ಮುಂಡಗೋಡ: ತಾಲೂಕಿನ ಬೆಡಸಗಾಂವ ಅರಣ್ಯ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷವಾಗಿದೆ ಅಂತಾ ಹೇಳಲಾದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಲ್ಲಿ ನಿರ್ಭಿಡೆಯಿಂದ ಓಡಾಡುತ್ತಿರೋ ಹುಲಿರಾಯ ಘರ್ಜನೆ ಮೊಳಗಿಸಿದ್ದಾನೆ. ಆದ್ರೆ ಈ ವಿಡಿಯೋ ಮುಂಡಗೋಡ ತಾಲೂಕಿ ಬೆಡಸಗಾಂವ್ ಅರಣ್ಯ ಪ್ರದೇಶದಲ್ಲಿಯದೋ ಅಥವಾ ಬೇರೆ ಕಡೆಯದ್ದೋ ಸ್ಪಷ್ಟವಾಗಿಲ್ಲ. ಅದ್ರೆ ಸಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮಾತ್ರ ಹರಿದಾಡುತ್ತಿದೆ.
Top Stories
ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!
ಕರ್ನಾಟಕದ ಹಲವೆಡೆ ತೀವ್ರ ಶೀತ ಗಾಳಿ ; ಇಂದು 7 ಜಿಲ್ಲೆಗಳಿಗೆ ಆರೆಂಜ್, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ..!
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಆ ಹುಬ್ಬಳ್ಳಿ ಹುಡುಗನ ಮರ್ಡರ್ ಹಿಂದೆ ಇದ್ದಿದ್ದು “ಗಾಜಿನ ಪುರಾಣ”
ಹುಬ್ಬಳ್ಳಿ: ಆ ಯುವಕ ತನ್ನ ಮುಂದಿನ ಬದುಕಿನ ಬಗ್ಗೆ ಸಾವಿರಾರು ಕನಸು ಕಂಡವನು. ಪ್ರತಿಷ್ಠಿತ ಮನೆತನದಲ್ಲಿ ಹುಟ್ಟಿದ್ದ ಆ ಯುವಕ ಗೆಳೆಯರ ಜೊತೆ ಎಂಜಾಯ್ ಮಾಡುತ್ತಾ ಮನೆಯ ಮುದ್ದು ಮಗನಾಗಿದ್ದವನು. ಆದ್ರೆ ಆ ಯುವಕನ ಮೇಲೆ ಅದಾಗಲೇ ಒಂದು ಗ್ಯಾಂಗ್ ನ ಕಣ್ಣು ಬಿದ್ದಿತ್ತು. ನಿನ್ನೆ ಯುವಕನ ಜೊತೆ ಸಣ್ಣದಾಗಿ ಜಗಳ ಮಾಡಿದ್ದ ಆ ಗ್ಯಾಂಗ್ ಸದ್ದಿಲ್ಲದೆ ಯುವಕನ ಪ್ರಾಣ ತಿಂದು ಹಾಕಿದೆ. ಸ್ಮಾರ್ಟ್ ಹುಡುಗ ಕಣ್ರಿ..! ಆಸ್ಪತ್ರೆಯ ಎದುರು ನಿಂತಿರೋ ನೂರಾರು ಜನರು..ಶವಾಗರದ ಬಳಿ ಬಂದು ಗೆಳೆಯನನ್ನ ಕೊನೆಯದಾಗಿ ನೋಡಬೇಕು ಅಂತ ಕಾಯುತ್ತಿರುವ ಸ್ನೇಹಿತರು. ಹೌದು ಹುಬ್ಬಳ್ಳಿಯ ಕಿಮ್ಸ್ ನ ಶವಾಗಾರದ ಬಳಿ ಇವರೆಲ್ಲ ಹೀಗೆ ಜಮಾಯಿಸೋಕೆ ಕಾರಣವೇ ಹೀಗೆ ಫೋಟೋದಲ್ಲಿ ಸ್ಮಾರ್ಟ್ ಆಗಿ ಡಿಫರೆಂಟ್ ಡಿಫರೆಂಟ್ ಪೋಸ್ ಕೊಟ್ಟಿರುವ ಹುಬ್ಬಳ್ಳಿಯ ಅಮರ ಕಾಲೋನಿ ನಿವಾಸಿ ಅಭಿಷೇಕ ರುದ್ರಗೌಡ ಪಾಟೀಲನ ಶವ ಕೊನೆಯದಾಗಿ ನೋಡೋಕೆ.. ಹೇಗಾಯ್ತು ಮರ್ಡರ್..? ನಿನ್ನೆ ಸಂಜೆ ಮನೆಯಲ್ಲಿದ್ದ ಅಭಿಷೇಕನ್ನ ಮೂವರು ಹಂತಕರು ಹೊರಗೆ ಕರೆದಿದ್ದಾರೆ. ಹೊರ...
