Karnataka Govt. News:ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ (Guest Lecturers) ಸೇವೆ ಸಲ್ಲಿಸಿ 60 ವರ್ಷ ಪೂರೈಸಿದವರಿಗೆ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ 5 ಲಕ್ಷ ಇಡುಗಂಟು ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವಿವಿಧ ಸೌಲಭ್ಯಗಳು 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಮಂಜೂರಾಗಲಿದ್ದು, ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಥವಾ ಮರಣ ಹೊಂದಿರುವ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಇಡುಗಂಟು ಯೋಜನೆಯ ಪ್ರಯೋಜನ ಸಿಗಲಿದೆ. ಯೋಜನೆ ಅನುಷ್ಠಾನಕ್ಕೆ ಬಂದ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಳಿಸಿರುವ ಅತಿಥಿ ಉಪನ್ಯಾಸಕರಿಗೂ ಇದು ಅನ್ವಯವಾಗಲಿದೆ. ಸೇವಾ ಭದ್ರತೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ 2024ರಲ್ಲಿ ಅತಿಥಿ ಉಪನ್ಯಾಸಕರು ನಡೆಸಿದ್ದ ಧರಣಿ, ಪಾದಯಾತ್ರೆಯ ನಂತರ ಸರ್ಕಾರ ಇಡುಗಂಟು ನೀಡುವ ಭರವಸೆ ಸೇರಿತ್ತು. ಭರವಸೆಯಂತೆ ಉನ್ನತ ಶಿಕ್ಷಣ ಇಲಾಖೆ ಈಗ ಕ್ರಮ ಕೈಗೊಂಡಿದೆ. ಈ ಯೋಜನೆಗೆ...
Top Stories
ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!
ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..! ಅಷ್ಟಕ್ಕೂ, ಪೊಲೀಸ್ ಅಧಿಕಾರಿಯ ಮಗಳಿಗೆ ಏನಾಯ್ತು..?
ಇದು “ಜಬರ್ದಸ್ತ್ ಜಮಖಂಡಿ”ಯ ಮರ್ಡರ್ ಮಿಸ್ಟರಿ..! “ಮಾಯಾಂಗನೆ”ಯ ನೆರಳಲ್ಲಿ ನಡೆದಿತ್ತು ಆ ಭೀಕರ ಹತ್ಯೆ..!
ಇಂದ್ರಾ ನಗರದ ಮೆಹೆಬೂಬ್ ಅಲಿ ಜಮಖಂಡಿ ಮರ್ಡರ್ ಕೇಸ್ ಆರೋಪಿಗಳಿಗೆ ಶಿಕ್ಷೆ ಪ್ರಕಟ..! ಓರ್ವನಿಗೆ ಜೀವಾವಧಿ ಶಿಕ್ಷೆ..!
ಶಿಗ್ಗಾವಿ BEO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ಚಿಗಳ್ಳಿಯ ಪ್ರಸನ್ನ ಜಾಧವ್ ವಿಧಿವಶ, ಹಲವರ ಸಂತಾಪ..!
ಡ್ರಗ್ಸ್ ದಂಧೆ ಮಾಡುತಿದ್ದ 9 ದಂಧೆಕೋರರ ಬಂಧನ, 30 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ..!
ಮುಂಡಗೋಡ ತಾಲೂಕು ಸೇರಿ ಜಿಲ್ಲೆಯ ಹಲವು ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ..!
ನಾಳೆ ಮುಂಡಗೋಡ ತಾಲೂಕಿನಲ್ಲೂ ಶಾಲೆಗಳಿಗೆ ಮಳೆಯ ರಜೆ..!
ಮುಂಡಗೋಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ “ಮಳೆಯ” ರಜೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ 10 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ..!
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!
ಶಿಗ್ಗಾವಿಯಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ..!
ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!
ಮುಂಡಗೋಡ ಪೊಲೀಸರ ಭರ್ಜರಿ ದಾಳಿ, ಪಾಳಾ ಕ್ರಾಸ್ ಬಳಿ ಗಾಂಜಾ ಸಾಗಿಸ್ತಿದ್ದ ಹಾನಗಲ್ಲಿನ ಇಬ್ಬರ ಬಂಧನ..!
