Bhatkal crime news: ಭಟ್ಕಳ ಗ್ರಾಮೀಣ ಪೊಲೀಸ್ರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬಿಲಾಲಖಂಡ ಗ್ರಾಮದ ಸಾಗರ್ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕಿ ಕೂತಿದ್ದ ಐವರು “ಗರುಡಾ ಗ್ಯಾಂಗ್” ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ. ಗ್ರೇ ಕಲರ್ ಟೋಯೋಟಾ ಇನ್ನೊವಾ ಕಾರಲ್ಲಿ ಬಂದಿದ್ದ ಖತರ್ನಾಕ ದರೋಡೆಕೋರರು, ಕೃತ್ಯಕ್ಕೆ ಬೇಕಾದ ಚಾಕು, ಕಾರಾಪುಡಿ. ಮಂಕಿಕ್ಯಾಪ್, ಬೆಲ್ಟ್, ತಾಡಪತ್ರೆ ಮೊದಲಾದ ವಸ್ತ್ರಗಳನ್ನು ಇಟ್ಟುಕೊಂಡು ಹೊಂಚು ಹಾಕಿ, ಗುಳ್ಳೆ ರಸ್ತೆ ಕ್ರಾಸ್ ಹತ್ತಿರ ಕತ್ತಲೆಯಲ್ಲಿ ಕಾರಿನಲ್ಲಿ ಕುಳಿತಿದ್ದಾಗ. ಭಟ್ಕಳ ಗ್ರಾಮೀಣ ಠಾಣೆ ಪಿಎಸ್ಐ ರನ್ನಗೌಡ್ ಪಾಟೀಲ್ ಆರೋಪಿತರನ್ನು ನೋಡಿ ವಿಚಾರಿಸಲು ಹೋದಾಗ ಆರೋಪಿತರು ತಪ್ಪಿಸಿಕೊಳ್ಳಲು ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ನಿಯಂತ್ರಣ ತಪ್ಪಿ ಗಟಾರಿನಲ್ಲಿ ಬಿದ್ದಿದ್ದರು. ಇದನ್ನೂ ಓದಿ👉ಮಹೀಂದ್ರಾ ಗ್ರೂಪ್ನ ಈ ಸ್ಟಾಕ್ನಲ್ಲಿ HDFC ಮ್ಯೂಚುವಲ್ ಫಂಡ್ನ ಪಾಲು ಇಳಿಕೆ : 7.34% ರಿಂದ 5.13% ಮಟ್ಕಕ್ಕೆ ತಗ್ಗಿದೆ..! ಈ ವೇಳೆ ಮೂವರು “ಗರುಡಾ ಗ್ಯಾಂಗ್ನ” ಆರೋಪಿತರು ಸಿಕ್ಕಿದ್ದು ಇನ್ನುಳಿದ ಇಬ್ಬರು ಆರೋಪಿತರು ಪರಾರಿಯಾಗಿದ್ದಾರೆ. ಸದರಿಯವರ ಮೇಲೆ...
Top Stories
ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!
ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..! ಅಷ್ಟಕ್ಕೂ, ಪೊಲೀಸ್ ಅಧಿಕಾರಿಯ ಮಗಳಿಗೆ ಏನಾಯ್ತು..?
ಇದು “ಜಬರ್ದಸ್ತ್ ಜಮಖಂಡಿ”ಯ ಮರ್ಡರ್ ಮಿಸ್ಟರಿ..! “ಮಾಯಾಂಗನೆ”ಯ ನೆರಳಲ್ಲಿ ನಡೆದಿತ್ತು ಆ ಭೀಕರ ಹತ್ಯೆ..!
ಇಂದ್ರಾ ನಗರದ ಮೆಹೆಬೂಬ್ ಅಲಿ ಜಮಖಂಡಿ ಮರ್ಡರ್ ಕೇಸ್ ಆರೋಪಿಗಳಿಗೆ ಶಿಕ್ಷೆ ಪ್ರಕಟ..! ಓರ್ವನಿಗೆ ಜೀವಾವಧಿ ಶಿಕ್ಷೆ..!
