ಕಾರವಾರ- ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆರಾಯನ ಅರ್ಭಟ ಜೋರಾಗಿದೆ..ನಿನ್ನೆ ರಾತ್ರಿಯಿಂದ ಎಡಬಿಡದೆ ಗಾಳಿ ಮಳೆ ಸುರಿಯುತ್ತಿದೆ..ಗಾಳಿ ಮಳೆಯ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆ ತತ್ತರಿಸಿದೆ.. ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಭರ್ಜರಿ ಮಳೆಯಾಗುತ್ತಿದ್ದು, ಜಿಲ್ಲೆಯ ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಕಗ್ಗತ್ತಲಲ್ಲಿ ಮುಳುಗಿದೆ.. ಅಬ್ಬರಿಸುತ್ತಿರುವ ಗಾಳಿ ಮಳೆಯಿಂದ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.. ಜಿಲ್ಲೆಗೆ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆಯಾಗಿತ್ತು.. ಜಿಲ್ಲೆಯ ಹಲವು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ..ಮಲೆನಾಡು ಭಾಗಗಳಲ್ಲಂತೂ ವ್ಯಾಪಕ ಮಳೆಯಾಗುತ್ತಿದೆ..ಗಾಳಿ ಮಳೆಯ ಅಬ್ಬರಕ್ಕೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ..ಭಾರೀ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ..
Top Stories
ಇಂದಿನಿಂದ “ಮನೆ ಮನೆಗೆ ಪೊಲೀಸ್” ವಿನೂತನ ಕಾರ್ಯಕ್ರಮಕ್ಕೆ ಚಾಲನೆ..! ನಿಮ್ಮನೆಗೇ ಬಂದು ನಿಮ್ಮ ದೂರು ಆಲಿಸಲಿದ್ದಾರೆ ಪೊಲೀಸ್ರು..!
ಸಿಎಂ ಸಿದ್ದರಾಮಯ್ಯರಿಂದ ಅವಮಾನಕ್ಕೆ ಈಡಾಗಿದ್ದ ಎಎಸ್ಪಿ ನಾರಾಯಣ ಬರಮನಿಗೆ ಪದೋನ್ನತಿ ನೀಡಿದ ರಾಜ್ಯ ಸರ್ಕಾರ..!
ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ ಕರಾವಳಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ..!
ಜು.21 ರವರೆಗೂ ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ..!
ಯಲ್ಲಾಪುರದಲ್ಲಿ ರಾಮನಗರದ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡು..! ತಪ್ಪಿಸಿಕೊಳ್ಳಲು ಯತ್ನಿಸಿದಾಗ ಫೈರಿಂಗ್..!
ಉತ್ತರ ಕನ್ನಡದ ಖಡಕ್ ಎಸ್ಪಿ ಎಂ.ನಾರಾಯಣ್ ಏಕಾಏಕಿ ವರ್ಗಾವಣೆ, ನೂತನ ಎಸ್ಪಿಯಾಗಿ ದೀಪನ್ ಎಂ.ಎನ್..!
ಸಂಘಟನೆಯಿಂದ ಸಮಾಜ ಸದೃಡವಾಗುತ್ತದೆ- ಮಾಜಿ ಶಾಸಕ ವಿ.ಎಸ್.ಪಾಟೀಲ್
ಮಳಗಿ ಧರ್ಮಾ ಜಲಾಶಯದಲ್ಲಿ ಹಾನಗಲ್ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ನಮ್ಮ ಸರ್ಕಾರ ನುಡಿದಂತೆ ನಡೆದಿದೆ, ಪಂಚ ಗ್ಯಾರಂಟಿಗಳು ಅಬಲರನ್ನು ಸಬಲರನ್ನಾಗಿಸಿದೆ- ಶಾಸಕ ಭೀಮಣ್ಣ ನಾಯ್ಕ್
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೆನರಾ ಬ್ಯಾಂಕ್ ದರೋಡೆ ಕೇಸಿನಲ್ಲಿ, ಮತ್ತೇ 12 ಖದೀಮರ ಬಂಧನ..!
ಬಾಚಣಕಿ ಸರ್ಕಾರಿ “ಅಡಿಕೆ ಗಿಡಗಳ” ಮಾರಣ ಹೋಮ ಕೇಸ್..! ನಾಳೆಯೇ ಸ್ಥಳಕ್ಕೆ ಅಧಿಕಾರಿಗಳ ಟೀಂ ಭೇಟಿ, ತಪ್ಪಿತಸ್ಥರ ವಿರುದ್ಧ ಕ್ರಮ ಗ್ಯಾರಂಟಿ ಅಂದ್ರು ಡಿಡಿ ಡಾ.ಬಿ.ಪಿ. ಸತೀಶ್..!
