Jain Samavesh News: ಐನಾಪುರ(ಚಿಕ್ಕೋಡಿ) ಜೈನ ಸಮುದಾಯ ಬೇಡಿಕೆಗಳನ್ನು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಆದ್ರೆ, ಇದುವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ಬೇಡಿಕೆ ಈಡೇರದಿದ್ದರೆ ಸಲ್ಲೇಖನ ವೃತ ಕೈಗೊಳ್ಳುವುದಾಗಿ ರಾಷ್ಟ್ರ ಸಂತ ಶ್ರೀ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ. ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಈ ಸಮಾವೇಶದಿಂದ ಇನ್ನು ಮುಂದೆ ಸಿದ್ದರಾಮಯ್ಯ ನಿದ್ದೆಗೆ ಭಂಗ ತರುವುದು ಸಿದ್ದ. ನಾವು ನಿಮಗೆ ಮತ ನೀಡಿದ್ದೇವೆ. ನೀವು ನಮಗೆ ಉಪಕಾರ ಮಾಡಿ, ನಮ್ಮ ಮಠಗಳಿಗೆ ಅನುದಾನ ಕೊಡಬೇಡಿ, ನಮ್ಮ ಜೈನ ಸಮುದಾಯ ಮಹಿಳೆಯರಿಗೆ ಸರ್ಕಾರ ವತಿಯಿಂದ ಶಿಖರಜೀ ಯಾತ್ರೆ ಹೊಗಲು ಯೋಜನೆ ಮಾಡಿ, ಜೈನ ಸಮುದಾಯಕ್ಕೆ ನಿಗಮ ಮಂಡಳಿ ರಚನೆ ಜತೆಗೆ ಪ್ರಮುಖ ಏಳು ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಗಿದೆ ಎಂದರು. ಜಾತಿಗಣತಿಯಲ್ಲೂ ನಿರ್ಲಕ್ಷ…! ನಾವು ಚಿಕ್ಕೋಡಿಯಲ್ಲಿ ಲಕ್ಷಾಂತರ ಮಂದಿ ಇದ್ದೆವೆ....
Top Stories
ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!
ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..! ಅಷ್ಟಕ್ಕೂ, ಪೊಲೀಸ್ ಅಧಿಕಾರಿಯ ಮಗಳಿಗೆ ಏನಾಯ್ತು..?
ಇದು “ಜಬರ್ದಸ್ತ್ ಜಮಖಂಡಿ”ಯ ಮರ್ಡರ್ ಮಿಸ್ಟರಿ..! “ಮಾಯಾಂಗನೆ”ಯ ನೆರಳಲ್ಲಿ ನಡೆದಿತ್ತು ಆ ಭೀಕರ ಹತ್ಯೆ..!
ಇಂದ್ರಾ ನಗರದ ಮೆಹೆಬೂಬ್ ಅಲಿ ಜಮಖಂಡಿ ಮರ್ಡರ್ ಕೇಸ್ ಆರೋಪಿಗಳಿಗೆ ಶಿಕ್ಷೆ ಪ್ರಕಟ..! ಓರ್ವನಿಗೆ ಜೀವಾವಧಿ ಶಿಕ್ಷೆ..!
ಶಿಗ್ಗಾವಿ BEO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ಚಿಗಳ್ಳಿಯ ಪ್ರಸನ್ನ ಜಾಧವ್ ವಿಧಿವಶ, ಹಲವರ ಸಂತಾಪ..!
ಡ್ರಗ್ಸ್ ದಂಧೆ ಮಾಡುತಿದ್ದ 9 ದಂಧೆಕೋರರ ಬಂಧನ, 30 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ..!
ಮುಂಡಗೋಡ ತಾಲೂಕು ಸೇರಿ ಜಿಲ್ಲೆಯ ಹಲವು ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ..!
