Stock Market Highlights: ಭಾರತದ ಷೇರು ಮಾರುಕಟ್ಟೆ ಸೋಮವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 500ಕ್ಕೂ ಅಧಿಕ ಪಾಯಿಂಟ್ಸ್ ಇಳಿಕೆಗೊಂಡಿದೆ. ಒಂದು ಹಂತದಲ್ಲಿ 900 ಪಾಯಿಂಟ್ಸ್ವರೆಗೆ ಇಳಿಕೆಯಾಗಿದ್ದ ಬಿಎಸ್ಇ ಸೂಚ್ಯಂಕವು ಕೊನೆಗೆ ಚೇತರಿಕೆ ಸಾಧಿಸಿ 511 ಪಾಯಿಂಟ್ಸ್ ಇಳಿಕೆಯಾಗಿ 81896 ಮಾರ್ಕ್ನಲ್ಲಿ ಮುಚ್ಚಿತು. ಇದೇ ವೇಳೆಯಲ್ಲಿ ನಿಫ್ಟಿ50 ಸೂಚ್ಯಂಕವು 140 ಪಾಯಿಂಟ್ಸ್ ಅಥವಾ 0.56 ಪರ್ಸೆಂಟ್ ಇಳಿಕೆಯಾಗಿ 25,000 ಗಡಿಯಿಂದ ಕೆಳಗಿಳಿದಿದೆ ಹಾಗೂ 24,971.90 ಮಾರ್ಕ್ನಲ್ಲಿ ಕೊನೆಗೊಂಡಿದೆ. ಬಿಎಸ್ಇ ಮಿಡ್ಕ್ಯಾಪ್ ಹಾಗೂ ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಔಟ್ಪರ್ಫಾಮೆನ್ಸ್ ನೀಡಿದ್ದು, 0.20 ಪರ್ಸೆಂಟ್ ಮತ್ತು 0.57 ಪರ್ಸೆಂಟ್ ಏರಿಕೆಯಾಗಿದೆ. ಬಿಎಸ್ಇ ಲಿಸ್ಟೆಂಡ್ ಕಂಪನಿಗಳ ಮಾರುಕಟ್ಟೆ ಮೌಲ್ಯವು ಬಹುತೇಕ ಬದಲಾವಣೆ ಆಗದೆ 448 ಲಕ್ಷ ಕೋಟಿ ರೂಪಾಯಿಗಳಲ್ಲಿ ಉಳಿದಿದ್ದು, ಸ್ಮಾಲ್ ಕ್ಯಾಪ್ ಹಾಗೂ ಮಿಡ್ ಕ್ಯಾಪ್ ಸೆಗ್ಮೆಂಟ್ನ ಚೇತರಿಕೆಯಿಂದಾಗಿ ಏರಿಕೆ ಕಂಡಿದೆ. ಭಾರತದ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣಗಳು 1) ಇಸ್ರೇಲ್-ಇರಾನ್ ಯುದ್ಧ : ಇರಾನ್ ಮೇಲೆ ಅಮೆರಿಕಾದ ದಾಳಿ ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನತೆ ಮತ್ತಷ್ಟು...
Top Stories
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ಸೆನ್ಸೆಕ್ಸ್ 511 ಪಾಯಿಂಟ್ಸ್ ನಷ್ಟ, ಸೋಮವಾರ ಭಾರತದ ಷೇರುಪೇಟೆ ಕುಸಿತಕ್ಕೆ 5 ಕಾರಣಗಳು..!
ರಾಜ್ಯದಲ್ಲಿ ಎಷ್ಟಿದೆ ಇಂದಿನ ಬಂಗಾರದ ಬೆಲೆ..?