ಬಾಚಣಕಿಯಲ್ಲಿ “ಸರ್ಕಾರಿ” ಅಡಿಕೆ ಸಸಿಗಳ ಮಾರಣ ಹೋಮ..! ತೋಟಗಾರಿಕಾ ಅಧಿಕಾರಿಗಳ ಕಣ್ಗಾವಲಲ್ಲೇ ನಡೀತಾ ದುಷ್ಕೃತ್ಯ..? ಅಯ್ಯೋ ಕೃಷ್ಣ, ಕೃಷ್ಣಾ..!!
ಮೊಹರಂ ಹಿನ್ನೆಲೆ, ಮುಂಡಗೋಡ ಪೊಲೀಸರಿಂದ ಪಟ್ಟಣದಲ್ಲಿ ರೂಟ್ ಮಾರ್ಚ್..!
ಇನ್ನೂ ಮೂರು ದಿನ ಉತ್ತರ ಕನ್ನಡ ಜಿಲ್ಲೆ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ..!
ಲಾರಿಗಳ ನಡುವೆ ಅಪಘಾತ; ಚಾಲಕನ ಕಾಲು ಕಟ್..!
ಹುನಗುಂದದ ಈ ರಸ್ತೆ, ರಸ್ತೆಯೋ ಕೆರೆಯೋ..? PWD ಅಧಿಕಾರಿಗಳೇ ದಯವಿಟ್ಟು ಗಮನಿಸಿ..!
School holiday News; ನಿರಂತರ ಮಳೆ; ಜಿಲ್ಲೆಯ 4 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆ ರಜೆ..!
ಹುನಗುಂದದಲ್ಲಿ ಅನಾರೋಗ್ಯಕ್ಕೀಡಾದ ಶಿವಯ್ಯನವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ, ಶಾಸಕ ಹೆಬ್ಬಾರ್..!
ಅಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 20 ವರ್ಷ ವಯಸ್ಸಿನ ಯುವತಿ..!
ಮಂಗಳೂರಲ್ಲಿ ಅಯೋಧ್ಯಾ ಸಂಭ್ರಮ
ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿಪೂಜೆ ನಡೆಯುತ್ತಿದ್ದಂತೆ ಮಂಗಳೂರಿನ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸಂಭ್ರಮದ ಕಳೆ ಎದ್ದಿದೆ. ಕಳೆದ ಅನೇಕ ವರ್ಷಗಳಿಂದ ಎದುರುನೋಡುತ್ತಿದ್ದ ಸಂಭ್ರಮದ ಕ್ಷಣ ಬರುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು. 1992ರ ಅಯೋಧ್ಯೆ ಕರಸೇವೆಯಲ್ಲಿ ಕರಾವಳಿಯ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಪೈಕಿ ಅನೇಕ ಮಂದಿ ಇಂದು ಸಂಭ್ರಮ ಪಟ್ಟಿದ್ದಾರೆ. ಮಂಗಳೂರಿನ ವಿಹಿಂಪ ಕಚೇರಿಯಲ್ಲಿ ರಾಮಚಂದ್ರನಿಗೆ ಪೂಜೆ ಅರ್ಪಿಸಿ ನಮಿಸಿದ ಕಾರ್ಯಕರ್ತರು, ಅಯೋಧ್ಯೆಯಿಂದ ಶಿಲಾನ್ಯಾಸ ಕಾರ್ಯಕ್ರಮವನ್ನು ನೇರ ಪ್ರಸಾರ ವ್ಯವಸ್ಥೆಯಲ್ಲಿ ವೀಕ್ಷಿಸಿ ಸಂಭ್ರಮಿಸಿದರು. ಬಳಿಕ ಹೊರಭಾಗದಲ್ಲಿ ಚೆಂಡೆ, ತಮಟೆ ಬಾರಿಸುವ ಮೂಲಕ ಕುಣಿದಾಡಿದರು. ಸೆಕ್ಷನ್ 144 ಜಾರಿಯಲ್ಲಿದ್ದ ಕಾರಣ ಸಂಭ್ರಮಾಚರಣೆಯನ್ನು ಕಚೇರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.