ಪವಾಡ ಮಾಡಿ ವಂಚಿಸುತ್ತಿದ್ದ ಡೋಂಗಿ ಬಾಬಾಗೆ ಹೇಗೇಲ್ಲ ಥಳಿಸಿದ್ರು ಗೊತ್ತಾ..?
ಗದಗ: ಆತ ಪವಾಡ ಪುರುಷನಂತೆ. ಸುಡುವ ಎಣ್ಣೆಯಲ್ಲಿ ಕೈ ಇಟ್ಟರೂ ಆತನ ಕೈ ಸುಡುತ್ತಿರಲಿಲ್ಲ, ಕೊತಕೊತ ಕುದಿಯುವ ಬಿಸಿ ತುಪ್ಪವನ್ನ ಬರಿಗೈಲಿ ಹಿಡಿದು ಎಲ್ಲರ ಹುಬ್ಬೇರಿಸುತ್ತಿದ್ದನಂತೆ. ಇವುಗಳ ಮೂಲಕ ಜನರಿಂದ ಸಾವಿರ ಸಾವಿರ ರೂ. ಹಣ ವಸೂಲಿ ಮಾಡ್ತಿದ್ದನಂತೆ. ಸಾಲದು ಅಂತ ಹಿಂದೂ ದೇವರುಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ. ಅದೇನೋ ಗೊತ್ತಿಲ್ಲ ಇವತ್ತು ಇವನ ಗ್ರಹಚಾರ ನೆಟ್ಟಗಿರಲಿಲ್ಲ. ಹೊಡಿ ಮಗಾ, ಹೊಡಿ ಮಗಾ..! ಕಪಾಳಕ್ಕೆ ಹೊಡೆಯುವನು ಒಬ್ಬ, ಇನ್ನೊಬ್ಬ ಎಳೆದು ಒದಿತಿದ್ದ. ಮತ್ತೋರ್ವಳು ಹಾದಿಯೊಳಗೆ ಪಟ ಪಟ ಅಂತ ಮುಖಕ್ಕೆ ಭಾರಿಸುತ್ತಿದ್ದಳು. ಅಯ್ಯೋ ಕೈ ಮುಗಿತಿನಿ ಬಿಟ್ಟು ಬಿಡಿ ಕೈ ಮುಗಿತಿನಿ ಅಂತ ಒದೆತಿನ್ನುತ್ತಿದ್ದ ಬಾಬಾ ಹೇಳ್ತಿದ್ದ. ಘಟನೆ ಎಲ್ಲಿ..? ಅಂದಹಾಗೆ ಇವೆಲ್ಲ ದೃಶ್ಯ ಕಂಡು ಬಂದಿದ್ದು ಗದಗನಲ್ಲಿ.. ಹೌದು. ಪವಾಡಗಳ ಹೆಸರಲ್ಲಿ ವಂಚನೆ ಮಾಡುತ್ತಿದ್ದ ನಕಲಿ ಬಾಬಾ ಒಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಗದಗ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಘಟನೆ ನಡೆದಿದ್ದು ಡೋಂಗಿ ಬಾಬಾ ಆಸೀಫ್ ಜಾಗಿರದಾರ್...
ಪೋಷಕರೇ ಹುಶಾರು..! ಹಾಡಹಗಲೇ 2 ವರ್ಷದ ಗಂಡು ಮಗು ಅಪಹರಣ ಮಾಡಿದ ಖದೀಮ..!
