುಧಾರಿಸಿಕೊಂಡು, ತಮ್ಮನ್ನು ಸ್ವಾಗತಿಸಲು ಬಂದ ನಿಯೋಗದತ್ತ ಕೈಬೀಸಿ ಮುಗುಳ್ನಗೆ ಬೀರುತ್ತಾರೆ. ಕಪಾಳಮೋಕ್ಷ ಮಾಡುವ ವೇಳೆ ಪತ್ನಿಯ ಮುಖ ಮರೆಯಾಗಿದ್ದು, ಆ ಬಳಿಕ ಇಬ್ಬರೂ ಒಟ್ಟಿಗೆ ವಿಮಾನದ ಮೆಟ್ಟಿಲುಗಳನ್ನು ಇಳಿದು ಬರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ‘ತಾವಿಬ್ಬರೂ ತಮಾಷೆ ಮಾಡುತ್ತಿದ್ದೆವು, ಈ ಘಟನೆಯನ್ನು ಅತಿಯಾಗಿ ಪ್ರಚಾರ ಮಾಡಲಾಗುತ್ತಿದೆ’ ಎಂದು ಮ್ಯಾಕ್ರಾನ್ ತಿಳಿಸಿದ್ದಾರೆ. ಬ್ರಿಗೆಟ್ಟಿ ಶಿಕ್ಷಕಿಯಾಗಿದ್ದು, ತಮಗಿಂತ ಹಿರಿಯ ವಯಸ್ಸಿನ ಆಕೆಯನ್ನು ಕೆಲ ವರ್ಷಗಳ ಹಿಂದೆ ಮ್ಯಾಕ್ರಾನ್ ವರಿಸಿದ್ದರು.
Top Stories
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ಮೊಬೈಲ್ ಕ್ಯಾಂಟೀನ್ ಖರೀದಿ: ಪ.ಜಾತಿ ಪಂಗಡದವರಿಂದ ಅರ್ಜಿ ಆಹ್ವಾನ..!
Karwar News:ಕಾರವಾರದಲ್ಲಿ, ಮೇ.28 ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2024- 25 ನೇ ಸಾಲಿನಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ ಪರಿಶಿಷ್ಟ ಪಂಗಂಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಕೌಶಲ್ಯಾಭಿವೃದ್ಧಿ Enterprenuership Programme (EP) ತರಬೇತಿ ಹಾಗೂ ಪ್ರವಾಸಿ ತಾಣಗಳಲ್ಲಿ ಸಹಾಯಧನದೊಂದಿಗೆ ಮೊಬೈಲ್ ಕ್ಯಾಂಟೀನ್ ಖರಿದಿಸಲು ಅರ್ಜಿ ಆಹ್ವಾನಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ 2 ಮತ್ತು ಪರಿಶಿಷ್ಟ ಪಂಗಡದ 3 ಅಭ್ಯರ್ಥಿಗಳ ಗುರಿ ಹೊಂದಿದ್ದು, ಅಭ್ಯರ್ಥಿಗಳಿಗೆ ವಸತಿಸಹಿತ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳ ಮೂಲಕ ಕಾರ್ಯಕ್ರವನ್ನು ಜಾರಿಗೊಳಿಸಲಾಗಿರುತ್ತದೆ. ಅಸಕ್ತ ಅಭ್ಯರ್ಥಿಗಳು 20-45 ವರ್ಷದೊಳಗಿರಬೇಕು, ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಜೂ.4 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ, ಜಿಲ್ಲಾಧಿಕಾರಿಗಳ ಕಾರ್ಯಾಲಯ, 1ನೇ ಮಹಡಿ, ಕೊಠಡಿ ಸಂಖ್ಯೆ: 24 ಕಾರವಾರ, ದೂರವಾಣಿ ಸಂಖ್ಯೆ: 08382-221172 ಗೆ ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ : ನಾಗೇಶ್ ರಾಯ್ಕರ್..!