ನಾಳೆ ಮುಂಡಗೋಡ ತಾಲೂಕಿನಲ್ಲೂ ಶಾಲೆಗಳಿಗೆ ಮಳೆಯ ರಜೆ..!
ಮುಂಡಗೋಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ “ಮಳೆಯ” ರಜೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ 10 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ..!
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!
ಶಿಗ್ಗಾವಿಯಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ..!
ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!
ಮುಂಡಗೋಡ ಪೊಲೀಸರ ಭರ್ಜರಿ ದಾಳಿ, ಪಾಳಾ ಕ್ರಾಸ್ ಬಳಿ ಗಾಂಜಾ ಸಾಗಿಸ್ತಿದ್ದ ಹಾನಗಲ್ಲಿನ ಇಬ್ಬರ ಬಂಧನ..!
ಜನ-ಧನ್ ಅಕೌಂಟ್ಗೆ ಮರು ಕೆವೈಸಿ : ಸೆ.30ಕ್ಕೆ ಡೆಡ್ಲೈನ್ ಫಿಕ್ಸ್ ಮಾಡಿದೆ RBI, ಅಪ್ಡೇಟ್ ಮಾಡುವುದು ಹೇಗೆ..?
KSRTC ಬಸ್ ಹಾಗೂ ಬೈಕ್ ನಡುವೆ ಮುಖಾಮುಕಿ ಡಿಕ್ಕಿ, ಬೈಕ್ ಸವಾರ ಸಾವು, ಮತ್ತೋರ್ವನಿಗೆ ಗಾಯ..!
Accident News: ರಾಷ್ಟ್ರೀಯ ಹೆದ್ದಾರಿ-69 ರ ಹೊನ್ನಾವರ-ಗೇರುಸೊಪ್ಪ ರಸ್ತೆಯ ವಾಟೆಹಳ್ಳ ಬಳಿ KSRTC ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಹಿಂಬದಿ ಸವಾರ ಗಾಯಗೊಂಡಿದ್ದಾನೆ. ಭಟ್ಕಳ ಡಿಪೋ ಬಸ್ ಹೊನ್ನಾವರ ಕಡೆಯಿಂದ ಶಿರಸಿಗೆ ತೆರಳುತ್ತಿದ್ದು, ಬೈಕ್ ಸವಾರ ಜೋಗ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬೈಕ್ ಸವಾರ ಸಾಗರ ಮೂಲದ ನಜೀಮ್ ಪಾಶ(30) ಮೃತಪಟ್ಟಿದ್ದು, ಆಯಾನ್ ಸಾಗರ ಗಾಯಗೊಂಡ ಬೈಕ್ ಹಿಂಬದಿ ಸವಾರನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಭದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಕೇಸ್, RCB ಯಿಂದ ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಲಿ; ಶಾಸಕ ಹೆಬ್ಬಾರ್
Shivaram Hebbar: ಯಲ್ಲಾಪುರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ 11 ಜನ ಅಭಿಮಾನಿಗಳ ಸಾವಿಗೆ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಮಮ್ಮಲ ಮರಗಿದ್ದಾರೆ. ಅಲ್ದೇ RCB ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪತ್ರಿಕಾ ಪ್ರಕಟಣೆಗಾಗಿ ಆಡಿಯೊ ಬಿಡುಗಡೆ ಮಾಡಿರೋ ಹೆಬ್ಬಾರ್ ಅಭಿಯಾನವೊಂದನ್ನು ಶುರು ಮಾಡಿದ್ದಾರೆ. ಕೋಟಿ ರೂ ಪರಿಹಾರ ಬೇಕು..! IPL ಎಂಬ ಮಾಯಾಲೋಕದಲ್ಲಿ, ಅಭಿಮಾನಿಗಳಿಂದ ಸಾವಿರಾರು ಕೋಟಿ ಬಾಚಿರೋ RCB, ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಲೇಬೇಕು ಅಂತ ಹೆಬ್ಬಾರ್ ಆಗ್ರಹಿಸಿದ್ದಾರೆ. ಅಲ್ದೇ, ಈ ಬಗ್ಗೆ ರಾಜ್ಯಾದ್ಯಂತ ಅಭಿಯಾನ ಶುರು ಮಾಡೋದಾಗ ಶಿವರಾಮ್ ಹೆಬ್ಬಾರ್ ಘೋಷಿಸಿದ್ದಾರೆ. ತನಿಖೆ ಮಾಡಲಿ..! ಸರ್ಕಾರ ಸದ್ಯ ದುರಂತದ ಕುರಿತು ಹಲವು ಆಯಾಮದಲ್ಲಿ ತನಿಖೆಗೆ ನೀಡಿದೆ. ಅಲ್ಲಿ ತನಿಖೆಯ ನಂತರ ಅದ್ಯಾರೇ ತಪ್ಪಿತಸ್ಥರಾದ್ರೂ ಅಂತವರಿಗೆ ಶಿಕ್ಷೆಯಾಗಲಿ ಅಂತಾ ಹೆಬ್ಬಾರ್ ಆಗ್ರಹಿಸಿದ್ದಾರೆ.
