ಟ್ರಕ್-ಬೊಲೆರೊ ಮುಖಾಮುಖಿ ಡಿಕ್ಕಿ: ಮದುವೆ ಮುಗಿಸಿ ಮರಳುತ್ತಿದ್ದ 9 ಮಂದಿ ಸಾವು..!

ಟ್ರಕ್-ಬೊಲೆರೊ ಮುಖಾಮುಖಿ ಡಿಕ್ಕಿ: ಮದುವೆ ಮುಗಿಸಿ ಮರಳುತ್ತಿದ್ದ 9 ಮಂದಿ ಸಾವು..!

Accident News : ಸರೈಕೇಲಾ(ಜಾರ್ಖಂಡ್‌): ಟ್ರಕ್ ಮತ್ತು ಬೊಲೆರೊ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂಬತ್ತು ಮಂದಿ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ನಮ್ಶೋಲ್​ ಬಳಿಯ ರಾಷ್ಟ್ರೀಯ ಹೆದ್ದಾರಿ 18ರಲ್ಲಿ ಇಂದು ಬೆಳಗ್ಗೆ ನಡೆಯಿತು. ತಿಲೈತಾರ್ ನಿವಾಸಿಗಳಾದ ವಿಜಯ್ ಮಹಾತೋ, ಸ್ವಪನ್ ಮಹಾತೋ, ಅಜಯ್ ಮಹಾತೋ, ಬೃಹಸ್ಪತಿ ಮಹಾತೋ, ಗುರುಪಾದ ಮಹಾತೋ, ಶಶಾಂಕ್ ಮಹಾತೋ, ಕೃಷ್ಣ ಮಹಾತೋ, ಚಂದ್ರಮೋಹನ್ ಮಹಾತೋ ಮತ್ತು ಚಾಲಕ ಚಿತ್ತರಂಜನ್ ಮಹಾತೋ ಮೃತರೆಂದು ಗುರುತಿಸಲಾಗಿದೆ. ಗುರುವಾರ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಬಲರಾಂಪುರದ ಅದಾಬ್ನಾ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಬೊಲೆರೊನಲ್ಲಿ ಹಿಂತಿರುಗುತ್ತಿದ್ದಾಗ, ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಜಾರ್ಖಂಡ್-ಪಶ್ಚಿಮ ಬಂಗಾಳ ಗಡಿಯ ನಮ್ಶೋಲ್ ಸಮೀಪ ಬೊಲೆರೊ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರಕ್​ ಭತ್ತದ ಗದ್ದೆಗೆ ನುಗ್ಗಿ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಒಂಬತ್ತೂ ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಎಲ್ಲರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಪುರುಲಿಯಾ ಆಸ್ಪತ್ರೆಗೆ...

ಸತತ ಎರಡು ದಿನದಿಂದ ಚಿನ್ನದ ಬೆಲೆ ಏರಿಕೆ; ಬೆಂಗಳೂರಲ್ಲಿ ಈಗ ಚಿನ್ನದ ಬೆಲೆ ಎಷ್ಟಿದೆ..?

ಸತತ ಎರಡು ದಿನದಿಂದ ಚಿನ್ನದ ಬೆಲೆ ಏರಿಕೆ; ಬೆಂಗಳೂರಲ್ಲಿ ಈಗ ಚಿನ್ನದ ಬೆಲೆ ಎಷ್ಟಿದೆ..?