ಉಡುಪಿ: ಇಲ್ಲಿನ ಕರಾವಳಿ ಜಂಕ್ಷನ್ ನಲ್ಲಿ ಹಾಡು ಹಗಲೇ 2 ವರ್ಷದ ಗಂಡು ಮಗುವಿನ ಅಪಹರಣ ಮಾಡಲಾಗಿದೆ. ಮಗುವನ್ನ ಅಪಹರಿಸಿ ಖಾಸಗಿ ಬಸ್ಸು ಹತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಬಾಗಲಕೋಟೆ ಮೂಲದ ದಂಪತಿಗಳ ಗಂಡು ಮಗು ಅಪಹರವಾಗಿದ್ದು, ಕೆಲವು ದಿನದ ಹಿಂದೆ ಈ ದಂಪತಿಯನ್ನ ಪರಿಚಯ ಮಾಡಿಕೊಂಡಿದ್ದ ಅಪಹರಣಕಾರ, ಪ್ರತಿದಿನ ಈ ದಂಪತಿಯ ಸಮೀಪದಲ್ಲೇ ಮಲಗುತ್ತಿದ್ದ. ಇಂದು ಬೆಳಿಗ್ಗೆ ಮಗುವಿಗೆ ತಿಂಡಿ ಮಾಡಿಸಿ ಬರುತ್ತೇನೆ ಎಂದು ಕರೆದುಕೊಂಡು ಹೋಗಿ, ಮಗುವಿನ ಜೊತೆ ಬಸ್ ಏರಿ ಪರಾರಿಯಾಗಿದ್ದಾನೆ. ಇನ್ನು ಉಡುಪಿ ನಗರ ಠಾಣೆ ಪೊಲೀಸರಿಂದ ಅಪಹರಣಕಾರನಿಗಾಗಿ ಹುಡುಕಾಟ ನಡೆದಿದೆ.
ಪ್ರವಾಸಕ್ಕೆ ಬಂದವರು, ಸಮುದ್ರ ಪಾಲಾದ್ರು..!
ಕಾರವಾರ: ಸಮುದ್ರದಲ್ಲಿ ಈಜಲು ಹೋದ ಇಬ್ಬರು ನೀರುಪಾಲಾಗಿ, ಮತ್ತಿಬ್ಬರನ್ನು ಸ್ಥಳೀಯರೇ ರಕ್ಷಣೆ ಮಾಡಿದ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಣಿ ಹಾಗೂ ಬೇಕರಿ ಮಂಜುನಾಥ್ ಸಾವು ಕಂಡವರು. ನಾಗರಾಜ ಹಾಗೂ ಪ್ರವೀಣ್ ರಕ್ಷಣೆಗೊಳಗಾದವರು. ಇನ್ನು ಸಮುದ್ರ ಪಾಲಾಗಿದ್ದ ಮಣಿ ಶವ ಪತ್ತೆಯಾಗಿದೆ. ಆದ್ರೆ, ಮಂಜುನಾಥ್ ಶವ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ, ಶವಕ್ಕಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಲಾಗಿದೆ. ನಾಲ್ಕು ಜನ ಸ್ನೇಹಿತರು ಸೇರಿ ಶಿವಮೊಗ್ಗ ದಿಂದ ಮುರಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ರು.. ನಾಲ್ಕೂ ಜನ ಸಮುದ್ರದಲ್ಲಿ ಈಜುವಾಗ ಅಲೆಗೆ ಕೊಚ್ಚಿ ಹೋಗಿ ದುರಂತ ಸಂಭವಿಸಿದೆ. ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.
ಆ ನೀಚ ಪತಿ ಕುಡಿದ ಮತ್ತಿನಲ್ಲಿ, ತನ್ನ ಪತ್ನಿಯ ಮೂಗನ್ನೇ ಕಚ್ಚಿ ತಿಂದುಬಿಟ್ಟ..!