ರಸ್ತೆ ದಾಟುತ್ತಿದ್ದ ಚಿರತೆಗೆ ವಾಹನ ಡಿಕ್ಕಿ, ರಸ್ತೆ ಪಕ್ಕದಲ್ಲೇ ಕುಳಿತ ಗಾಯಗೊಂಡ ಚಿರತೆ, ಜನ ಹೈರಾಣು..!
Vehicle Hit a Leopard; ಕುಮಟಾ: ರಸ್ತೆ ದಾಟುತ್ತಿದ್ದ ಚಿರತೆಗೆ ವಾಹನ ಬಡಿದ ಪರಿಣಾಮ ಗಾಯಗೊಂಡು ರಸ್ತೆ ಪಕ್ಕದಲ್ಲೇ ಕುಳಿತ ಘಟನೆ ತಾಲ್ಲೂಕಿನ ಚಂದಾವರದ ಚರ್ಚ್ ಬಳಿ ನಡೆದಿದೆ. ಶನಿವಾರ ಚಂದಾವರ ಚರ್ಚ್ ಬಳಿ ಚಿರತೆಯೊಂದು ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಿರತೆಯ ಸೊಂಟಕ್ಕೆ ತೀವ್ರ ಪೆಟ್ಟಾಗಿದ್ದು, ನಡೆದಾಡಲಾಗದೇ ಒದ್ದಾಡಿದ ಚಿರತೆ ರಸ್ತೆ ಪಕ್ಕದಲ್ಲಿಯೇ ಗಿಡಗಳ ಬಳಿ ಕುಳಿತಿದೆ. ಇದನ್ನೂ ಓದಿ👉 ಸಚಿವ ಮಂಕಾಳು ವೈದ್ಯರಿಗೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಪೊಸ್ಟ್, ಇಬ್ಬರು ವಶಕ್ಕೆ..! ಚಿರತೆ ರಸ್ತೆ ಬಳಿ ಕುಳಿತ ಹಿನ್ನಲೆ ವಾಹನ ಸವಾರರು ಭಯದಿಂದ ಸಂಚರಿಸದೇ ರಸ್ತೆಯಲ್ಲೇ ನಿಂತಿದ್ದಾರೆ. ಇದರಿಂದಾಗಿ ಕುಮಟಾ ಸಿದ್ದಾಪುರ ಮಾರ್ಗದಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಂಡರು.
ಸಚಿವ ಮಂಕಾಳು ವೈದ್ಯರಿಗೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಪೊಸ್ಟ್, ಇಬ್ಬರು ವಶಕ್ಕೆ..!