ಜನ-ಧನ್ ಅಕೌಂಟ್ಗೆ ಮರು ಕೆವೈಸಿ : ಸೆ.30ಕ್ಕೆ ಡೆಡ್ಲೈನ್ ಫಿಕ್ಸ್ ಮಾಡಿದೆ RBI, ಅಪ್ಡೇಟ್ ಮಾಡುವುದು ಹೇಗೆ..?
ಕರ್ನಾಟಕದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಮುನ್ಸೂಚನೆ ; 5 ಜಿಲ್ಲೆಗಳಿಗೆ ರೆಡ್ ಅಲರ್ಟ್..!
Heavy Rain News:ರಾಜ್ಯದ ಬಹುತೇಕ ಕಡೆಗಳಲ್ಲಿ ಸುರಿಯುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಅಮಾಹುತಕ್ಕೆ ಕಾರಣವಾಗುದೆ. ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ (Heavy Rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ (red alert) ಘೋಷಣೆ ಮಾಡಿದ್ದು, ಕೆಲ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳೀಗೂ ರಜೆ ಘೋಷಿಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಸೇರಿ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಕಲಬುರಗಿ, ವಿಜಯಪುರ, ಬೀದರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಬಾಗಲಕೋಟೆ, ಯಾದಗಿರಿ, ಹಾವೇರಿ, ಗದಗ, ಹಾಸನ ಜಿಲ್ಲೆ ಸೇರಿದಂತೆ ಕೆಲ ಜಿಲ್ಲೆ ಗಳಿಗೆಯಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗುಡುಗು ಮತ್ತು ಜೋರಾದ ಗಾಳಿಯೊಂದಿಗೆ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ. ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ಬಳಿ...
ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ; ವಿಟಿಯು ಹೊಸ ದಾಖಲೆ..!
Exam Result News :ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಅಂತಿಮ ಸೆಮಿಸ್ಟರ್ ಬಿ.ಇ./ಬಿ.ಟೆಕ್/ಬಿ.ಪ್ಲಾನ್/ಬಿ.ಆರ್ಕ್/ಬಿ.ಎಸ್ಸಿ (ಆನರ್ಸ್) ಪರೀಕ್ಷೆಯ ಫಲಿತಾಂಶಗಳನ್ನು ಪರೀಕ್ಷೆ ಮುಗಿದ ಕೇವಲ ಒಂದು ಗಂಟೆಯೊಳಗೆ ಪ್ರಕಟಿಸಿ ಹೊಸ ದಾಖಲೆ ಸ್ಥಾಪಿಸಿದೆ..! ಪರೀಕ್ಷೆ ಶುಕ್ರವಾರ (ಮೇ 30) ಸಂಜೆ 5:30ಕ್ಕೆ ಮುಗಿದ್ದು, ಸಂಜೆ 6:30 ಕ್ಕೆ ಪ್ರಕಟಿಸುವ ಮೂಲಕ ಹೊಸ ದಾಖಲೆ ಸ್ಥಾಪಿಸಿದೆ. ವಿಟಿಯು ಈ ಹಿಂದೆ ಮೂರು ಗಂಟೆಗಳಲ್ಲಿ ಫಲಿತಾಂಶವನ್ನು ಪ್ರಕಟಿಸಿ ದಾಖಲೆ ಸ್ಥಾಪಿಸಿತ್ತು. ಈಗ ಅದು ತನ್ನದೇ ದಾಖಲೆಯನ್ನು ಮುರಿದು ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ. 50,321 ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿದ ಕೇವಲ ಒಂದು ಗಂಟೆಯ ನಂತರ ಫಲಿತಾಂಶವನ್ನು ಬಿಡುಗಡೆ ಮಾಡುವ ಮೂಲಕ ಈ ಐತಿಹಾಸಿಕ ಸಾಧನೆಯನ್ನು ಮಾಡಲಾಗಿದೆ ಎಂದು ವಿ ಟಿ ಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಾಖಲೆಯ ಸಮಯದಲ್ಲಿ ಫಲಿತಾಂಶಗಳನ್ನು ಪ್ರಕಟಿಸುವ ಮೂಲಕ ವಿಟಿಯು ತನ್ನ ಐತಿಹಾಸಿಕ ಮೈಲಿಗಲ್ಲನ್ನು ಮುರಿಯುತ್ತಿರುವುದು ಇದು ಎರಡನೇ ಬಾರಿ ಆಗಿದ್ದು ಮೊದಲ ಬಾರಿಗೆ, 2019...