ಅಯೋಧ್ಯೆಯಲ್ಲಿ ಇಙದು ಶಿಲಾನ್ಯಾಸ- ಹೆಬ್ಬಾರ್ ಸಂತಸ
ಅಯೋಧ್ಯೆಯಲ್ಲಿ ಸರ್ವಭೂತಹಿತ, ಮರ್ಯಾದಾ ಪುರಷೋತ್ತಮ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣದ ಭೂಮಿ ಪೂಜೆ ಅನ್ನು ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಇಂದು ನೆರವೇರಿಸಲಿದ್ದಾರೆ. ಈ ಐತಿಹಾಸಿಕ ಪುಣ್ಯ ಕ್ಷಣಕ್ಕೆ ವಿವಿಧ ಮಠದ ಮಠಾಧೀಶರು, ಸಾಧು ಸಂತರು, ಶ್ರೀರಾಮ ಭಕ್ತರು ಸಾಕ್ಷಿಯಾಗುತ್ತಿದ್ದಾರೆ,ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ರಾಮ ಭಕ್ತರ ಪರಿಶ್ರಮ,ಬಲಿದಾನವನ್ನು ಸ್ಮರಿಸುತ್ತಾ,ಈ ಶುಭ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸೋಣ,ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸೋಣ ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ..
ಹಿರಿಯರ ವಿರೋಧದಿಂದ ಹೆದರಿ ಪರಸ್ಪರ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ರಕ್ಷಣೆ ಕೋರಿ
ವಿಜಯಪುರ: ಹಿರಿಯರ ವಿರೋಧದಿಂದ ಹೆದರಿ ಪರಸ್ಪರ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ರಕ್ಷಣೆ ಕೋರಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳಿಗೆ ಮೊರೆ ಹೋಗಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಯಲ್ಲಪ್ಪ ಚೂರಿ ಹಾಗೂ ಅದೇ ಗ್ರಾಮದ ಯುವತಿ ಕೊಂತವ್ವ ಮಾನಕರ ಪರಸ್ಪರ ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿ ದ್ದಾರೆ. ಆದರೆ ಈ ಪ್ರೀತಿಗೆ ಯುವತಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿ ದ್ದಾರೆ. ಆಕೆಗೆ ಬೇರೆ ಕಡೆ ಮದುವೆ ಸಹ ನಿಶ್ಚಯ ಮಾಡಿದ್ದಾರೆ. ಇದರಿಂದ ಬೇಸತ್ತು ಯುವ ಪ್ರೇಮಿಗಳು ಓಡಿ ಹೋಗಿದ್ದರು. ಆದರೆ ಯುವತಿ ಕುಟುಂಬ ದವರು ಸಾಯುವ ಬೆದರಿಕೆ ಹಾಕಿದ್ದ ಕಾರಣ ವಾಪಸ್ ಮನೆಗೆ ಬಂದಿದ್ದಾರೆ. ಯುವಕ ಖಾಸಗಿ ಯಾಗಿ ಉದ್ಯೋಗ ಮಾಡಿಕೊಂಡಿದ್ದಾನೆ. ಇತನ ಬೆಳವಣಿಗೆ ಸಹಿಸದ ಕೆಲ ಗ್ರಾಮಸ್ಥರು ಈ ರೀತಿ ತಮ್ಮ ಪ್ರೀತಿಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಯುವಕ ಯಲ್ಲಪ್ಪ ಚೂರಿ ಆರೋಪಿಸಿ ದ್ದಾನೆ. ಇದರ ಜತೆ ಇವರಿಬ್ಬರ ಪ್ರೀತಿಗೆ ಅಡ್ಡವಾಗಿರುವ ಯುವತಿಯ ಕುಟುಂಬ ದವರು ಆಕೆಗೆ...
ಮನೆಯಲ್ಲಿ ಶ್ರೀ ರಾಮ ನಾಮ ಜಪ ಮಾಡಿದ ಸಚಿವ ಸಿಸಿ ಪಾಟೀಲ್….