ಶಿಗ್ಗಾವಿ BEO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ಚಿಗಳ್ಳಿಯ ಪ್ರಸನ್ನ ಜಾಧವ್ ವಿಧಿವಶ, ಹಲವರ ಸಂತಾಪ..!
ಡ್ರಗ್ಸ್ ದಂಧೆ ಮಾಡುತಿದ್ದ 9 ದಂಧೆಕೋರರ ಬಂಧನ, 30 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ..!
ಮುಂಡಗೋಡ ತಾಲೂಕು ಸೇರಿ ಜಿಲ್ಲೆಯ ಹಲವು ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ..!
ನಾಳೆ ಮುಂಡಗೋಡ ತಾಲೂಕಿನಲ್ಲೂ ಶಾಲೆಗಳಿಗೆ ಮಳೆಯ ರಜೆ..!
ಮುಂಡಗೋಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ “ಮಳೆಯ” ರಜೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ 10 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ..!
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!
ಶಿಗ್ಗಾವಿಯಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ..!
ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!
ಮುಂಡಗೋಡ ಪೊಲೀಸರ ಭರ್ಜರಿ ದಾಳಿ, ಪಾಳಾ ಕ್ರಾಸ್ ಬಳಿ ಗಾಂಜಾ ಸಾಗಿಸ್ತಿದ್ದ ಹಾನಗಲ್ಲಿನ ಇಬ್ಬರ ಬಂಧನ..!
ಜನ-ಧನ್ ಅಕೌಂಟ್ಗೆ ಮರು ಕೆವೈಸಿ : ಸೆ.30ಕ್ಕೆ ಡೆಡ್ಲೈನ್ ಫಿಕ್ಸ್ ಮಾಡಿದೆ RBI, ಅಪ್ಡೇಟ್ ಮಾಡುವುದು ಹೇಗೆ..?
ಮಹೀಂದ್ರಾ ಗ್ರೂಪ್ನ ಈ ಸ್ಟಾಕ್ನಲ್ಲಿ HDFC ಮ್ಯೂಚುವಲ್ ಫಂಡ್ನ ಪಾಲು ಇಳಿಕೆ : 7.34% ರಿಂದ 5.13% ಮಟ್ಕಕ್ಕೆ ತಗ್ಗಿದೆ..!
HDFC Mutual Fund:ದೇಶದ ಅಗ್ರಮಾನ್ಯ ಮ್ಯೂಚುವಲ್ ಫಂಡ್ಗಳಲ್ಲಿ ಒಂದಾದ ಎಚ್ಡಿಎಫ್ಸಿ ಮ್ಯೂಚುವಲ್ ಫಂಡ್ ಮಹೀಂದ್ರಾ ಗ್ರೂಪ್ನ ಕಂಪನಿಯಾದ ಮಹೀಂದ್ರಾ ಹಾಲಿಡೇಸ್ & ರೆಸಾರ್ಟ್ನಲ್ಲಿನ ತನ್ನ ಪಾಲನ್ನು 5.13% ಇಳಿಕೆ ಮಾಡಿದೆ. ಕಳೆದ ಒಂದು ವರ್ಷದಲ್ಲಿ ಈ ಹೋಟೆಲ್ ಕಂಪನಿಯ ಸ್ಟಾಕ್ ಶೇಕಡಾ 10ರಷ್ಟು ಇಳಿಕೆಗೊಂಡಿದ್ದು, ಕಳೆದ ಏಳು ವರ್ಷದಲ್ಲಿ ಎಡಿಎಫ್ಸಿ ಮ್ಯೂಚುವಲ್ ಫಂಡ್ ತನ್ನ ಪಾಲು ಇಳಿಕೆ ಮಾಡುತ್ತಾ ಬಂದಿದೆ. 