ಆತ ಕುಡಿದ ಮತ್ತಿನಲ್ಲಿದ್ದ ಪತಿ, ಪತ್ನಿ ಮನೆಯಲ್ಲಿ ಬಂದು ಉಳಿದಿದ್ದ ಆತನದು ನಿತ್ಯದ ಕಾಯಕ ಕುಡಿತ ಮತ್ತು ಜಗಳ. ನಿತ್ಯ ಕುಡಿದು ಬಂದು ಬೈಯುತ್ತಲೇ ಇದ್ದರೂ ಸಹ ಪತ್ನಿ ಹೇಗೋ ಹೊಂದಿಕೊಂಡು ಹೊರಟ್ಟಿದ್ದಳು. ಇಂದಲ್ಲ ನಾಳೆ ನನ್ನ ಪತಿ ಸುಧಾರಿಸಿಯಾನೂ ಅಂತಾನೆ ಅವಳು ತಿಳಿದಿದ್ದಳು. ಆದ್ರೆ ಪತ್ನಿಯನ್ನ ಚೆನ್ನಾಗಿ ನೋಡಕೊಳ್ಳಬೇಕಾದ ದುರುಳ ಪತಿ ಮಾಡಿದ್ದು ಮಾತ್ರ ವಿಚಿತ್ರ ಕಾರ್ಯ..ಕುಡಿತದ ಮತ್ತಿನಲ್ಲೇ ತೇಲುತ್ತಿದ್ದ ಪತಿ ಮಾತ್ರ ಹೆಂಡತಿಯ ಮೂಗನ್ನೇ ಕಚ್ಚಿಬಿಟ್ಟಿದ್ದಾನೆ. ಹೌದು, ಹೀಗೆ ಸಂಪೂರ್ಣವಾಗಿ ರಕ್ತಸಿಕ್ತವಾಗಿರು ಮೂಗು..ಮೂಗಿನಿಂದ ನಿರಂತರವಾಗಿ ಸುರಿಯುತ್ತಿರುವ ರಕ್ತವನ್ನು ತಡೆಯುತ್ತ ನೋವಿನಿಂದ ನರಳುತ್ತಿರುವ ಈ ಮಹಿಳೆಯ ಹೆಸರು ಗೀತಾ ಅಂತ. ಈಕೆಯೇ ಈಗ ತನ್ನ ಪತಿಯಿಂದಲೇ ಮೂಗು ಕಚ್ಚಿಸಿಕೊಂಡ ಪತ್ನಿ. ಈಕೆಯ ಪತಿ ಉಮೇಶ ಗಂಡಗುದರಿ ಎಂಬಾತನೇ ಮೂಗು ಕಚ್ಚಿದ ಪತಿ. ಈ ಘಟನೆ ನಡೆದಿರೋದು ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ. ನಿನ್ನೆ ರಾತ್ರಿ ಗೀತಾಳೊಂದಿಗೆ ಮೊದಲಿಗೆ ಉಮೇಶ ಸಣ್ಣದಾಗಿ ಜಗಳ ತೆಗೆದಿದ್ದಾನೆ. ನಿತ್ಯ ಕುಡಿದು ಬಂದು ಇದೇ ರೀತಿ...
ಗುಂಜಾವತಿ ಭಾಗದಲ್ಲಿ ಕಾಡಾನೆ ಹಾವಳಿ, 5 ಎಕರೆ ಕಬ್ಬಿನ ಬೆಳೆ ತಿಂದು ತೇಗಿದ ಗಜ ಪಡೆ..!
ಮುಂಡಗೋಡ: ತಾಲೂಕಿನ ಗುಂಜಾವತಿ ಸೇರಿದಂತೆ ಸುತ್ತ ಮುತ್ತಲ ಭಾಗಗಳಲ್ಲಿ ಕಾಡಾನೆ ಹಾವಳಿ ಶುರುವಾಗಿದೆ. ಕಳೆದ 3 ದಿನಗಳಿಂದ ಕಾಡಾನೆಗಳ ಹಿಂಡು ಈ ಭಾಗದ ರೈತರ ನಿದ್ದೆಗೆಡಿಸಿವೆ. ಗುಂಜಾವತಿ ಭಾಗದ ರೈತರ ಕಬ್ಬಿನ ಗದ್ದೆ ಹಾಗೂ ಅಡಿಕೆ ತೋಟಕ್ಕೆ ನುಗ್ಗಿರೋ ಕಾಡಾನೆಗಳು ಗಬ್ಬಿನ ಬೆಳೆಯನ್ನು ತಿಂದು ಹಾಕಿ, ಹಾನಿ ಮಾಡಿವೆ. ಇಲ್ಲಿನ ಗುರುಬಸಯ್ಯ ಎಂಬುವವರ 5 ಎಕರೆ ಕಬ್ಬಿನ ಗದ್ದೆಯಲ್ಲಿ ಬೆಳೆ ತಿಂದು, ನಾಶಗೊಳಿಸಿವೆ. ಇಷ್ಟೇಲ್ಲ ಆದ್ರೂ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ ಅಂತಾ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ. ಅಂದಹಾಗೆ, ಪ್ರತಿವರ್ಷವೂ ಈ ಭಾಗದಲ್ಲಿ ಕಾಡಾನೆಗಳ ಹಿಂಡು ರೈತರ ಜಮೀನುಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಆದ್ರೂ ಆನೆಗಳ ಹಿಂಡುಗಳನ್ನು ನಿಗ್ರಹಿಸುವಲ್ಲಿ ಅರಣ್ಯ ಇಲಾಖೆ ಮುಂಜಾಗ್ರತೆ ವಹಿಸಬೇಕಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಇದು ಈ ಭಾಗದ ಅನ್ನದಾತರ ಆಗ್ರಹ.