Mankalu Vaidya: ಭಟ್ಕಳ: ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೆ ಅವಮಾನ, ತೇಜೋವಧೆ ಮಾಡುವ ದೃಷ್ಟಿಯಲ್ಲಿ ಸುಳ್ಳು ವಿಡಿಯೋವನ್ನು ಹರಿಬಿಟ್ಟು ಜನರಿಗೆ ತಪ್ಪು ಸಂದೇಶ ಸಾರಿದ ಇಬ್ಬರು ಆರೋಪಿಗಳನ್ನು ಮುರ್ಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ನೆಮ್ಮದಿ ವಿರುದ್ಧ ಅಪರಾಧ ಎಸಗುವಂತೆ ಮಾಡುವ ಉದ್ದೇಶವುಳ್ಳ ಮತ್ತು ಒಂದು ಪಕ್ಷದ ಕಾರ್ಯಕರ್ತರು ಅಪರಾಧವನ್ನು ಮಾಡುವಂತೆ ಪ್ರಚೋದಿಸುವ ಉದ್ದೇಶವುಳ್ಳ ಹೇಳಿಕೆಯನ್ನು ಸುಳ್ಳು ಮಾಹಿತಿಯನ್ನು ಅಥವಾ ಗಾಳಿಸುದ್ದಿಯನ್ನು ಸಾಮಾಜಿಕ ಜಾಲತಾಣವಾದ ಫೆಸ್ಟುಕ್ ಖಾತೆಯಿಂದ ಇರರರಿಗೆ ಶೇರ್ ಮಾಡಿದ್ದಾರೆ.ಬೈಲೂರಿನ ದೊಡ್ಡಬಟ್ಟೆಯ ನಾಗರಾಜ ಮಾದೇವ ನಾಯ್ಕ ಮತ್ತು ಬೈಲೂರಿನ ಸಣ್ಣಬಲ್ಲೆಯ ಭಾಸ್ಕರ ನಾರಾಯಣ ದೇವಾಡಿಗ ಪೊಲೀಸರ ವಶದಲ್ಲಿರುವ ಆರೋಪಿಗಳು. ಇವರು “ಭಟ್ಕಳಕ್ಕೆ ಬದಲಾವಣೆ” ಎಂಬ ಫೇಸ್ ಬುಕ್ ಖಾತೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಉದ್ದೇಶ ಪೂರ್ವಕವಾಗಿ ಅವಮಾನ ಆಗುವ ರೀತಿಯಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಸುಮಾರು 1 ನಿಮಿಷ 29 ಸೆಕೆಂಡ್ ಇರುವ ವಿಡಿಯೋವನ್ನು ಹರಿಬಿಟ್ಟು...
ಬಂಕಾಪುರದಲ್ಲಿ ಬಾಲಕಿ ಮೇಲೆ ಪ್ರಿಯಕರನ ಸ್ನೇಹಿತರೇ ಅತ್ಯಾಚಾರ ಮಾಡಿದ್ರು, ನಂತ್ರ ರಾಜೀ ಪಂಚಾಯ್ತಿ, ನಾಲ್ವರ ಬಂಧನ..!