Karwar News:ಮೇ 28 ರಂದು ಮಕ್ಕಳಿಗೆ ಬೇಸಿಗೆ ರಜೆ ದಿನಗಳಲ್ಲಿ ಅನಾವಶ್ಯವಾಗಿ ಸಮಯ ವ್ಯರ್ಥಮಾಡಿಸದೇ ಉಚಿತ ಬೇಸಿಗೆ ಶಿಬಿರಗಳಿಗೆ ಕಳುಹಿಸಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಆ ಕ್ಷೇತ್ರದಲ್ಲಿ ನಿರಂತರವಾಗಿ ತರಬೇತಿ ಕೊಡಿಸಿ, ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಹೇಳಿದರು. ಅವರು ಬುಧವಾರ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಕಾರವಾರ ಇವರ ಸಹಯೋಗದಲ್ಲಿ 2025-26ನೇ ಸಾಲಿನ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿ ವರ್ಷ ವಾರ್ಷಿಕ ಪರೀಕ್ಷೆ ನಂತರದ ಬೇಸಿಗೆ ರಜೆಯಲ್ಲಿ ಮಕ್ಕಳು ಮೂಬೈಲ್, ಟಿವಿ ಹಾಗೂ ಆಧುನಿಕ ತಂತ್ರಜ್ಞಾನದಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳು ಆಯೋಜನೆ ಮಾಡಿದ ಶಿಬಿರಗಳನ್ನು ಮಕ್ಕಳನ್ನು ಕಳುಹಿಸಿ ಅನ್ಯಾವಶ್ಯವಾಗಿ ಹಣವನ್ನು ವ್ಯರ್ಥಮಾಡುವ ಬದಲು ತಮ್ಮ ಮಕ್ಕಳನ್ನು ಇಂತಹ ಉಚಿತ ಶಿಬಿರಗಳಿಗೆ ಕಳುಹಿಸದಲ್ಲದೇ...
ಬೇರೆ ಕಂಪನಿಗೆ ಹೋಗದಂತೆ ತಡೆಯಲು ಭಾರತದ ಮೂಲದ ಈ ವ್ಯಕ್ತಿಗೆ ಸುಮಾರು 850 ಕೋಟಿ ರೂ. ಆಫರ್ ನೀಡಿ ಉಳಿಸಿಕೊಂಡಿತ್ತಂತೆ ಗೂಗಲ್..! ಯಾರು ಗೊತ್ತೆ..?
Business News:ನವದೆಹಲಿ: ಒಂದು ದಶಕದ ಹಿಂದೆ, ಈಗ X ಎಂದು ಕರೆಯಲ್ಪಡುವ ಈ ಹಿಂದಿನ ಟ್ವಿಟರ್ ಕಂಪನಿಗೆ ಸೇರದಂತೆ ತಡೆಯಲು ಗೂಗಲ್ ಕಂಪನಿಯು ಭಾರತೀಯ-ಅಮೇರಿಕನ್ ಉದ್ಯಮಿಯೊಬ್ಬರಿಗೆ 100 ಮಿಲಿಯನ್ ಡಾಲರ್ (ಈಗ ಸುಮಾರು 854 ಕೋಟಿ ರೂ.) ಗಳಷ್ಟು ಪಾವತಿಸಿದ ವಿಷಯ ಈಗ ಬಹಿರಂಗವಾಗಿದೆ. ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ತಮ್ಮ ಪಾಡ್ಕ್ಯಾಸ್ಟ್ನ ಇತ್ತೀಚಿನ ಸಂಚಿಕೆಯಲ್ಲಿ, ಯೂಟ್ಯೂಬ್ ಸಿಇಒ ನೀಲ್ ಮೋಹನ ಅವರನ್ನು ಒಂದು ಕಾಲದಲ್ಲಿ ಸುತ್ತುವರೆದಿದ್ದ ಉನ್ನತ ಮಟ್ಟದ ಪ್ರತಿಭಾ ಯುದ್ಧದ ಬಗ್ಗೆ ಉಲ್ಲೇಖಿಸಿದಾಗ ಈ ಬಹಿರಂಗಪಡಿಸುವಿಕೆ ಬಂದಿದೆ. 2011ರಲ್ಲಿ, ನೀಲ್ ಮೋಹನ ಗೂಗಲ್ನ ಜಾಹೀರಾತು ಮತ್ತು ಯೂಟ್ಯೂಬ್ ಉತ್ಪನ್ನ ತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಾಡ್ಕ್ಯಾಸ್ಟ್ ಸಮಯದಲ್ಲಿ, ನಿಖಿಲ್ ಕಾಮತ್ ಅವರು, “ಗೂಗಲ್ ನಿಮಗೆ ರಾಜೀನಾಮೆ ನೀಡದಿರಲು $100 ಮಿಲಿಯನ್ ನೀಡುತ್ತಿದೆ ಎಂದು ನಾನು ಓದಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಇವತ್ತಲ್ಲ, ಆದರೆ 15 ವರ್ಷಗಳ ಹಿಂದೆ, ಅದು ಬಹಳಷ್ಟು ಹಣವಾಗಿತ್ತು ಎಂದು ಹೇಳಿದಾಗ ನೀಲ್ ಮೋಹನ್ ಈ ಹೇಳಿಕೆಯನ್ನು ನಿರಾಕರಿಸಲಿಲ್ಲ....