ಧಾರವಾಡ ಯೋಗಿಶಗೌಡ ಹತ್ಯೆ ಕೇಸ್ ಗೆ ಮೇಜರ್ ಟ್ವಿಸ್ಟ್..!
ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗಿಶಗೌಡ ಕೊಲೆ ಕೇಸ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಕೊಲೆ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದ ವ್ಯಕ್ತಿಯೇ ಈಗ ಖುದ್ದು ವಿನಯ ಕುಲಕರ್ಣಿ ವಿರುದ್ಧವೇ ಪರೋಕ್ಷ ಹೇಳಿಕೆ ನೀಡಿದ್ದು, ಇಷ್ಟು ದಿನ ಹೇಳದೇ ಇರೋ ಸತ್ಯಗಳನ್ನೆಲ್ಲ ಇನ್ನು ಮುಂದೆ ಹೇಳುವೆ ಅಂತಾ ಹೇಳಿದ್ದಾನೆ. ಮತ್ತೊಂದು ಕಡೆ ನಿನ್ನೆಯಷ್ಟೇ ಸಿಬಿಐ ಬಂಧಿಸಿದ್ದ ಸೋಮು ನ್ಯಾಮಗೌಡನಿಗೆ ಇವತ್ತು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ. 2016ರ ಜೂನ್ 15ರಂದು ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಕೊಲೆ ಕೇಸ್‌ನ ಪೊಲೀಸ್ ತನಿಖೆಯಲ್ಲಿ ಮೊದಲ ಆರೋಪಿಯಾಗಿದ್ದ ಬಸವರಾಜ ಮುತ್ತಗಿ ಹಾಗೂ ಮುತ್ತಗಿಯ ಐವರು ಸ್ನೇಹಿತರು, ಇಷ್ಟು ದಿನ ಸಿಬಿಐ ವಿಚಾರಣೆ ಎದುರಿಸುತ್ತಲೇ ಬಂದಿದ್ದರು. ಈಗ ಏಕಾಏಕಿಯಾಗಿ ರಾಜಕೀಯಕ್ಕೆ ಯೋಗೀಶಗೌಡ ಹತ್ಯೆಯಾಗಿದೆ ಎನ್ನುವುದು ಸಿಬಿಐ ತನಿಖೆಯಿಂದ ಎಲ್ಲರಿಗೂ ಬಯಲಾಗಿದೆ. ಹೀಗಾಗಿ ನಾವು ಹಾಗೂ ನಮ್ಮ ಜೊತೆ ಇರುವವರೆಲ್ಲ ಬಡ ಹುಡುಗರು, ಅವರನ್ನು ಬಲಿ ಪಶು ಮಾಡಲು, ಬಳಸಿಕೊಂಡಿದ್ದಾರೆ ಎಂದು...
ಪಿಡಿಓ ಮತ್ತು ಗುತ್ತಿಗೆದಾರ ಬಡಿದಾಡಿಕೊಂಡ ದೃಷ್ಯ ಹೇಗಿದೆ ಗೊತ್ತಾ..?
ಶಿಗ್ಗಾವಿ: ಗ್ರಾಮ ಪಂಚಾಯತಿ ಪಿಡಿಓ ಹಾಗೂ ಗುತ್ತಿಗೆದಾರನ ನಡುವೆ ಕೈ-ಕೈ ಮಿಲಾಯಿಸಿದ ಘಟನೆ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು ಗ್ರಾಮ ಪಂಚಾಯಿತಿಯ ಪಿಡಿಓ ಅಶೋಕ್ ಗೋಂದಿ ಅವರನ್ನು ಪಂಚಾಯಿತಿಯ ಗುತ್ತಿಗೆ ಕೆಲಸದ ವಿಷಯವಾಗಿ ಗುತ್ತಿಗೆದಾರ ಮಂಜುನಾಥ ಕಂಕನವಾಡಿ ಅವರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿ, ಬಾಯಿಗೆ ಬಂದಹಾಗೆ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡಿದ್ದಾರೆ. ಘಟನೆ ನಡೆದು ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜಿ ಸಂಧಾನ ಮಾಡಿಕೊಂಡ ನಂತರ ಬಹಿರಂಗವಾಗಿದೆ. ಪಂಚಾಯತಿಯ ಎನ್.ಆರ್.ಇ.ಜಿ ಕೆಲಸಗಳಿಗಾಗಿ ಗುತ್ತಿಗೆ ಪಡೆದ ಮಂಜುನಾಥ್ ಕೆಲಸದ ವಿಷಯವಾಗಿ ಕೇಳಿದ್ದಾನೆ ಆಗ ಪಿಡಿಓ ಅಶೋಕ್ ಗೋಂದಿ ಮಳೆಗಾಲವಿದೆ ಕೆಲಸ ಮಾಡಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಇಲ್ಲಿ ಇನ್ನೊಬ್ಬ ಗುತ್ತಿಗೆದಾರನಿಗೆ ಗುತ್ತಿಗೆ ಕೆಲಸ ಮಾಡಲು ಹೇಳಿ ನನಗೆ ಏಕೆ ಬೇಡ ಎನ್ನುತ್ತೀರಿ ? ಎಂದು ಪ್ರಶ್ನಿಸಿದಾಗ ಈ ರೀತಿಯ ಮಾತಿನ ಚಕಮಕಿ ನಡೆದಿದೆ...