Gold Price Today: ಇರಾನ್-ಇಸ್ರೇಲ್ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರುತ್ತಿವೆ. ಇದು ಇತರ ಕ್ಷೇತ್ರಗಳ ಮೇಲೂ ಪರಿಣಾಮ ಬೀರುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಿರುವ ಕಾರಣ, ಹೂಡಿಕೆದಾರರು ಹೂಡಿಕೆಗೆ ಸುರಕ್ಷಿತ ಸಾಧನಗಳ್ನು ಹುಡುಕುತ್ತಿದ್ದಾರೆ. ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಏರುಗತಿಯಲ್ಲಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಮೀಪದಲ್ಲಿ ವಹಿವಾಟು ನಡೆಸುತ್ತಿವೆ. ಇದು ದೇಶೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು, ಚಿನ್ನದ ಬೆಲೆಯಲ್ಲಿ ಸತತ ಎರಡು ದಿನದಿಂದ ಏರಿಕೆ ಕಂಡಿದೆ. ಬೆಂಗಳೂರಲ್ಲಿ ಕಳೆದ ಎರಡೇ ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು ₹700 ರಷ್ಟು ಹೆಚ್ಚಾಗಿದೆ. ಜೂನ್ 20 ರಂದು ಶುಕ್ರವಾರ ಬೆಂಗಳೂರಲ್ಲಿ ಚಿನ್ನದ ದರಗಳು ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಬೆಂಗಳೂರಲ್ಲಿ ಮತ್ತೆ ಏರಿಕೆಯಾದ ಚಿನ್ನದ ಬೆಲೆ ಬೆಂಗಳೂರಲ್ಲಿ ಚಿನ್ನದ ದರಗಳು ಸತತ ಎರಡನೇ ದಿನವೂ ಹೆಚ್ಚಾಗಿವೆ. ಕಳೆದ ಬುಧವಾರ 24 ಕ್ಯಾರೆಟ್ ಅಪರಂಜಿ ಚಿನ್ನದ ದರ...

ತಗ್ಗಿದ ಮಳೆರಾಯನ ಅರ್ಭಟ; ಕರಾವಳಿ ಹೊರತು ಪಡಿಸಿ ರಾಜ್ಯದ ಉಳಿದೆಡೆ ಕಡಿಮೆಯಾದ ಮಳೆ..!

ತಗ್ಗಿದ ಮಳೆರಾಯನ ಅರ್ಭಟ; ಕರಾವಳಿ ಹೊರತು ಪಡಿಸಿ ರಾಜ್ಯದ ಉಳಿದೆಡೆ ಕಡಿಮೆಯಾದ ಮಳೆ..!

Rain Report; ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಆರ್ಭಟಿಸಿದ್ದ ಮುಂಗಾರು ಮಳೆ ಇದೀಗ ಕರಾವಳಿ ಹೊರತುಪಡಿಸಿ ಉಳಿದೆಡೆ ಕಡಿಮೆಯಾಗಿದ್ದು, ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು, ಇಲ್ಲಿ ಜೂನ್ 26ರವರೆಗೂ ಮಳೆಯಾಗಲಿದೆ. ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ👉 ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಮಳೆ ಅರ್ಭಟ; ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕೃಷ್ಣಾ ನದಿ..! ತುಮಕೂರು, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿಯಲ್ಲಿ ಒಣಹವೆ ಇರಲಿದೆ ಎಂದು ಇಲಾಖೆ ತಿಳಿಸಿದೆ. ನಿನ್ನೆ ಎಲ್ಲೆಲ್ಲಿ ಮಳೆಯಾಗಿದೆ..? ಕಾರವಾರ, ಮುಂಡಗೋಡ, ಉಪ್ಪಿನಂಗಡಿ, ಗೇರುಸೊಪ್ಪ, ಮಂಕಿ, ಯಲ್ಲಾಪುರ, ಆಗುಂಬೆ,...

ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಮಳೆ ಅರ್ಭಟ; ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕೃಷ್ಣಾ ನದಿ..!

ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಮಳೆ ಅರ್ಭಟ; ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕೃಷ್ಣಾ ನದಿ..!