7.34% ರಿಂದ 5.13% ಮಟ್ಟಕ್ಕೆ ಇಳಿಕೆ ಎಚ್ಡಿಎಫ್ಸಿ ಮ್ಯೂಚುವಲ್ ಫಂಡ್, ಮಹೀಂದ್ರಾ ಹಾಲಿಡೇಸ್ & ರೆಸಾರ್ಟ್ನಲ್ಲಿ ಶೇಕಡಾ 7.34ರಷ್ಟು ಪಾಲು ಹೊಂದಿತ್ತು, ಆದ್ರೆ ಈ ಸಂಖ್ಯೆಯು ಪ್ರಸ್ತುತ ಶೇಕಡಾ 5.13 ಹಂತಕ್ಕೆ ಇಳಿಕೆಯಾಗಿದೆ. ಈ ಮೂಲಕ 221 ಬಿಪಿಎಸ್ ಬದಲಾಗಿದೆ. ಮೇ 27 ರಂದು ಸಲ್ಲಿಸಿದ ವರದಿಯ ಪ್ರಕಾರ, 16,18,545 ಷೇರುಗಳನ್ನು ಮಾರಾಟ ಮಾಡಲಾಗಿದ್ದು, ಇದು 0.80% ಪಾಲನ್ನು ಪ್ರತಿನಿಧಿಸುತ್ತದೆ. ಮೇ 23 ರಂದು ಈ ಮಾರಾಟವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾಡಲಾಗಿದೆ. ಆದರೆ ಮಾರಾಟ ಮಾಡಿದ ಪಾಲಿನ ಮೌಲ್ಯವನ್ನು ಬಹಿರಂಗಪಡಿಸಲಿಲ್ಲ....
ಪರಿಶಿಷ್ಟ ಜಾತಿಗಳ ಸಮೀಕ್ಷೆ: ಉ.ಕ ಜಿಲ್ಲೆಯಲ್ಲಿ ಶೇ.100.32 ಸಾಧನೆ..!
Scheduled Castes Survey: ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ ಏಕ ಸದಸ್ಯ ವಿಚಾರಣಾ ಆಯೋಗದ ನಿರ್ದೇಶನದಂತೆ ಪರಿಶಿಷ್ಟ ಜಾತಿ ಸಮುದಾಯದ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸಲು ನಡೆಸಲಾಗುತ್ತಿದ್ದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ರ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.100.32 ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸಮೀಕ್ಷೆಗಾಗಿ 2011 ಜನಗಣತಿಯಂತೆ ಪ.ಜಾತಿಯ 26,617 ಮನೆಗಳನ್ನು ಭೇಟಿ ನೀಡುವ ಗುರಿ ಇದ್ದು, ಪ್ರಸ್ತುತ ಗಣತಿಯಲ್ಲಿ 28,964 ಪ.ಜಾತಿಯ ಮನೆಗಳನ್ನು ಗುರುತಿಸಿ ಸಮೀಕ್ಷೆ ನಡೆಸಲಾಗಿದ್ದು, ಮನೆ ಗಣತಿಯಲ್ಲಿ ಶೇ.108.82 ಸಾಧನೆ ಆಗಿದ್ದು, 2025 ರ ಅಂದಾಜು ಪ.ಜಾತಿಯ ಜನಸಂಖ್ಯೆಯ 1,16,781 ಗುರಿಗೆ ಎದುರಾಗಿ 1,17,156 ಪ.ಜಾತಿಯ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು ಶೇ.100.32 ಸಾಧನೆ ಮಾಡಲಾಗಿದೆ. ಇದನ್ನೂ ಓದಿ👉ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ : ನಾಗೇಶ್ ರಾಯ್ಕರ್..! ಮೇ.27 ರ ವರೆಗೆ ನಡೆಸಿರುವ ಸಮೀಕ್ಷೆಯಲ್ಲಿ ವಿಧಾನಸಭಾ ಕ್ಷೇತ್ರವಾರು, ಹಳಿಯಾಳದಲ್ಲಿ ಪ.ಜಾತಿಯ 5,369 ಮನೆಗಳನ್ನು ಸಮೀಕ್ಷೆ ಮಾಡಿದ್ದು, 20,462 ಜನರನ್ನು ಗುರುತಿಸಲಾಗಿದ್ದು, ಕಾರವಾರದಲ್ಲಿ 3,576 ಮನೆಗಳ...
ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ಗೆ ಪತ್ನಿಯಿಂದ ಕಪಾಳ ಮೋಕ್ಷ..?
International News:ಹನಾಯ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರಿಗೆ ಅವರ ಪತ್ನಿಯೇ ಕೆನ್ನೆಗೆ ಬಾರಿಸಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಆಗ್ನೇಯ ಏಷ್ಯಾ ಪ್ರವಾಸದ ಭಾಗವಾಗಿ ಮ್ಯಾಕ್ರಾನ್ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ಅವರೊಂದಿಗೆ ಭಾನುವಾರ ಸಂಜೆ ವಿಯೆಟ್ನಾಂನ ಹನಾಯ್ಗೆ ಬಂದಿಳಿದಿದ್ದರು. ವಿಮಾನದ ಬಾಗಿಲು ತೆರೆಯುತ್ತಿದ್ದಂತೆ ಪತ್ನಿ ತಮ್ಮ ಎರಡೂ ಕೈಗಳಿಂದ ಮ್ಯಾಕ್ರಾನ್ ಅವರ ಮುಖಕ್ಕೆ ತಿವಿದು ಅವರನ್ನು ಹಿಂದಕ್ಕೆ ತಳ್ಳಿದ್ದಾರೆ. ಇದರಿಂದ ಅರೆಕ್ಷಣ ವಿಚಲಿತರಾದಂತೆ ಕಂಡ ಮ್ಯಾಕ್ರಾನ್ ತಕ್ಷಣವೇ ಸುಧಾರಿಸಿಕೊಂಡು, ತಮ್ಮನ್ನು ಸ್ವಾಗತಿಸಲು ಬಂದ ನಿಯೋಗದತ್ತ ಕೈಬೀಸಿ ಮುಗುಳ್ನಗೆ ಬೀರುತ್ತಾರೆ. ಕಪಾಳಮೋಕ್ಷ ಮಾಡುವ ವೇಳೆ ಪತ್ನಿಯ ಮುಖ ಮರೆಯಾಗಿದ್ದು, ಆ ಬಳಿಕ ಇಬ್ಬರೂ ಒಟ್ಟಿಗೆ ವಿಮಾನದ ಮೆಟ್ಟಿಲುಗಳನ್ನು ಇಳಿದು ಬರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ‘ತಾವಿಬ್ಬರೂ ತಮಾಷೆ ಮಾಡುತ್ತಿದ್ದೆವು, ಈ ಘಟನೆಯನ್ನು ಅತಿಯಾಗಿ ಪ್ರಚಾರ ಮಾಡಲಾಗುತ್ತಿದೆ’ ಎಂದು ಮ್ಯಾಕ್ರಾನ್ ತಿಳಿಸಿದ್ದಾರೆ. ಬ್ರಿಗೆಟ್ಟಿ ಶಿಕ್ಷಕಿಯಾಗಿದ್ದು, ತಮಗಿಂತ ಹಿರಿಯ ವಯಸ್ಸಿನ ಆಕೆಯನ್ನು ಕೆಲ ವರ್ಷಗಳ ಹಿಂದೆ ಮ್ಯಾಕ್ರಾನ್ ವರಿಸಿದ್ದರು.
ಮೊಬೈಲ್ ಕ್ಯಾಂಟೀನ್ ಖರೀದಿ: ಪ.ಜಾತಿ ಪಂಗಡದವರಿಂದ ಅರ್ಜಿ ಆಹ್ವಾನ..!