Bankapur Crime News: ಬಂಕಾಪುರ: ಬಾಲಕಿಯನ್ನು ಪ್ರೀತಿಸುತ್ತಿದ್ದ ಯುವಕನ ಇಬ್ಬರು ಸ್ನೇಹಿತರೇ ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಶಿಗ್ಗಾಂವಿ ತಾಲೂಕಿನ ಬಂಕಾಪುರ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಬಾಲಕಿಯ ಪ್ರಿಯಕರ, ದೌರ್ಜನ್ಯವೆಸಗಿದ ಓರ್ವ ಆರೋಪಿ ಹಾಗೂ ರಾಜಿ ಪಂಚಾಯತಿ ಮಾಡಿದ ಇಬ್ಬರನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳನ್ನು ಗೋಣಿರುದ್ರಾ ಶಿಗ್ಗಟ್ಟಿ (24), ಮಂಜುನಾಥ ಶಿಗ್ಗಟ್ಟಿ (23), ಲಕ್ಷ್ಮಣ ಕಬನೂರ ಹಾಗೂ ಮಾರುತಿ ಶಿಗಟ್ಟಿ ಎಂದು ಗುರುತಿಸಲಾಗಿದೆ. ಇವರನ್ನು ಬಂಕಾಪುರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೊಬ್ಬ ಆರೋಪಿ ಅಣ್ಣಪ್ಪ ಕಬ್ಬೂರು ಎಂಬಾತ ತಲೆಮರೆಸಿಕೊಂಡಿದ್ದಾನೆ. ಅಪ್ರಾಪ್ತೆ ಮೇಲೆ ಯುವಕರು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಆಕೆಯ ತಾಯಿ ಬಂಕಾಪುರ ಠಾಣೆಯಲ್ಲಿ ಜೂನ್ 2ರಂದು ದೂರು ನೀಡಿದ್ದರು. ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ”ಬಾಲಕಿಯು ತನ್ನ ಪ್ರಿಯಕರನ ಜೊತೆಗಿನ ದೈಹಿಕ ಸಂಪರ್ಕದಿಂದ ಗರ್ಭಿಣಿಯಾಗಿದ್ದಳು. ಬಳಿಕ ಪ್ರಿಯಕರನೇ ಆಕೆಗೆ...
ಉತ್ತರ ಕನ್ನಡಲ್ಲಿ ಐಟಿಐ ಪ್ರವೇಶಕ್ಕೆ ಆಫ್ಲೈನ್ ಅರ್ಜಿ ಆಹ್ವಾನ..!
Education news: ಕಾರವಾರ: ಪ್ರಸುತ್ತ ಸಾಲಿನ ಐ.ಟಿ.ಐ ಪ್ರವೇಶದ ಆನ್ಲೈನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು.ಪ್ರಥಮ ಸುತ್ತಿನ ಆಯ್ಕೆ ಪ್ರಕ್ರಿಯೆ ಕೈಗೊಂಡಿರುವುದಿಲ್ಲ.ಆಯ್ಕೆ ಪ್ರಕ್ರಿಯೆಗೊಂಡ ನಂತರ ವೃತ್ತಿವಾರು ಬಾಕಿ ಉಳಿದಿರುವ ಸ್ಥಾನಗಳನ್ನು ಸೂಚನಾ ಫಲಕ್ಕೆ ಅಳವಡಿಸಲಾಗುವುದು. ಈಗಾಗಲೇ ಆನ್ಲೈನ್ ಅರ್ಜಿ ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ಮಾಡದೇ ಇರುವವರು ಆನ್ಲೈನ್ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪರಿಶೀಲನೆ ಮಾಡಿಕೊಂಡರೂ ಪ್ರಥಮ ಸುತ್ತಿನ ಪ್ರಕ್ರಿಯೆಯಲ್ಲಿ ಆಯ್ಕೆಗೊಳ್ಳದೇ ಇರುವವರು ಹಾಗೂ ಇದುವರೆಗೂ ಯಾವುದೇ ಅರ್ಜಿ ಸಲ್ಲಿಸದೇ ಇರುವವರಿಗೆ ಆಫ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ👉ಪತ್ನಿಯ ತಲೆ ಕಡಿದುಕೊಂಡು ಪೊಲೀಸ್ ಠಾಣೆಗೆ ಬಂದ ಪತಿರಾಯ..! ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾರವಾರದಲ್ಲಿ ಆಫ್ಲೈನ್ ಅರ್ಜಿಯನ್ನು ಪಡೆದುಕೊಂಡು ಭರ್ತಿ ಮಾಡಿ ಎಲ್ಲಾ ದಾಖಲಾತಿಯ ಝೇರಾಕ್ಸ ದೃಢೀಕೃತ ಪ್ರತಿಯೊಂದಿಗೆ ಸಲ್ಲಿಸಿ ದಾಖಲೆ ಪರಿಶೀಲನೆ ಮಾಡಿಸಿಕೊಂಡು ದಾಖಲೆ ಪರಿಶೀಲನೆ ಫೀ ರೂ.50 ನ್ನು ಕಚೇರಿಯಲ್ಲಿ ಪಾವತಿಸಿ ಅರ್ಜಿ ಸಲ್ಲಿಸುವುದು. ಜೂ.12 ರವರೆಗೆ ಸ್ವೀಕರಿಸಿದ ಅರ್ಜಿಗಳನ್ನು ಮೇರಿಟ್ ಆಧಾರದ ಮೇಲೆ ಕ್ರೋಢಿಕರಿಸಿ ಮೇರಿಟ್ ಆಧಾರದ ಮೇಲೆ...