ಚಿನ್ನದ ಬೆಲೆ ಸತತ ಎರಡು ದಿನ ಇಳಿಕೆ ನಂತರ ಸ್ಥಿರ; ಈಗ ಬೆಂಗಳೂರಲ್ಲಿ ಬಂಗಾರದ ಬೆಲೆ ಎಷ್ಟಿದೆ..?
Gold And Silver Prices:ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಮತ್ತೆ ಕುಸಿತದ ಟ್ರೆಂಡ್ನಲ್ಲಿವೆ. ಕಳೆದ ಎರಡು ದಿನದಿಂದ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆಗಳು ಇಂದು ಬುಧವಾರ ಸ್ಥಿರವಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆಗಳು ಭಾರೀ ಇಳಿಕೆ ಕಂಡಿವೆ. ಪ್ರಸ್ತುತ ಮೇ 28 ರಂದು ಬುಧವಾರ ಬೆಂಗಳೂರಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ ಎಂಬ ವಿವರ ಇಲ್ಲಿದೆ. ಬೆಂಗಳೂರಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆ. ಬೆಂಗಳೂರಲ್ಲಿ ಚಿನ್ನದ ಬೆಲೆ ಕಳೆದ ಎರಡು ದಿನದಿಂದಲೂ ಸತತವಾಗಿ ಇಳಿಕೆಯಾಗಿತ್ತು. ಕಳೆದ ಸೋಮವಾರ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ₹440 ಇಳಿಕೆಯಾಗಿತ್ತು. ನಿನ್ನೆ ಮಂಗಳವಾರ ಕೂಡ ಚಿನ್ನದ ಬೆಲೆಯಲ್ಲಿ ₹ 160 ಇಳಿಕೆಯಾಗಿದೆ ಪ್ರತಿ 10 ಗ್ರಾಂಗೆ ₹97,480ಕ್ಕೆ ತಲುಪಿತ್ತು. 22 ಕ್ಯಾರೆಟ್ನ ಆಭರಣ ಚಿನ್ನದ ಬೆಲೆ ಕೂಡ ಕಳೆದ ಎರಡು ದಿನಗಳಲ್ಲಿ ₹550 ಇಳಿದಿದ್ದು, ಪ್ರತಿ 10 ಗ್ರಾಂಗೆ ₹89,350 ರಲ್ಲಿ ವಹಿವಾಟು ನಡೆಸುತ್ತಿದೆ. ಇಂದು ಬುಧವಾರ ಚಿನ್ನದ ಬೆಲೆಯಲ್ಲಿ ಯಾವುದೇ...
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ, ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ಗುರುವಾರ ರಜೆ ಘೋಷಣೆ..!
Heavy Rain Holiday News: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರೊ ಹಿನ್ನೆಲೆಯಲ್ಲಿ ನಾಳೆ ಗುರುವಾರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೂ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ, ಅಲ್ದೇ ನಿರಂತರ ಭಾರೀ ಮಳೆ ಸುರಿಯುತ್ತಿರೋ ಹಿನ್ನೆಲೆಯಲ್ಲಿ, ಮಕ್ಕಳ ಹಿತದೃಷ್ಟಿಯಿಂದ ಅಂಗನವಾಡಿಗಳಿಗೆ ರಜೆ ಘೊಷಣೆ ಮಾಡಲಾಗಿದೆ ಅಂತಾ ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಸಂಜೆವರೆಗೂ, ಮಳೆ ಪ್ರಮಾಣ ಮತ್ತು ಮಳೆ ಹಾನಿಯ ವಿವರ.!
ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 25.9 ಮಿಮೀ,ಭಟ್ಕಳದಲ್ಲಿ 100.2, ಹಳಿಯಾಳ 2.2 ಹೊನ್ನಾವರ 68.5, ಕಾರವಾರ 28.3, , ಕುಮಟಾ 32.5, ಮುಂಡಗೋಡ 1.5, ಸಿದ್ದಾಪುರ 21.6 , ಶಿರಸಿ 14.1 , ಸೂಪಾ 4.2 ಯಲ್ಲಾಪುರ 6.4, ದಾಂಡೇಲಿಯಲ್ಲಿ 3.9 ಮಿಲಿ ಮೀಟರ್ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 2 ಮನೆಗಳು ಪೂರ್ಣಹಾನಿ, 3 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದ್ದು, ಇದುವರೆಗೆ 0.3 ಹೆಕ್ಟೇರ್ ಕೃಷಿ ಭೂಮಿ ಮತ್ತು 3.14 ಹೆಕ್ಟೇರ್ ತೋಟಗಾರಿಕಾ ಪ್ರದೇಶಕ್ಕೆ ಹಾನಿ ಸಂಭವಿಸಿದೆ.
ಬಂಟ್ವಾಳದಲ್ಲಿ ಯುವಕನ ಬರ್ಬರ ಹತ್ಯೆ ; ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ..!
Murder News:ಮಂಗಳೂರು : ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಹೀಂ ಎಂಬ ವ್ಯಕ್ತಿಯ ಹತ್ಯೆಯ ನಂತರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕು ವ್ಯಾಪ್ತಿಯಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ ಶೆಟ್ಟಿ ಹತ್ಯೆ ಕೆಲವು ದಿನಗಳ ಹಿಂದೆ ನಡೆದಿತ್ತು. ಈಗ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿಪಿಕಪ್ ವಾಹನ ಚಾಲಕನಾಗಿದ್ದ ರಹೀಮ್ ಎಂಬಾತನನ್ನು ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇರಾಕೋಡಿ ಎಂಬಲ್ಲಿ ಮನೆಯೊಂದರ ಮುಂದೆ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ರಹೀಮ್ ಜೊತೆಗಿದ್ದ ಹನೀಫ್ ಎಂಬವರ ಮೇಲೆಯೂ ದಾಳಿ ಮಾಡಲಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ನಂತರ ಯಾವುದೇ ಅಹಿತರ...
ಚಿನ್ನದ ಬೆಲೆ 10 ಗ್ರಾಂಗೆ ₹490 ಏರಿಕೆ, ಬೆಳ್ಳಿ ದರ ಸ್ಥಿರ; ಈಗ ಗೋಲ್ಡ್ ರೇಟ್ ಎಷ್ಟಿದೆ ಚೆಕ್ ಮಾಡಿ..!