GDP ಬೆಳವಣಿಗೆಯಲ್ಲಿ ವಿಶ್ವದ ಗಮನ ಸೆಳೆದ ಭಾರತ : ಮಾರ್ಚ್ ತ್ರೈಮಾಸಿಕದಲ್ಲಿ 7.4% ಜಿಡಿಪಿ ಸಾಧನೆ..!
India’s Q4 GDP Growth:2024-25ನೇ ಸಾಲಿನ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಮಾರುಕಟ್ಟೆ ನಿರೀಕ್ಷೆಗೂ ಮೀರಿ ದಾಖಲಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು 7.4% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಮೂಲಕ ಇದು ಅನೇಕ ಅರ್ಥಶಾಸ್ತ್ರಜ್ಞರ ಅಂದಾಜುಗಳನ್ನು ಮೀರಿಸಿದೆ. ಆದ್ರೆ 2025ರ ಪೂರ್ಣ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆ ಶೇಕಡಾ 6.5ಕ್ಕೆ ಇಳಿಕೆಯಾಗಿದೆ. ಇದು ಕೋವಿಡ್-19 ಸಾಂಕ್ರಾಮಿಕದ ನಂತರದ ಅವಧಿಯಲ್ಲೇ ದಾಖಲಾದ ಅತ್ಯಂತ ಕಡಿಮೆ ಬೆಳವಣಿಗೆ ದರವಾಗಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಏನೆಂದರೆ ಜಾಗತಿಕ ಅನಿಶ್ಚಿತತೆ ನಡುವೆ ವಿದೇಶಗಳು ಪರದಾಡುತ್ತಿರುವ ನಡುವೆ, ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯುವ ನಿರೀಕ್ಷೆಯಿದೆ. ಕೈಗಾರಿಕಾ ಚಟುವಟಿಕೆ ಮತ್ತು ಜಾಗತಿಕ ವ್ಯಾಪಾರದ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕತೆಯು ಉತ್ತಮ ಸಾಧನೆ ಮಾಡಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ 7.4% ಮಟ್ಟಕ್ಕೆ ಏರಿಕೆ! ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2024-25ನೇ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್...
ಇಂದೂರು ಗ್ರಾಪಂ ಉಪಾಧ್ಯಕ್ಷರ ಚುನಾವಣೆ: ಲಕ್ಷ್ಮೀ ಸುರೇಶ್ ಹರ್ತಿ ಅವಿರೋಧ ಆಯ್ಕೆ ಬಹುತೇಕ ಖಚಿತ..!
Election News:ಮುಂಡಗೋಡ ತಾಲೂಕಿನ ಇಂದೂರು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾಗಿ ಲಕ್ಷ್ಮೀ ಸುರೇಶದ ಹರ್ತಿ ಅವಿರೋಧ ಆಯ್ಕೆ ಆಗೋದು ಬಹುತೇಕ ಖಚಿತವಾದಂತಾಗಿದೆ. ಮಾಜಿ ಉಪಾಧ್ಯಕ್ಷೆ ಕಸ್ತೂರಿ ಹರಿಜನ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಹೀಗಾಗಿ, ನಾಮಪತ್ರ ಸಲ್ಲಿಸಲಾಗಿದೆ. ಇನ್ನು ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿದ್ದುಲಕ್ಷ್ಮೀ ಸುರೇಶದ ಹರ್ತಿ ಅವಿರೋಧ ಆಯ್ಕೆ ಆಗೋದು ಬಹುತೇಕ ಖಚಿತವಾದಂತಾಗಿದೆ. ಇನ್ನು ಘೋಷಣೆ ಅಷ್ಟೆ ಬಾಕಿ ಇದೆ.
ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ, ಕಾರಲ್ಲಿದ್ದ ಮೂವರೂ ಸ್ಥಳದಲ್ಲೇ ಸಾವು..!
Accident News ಧಾರವಾಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ, ಸ್ಥಳದಲ್ಲಿ ಮೂವರ ಸಾವು ಕಂಡಿದ್ದಾರೆ. ಗದಗ್ ಹುಬ್ಬಳ್ಳಿ ನಡುವೆ ಇರುವ ಭದ್ರಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಹುಬ್ಬಳ್ಳಿ ಗೆ ಹೊರಟಿದ್ದ ವೇಳೆ ಕಾರ್ ಅಪಘಾತವಾಗಿದ್ದು, ಕಾರ್ ನಲ್ಲಿದ್ದ ಮೂವರು ಧಾರುಣ ಸಾವು ಕಂಡಿದ್ದಾರೆ. ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರ ಭೇಟಿ ನೀಡಿದ್ದಾರೆ. ಕಾರ್ ನಲ್ಲಿದ್ದವರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆದಿದೆ.
ಶಿಗ್ಗಾವಿಯ ದುಂಢಸಿ ಕಾಡಲ್ಲಿ ಖುಲ್ಲಂ ಖುಲ್ಲಾ “ಅಂದರ್ ಬಾಹರ್”| ತಡಸ್ ಪೊಲೀಸರೇ ಎಲ್ಲಿದ್ದಿರಿ..?
Tadas Crime News: ಶಿಗ್ಗಾವಿ ತಾಲೂಕಿನ ತಡಸ ಪೊಲೀಸರು ಅದೇಲ್ಲಿಗೆ ಹೋಗಿ ಅದೇನು ಕಡಿದು ಗುಡ್ಡೆ ಹಾಕ್ತಿದಾರೋ ಏನೋ ಯಾರಿಗೂ ಅರ್ಥವಾಗ್ತಿಲ್ಲ.. ಈ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯಬಾರದ ಅಡ್ಡಕಸುಬುಗಳು, ಅಕ್ರಮಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಮಟ್ಕಾ ಅನ್ನೋದು ಈ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಮಾತಾಗಿದೆ. ಮದ್ಯ ಅನ್ನೋದು ಇಲ್ಲಿನ ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲೂ ಎಗ್ಗಿಲ್ಲದೇ ಬಿಕರಿ ಆಗ್ತಿದೆ. ಇನ್ನು ಇಸ್ಪೀಟು ಅಡ್ಡೆಗಳು ಕಾಡಿನ ನಡುವೆ ಸಂತೆ ಮಾಡ್ತಿವೆ. ದುಂಢಸಿ ಕಾಡಲ್ಲಿ ಅಂದರ್ ಬಾಹರ್..! ಇನ್ನು ತಡಸ ಪೊಲೀಸರ ಕೃಪಾಶೀರ್ವಾದದ ಬಲದಿಂದಲೋ ಏನೋ ಗೊತ್ತಿಲ್ಲ, ದುಂಢಸಿಯ ಕಾಡಲ್ಲಿ ಇಸ್ಪೀಟು ಅಡ್ಡೆಗಳು ಹೆಜ್ಜೆಗೊಂದರಂತೆ ಹುಟ್ಟಿಕೊಂಡಿವೆ. ಬೆಳಗಾಯಿತೆಂದರೆ ಸಾಕು ನಿತ್ಯವೂ ಇಲ್ಲಿನ ಅಡ್ಡೆಗಳು ಚಟಾಧೀಶರುಗಳನ್ನು ಕೈ ಬೀಸೀ ಕರಿತಿವೆ. ನಿಜ ಅಂದ್ರೆ ಇಲ್ಲಿನ ಒಂದೊಂದು “ಕಣ” ದಲ್ಲಿ ಏನಿಲ್ಲವೆಂದರೂ 50 ರಿಂದ 60 ಜನ ಅಂದರ್ ಬಾಹರ್ ಆಟದಲ್ಲಿ ಬ್ಯಸಿಯಾಗಿರ್ತಾರೆ. ಅಸಲು ಇಲ್ಲಿ ಒಂದೊಂದು ಆಟದಲ್ಲೇ ಲಕ್ಷ ಲಕ್ಷ ಹಣ ಕೈ ಬದಲಾಯಿಸ್ತಿದೆ....