Karwar News:ಕಾರವಾರದಲ್ಲಿ, ಮೇ.28 ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2024- 25 ನೇ ಸಾಲಿನಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ ಪರಿಶಿಷ್ಟ ಪಂಗಂಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಕೌಶಲ್ಯಾಭಿವೃದ್ಧಿ Enterprenuership Programme (EP) ತರಬೇತಿ ಹಾಗೂ ಪ್ರವಾಸಿ ತಾಣಗಳಲ್ಲಿ ಸಹಾಯಧನದೊಂದಿಗೆ ಮೊಬೈಲ್ ಕ್ಯಾಂಟೀನ್ ಖರಿದಿಸಲು ಅರ್ಜಿ ಆಹ್ವಾನಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ 2 ಮತ್ತು ಪರಿಶಿಷ್ಟ ಪಂಗಡದ 3 ಅಭ್ಯರ್ಥಿಗಳ ಗುರಿ ಹೊಂದಿದ್ದು, ಅಭ್ಯರ್ಥಿಗಳಿಗೆ ವಸತಿಸಹಿತ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳ ಮೂಲಕ ಕಾರ್ಯಕ್ರವನ್ನು ಜಾರಿಗೊಳಿಸಲಾಗಿರುತ್ತದೆ. ಅಸಕ್ತ ಅಭ್ಯರ್ಥಿಗಳು 20-45 ವರ್ಷದೊಳಗಿರಬೇಕು, ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಜೂ.4 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ, ಜಿಲ್ಲಾಧಿಕಾರಿಗಳ ಕಾರ್ಯಾಲಯ, 1ನೇ ಮಹಡಿ, ಕೊಠಡಿ ಸಂಖ್ಯೆ: 24 ಕಾರವಾರ, ದೂರವಾಣಿ ಸಂಖ್ಯೆ: 08382-221172 ಗೆ ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ : ನಾಗೇಶ್ ರಾಯ್ಕರ್..!
Karwar News:ಮೇ 28 ರಂದು ಮಕ್ಕಳಿಗೆ ಬೇಸಿಗೆ ರಜೆ ದಿನಗಳಲ್ಲಿ ಅನಾವಶ್ಯವಾಗಿ ಸಮಯ ವ್ಯರ್ಥಮಾಡಿಸದೇ ಉಚಿತ ಬೇಸಿಗೆ ಶಿಬಿರಗಳಿಗೆ ಕಳುಹಿಸಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಆ ಕ್ಷೇತ್ರದಲ್ಲಿ ನಿರಂತರವಾಗಿ ತರಬೇತಿ ಕೊಡಿಸಿ, ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಹೇಳಿದರು. ಅವರು ಬುಧವಾರ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಕಾರವಾರ ಇವರ ಸಹಯೋಗದಲ್ಲಿ 2025-26ನೇ ಸಾಲಿನ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿ ವರ್ಷ ವಾರ್ಷಿಕ ಪರೀಕ್ಷೆ ನಂತರದ ಬೇಸಿಗೆ ರಜೆಯಲ್ಲಿ ಮಕ್ಕಳು ಮೂಬೈಲ್, ಟಿವಿ ಹಾಗೂ ಆಧುನಿಕ ತಂತ್ರಜ್ಞಾನದಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳು ಆಯೋಜನೆ ಮಾಡಿದ ಶಿಬಿರಗಳನ್ನು ಮಕ್ಕಳನ್ನು ಕಳುಹಿಸಿ ಅನ್ಯಾವಶ್ಯವಾಗಿ ಹಣವನ್ನು ವ್ಯರ್ಥಮಾಡುವ ಬದಲು ತಮ್ಮ ಮಕ್ಕಳನ್ನು ಇಂತಹ ಉಚಿತ ಶಿಬಿರಗಳಿಗೆ ಕಳುಹಿಸದಲ್ಲದೇ...
ಬೇರೆ ಕಂಪನಿಗೆ ಹೋಗದಂತೆ ತಡೆಯಲು ಭಾರತದ ಮೂಲದ ಈ ವ್ಯಕ್ತಿಗೆ ಸುಮಾರು 850 ಕೋಟಿ ರೂ. ಆಫರ್ ನೀಡಿ ಉಳಿಸಿಕೊಂಡಿತ್ತಂತೆ ಗೂಗಲ್..! ಯಾರು ಗೊತ್ತೆ..?