 Krishna river flowing; ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮುಂದುವರೆದ ಮಳೆ ಆರ್ಭಟ. ಗಡಿ ಜಿಲ್ಲೆ ಬೆಳಗಾವಿಯಲ್ಲೂ ನಿಲ್ಲದ ಮಳೆ. ಕೃಷ್ಣಾ ನದಿ ಅಪಾಯದ‌ ಮಟ್ಟ‌ ಮೀರಿ ಹರಿಯುತ್ತಿದೆ. ಕಳೆದ ಒಂದು ವಾರದಿಂದ ‌ಸುರಿಯುತ್ತಿರೋ ಮಳೆಯಿಂದ, ಕೃಷ್ಣಾ ‌ನದಿಗೆ ಮಹಾರಾಷ್ಟ್ರದಿಂದ 90 ಸಾವಿರ ಕ್ಯೂಸೆಕ್ ಗೂ ಅಧಿಕ ಒಳ ಹರಿವು ಆಗಿದೆ. ಪ್ರವಾಹ ಪರಿಸ್ಥಿತಿ ತಗ್ಗಿಸಲು ಹಿಪ್ಪರಗಿ ಬ್ಯಾರೇಜನಿಂದ ಅಷ್ಟೇ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗ್ತಿದೆ. ಸದ್ಯ ಚಿಕ್ಕೋಡಿ ಉಪ ವಿಭಾಗದಲ್ಲಿ 6 ಕೆಳ ಹಂತದ ಸೇತುವೆಗಳು ಜಲಾವೃತವಾಗಿವೆ. ಸೇತುವೆ ಸಂಪರ್ಕ ಕಡಿತ ಆಗಿದ್ದರಿಂದ 14 ಗ್ರಾಮಸ್ಥರು ಪರ್ಯಾಯ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದರಿಂದ ನೂರಾರು ಎಕರೆ ರೈತರ ಜಮೀನು ಜಲಾವೃತವಾಗಿದೆ. ಹೀಗಾಗಿ, ಮಳೆಗಾಲದ ಆರಂಭದಲ್ಲೇ ನದಿ ಪಾತ್ರದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮತ್ತೆ ಏರಿಕೆಯ ಹಾದಿ ಹಿಡಿದ ಚಿನ್ನದ ಬೆಲೆ! ಈಗ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ..?

ಮತ್ತೆ ಏರಿಕೆಯ ಹಾದಿ ಹಿಡಿದ ಚಿನ್ನದ ಬೆಲೆ! ಈಗ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ..?

Gold Price Today : ಆಭರಣ ಖರೀದಿಸಲು ಯೋಜಿಸುತ್ತಿರುವವರಿಗೆ ಮತ್ತೆ ಶಾಕ್‌ ನೀಡಿದೆ ಚಿನ್ನದ ಬೆಲೆ. ಇತ್ತೀಚೆಗೆ ಇಳಿಕೆ ಕಂಡಿದ್ದ ಚಿನ್ನದ ದರ ಈಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಪ್ರತಿಕೂಲ ಸನ್ನಿವೇಶಗಳು, ಇರಾನ್-ಇಸ್ರೇಲ್ ಯುದ್ಧ ಮತ್ತು ವ್ಯಾಪಾರ ಅನಿಶ್ಚಿತತೆಗಳಂತಹ ಕಾರಣಗಳಿಂದ ಚಿನ್ನದ ದರಗಳು ಮತ್ತೆ ಹೆಚ್ಚುತ್ತಿವೆ. ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಸಾಧನವಾಗಿ ಪರಿಗಣಿಸುತ್ತಿದ್ದು, ಚಿನ್ನದ ದರಗಳು ಕ್ರಮೇಣ ಹೆಚ್ಚುತ್ತಿವೆ. ದೇಶೀಯ ಮಾರುಕಟ್ಟೆಯಲ್ಲಿ ಒಂದು ತೊಲ (10 ಗ್ರಾಂ) ಚಿನ್ನದ ದರ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಮಟ್ಟದಲ್ಲೇ ವಹಿವಾಟು ನಡೆಸುತ್ತಿದೆ. ಕಳೆದ ಮಂಗಳವಾರ ಚಿನ್ನದ ಬೆಲೆ ಇಳಿಕೆಯಾಗಿತ್ತಾದರೂ, 10 ಗ್ರಾಂ ಬಂಗಾರದ ಬೆಲೆ ₹1 ಲಕ್ಷಕ್ಕಿಂತ ಹೆಚ್ಚಿನ ಮಟ್ಟದಲ್ಲೇ ಇತ್ತು. ಇದೀಗ ಮತ್ತೆ ದರ ಏರಿಕೆಯಾಗಿರುವುದು ಚಿನ್ನ ಖರೀದಿಸುವವರಿಗೆ ಹೆಚ್ಚುವರಿ ಹೊರೆಯಾಗಿದೆ. ಜೂನ್ 19 ರಂದು ಬೆಂಗಳೂರಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ. ಬೆಂಗಳೂರಲ್ಲಿ ಮತ್ತೆ ಹೆಚ್ಚಿದ ಚಿನ್ನದ ದರ ಬೆಂಗಳೂರಲ್ಲಿ...