Gold Price Today : ಬೆಂಗಳೂರು/ ಹೈದರಾಬಾದ್: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ರೂ. ಭಾನುವಾರ 1,02,098 ರೂ. ಇತ್ತು. ಸೋಮವಾರ ಅದು ಸುಮಾರು 22ರೂ ಹೆಚ್ಚಾಗಿದ್ದು, 1,02,120 ರೂಗಳಿಗೆ ಏರಿಕೆ ಕಂಡಿದೆ. ಇನ್ನು ಬೆಳ್ಳಿ ಬೆಲೆ ಪ್ರತಿ ಕೆಜಿಗೆ ರೂ. ಶನಿವಾರ 1,09,815 ರೂ.ಗಳಷ್ಟಿತ್ತು. ಅದು ಸೋಮವಾರ 383 ಹೆಚ್ಚಳವಾಗುವ ಮೂಲಕ 1,10,198 ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಎಷ್ಟಿದೆ ಬಂಗಾರದ ಬೆಲೆ?: 99.9 ಫ್ಯೂರಿಟಿಯ 10 ಗ್ರಾಂ ಚಿನ್ನದ ನಾಣ್ಯದ ಬೆಲೆ 1,02,323 ರೂ ಇದೆ. ಇನ್ನು ಕೆ ಜಿ ಬೆಳ್ಳಿಯ ಬೆಲೆ 1,08,260 ರೂ ಇದೆ. 24 ಕ್ಯಾರೆಟ್ ( 99.5) ನ 10 ಗ್ರಾಂ ಚಿನ್ನದ ಬೆಲೆ 60 ರೂ ಕಡಿಮೆ ಆಗುವ ಮೂಲಕ 1,00,690 ರೂ ಇತ್ತು. 22 ಕ್ಯಾರೆಟ್ನ 10 ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 50 ಕಡಿಮೆ ಆಗಿ 92,300 ರೂ...
ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ..!
Bad News: ಮುಂಬೈ: ಮುಂಬೈನಲ್ಲಿ ಕಸದ ರಾಶಿಗಳ ಮೇಲೆ ಬಿದ್ದಿದ್ದ ವೃದ್ಧ ಮಹಿಳೆಯೊಬ್ಬರ ದಯನೀಯ ಸ್ಥಿತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಯನ್ನು ಅವರ ಮೊಮ್ಮಗ ಕಸ ಎಸೆಯುವ ಜಾಗದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿ, ಮಹಿಳೆಯ ಕುಟುಂಬಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಶನಿವಾರ ಮುಂಬೈ ಪೊಲೀಸರು ನಗರದ ಆರೆ ಕಾಲೋನಿಯ ರಸ್ತೆಯಲ್ಲಿರುವ ಕಸದ ರಾಶಿಯ ಬಳಿ 60 ವರ್ಷದ ಯಶೋದಾ ಗಾಯಕ್ವಾಡ ಎಂಬ ಮಹಿಳೆಯನ್ನು ಅತ್ಯಂತ ದುರ್ಬಲ ಸ್ಥಿತಿಯಲ್ಲಿ ಕಂಡುಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ತನಿಖೆಯ ನಂತರ, ಮಹಿಳೆ ತನ್ನ ಮೊಮ್ಮಗ ತನ್ನನ್ನು ಇಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಮಹಿಳೆ ಪತ್ತೆಯಾಗಿದ್ದರೂ, ಸಂಜೆ 5:30 ರ ಹೊತ್ತಿಗೆ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಯಿತು. ಅವರ ಸ್ಥಿತಿಗತಿಯನ್ನು ಪರಿಗಣಿಸಿ ಹಲವಾರು ಇತರ ಆಸ್ಪತ್ರೆಗಳು ಅವರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದ ನಂತರ ಅವರನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಯಿತು. ಮಹಿಳೆಗೆ...
ಉತ್ತರ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗದಿಂದ ಟ್ರಾವೆಲ್ಸ್ ಕಂಪನಿಗೆ ದಂಡ..!