ಗದಗ ಆ್ಯಂಕರ್ : ಅಯ್ಯೋಧ್ಯಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಪ್ರಭು ಶ್ರೀ ರಾಮಚಂದ್ರರ ಭವ್ಯ ಮಂದಿರ ನಿಮಾ೯ಣದ ಶೀಲಾನ್ಯಾಸ ಕಾಯ೯ದ ಪ್ರಯುಕ್ತ ಸಚಿವ ಸಿಸಿ ಪಾಟೀಲ್ ತಮ್ಮ ನಿವಾಸದಲ್ಲಿ ಶ್ರೀ ರಾಮ ನಾಮ ಜಪ ಮಾಡಿದರು. ಪತ್ನಿ ಮಕ್ಕಳು ಮತ್ತು ಕುಟುಂಬದ ಸದಸ್ಯರೆಲ್ಲರೂ ಸೇರಿ ಪೂಜೆ ಸಲ್ಲಿಸಿ ಶ್ರೀರಾಮ ನಾಮ ಜಪಿಸಿದರು. ನರಗುಂದ ಪಟ್ಟಣದಲ್ಲಿ ಇರುವ ಮನೆಯಲ್ಲಿ ರಾಮನಾಮ ಜಪಿಸಿ ಸಂಭ್ರಮಿಸಿದರು
ಖತರ್ನಾಕ ಕಳ್ಳಿಯರ ಗ್ಯಾಂಗ್ ಎಂಟ್ರಿ: ಹಾಡಹಗಲೇ ದರೋಡೆ, ಫಿನಾಯಿಲ್ ಮಾರುವ ನೆಪದಲ್ಲಿ ಕಳ್ಳತನ
ವಿಜಯಪುರ; ಕೊರೋನಾ ಸಂಕಷ್ಟದ ಮದ್ಯೆಯೂ ವಿಜಯಪುರದಲ್ಲಿ ಖತರ್ನಾಕ್ ಸುಂದರಿಯರ ರಾಬರೀ ಗ್ಯಾಂಗ್ ಫಿಲ್ಡಿಗಿಳಿದಿದೆಯಾ ಅನ್ನೋ ಅನುಮಾನ ಶುರುವಾಗಿದೆ.. ಯಾಕಂದ್ರೆ ವಿಜಯಪುರದ ಶಾಂತಿನಗರ ಏರಿಯಾದಲ್ಲಿ ನಡೆದಿರೊ ಈ ಒಂದು ಘಟನೆ ಇಲ್ಲಿನ ನಿವಾಸಿಗಳನ್ನ ಬೆಚ್ಚಿಬೀಳಿಸಿದೆ.. ಹೀಗಾಗಿ ಇಲ್ಲಿನ ಜನ ಆತಂಕಗೊಂಡಿದ್ದಾರೆ.. ಹೌದು ವಿಜಯಪುರದ ಶಾಂತಿ ನಗರದಲ್ಲಿ ಹಾಡಹಗಲೇ ಆತಂಕಕಾರಿ ಘಟನೆಯೊಂದು ನಡೆದಿದೆ.. ಮಟ ಮಟ ಮದ್ಯಾಹ್ನವೇ ಫಿನಾಯಿಲ್ ಮಾರುವ ವೇಷದಲ್ಲಿ ಬಂದಿದ್ದ ತಂಡವೊಂದು ಮನೆಮಂದಿಗೇಲ್ಲ ಮತ್ತು ಬರಿಸಿ ಚಿನ್ನ ಬೆಳ್ಳಿ ದೋಚಿಕೊಂಡು ಹೋಗಿದೆ.. ದುರಂತ ಅಂದ್ರೆ ಮನೆ ಕಾವಲಿಗಿದ್ದ ಪ್ರೀತಿಯ ಸಾಕು ನಾಯಿ ದುರುಳರ ವಿಷಪ್ರಾಶನಕ್ಕೆ ಜೀವ ಬಿಟ್ಟಿದೆ.. ಹೌದು, ವಿಜಯಪುರ ಶಾಂತಿನಗರದಲ್ಲಿ ವಾಸವಿರೋ, ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಮನೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. ಮನೆ ಮನೆಗೆ ಫಿನಾಯಿಲ್ ಮಾರಾಟ ಮಾಡಲು ಬಂದಿದ್ದ ಯುವತಿ ಕಳ್ಳತನದ ಸ್ಕೆಚ್ ಹಾಕಿದ್ದಾಳೆ.. ಮನೆಯ ಹೊರಗಡೆ ಕರೆದಾಗ ಬಂದ ಯುವಕನಿಗೆ ಮತ್ತು ಬರೋ ವಾಸನೆ ತೋರಿಸಿದ ಪ್ರಜ್ಞೆ ತಪ್ಪಿಸಿದ್ದಾಳೆ.. ಆ ನಂತ್ರ...