ಗ್ರಾನೈಟ್ ಮೈಮೇಲೆ ಬಿದ್ದು, ಮಲ್ಲಿಕಾರ್ಜುನ ಟೈಲ್ಸ್ & ಸಿರಾಮಿಕ್ಸ್ ಮಾಲೀಕನೇ ಸಾವು..!

ಗ್ರಾನೈಟ್ ಮೈಮೇಲೆ ಬಿದ್ದು, ಮಲ್ಲಿಕಾರ್ಜುನ ಟೈಲ್ಸ್ & ಸಿರಾಮಿಕ್ಸ್ ಮಾಲೀಕನೇ ಸಾವು..!

Karwar Crime News; ಕಾರವಾರ: ಮಲ್ಲಿಕಾರ್ಜುನ ಟೈಲ್ಸ & ಸಿರಾಮಿಕ್ಸ ಮಾಲಕ ಮುದ್ದಣ್ಣ ಹಾಲುಂಡಿ ಅವರ ಮೈಮೇಲೆ ಗ್ರಾನೆಟ್ ಕಲ್ಲು ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಮುದ್ದಣ್ಣ ಹಾಲುಂಡಿ (53) ಅವರು ಉಪ್ಪಾರ ಸಮುದಾಯದ ಮುಖಂಡರಾಗಿದ್ದರು. ಕೊಪ್ಪಳ ಜಿಲ್ಲೆಯವರಾದ ಅವರು ಕಾರವಾರದ ಬಾಂಡಿಶೆಟ್ಟಾದಲ್ಲಿ ಮನೆ ಮಾಡಿಕೊಂಡಿದ್ದರು. ಅಸ್ನೋಟಿಯ ಕೊಳಗೆ ಗ್ರಾಮದ ಬಳಿ ಅವರು ಗ್ರಾನೆಟ್ ಸಂಗ್ರಹಿಸಿಟ್ಟುಕೊoಡಿದ್ದರು. ಗುರುವಾರ ತಮ್ಮ ಮಳಿಗೆಗೆ ಬಂದ ಗ್ರಾಹಕರಿಗೆ ಗ್ರಾನೆಟ್ ಹಾಗೂ ಟೈಲ್ಸುಗಳನ್ನು ಕಾಣಿಸುತ್ತಿದ್ದರು. ಗ್ರಾಹಕರು ಆಯ್ಕೆ ಮಾಡಿಕೊಂಡ ಕಡಪವನ್ನು ರಿಕ್ಷಾಗೆ ತುಂಬುವ ಕೆಲಸದಲ್ಲಿ ಅವರು ನಿರತರಾದರು. ಕೆಲಸದ ಸಿಬ್ಬಂದಿ ಪ್ರಕಾಶ ಬಾಂದೇಕರ್ ಜೊತೆಗೂಡಿ ಅವರು ರಿಕ್ಷಾ ಒಳಗೆ ಕಡಪ ಕಲ್ಲುಗಳನ್ನು ತುಂಬಿದ್ದರು. ಪ್ರಕಾಶ ಬಾಂದೇಕರ್ 6 ಅಡಿ ಉದ್ದದ ಗ್ರಾನೇಟಿಗೆ ಹಗ್ಗ ಕಟ್ಟುತ್ತಿರುವಾಗ ಆ ಕಲ್ಲು ನೆಲಕ್ಕೆ ಅಪ್ಪಳಿಸಿತು. ರಿಕ್ಷಾದೊಳಗೆ ಕಡಪ ಸರಿಯಾಗಿ ನಿಲ್ಲಿಸುತ್ತಿರುವ ಅವಧಿಯಲ್ಲಿಯೇ 7ಕ್ಕೂ ಅಧಿಕ ಕಡಪ ಕಲ್ಲುಗಳು ಒಮ್ಮೆಲೆ ಮುದ್ದಣ್ಣ ಹಾಲುಂಡಿ ಅವರ ಮೈಮೇಲೆ ಅಪ್ಪಳಿಸಿದವು. ಆ ಕಲ್ಲುಗಳ ಅಡಿಗೆ...