Consumer Court News : ಕಾರವಾರ; ಗ್ರಾಹಕರೊಬ್ಬರು ಪ್ರವಾಸಕ್ಕಾಗಿ ಮುಂಗಡವಾಗಿ ಪಾವತಿಸಿದ ಹಣವನ್ನು ನೀಡದೇ ಸೇವಾನ್ಯೂನತೆ ಹಾಗೂ ಅನುಚಿತ ವ್ಯಾಪಾರ ನೀತಿ ಅನುಸರಿಸಿರುವುದರಿಂದ ಮಲ್ಲಿಕಾರ್ಜುನ ಟ್ರಾವೆಲ್ರವರಿಗೆ 30 ಸಾವಿರ ದಂಡದೊAದಿಗೆ ಮುಂಗಡ ಪಾವತಿಸಿದ ರೂ. 40,000 ಗಳಿಗೆ ಶೇ.12ರ ಬಡ್ಡಿಯನ್ನು ಪಾವತಿಸುವಂತೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಪ್ರಕರಣದ ಹಿನ್ನಲೆ..! ಯಲ್ಲಾಪುರ ತಾಲೂಕಿನ ಕೊಡ್ಲಗದ್ದೆಯ ನಿವಾಸಿಯಾದ ಮನೋಹರ ರಾಮಕೃಷ್ಣ ಹೆಗಡೆರವರು ಮಲ್ಲಿಕಾರ್ಜುನ ಟ್ರಾವೆಲ್ಸ್ ಏಜೆನ್ಸಿ ಮೂಲಕ ಕಾಶಿ ಹಾಗೂ ಆಯೋಧ್ಯೆಯ ಪ್ರವಾಸಕ್ಕೆ ತೆರಳಲು ಪ್ಯಾಕೇಜನ್ನು ರೂ.60,000 ಗಳನ್ನು ಪಾವತಿಸಿ ಮುಂಗಡ ಆಸನಗಳನ್ನು ಕಾಯ್ದಿರಿಸಿದ್ದರು. ಆದರೆ ಅನಾರೋಗ್ಯ ಹಾಗೂ ತುರ್ತು ಕೆಲಸಗಳು ಬಂದಿದ್ದರಿಂದ ತಾವು ಕಾಯ್ದಿರಿಸಿದ ಆಸನಗಳನ್ನು ರದ್ದುಗೊಳಿಸುವಂತೆ ಪ್ರವಾಸ ಆರಂಭವಾಗುವ 45 ದಿನಗಳ ಮುಂಚಿತವಾಗಿಯೇ ಏಜೆನ್ಸಿಯವರಿಗೆ ತಿಳಿಸಿದ್ದರು. ಹೀಗೆ ಮುಂಚಿತವಾಗಿ ತಿಳಿಸಿದಾಗಲೂ ಕೂಡ ಏಜೆನ್ಸಿಯವರು ದೂರುದಾರರು ಪಾವತಿಸಿದ ಪೂರ್ಣ ಮೊತ್ತ ಪಾವತಿಸದೇ ಕೇವಲ ರೂ.20,000 ಗಳನ್ನು ದೂರುದಾರರಿಗೆ ಪಾವತಿಸಿದ್ದರು. ತಾನು ಪಾವತಿಸಿದ ಉಳಿದ ಮೊತ್ತವನ್ನು ಪಾವತಿಸದ್ದರಿಂದ ಮನೋಹರ ರಾಮಕೃಷ್ಣ...
ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!