ಹುನಗುಂದ ಗ್ರಾಪಂ ಉಪ ಚುನಾವಣೆ: “ಕೈ” ಬೆಂಬಲಿತ ಲಕ್ಷ್ಮೀ ಹನ್ಮಂತ ಲಮಾಣಿ ಅವಿರೋಧ ಆಯ್ಕೆ..!
Gram Panchayat by Election: ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿಗೆ ಅಗಡಿ ವಾರ್ಡ್ ನಂಬರ್ 2 ನೂತನ ಸದಸ್ಯೆಯಾಗಿ ಲಕ್ಷ್ಮೀ ಹನಮಂತ್ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಗಡಿಯ ಸದಸ್ಯೆ ಮಹಾಬುಬ್ಬಿ ಮಹ್ಮದ್ ಸಾಬ್ ವಾಲೀಕಾರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು, ಆದ್ರೆ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಚುನಾವಣೆ ನಡೆಯದೇ ಅವಿರೋಧ ಆಯ್ಕೆ ಮಾಡಲು ತೀರ್ಮಾನವಾದ ಹಿನ್ನೆಲೆಯಲ್ಲಿ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು, ಹೀಗಾಗಿ,ಲಕ್ಷ್ಮೀ ಹನುಮಂತ್ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಕಸ ಶಿವರಾಮ್ ಹೆಬ್ಬಾರರ ಮಾರ್ಗದರ್ಶನದಲ್ಲಿ ಸ್ಥಳೀಯ ಮುಖಂಡರಾದ ಎಚ್. ಎಂ.ನಾಯ್ಕ್, ಯುವ ಮುಖಂಡರಾದ ಬಸವರಾಜ್ ಆಸ್ತಕಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಷರೀಪಸಿಂಗ್ ಸಿಗ್ಗಟ್ಟಿ, ಸದಸ್ಯರಾದ ಸಿದ್ದನಗೌಡ ಪಾಟೀಲ, ತುಕಾರಾಮ್ ಹೊನ್ನಳ್ಳಿ, ಈಶ್ವರಗೌಡ ಅರಳಿಹೊಂಡ, ಶೇಜಾದಬಿ ಅಗಸರ್, ಮುಖಂಡರಾದ ರಾಮಣ್ಣ ಲಮಾಣಿ, ಭಾಸ್ಕರ್ ನಾಯ್ಕ್, ಸಿದ್ದಪ್ಪ ಹಡಪದ, ಮುತ್ತುರಾಜ್ ಕುಮ್ಮಣ್ಣಿ, ದಾದಪೀರ ಬಗಡಗೇರಿ, ದಾನಪ್ಪ ಲಮಾಣಿ ಸೇರಿದಂತೆ ಹಲವರ ನೇತೃತ್ವದಲ್ಲಿ ಅವಿರೋಧ ಆಯ್ಕೆಯಾಗಿದೆ.
ಹೊನ್ನಾವರದ ಗೇರುಸೊಪ್ಪ ಬಳಿ ಗುಡ್ಡ ಕುಸಿತ, ರಸ್ತೆ ಸಂಚಾರಕ್ಕೆ ಅಡಚಣೆ..!