Gold Price Today:ದೇಶೀಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಹಾವು-ಏಣಿ ಆಟವನ್ನು ಮುಂದುವರಿಸಿದೆ. ನಿನ್ನೆ ಸೋಮವಾರ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದ್ದ ಚಿನ್ನದ ಬೆಲೆಗಳು ಇಂದು ಮೇ.27ರ ಮಂಗಳವಾರ ಮತ್ತೆ ಏರಿಕೆಯಾಗಿವೆ. 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ ₹490 ಏರಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆ ಸ್ಥಿರವಾಗಿದೆ. ಪ್ರಸ್ತತ ಬೆಂಗಳೂರಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಬೆಂಗಳೂರಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಬೆಂಗಳೂರಲ್ಲಿ ನಿನ್ನೆ ಸೋಮವಾರದಂದು ಚಿನ್ನದ ಬೆಲೆಯಲ್ಲಿ ₹440 ಇಳಿಕೆಯಾಗಿತ್ತು. ಆದರೆ, ಇಂದು ಮಂಗಳವಾರ ಮತ್ತೆ ಏರಿಕೆಯಾಗಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ ₹450 ಏರಿಕೆಯಾಗಿ ₹89,950ರಲ್ಲಿ ವಹಿವಾಟು ನಡೆಸುತ್ತಿದೆ. 24 ಕ್ಯಾರೆಟ್ನ ಅಪರಂಜಿ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ ₹490 ಏರಿಕೆಯಾಗಿದ್ದು, ₹98130ರಲ್ಲಿ ವಹಿವಾಟು ನಡೆಸುತ್ತಿದೆ. ಬೆಳ್ಳಿ ದರ ಸ್ಥಿರ ನಿನ್ನೆ ಸೋಮವಾರದಂದಯ ಚಿನ್ನದ ಬೆಲೆ ಪ್ರತಿ ಕೆಜಿಗೆ ₹1000 ಏರಿಕೆಯಾಗಿ ₹1 ಲಕ್ಷ ತಲುಪಿತ್ತು. ಇಂದು...
ಮಂಗಳವಾರ ಸೆನ್ಸೆಕ್ಸ್ 625 ಪಾಯಿಂಟ್ಸ್ ನಷ್ಟದಲ್ಲಿ ಕೊನೆ ; ಷೇರುಪೇಟೆಯ 10 ಕೀ ಹೈಲೈಟ್ಸ್ ಇಲ್ಲಿದೆ..!
Stock Market News:ದೇಶದ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮಂಗಳವಾರ 625 ಪಾಯಿಂಟ್ಸ್ ಅಥವಾ 0.76 ಪರ್ಸೆಂಟ್ ನಷ್ಟದೊಂದಿಗೆ 81,551.63 ಮಾರ್ಕ್ನಲ್ಲಿ ಕೊನೆಗೊಂಡಿದೆ. ನಿಫ್ಟಿ 50 ಸೂಚ್ಯಂಕವು 175 ಪಾಯಿಂಟ್ಸ್ ಅಥವಾ 0.70 ಪರ್ಸೆಂಟ್ ಕುಸಿದು 24,826.20 ಮಾರ್ಕ್ನಲ್ಲಿ ಮುಚ್ಚಿದೆ. ಇದೇ ವೇಳೆಯಲ್ಲಿ ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಸ್ಟಾಕ್ಗಳು ಔಟ್ಪರ್ಫಾಮ್ ಆಗಿವೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕವು 0.18 ಪರ್ಸೆಂಟ್ ಹಾಗೂ 0.19 ಪರ್ಸೆಂಟ್ ಏರಿಕೆಯಾಗಿವೆ. ಹೂಡಿಕೆದಾರರಿಗೆ 1 ಲಕ್ಷ ಕೋಟಿ ರೂಪಾಯಿ ನಷ್ಟ! ಷೇರು ಮಾರುಕಟ್ಟೆ ಹೂಡಿಕೆದಾರರು ಷೇರು ಮಾರುಕಟ್ಟೆ ಕುಸಿತದಿಂದಾಗಿ ಮಂಗಳವಾರ 1 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ. ಬಿಎಸ್ಇ ಮಾರುಕಟ್ಟೆ ಮೌಲ್ಯವು ಕಳೆದ ಸೆಷನ್ನ 445 ಲಕ್ಷ ಕೋಟಿ ರೂಪಾಯಿಗಳಿಂದ 444 ಲಕ್ಷ ಕೋಟಿ ರೂಪಾಯಿಗೆ ಕುಸಿತ ಕಂಡಿದೆ. ಭಾರತದ ಷೇರು ಮಾರುಕಟ್ಟೆಯ 10 ಪ್ರಮುಖ ಹೈಲೈಟ್ಸ್. 1) ದುರ್ಬಲ ಜಾಗತಿಕ ಸೂಚನೆ, ಫ್ರಾಫಿಟ್ ಬುಕಿಂಗ್ ದುರ್ಬಲ ಜಾಗತಿಕ ಸೂಚನೆಗಳು, ಹೊಸ ಸಕಾರಾತ್ಮಕ ಪ್ರಚೋದಕಗಳ...