Uttar Kannada News Today; ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..! ************************** Uttar Kannada News Today; ಸಣ್ಣ ನೀರಾವರಿ ಮೂಲಗಳ ನಿಖರ ಗಣತಿ ಮಾಡಿ: ಅಪರ ಜಿಲ್ಲಾಧಿಕಾರಿ ಕಾರವಾರ: ಜಿಲ್ಲೆಯಲ್ಲಿ ನಡೆಯುವ ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿ ಸಂದರ್ಭದಲ್ಲಿ , ಜಿಲ್ಲೆಯಲ್ಲಿರುವ ಸಣ್ಣ ನೀರಾವರಿಯ ಎಲ್ಲಾ ಮೂಲಗಳನ್ನು ಸಂಪೂರ್ಣವಾಗಿ ಮತ್ತು ನಿಖರವಾಗಿ ಗಣತಿ ಮಾಡುವ ಮೂಲಕ ನೀರಾವರಿ ಮೂಲಗಳ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಮೊಬೈಲ್ ಅಪ್ಲಿಕೇಷನ್ ಮೂಲಕ ನಡೆಯುವ 7 ನೇ ಸಣ್ಣ ನೀರಾವರಿ ಗಣತಿ ಮತ್ತು 2 ನೇ ನೀರಿನಾಸರೆಗಳ ಗಣತಿ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಈ ಗಣತಿಯಿಂದ ರಾಜ್ಯದಲ್ಲಿ ಸಣ್ಣ ನೀರಾವರಿಯ ವಿವಿಧ ಮೂಲಗಳನ್ನು ಸಂಪೂರ್ಣವಾಗಿ ಗಣತಿ ಮಾಡುವುದರ ಮೂಲಕ, ಮುಂಗಾರು, ಹಿಂಗಾರು ಮತ್ತು ಬೇಸಿಗೆ ಕಾಲಗಳಲ್ಲಿ ನೀರಾವರಿಯಾದ ಕ್ಷೇತ್ರದ...
ಉತ್ತರ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗದಿಂದ ವಿಮಾ ಕಂಪನಿಗೆ ದಂಡ..!
Consumer Court News: ಕಾರವಾರ; ಸಮುದ್ರದಲ್ಲಿ ಮುಳುಗಿದ ಮೀನುಗಾರಿಕಾ ದೋಣಿಗೆ ಮಾಡಿಸಲಾಗಿದ್ದ ವಿಮಾ ಮೊತ್ತ 40 ಲಕ್ಷ ರೂಪಾಯಿಗಳನ್ನು ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಪ್ರಕರಣದ ಹಿನ್ನಲೆ..! ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜುಗುಣಿಯ ನಿವಾಸಿ ಉಲ್ಲಾಸ ದತ್ತಾ ತಾಂಡೇಲರವರು ಮೀನುಗಾರರಾಗಿದ್ದು, ಮೀನುಗಾರಿಕೆಗಾಗಿ ಸ್ವತಃ ತಮ್ಮದೇ ದೋಣಿಯನ್ನು ಹೊಂದಿದ್ದರು. ಮೀನುಗಾರಿಕೆಗೆ ತೆರಳಿದಾಗ ಮೀನುಗಾರರ ದೋಣಿ ಮುಳುಗಿದ್ದು, ಈ ದೋಣಿಗೆ ಉಲ್ಲಾಸ ಅವರು ರೂ.1,32,083/-ಗಳನ್ನು ಪಾವತಿಸಿ 40 ಲಕ್ಷಗಳ ವಿಮೆ ಪಡೆದಿದ್ದರು. ದೋಣಿ ಮುಳಗಿದ್ದರಿಂದ ದೋಣಿಗೆ ವಿಮೆ ಇದ್ದಿದ್ದರಿಂದ ವಿಮಾ ಮೊತ್ತವನ್ನು ಪಾವತಿಸಲು ದೂರುದಾರರು ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಗೆ ವಿನಂತಿಸಿದ್ದರು. ಸರ್ವೇಯರ್ ವರದಿ ಆಧಾರದ ಮೇಲೆ ವಿಮಾ ಕಂಪನಿ ವಿಮಾ ಮೊತ್ತ ನೀಡದೇ ವಿಮಾ ಅರ್ಜಿ ತಿರಸ್ಕರಿಸಿತ್ತು. ಈ ಹಿನ್ನಲೆಯಲ್ಲಿ ತಾಂಡೇಲರವರು ಕಾರವಾರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಪ್ರಭಾರ...
ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡಕ್ಕೆ ಮುಂದಿನ 3 ಗಂಟೆಗಳಲ್ಲಿ ಭಾರೀ ಮಳೆ, ಗಾಳಿಯ ಮುನ್ಸೂಚನೆ..!