Honnavar Landslide: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರೆದಿದೆ. ಭಾರೀ ಮಳೆಯಿಂದ, ಹೊನ್ನಾವರ ತಾಲೂಕಿನ ಗೆರುಸೊಪ್ಪ ಸರ್ಕಲ್ ಪಕ್ಕದಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ. ಹೀಗಾಗಿ, ವಾಹಮ ಸಂಚಾರಕ್ಕೆ ಅಡಚಣೆಯಾಗಿದೆ. ಸದ್ಯ, ,IRB ಅಧಿಕಾರಿಗಳು ಹಾಗೂ Spoters ರವರು ಸ್ಥಳದಲ್ಲಿ ಇದ್ದು ಬಿದ್ದಿರುವ ಮಣ್ಣನ್ನು JCB ಮುಖಾಂತರ ತೆರವು ಕಾರ್ಯಚರಣೆ ಮಾಡಿದ್ದಾರೆ. ಆ ಮೂಲಕ ಮಣ್ಣನ್ನು ತೆರವು ಮಾಡಲಾಗಿದೆ ಹಾಗೂ L Cone ಬ್ಯಾರಿಕೇಡ್ ಹಾಕಲಾಗಿದೆ. ವಾಹನಗಳಿಗೆ ಹೋಗಲು ಅನುವು ಮಾಡಿಕೊಡಲಾಗಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಲ್ಲಾಪುರ ಪೊಲೀಸ್ರ ದಾಳಿ, ಅಕ್ರಮವಾಗಿ ನಾಡಬಂದೂಕು ಇಟ್ಕೊಂಡಿದ್ದ ವ್ಯಕ್ತಿ ಆರೆಸ್ಟ್..!
Yallapur Crime News:ಯಲ್ಲಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನಾಡಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿ ಯನ್ನು ಬಂಧಿಸಿದ್ದಾರೆ. ಯಲ್ಲಾಪುರ ತಾಲೂಕಿನ ಕಂಪ್ಲಿ ಗ್ರಾಮದ ಸೂರೆ ಮನೆ ಕ್ರಾಸ್ ಬಳಿ, ಅಕ್ರಮವಾಗಿ ನಾಡ ಬಂದೂಕನ್ನು ಇಟ್ಟುಕೊಂಡ ವ್ಯಕ್ತಿಯ ಬಗ್ಗೆ ಖಚಿತ ಬಾತ್ಮಿ ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಇನ್ನು ಆರೋಪಿ ತಮ್ಮು ತಂದೆ ಬೊಂಬಿಯಾ ಕುಣಬಿ,(50) ಎಂಬುವವನನ್ನು ವಶಕ್ಕೆ ಪಡೆದು, ಆತನ ಬಳಿ ಸಿಕ್ಕ ಅನಧೀಕೃತ ನಾಡಬಂದೂಕನ್ನು ಸೂಕ್ತ ಕಾನೂನು ಕ್ರಮದಂತೆ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ👉ಭಟ್ಕಳ ಗ್ರಾಮೀಣ ಪೊಲೀಸರ ಕಾರ್ಯಾಚರಣೆ, ದರೋಡೆಗೆ ಹೊಂಚು ಹಾಕಿದ್ದ ಖತರ್ನಾಕ್ “ಗರುಡಾ ಗ್ಯಾಂಗ್” ನ ಮೂವರ ಬಂಧನ..! ಎಸ್ಪಿ ನಾರಾಯಣ ಎಮ್. ಎಎಸ್ಪಿ ಕೃಷ್ಣ ಮೂರ್ತಿ ಹಾಗೂ ಜಗದೀಶ ಎಮ್.ಎನ್. ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ, ಹಾಗೂ ಯಲ್ಲಾಪುರ ಪಿಐ ರಮೇಶ ಹನಾಪುರ ಮಾರ್ಗದರ್ಶನದಲ್ಲಿ ಪಿಎಸ್ಐ ಯಲ್ಲಾಲಿಂಗ ಕುನ್ನೂರ, ಸಿಬ್ಬಂದಿಯವರಾದ, ದೀಪಕ ನಾಯಕ, ಬಸವರಾಜ ಹಗರಿ, ಚನ್ನಕೇಶವ, ಪರಶುರಾಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.