ಪತ್ನಿಯ ತಲೆ ಕಡಿದುಕೊಂಡು ಪೊಲೀಸ್ ಠಾಣೆಗೆ ಬಂದ ಪತಿರಾಯ..!
Crime News: ಬೆಂಗಳೂರು: ಬೆಂಗಳೂರಿನ ಆನೇಕಲ್ ಪ್ರದೇಶದಲ್ಲಿ 28 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ, ಕತ್ತರಿಸಿದ ತಲೆಯನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಶಂಕರ ಎಂಬಾತ ತನ್ನ 26 ವರ್ಷದ ಪತ್ನಿ ಮಾನಸಾಳ ಜೊತೆ ನಡೆದ ತೀವ್ರ ಜಗಳದಲ್ಲಿ ಆಕೆಯನ್ನು ಕೊಲೆ ಮಾಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ವಿವಾಹಿತ ದಂಪತಿ ಶಂಕರ ಪತ್ನಿ ಜೊತೆ ಕೆಲ ಸಮಯದ ಹಿಂದೆ, ಅವರು ಹೀಲಲಿಗೆ ಗ್ರಾಮದಲ್ಲಿ ಬಾಡಿಗೆ ಮನೆಗೆ ಬಂದಿದ್ದರು. ಇಬ್ಬರೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗುವಿದೆ. ವಿಚಾರಣೆ ಸಮಯದಲ್ಲಿ ಈತ, ಕೆಲ ದಿನಗಳ ಹಿಂದೆ ತನ್ನ ಪತ್ನಿಗೆ ಬೇರೊಬ್ಬರ ಜೊತೆ ಸಂಬಂಧ ಇರುವುದು ಗೊತ್ತಾಗಿದೆ, ಇದರಿಂದಾಗಿ ನಮ್ಮ ನಡುವೆ ಜಗಳವಾಗಿತ್ತು. ನಂತರ ಆಕೆ ತನ್ನ ತಾಯಿಯ ಮನೆಗೆ ಹೋಗಿದ್ದಳು. ತಮ್ಮ ಮಗಳಿಗಾಗಿ ರಾಜಿ ಮಾಡಿಕೊಳ್ಳಲು ಆಕೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ, ಮನೆಗೆ ಮರಳಿದ್ದಳು ಎಂದು ಪೊಲೀಸರಿಗೆ...
ಕೃಷಿ ಉದ್ಯಮಿ ಮತ್ತು ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ..!