ಹುನಗುಂದ ತಾಪಂ ಕ್ಷೇತ್ರ: ಬಿಜೆಪಿಯಲ್ಲಿ “ಹಳೇ” ಕಲಿಗಳ ಮದ್ಯೆ ಟಿಕೆಟ್ ಫೈಟ್..! “ಕೈ” ಅಂಗಳದಲ್ಲಿ ಎಲ್ಲವೂ ಸೀಕ್ರೆಟ್..!!
ಮುಂಡಗೋಡ: ತಾಲೂಕಿನಲ್ಲಿ ಈಗ ಬರೀ ರಾಜಕೀಯದ್ದೇ ಹವಾ. ಇನ್ನೇನು ತಾಲೂಕಾ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕು, ಮೀಸಲಾತಿಗಳೂ ಪ್ರಕಟವಾಗಿದೆ. ಹೀಗಾಗಿ, ಎಲ್ಲೇಲ್ಲೂ ರಾಜಕೀಯ ಚರ್ಚೆ ಶುರುವಾಗಿದೆ. ಅದ್ರಂತೆ ಇವತ್ತು ನಾವು ಹುನಗುಂದ ತಾಪಂ ಕ್ಷೇತ್ರದ ಹಕೀಕತ್ತು ನಿಮ್ಮ ಮುಂದೆ ಇಡ್ತಿದಿವಿ. ಇದು ಹುನಗುಂದ ಕ್ಷೇತ್ರ..! ಅಂದಹಾಗೆ, ಹುನಗುಂದ ತಾಪಂ ಕ್ಷೇತ್ರ ಹುನಗುಂದ, ಅಗಡಿ, ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳನ್ನು ಒಳಗೊಂಡಿದೆ. ಗ್ರಾಮ ಪಂಚಾಯತಿ ಆಡಳಿತ ಸಧ್ಯ ಕಾಂಗ್ರೆಸ್ ಬೆಂಬಲಿತರ “ಕೈ” ಯಲ್ಲಿದೆ. ಹೀಗಿದ್ದಾಗಲೂ ಇಲ್ಲಿ ಬಿಜೆಪಿ ಪ್ರಭಾವ ತುಸು ಜಾಸ್ತಿನೇ ಇದೆ. ಆದ್ರೆ ಸ್ಥಳೀಯ ಮಟ್ಟದ ಆಂತರಿಕ ಬೇಗುದಿ ಅನ್ನೋದು, ಬಹುಶಃ ಇಲ್ಲಿನ ಬಿಜೆಪಿಗೆ ಒಂದಿಷ್ಟು ಹಿನ್ನಡೆ ತಂದಿದೆ. ಇದು ಇತ್ತಿಚೆಗಷ್ಟೇ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಗಜ್ಜಾಹೀರಾಗಿದೆ. ಎಡಗೈಯನ್ನ ಬಲಗೈ, ಬಲಗೈಯನ್ನ ಎಡಗೈ ನಂಬದ ಸ್ಥಿತಿಯಲ್ಲಿ ಬಿಜೆಪಿ ಪರದಾಡಿದೆ ಈ ಕಾರಣಕ್ಕಾಗೇ, ಅನಾಯಾಸವಾಗಿ ದಕ್ಕಬೇಕಿದ್ದ ಗ್ರಾಮ ಪಂಚಾಯತಿ ಆಡಳಿತ ಇಲ್ಲಿನ ಬಿಜೆಪಿಗರಿಗೆ ಕೈತಪ್ಪಿ ಹೋಗಿದೆ. ತಾಪಂ...