Business News:ನವದೆಹಲಿ: ಒಂದು ದಶಕದ ಹಿಂದೆ, ಈಗ X ಎಂದು ಕರೆಯಲ್ಪಡುವ ಈ ಹಿಂದಿನ ಟ್ವಿಟರ್ ಕಂಪನಿಗೆ ಸೇರದಂತೆ ತಡೆಯಲು ಗೂಗಲ್ ಕಂಪನಿಯು ಭಾರತೀಯ-ಅಮೇರಿಕನ್ ಉದ್ಯಮಿಯೊಬ್ಬರಿಗೆ 100 ಮಿಲಿಯನ್ ಡಾಲರ್ (ಈಗ ಸುಮಾರು 854 ಕೋಟಿ ರೂ.) ಗಳಷ್ಟು ಪಾವತಿಸಿದ ವಿಷಯ ಈಗ ಬಹಿರಂಗವಾಗಿದೆ. ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ತಮ್ಮ ಪಾಡ್ಕ್ಯಾಸ್ಟ್ನ ಇತ್ತೀಚಿನ ಸಂಚಿಕೆಯಲ್ಲಿ, ಯೂಟ್ಯೂಬ್ ಸಿಇಒ ನೀಲ್ ಮೋಹನ ಅವರನ್ನು ಒಂದು ಕಾಲದಲ್ಲಿ ಸುತ್ತುವರೆದಿದ್ದ ಉನ್ನತ ಮಟ್ಟದ ಪ್ರತಿಭಾ ಯುದ್ಧದ ಬಗ್ಗೆ ಉಲ್ಲೇಖಿಸಿದಾಗ ಈ ಬಹಿರಂಗಪಡಿಸುವಿಕೆ ಬಂದಿದೆ. 2011ರಲ್ಲಿ, ನೀಲ್ ಮೋಹನ ಗೂಗಲ್ನ ಜಾಹೀರಾತು ಮತ್ತು ಯೂಟ್ಯೂಬ್ ಉತ್ಪನ್ನ ತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಾಡ್ಕ್ಯಾಸ್ಟ್ ಸಮಯದಲ್ಲಿ, ನಿಖಿಲ್ ಕಾಮತ್ ಅವರು, “ಗೂಗಲ್ ನಿಮಗೆ ರಾಜೀನಾಮೆ ನೀಡದಿರಲು $100 ಮಿಲಿಯನ್ ನೀಡುತ್ತಿದೆ ಎಂದು ನಾನು ಓದಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಇವತ್ತಲ್ಲ, ಆದರೆ 15 ವರ್ಷಗಳ ಹಿಂದೆ, ಅದು ಬಹಳಷ್ಟು ಹಣವಾಗಿತ್ತು ಎಂದು ಹೇಳಿದಾಗ ನೀಲ್ ಮೋಹನ್ ಈ ಹೇಳಿಕೆಯನ್ನು ನಿರಾಕರಿಸಲಿಲ್ಲ....
ಚಿನ್ನದ ಬೆಲೆ ಸತತ ಎರಡು ದಿನ ಇಳಿಕೆ ನಂತರ ಸ್ಥಿರ; ಈಗ ಬೆಂಗಳೂರಲ್ಲಿ ಬಂಗಾರದ ಬೆಲೆ ಎಷ್ಟಿದೆ..?