5 ವರ್ಷದಲ್ಲಿ 2303% ರಿಟರ್ನ್; ಈಗ ವಿದೇಶದಲ್ಲಿ ಗುತ್ತಿಗೆ ಪಡೆದ ಫಾರ್ಮಾ ಕಂಪನಿ, ಅಪ್ಪರ್ ಸರ್ಕ್ಯೂಟ್ ಹೊಡೆದ ಷೇರು..!

5 ವರ್ಷದಲ್ಲಿ 2303% ರಿಟರ್ನ್; ಈಗ ವಿದೇಶದಲ್ಲಿ ಗುತ್ತಿಗೆ ಪಡೆದ ಫಾರ್ಮಾ ಕಂಪನಿ, ಅಪ್ಪರ್ ಸರ್ಕ್ಯೂಟ್ ಹೊಡೆದ ಷೇರು..!

Pharma Stock News : ನವದೆಹಲಿ: ಭಾರತೀಯ ಷೇರು ಮಾರುಕಟ್ಟೆ ಗುರುವಾರ ರೆಡ್‌ ಮಾರ್ಕ್‌ನಲ್ಲಿ ಮುಚ್ಚಿದೆ. ಮಾರುಕಟ್ಟೆ ಕುಸಿತದ ಹೊತಾಗಿಯೂ ಫಾರ್ಮಾ ಕಂಪನಿ ‘ವೆಲ್‌ಕ್ಯೂರ್ ಡ್ರಗ್ಸ್ & ಫಾರ್ಮಾಸುಟಿಕಲ್ಸ್‌ (Welcure Drugs and Pharmaceuticals) ಷೇರುಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಈ ಷೇರು ಬೆಲೆ ಶೇ.5 ರಷ್ಟು ಏರಿಕೆಯೊಂದಿಗೆ ₹14.42ಕ್ಕೆ ತಲುಪಿದ್ದು, ಅಪ್ಪರ್ ಸರ್ಕ್ಯೂಟ್ ಹೊಡೆದಿದೆ. ವಾಸ್ತವವಾಗಿ, ವೆಲ್‌ಕ್ಯೂರ್ ಡ್ರಗ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯು ₹517 ಕೋಟಿ ಮೌಲ್ಯದ ಗ್ಲೋಬಲ್‌ ಸೋರ್ಸಿಂಗ್ ಆರ್ಡರ್‌ ಪಡೆದಿರುವುದಾಗಿ ಘೋಷಿಸಿದೆ. ಅಂದರೆ, ಅಂತರಾಷ್ಟ್ರೀಯ ಖರೀದಿದಾರರಿಗೆ ದೊಡ್ಡ ಪ್ರಮಾಣದಲ್ಲಿ ಉತ್ಪನ್ನಗಳು ಅಥವಾ ಸೇವೆಗಳನ್ನು ಪೂರೈಸಲು ಈ ಕಂಪನಿಯನ್ನು ಆಯ್ಕೆ ಮಾಡಲಾಗಿದೆ. ಜಾಗತಿಕ ಗುತ್ತಿಗೆ ಪಡೆದಿರುವ ಕಂಪನಿ ಕಂಪನಿಯು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ)ಗೆ ಸಲ್ಲಿಸಿರುವ ಫೈಲಿಂಗ್‌ನಲ್ಲಿ ತಾನು ₹517 ಕೋಟಿ ಮೌಲ್ಯದ ಗ್ಲೋಬಲ್‌ ಸೋರ್ಸಿಂಗ್ ಆರ್ಡರ್‌ ಪಡೆದಿರುವುದಾಗಿ ಘೋಷಿಸಿದೆ. ಕಂಪನಿಯ ಘೋಷಣೆಯ ಪ್ರಕಾರ, ಸುಮಾರು ₹517 ಕೋಟಿ ಮೌಲ್ಯದ ಸೋರ್ಸಿಂಗ್ ಮತ್ತು ಖರೀದಿ ಸೇವೆಗಳನ್ನು ಒದಗಿಸಲು ಕಂಪನಿಯು...

ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

Uttar Kannada News Today; ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..! Uttar Kannada News Today; ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ..! ಕಾರವಾರ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ, ಭಾರತ ಸರಕಾರದಿಂದ 2025ನೇ ಸಾಲಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2025 ರ ಜುಲೈ 31ಕ್ಕೆ ಅನ್ವಯವಾಗುವಂತೆ 5 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನ ವಿವಿಧ ಕ್ಷೇತ್ರಗಳ ಸಾಧಕರಾದ (ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ, ಕ್ರೀಡೆ,ಸಮಾಜ ಸೇವೆ, ತಂತ್ರಜ್ಞಾನ, ಪರಿಸರ ಸಂರಕ್ಷಣೆ, ಕಲೆ,ಸಂಸ್ಕೃತಿ ಮತ್ತು ನೂತನ ಆವಿಷ್ಕಾರಗಳು) ಎಲ್ಲಾ ಮಕ್ಕಳ ಪ್ರಶಸ್ತಿಗೆ ಅರ್ಜಿಯನ್ನು ಆನ್‌ಲೈನ್ https://awards.gov.in ಮೂಲಕ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಮಕ್ಕಳ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಡಗುಂಜಿ ದೇವಾಲಯ; ಅಂಗಡಿ ಮಳಿಗೆಗಳ ಹರಾಜು ಮುಂದೂಡಿಕೆ ಕಾರವಾರ; ಶ್ರೀ ವಿನಾಯಕ ದೇವಾಲಯ ಇಡಗುಂಜಿಯ ಮಂಗಲಮೂರ್ತಿ ಮಂಗಲ...

ಒಂದೂವರೆ ವರ್ಷದೊಳಗೆ ಹು – ಧಾ ಮಹಾನಗರ ‌ಪಾಲಿಕೆ ಆಯುಕ್ತರ ವರ್ಗಾವಣೆ: ಗುತ್ತಿಗೆದಾರರ ಸಂಘ ಆಕ್ರೋಶ..!

ಒಂದೂವರೆ ವರ್ಷದೊಳಗೆ ಹು – ಧಾ ಮಹಾನಗರ ‌ಪಾಲಿಕೆ ಆಯುಕ್ತರ ವರ್ಗಾವಣೆ: ಗುತ್ತಿಗೆದಾರರ ಸಂಘ ಆಕ್ರೋಶ..!