Rain forecast; ಬೆಂಗಳೂರು: ಬೆಳ್ಳಂ ಬೆಳಿಗ್ಗೆ ರಾಜ್ಯ ಹವಾಮಾನ ಇಲಾಖೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಭಾರಿ ಗಾಳಿ ಮಳೆಯ ಎಚ್ಚರಿಕೆ ಕೊಟ್ಟಿದೆ. Rain forecast; ಬೆಳ್ಳಂಬೆಳಗ್ಗೆ 7 ಗಂಟೆ ಗಂಟೆಗೆ ಅಲರ್ಟ್ ನೀಡಿರೊ ಹವಾಮಾನ ಇಲಾಖೆ, ಮುಂದಿನ 3 ಗಂಟೆಯಲ್ಲಿ ಉತ್ತರ ಕನ್ನಡ ಹಾಗೂ ದಕಗಷಿಣ ಕನ್ನಡಕ್ಕೆ ಭಾರಿ ಮಳೆ ಹಾಗೂ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಕೆ ಕೊಟ್ಟಿದೆ. ಯಲ್ಲೋ ಅಲರ್ಟ್..! Rain forecast; ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಭಾರಿ ಮಳೆ ಹಿನ್ನೆಲೆ ಜೂನ್ 29 ರವರೆಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಉಳಿದೆಡೆ ಜೂನ್ 26 ರ ನಂತರ ಮಳೆ ಪ್ರಮಾಣ ಹೆಚ್ಚಾಗಲಿದ್ದು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಇನ್ನು ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಕಲಬುರ್ಗಿ ಹಾಗೂ ವಿಜಯಪುರಕ್ಕೆ ಯೆಲ್ಲೋ ಅಲೆರ್ಟ್ ಕೊಡಲಾಗಿದೆ.
ಮುಂಡಗೋಡಿನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ..! ಟ್ಯಾಕ್ಸಿ ಚಾಲಕರಿಗೆ ಪಾಠ ಮಾಡಿದ ಡಿವೈಎಸ್ಪಿ ಮೇಡಂ..!
Police News : ಮುಂಡಗೋಡ ಪಟ್ಟಣದಲ್ಲಿ ಪೊಲೀಸರು ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ, ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ ರವರ ನೇತೃತ್ವದಲ್ಲಿ, ಆಟೋ ಮತ್ತು ಟ್ಯಾಕ್ಸಿ ಚಾಲಕರ ರ್ಯಾಲಿಯನ್ನು ಕೈಗೊಂಡು ಮಾದಕ ದ್ರವ್ಯದ ದುಷ್ಪರಿಣಾಮಗಳು & ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದ್ರು. ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಮೇಡಮ್ಮು, ಮಾದಕ ದ್ರವ್ಯಗಳ ಬಳಕೆಯಿಂದ ಸಂಭವಿಸಬಹುದಾದ ದುರಂತಗಳ ಬಗ್ಗೆ, ಟ್ಯಾಕ್ಸಿ ಚಾಲಕರಿಗೆ ತಿಳುವಳಿಕೆ ನೀಡಿದ್ರು. ಈ ವೇಳೆ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್, ಪಿಎಸ್ಐ ಪರಶುರಾಮ್ ಮಿರ್ಜಿಗಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ಶಿರಸಿ ರಸ್ತೆಯ ಪಾಳಾ-ಸಿಂಗನಳ್ಳಿ ನಡುವೆ ಹಳ್ಳಕ್ಕೆ ಬಿದ್ದ ಕಾರ್, ಓರ್ವನಿಗೆ ಗಾಯ..!