Gold And Silver Prices:ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಮತ್ತೆ ಕುಸಿತದ ಟ್ರೆಂಡ್ನಲ್ಲಿವೆ. ಕಳೆದ ಎರಡು ದಿನದಿಂದ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆಗಳು ಇಂದು ಬುಧವಾರ ಸ್ಥಿರವಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆಗಳು ಭಾರೀ ಇಳಿಕೆ ಕಂಡಿವೆ. ಪ್ರಸ್ತುತ ಮೇ 28 ರಂದು ಬುಧವಾರ ಬೆಂಗಳೂರಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ ಎಂಬ ವಿವರ ಇಲ್ಲಿದೆ. ಬೆಂಗಳೂರಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆ. ಬೆಂಗಳೂರಲ್ಲಿ ಚಿನ್ನದ ಬೆಲೆ ಕಳೆದ ಎರಡು ದಿನದಿಂದಲೂ ಸತತವಾಗಿ ಇಳಿಕೆಯಾಗಿತ್ತು. ಕಳೆದ ಸೋಮವಾರ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ₹440 ಇಳಿಕೆಯಾಗಿತ್ತು. ನಿನ್ನೆ ಮಂಗಳವಾರ ಕೂಡ ಚಿನ್ನದ ಬೆಲೆಯಲ್ಲಿ ₹ 160 ಇಳಿಕೆಯಾಗಿದೆ ಪ್ರತಿ 10 ಗ್ರಾಂಗೆ ₹97,480ಕ್ಕೆ ತಲುಪಿತ್ತು. 22 ಕ್ಯಾರೆಟ್ನ ಆಭರಣ ಚಿನ್ನದ ಬೆಲೆ ಕೂಡ ಕಳೆದ ಎರಡು ದಿನಗಳಲ್ಲಿ ₹550 ಇಳಿದಿದ್ದು, ಪ್ರತಿ 10 ಗ್ರಾಂಗೆ ₹89,350 ರಲ್ಲಿ ವಹಿವಾಟು ನಡೆಸುತ್ತಿದೆ. ಇಂದು ಬುಧವಾರ ಚಿನ್ನದ ಬೆಲೆಯಲ್ಲಿ ಯಾವುದೇ...
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ, ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ಗುರುವಾರ ರಜೆ ಘೋಷಣೆ..!
Heavy Rain Holiday News: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರೊ ಹಿನ್ನೆಲೆಯಲ್ಲಿ ನಾಳೆ ಗುರುವಾರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೂ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ, ಅಲ್ದೇ ನಿರಂತರ ಭಾರೀ ಮಳೆ ಸುರಿಯುತ್ತಿರೋ ಹಿನ್ನೆಲೆಯಲ್ಲಿ, ಮಕ್ಕಳ ಹಿತದೃಷ್ಟಿಯಿಂದ ಅಂಗನವಾಡಿಗಳಿಗೆ ರಜೆ ಘೊಷಣೆ ಮಾಡಲಾಗಿದೆ ಅಂತಾ ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಸಂಜೆವರೆಗೂ, ಮಳೆ ಪ್ರಮಾಣ ಮತ್ತು ಮಳೆ ಹಾನಿಯ ವಿವರ.!
ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 25.9 ಮಿಮೀ,ಭಟ್ಕಳದಲ್ಲಿ 100.2, ಹಳಿಯಾಳ 2.2 ಹೊನ್ನಾವರ 68.5, ಕಾರವಾರ 28.3, , ಕುಮಟಾ 32.5, ಮುಂಡಗೋಡ 1.5, ಸಿದ್ದಾಪುರ 21.6 , ಶಿರಸಿ 14.1 , ಸೂಪಾ 4.2 ಯಲ್ಲಾಪುರ 6.4, ದಾಂಡೇಲಿಯಲ್ಲಿ 3.9 ಮಿಲಿ ಮೀಟರ್ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 2 ಮನೆಗಳು ಪೂರ್ಣಹಾನಿ, 3 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದ್ದು, ಇದುವರೆಗೆ 0.3 ಹೆಕ್ಟೇರ್ ಕೃಷಿ ಭೂಮಿ ಮತ್ತು 3.14 ಹೆಕ್ಟೇರ್ ತೋಟಗಾರಿಕಾ ಪ್ರದೇಶಕ್ಕೆ ಹಾನಿ ಸಂಭವಿಸಿದೆ.