Hubli- Dharwad News: ಹುಬ್ಬಳ್ಳಿ : ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮಿಷನರ್​ಗಳಿಗೆ ಪೂರ್ಣಾವಧಿ‌ ಅಧಿಕಾರ ಸಿಕ್ಕೇ ಇಲ್ಲ. ಇಲ್ಲಿ ಆಯುಕ್ತರಾಗಿ ಆಗಮಿಸುವವರು ಕೇವಲ ಒಂದು, ಒಂದೂವರೆ ಹಾಗೂ ಆರು ತಿಂಗಳಲ್ಲಿ ವರ್ಗಾವಣೆಯಾಗುತ್ತಿರುವುದರಿಂದ ಅವಳಿ‌ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಒಂದು ನಗರ ಅಭಿವೃದ್ಧಿಗೊಳ್ಳಬೇಕಾದರೆ ಆಯುಕ್ತರಾಗಿ ಬರುವವರು ಕನಿಷ್ಠ ಎರಡು ವರ್ಷವಾದರೂ ಇಲ್ಲಿರಬೇಕು. ಆದರೆ, ಇಲ್ಲಿಗೆ ಕಮಿಷನರ್ ಆಗಿ ಬರುವವರು ಒಂದರಿಂದ ಒಂದೂವರೆ ವರ್ಷದೊಳಗೆ ವರ್ಗಾವಣೆಗೊಳ್ಳುತ್ತಿರುವುದು ಅಭಿವೃದ್ಧಿ ದೃಷ್ಟಿಯಿಂದ ಹಿನ್ನೆಡೆಗೆ ಕಾರಣವಾಗಿದೆ. ಅಧಿಕಾರ ವಹಿಸಿಕೊಂಡ ಕೇವಲ ಐದೂವರೆ ತಿಂಗಳಲ್ಲಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್​ ಘಾಳಿ ವರ್ಗಾವಣೆಗೊಂಡಿದ್ದಾರೆ. ಸ್ಮಾರ್ಟ್‌ ಸಿಟಿ ಎಂಡಿ ಆಗಿರುವ ಡಾ. ರುದ್ರೇಶ್​ ಅವರಿಗೆ ಕಳೆದ 27ರಂದು ಪಾಲಿಕೆ ಜನವರಿ ಮಹಾನಗರ ಆಯುಕ್ತರನ್ನಾಗಿ ಹೆಚ್ಚುವರಿ ಅಧಿಕಾರವನ್ನು ಸರ್ಕಾರ ನೀಡಿತ್ತು. ಹಿರಿಯ ಕೆಎಎಸ್ ಅಧಿಕಾರಿಯಾಗಿರುವ ಡಾ. ಘಾಳಿ, ಪಾಲಿಕೆ...

ಮಹಿಳೆಗೆ ಬೈಕ್ ಡಿಕ್ಕಿ ಹೊಡೆದು, 30 ವರ್ಷ ತಲೆ ಮರೆಸಿಕೊಂಡಿದ್ದ ಆರೋಪಿ ಕೇರಳದಲ್ಲಿ ಬಂಧನ..!

ಮಹಿಳೆಗೆ ಬೈಕ್ ಡಿಕ್ಕಿ ಹೊಡೆದು, 30 ವರ್ಷ ತಲೆ ಮರೆಸಿಕೊಂಡಿದ್ದ ಆರೋಪಿ ಕೇರಳದಲ್ಲಿ ಬಂಧನ..!

Sirsi Crime News; ಶಿರಸಿ; ಗ್ರಾಮೀಣ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ,30 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ‌. 1996 ರಲ್ಲಿ, ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಶಿರಸಿ- ಕುಮಟಾ ರಸ್ತೆ ಕಸಗೆ ಹತ್ತಿರ, ಪಾದಾಚಾರಿ ಕೋಖಂಡದ ಲೀಲಾವತಿ ಗಣಪತಿ ಹೆಗಡೆ ಎಂಬುವ ಮಹಿಳೆಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿ ಹೊಡೆದು ಬೈಕ್ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದ. ಆರೋಪಿತನು 1996 ರಿಂದಲೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು. ಇದನ್ನೂ ಓದಿ👉 ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಳ : ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ..! ಉತ್ತರ ಕನ್ನಡ ಎಸ್ಪಿ ಎಂ ನಾರಾಯಣ್ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ ಹಾಗೂ ಎಮ್ ಜಗದೀಶ್ ಮತ್ತು ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಹಾಗೂ ಶಿರಸಿ ಗ್ರಾಮೀಣ ಠಾಣೆಯ ಪಿ ಐ ಮಂಜುನಾಥ್ ಎಮ್, ಪಿಎಸ್ಐ ಸಂತೋಷಕುಮಾರ್ ಹಾಗೂ ಅಶೋಕ್ ರಾಠೋಡ್ ರವರ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಪೊಲೀಸ್...

error: Content is protected !!