Accident News; ಮುಂಡಗೋಡ ತಾಲೂಕಿನ ಪಾಳಾ ಹಾಗೂ ಸಿಂಗನಳ್ಳಿ ನಡುವೆ ಶಿರಸಿ ರಸ್ತೆಯಲ್ಲಿ, ಕಾರ್ ಅಪಘಾತವಾಗಿದೆ. ಸಿಂಗನಳ್ಳಿ ಬಳಿಯ ರಸ್ತೆ ಪಕ್ಕದ ಹಳ್ಳಕ್ಕೆ ಕಾರ್ ಬಿದ್ದಿದ್ದು, ಓರ್ವನಿಗೆ ಗಾಯವಾಗಿದೆ ಅನ್ನೋ ಮಾಹಿತಿ ಬಂದಿದೆ. ಮುಂಡಗೋಡ ಪೊಲೀಸರ ಮಾಹಿತಿ ಪ್ರಕಾರ, ಕಾರಿನಲ್ಲಿದ್ದವರು ರಾಣೆಬೆನ್ನೂರು ಮೂಲದವರು ಎನ್ನಲಾಗಿದ್ದು, ಕುಡಿದು ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ, ವೇಗವಾಗಿ ಚಲಾಯಿಸುತ್ತಿದ್ದ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ ಎನ್ನಲಾಗಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಅದ್ರಲ್ಲಿ ಓರ್ವನಿಗೆ ಗಾಯವಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶಿಗ್ಗಾವಿ ಬಳಿ CRPF ಯೋಧ ಕೊಳೆತ ಸ್ಥಿತಿಯಲ್ಲಿ ಪತ್ತೆ| ಅಷ್ಟಕ್ಕೂ ಅಲ್ಲಿ ಆಗಿದ್ದಾದ್ರೂ ಏನು?
Shiggaon Murder News; ಶಿಗ್ಗಾವಿ: ಪಟ್ಟಣದ ಹೊರವಲಯದ ಖಾಸಗಿ ಶಾಲೆಯ ಹತ್ತಿರ, ಇಟ್ಟಿಗೆಗಳ ಪಕ್ಕ CRPF ಯೋಧನ ಶವ ಪತ್ತೆಯಾಗಿದೆ. ಕೊಳೆತ ಸ್ಥಿತಿಗೆ ತಲುಪಿರೋ ಶವದ ಸುತ್ತ ಹಲವು ಅನುಮಾನಗಳು ಸುಳಿದಾಡುತ್ತಿವೆ. ಬಹುತೇಕ, ಮರ್ಡರ್ ಮಾಡಿ, ಇಲ್ಲಿ ತಂದು ಬೀಸಾಕಿದ್ದಾರಾ ದುಷ್ಕರ್ಮಿಗಳು..? ಅನ್ನೊ ಅನುಮಾನ ಪೊಲೀಸರಿಗೆ ಕಾಡುತ್ತಿದೆ. ಅಂದಹಾಗೆ, ಪಟ್ಟಣದ ಹೊರವಲಯದ ಪಿನಿಕ್ಸ್ ಶಾಲೆಯ ಹತ್ತಿರ ಎನ್ ಎಚ್ 48 ರಸ್ತೆಯ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿರೊ ಯೋಧ, ಹಾಸನ ಜಿಲ್ಲೆಯ ಅರಸಿಕೇರೆ ತಾಲೂಕಿನ ತಾಳನಕೊಪ್ಪಲು ಗ್ರಾಮದವನು ಅನ್ನೋ ಪ್ರಾಥಮಿಕ ಮಾಹಿತಿ ಲಭಿಸಿದೆ. ತಾರೇಶ್ ಎನ್.ಬಿ. ಎಂಬುವವನೇ ಇಲ್ಲಿ ಹೆಣವಾಗಿ ಬಿದ್ದಿದ್ದಾನೆ. ಅಸಲು, ಶವದ ಪಕ್ಕದಲ್ಲಿ ಬಿದ್ದಿದ್ದ ಐಡಿ ಕಾರ್ಡಿನಿಂದ ಈ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇಟ್ಟಂಗಿ ಭಟ್ಟಿಯ ಹಿಂಭಾಗದಲ್ಲಿ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಎಫ್.ಎಸ್.ಎಲ್ ಅಧಿಕಾರಿಗಳು, ಶಿಗ್ಗಾವಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.