Business News ಕಾರವಾರ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಕುಮಟಾದಲ್ಲಿ ಜೂ.9 ರಿಂದ ಜೂ.21 ವರೆಗೆ ಕೃಷಿ ಉದ್ಯಮಿ ಮತ್ತು ಕೋಳಿ ಸಾಕಾಣಿಕೆ 13 ದಿನಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಪ್ರದೇಶದ ಬಿಪಿಎಲ್ ಅಭ್ಯರ್ಥಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯು ಊಟ ಮತ್ತು ವಸತಿ ಸಹಿತ ಉಚಿತವಾಗಿರುತ್ತದೆ. ಅಭ್ಯರ್ಥಿಯು ನಿರುದ್ಯೋಗಿಯಾಗಿದ್ದು, ಸ್ವ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ವಯೋಮಿತಿ 18 ರಿಂದ 45 ವರ್ಷಗಳು. ಹಾಗೂ ಕನಿಷ್ಟ ವಿದ್ಯಾರ್ಹತೆ ಕನ್ನಡ ಓದಲು ಬರೆಯಲು ಬರಬೇಕು ಮತ್ತು ತರಬೇತಿಗೆ ಅನುಗುಣವಾಗಿ ಕನಿಷ್ಠ ಜ್ಞಾನವಿರಬೇಕು. ಆಸಕ್ತರು ತರಬೇತಿಗೆ ಬರುವಾಗ 4 ಪಾಸ್ ಪೋರ್ಟ ಸೈಜ್ ಫೋಟೋ,ರೇಶನ್ ಕಾರ್ಡ,ಆಧಾರ್ ಕಾರ್ಡ, ಬ್ಯಾಂಕ್ ಪಾಸ್ಬುಕ್,ಪಾನ್ ಕಾರ್ಡ ಇವುಗಳ 1 ಝೆರಾಕ್ಸ್ ಪ್ರತಿಯನ್ನು ತರಬೇಕು. ಇದನ್ನೂ ಓದಿ👉ಕರ್ನಾಟಕದಲ್ಲಿ ಜೂನ್ 10 ರಿಂದ ಮತ್ತೆ ಭಾರಿ ಮಳೆ ಮುನ್ಸೂಚನೆ ; ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ..! ಆಸಕ್ತರು ನಿರ್ದೇಶಕರು, ಕೆನರಾ ಬ್ಯಾಂಕ ಗ್ರಾಮೀಣ...
ಕ್ರೀಡಾಭಿಮಾನಿಗಳ ಸಾವು : ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ..!
Political News : ಚಿಕ್ಕಮಗಳೂರು : ಆರ್ಸಿಬಿ ಕ್ರಿಕೆಟ್ ಅಭಿಮಾನಿಗಳ ಸಾವಿಗೆ ಕಾರಣರಾದ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪಕ್ಷದ ಕಾರ್ಯಾಲಯದಿಂದ ಸಿಎಂ ಮತ್ತು ಡಿಸಿಎಂ ವಿರುದ್ಧ ಧಿಕ್ಕಾರ ಹಾಕುತ್ತಾ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಸಾವಿಗೀಡಾದ ಕ್ರೀಡಾಭಿಮಾನಿಗಳ ಆತ್ಮಕ್ಕೆ ಶಾಂತಿ ಕೋರಿ ಕಾರ್ಯಕರ್ತರು ಒಂದು ನಿಮಿಷ ಮೌನಾಚರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ , ಆರ್ಸಿಬಿ ವಿಜಯೋತ್ಸವದಲ್ಲಿ ರಾಜ್ಯ ಸರ್ಕಾರ ಸೂಕ್ತ ಬಂದೋಬಸ್ತ್ ಮಾಡದೇ ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡಿರುವ ಪರಿಣಾಮ 11 ಮಂದಿ ಕ್ರೀಡಾಭಿಮಾನಿ ಗಳು ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದು ಆ ಕುಟುಂಬಗಳು ನೋವಿನ ಸಾಗರದಲ್ಲಿ ಮುಳುಗಲು ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು. ಕುಂಭ ಮೇಳದ ಬಗ್ಗೆ ಟೀಕಿಸುವ ಮುಖ್ಯಮಂತ್ರಿಗಳು ರಾಜಧಾನಿಯಲ್ಲಿ ಗುಪ್ತಚರ ಮಾಹಿತಿಗಳಿದ್ದರೂ ಸಮಾರಂಭ ನಡೆಸಿದ್ದಾರೆ....