ನಿರಂತರ ಮಳೆ; ಜಿಲ್ಲೆಯ 2 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ  ಶಾಲೆಗಳಿಗೆ ನಾಳೆ ರಜೆ..!

ನಿರಂತರ ಮಳೆ; ಜಿಲ್ಲೆಯ 2 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆ ರಜೆ..!

School Holiday News; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ, ಹೀಗಾಗಿ, ನಾಳೆ ಜೂನ್ 26 ರಂದು ಉತ್ತರ ಕನ್ನಡ ಜಿಲ್ಲೆಯ 2 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.

ಬೆಡಸಗಾಂವನಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಬಿದ್ದ ಮರ..!

ಬೆಡಸಗಾಂವನಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಬಿದ್ದ ಮರ..!

Tree Fell on a Vehicle; ಮುಂಡಗೋಡ ತಾಲೂಕಿನ ಬೆಡಸಗಾಂವ್ ನಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನದ ಮೇಲಿನ ಮರ ಬಿದ್ದಿದೆ. ವಾಹನದಲ್ಲಿ ಹತ್ತಕ್ಕೂ ಹೆಚ್ಚು ಕಾರ್ಮಿಕರು ಇದ್ದರೂ ಅದೃಷ್ಟವಶಾತ್ ಯಾರಿಗೂ ಅನಾಹುತ ಸಂಭವಿಸಿಲ್ಲ. ಬೆಡಸಗಾಂವನ ವಿಜಯ ನಾಯ್ಕ್ ಎಂಬುವವರು ಮರ ಮುರಿದು ಬಿಳುವ ಅನುಮಾನದಿಂದ, ಮೊದಲೇ ವಿದ್ಯುತ್ ಸಂಪರ್ಕ್ ಕಡಿತಗೊಳಿಸಿದ್ದರು‌. ಹೀಗಾಗಿ, ಮರದ ಜೊತೆ ವಿದ್ಯುತ್ ತಂತಿಯೂ ಬಿದ್ದರೂ ಏನೂ ಅನಾಹುತ ಸಂಭವಿಸಿಲ್ಲ. ಇದನ್ನೂ ಓದಿ👉ಮುಂಡಗೋಡ ಠಾಣೆಯಲ್ಲಿ ಏಜೇಂಟರುಗಳ ಹಾವಳಿ ಇಲ್ಲ, ನಿಮಗೆ ಕಂಡುಬಂದ್ರೆ ಅಂತವರ ಮಾಹಿತಿ ನೀಡಿ- ಎಲ್ಟಿ ಆರೋಪಕ್ಕೆ ಪಿಐ ರಂಗನಾಥ ಸ್ಪಷ್ಟನೆ..! ಹೀಗಾಗಿ,ವಾಹನದಲ್ಲಿ ರಾಮಾಪುರದಿಂದ ಹುಲೆಕಲ್ ಗೆ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿದಂತಾಗಿದೆ.

ಮುಂಡಗೋಡ ಠಾಣೆಯಲ್ಲಿ ಏಜೇಂಟರುಗಳ ಹಾವಳಿ ಇಲ್ಲ, ನಿಮಗೆ ಕಂಡುಬಂದ್ರೆ ಅಂತವರ ಮಾಹಿತಿ ನೀಡಿ- ಎಲ್ಟಿ ಆರೋಪಕ್ಕೆ ಪಿಐ ರಂಗನಾಥ ಸ್ಪಷ್ಟನೆ..!

ಮುಂಡಗೋಡ ಠಾಣೆಯಲ್ಲಿ ಏಜೇಂಟರುಗಳ ಹಾವಳಿ ಇಲ್ಲ, ನಿಮಗೆ ಕಂಡುಬಂದ್ರೆ ಅಂತವರ ಮಾಹಿತಿ ನೀಡಿ- ಎಲ್ಟಿ ಆರೋಪಕ್ಕೆ ಪಿಐ ರಂಗನಾಥ ಸ್ಪಷ್ಟನೆ..!

Mundgod Police News; ಮುಂಡಗೋಡ ಠಾಣೆಯಲ್ಲಿ ಯಾವುದೇ ಬ್ರಷ್ಟಾಚಾರ ನಡೀತಿಲ್ಲ, ಏಜೇಂಟರುಗಳ ಹಾವಳಿಯೂ ಇಲ್ಲ. ನಿತ್ಯವೂ ಇಲ್ಲಿ ಹತ್ತಾರು ಜನ ಜನಪ್ರತಿನಿಧಿಗಳು, ವಕೀಲರು, ಪತ್ರಕರ್ತರು, ಸಾರ್ವಜನಿಕರು ಬಂದು ಹೋಗ್ತಾರೆ, ಹಾಗೇನಾದ್ರೂ L.T. ಪಾಟೀಲ್ ರಿಗೆ ಏಜೇಂಟರುಗಳ ಹಾವಳಿ ಇದೆ ಅ.ಮತಾ ಕಂಡುಬಂದಲ್ಲಿ, ಆ ಏಜೇಂಟರುಗಳು ಯಾರು..? ಅವ್ರ ಹೆಸರೇನು ಅಂತಾ ನಮಗೆ ಮಾಹಿತಿ ನೀಡಿದ್ರೆ, ಖಂಡಿತ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ತಿವಿ ಅಂತಾ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್ ನಯವಾಗೇ ವಿನಂತಿಸಿದ್ದಾರೆ. ಅವ್ರು, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಿದ್ರು. ಬಿಜೆಪಿ ಮುಖಂಡ L.T. ಪಾಟೀಲ್ ನಿನ್ನೆ ಮಂಗಳವಾರ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಏಜೇಂಟರುಗಳ ಹಾವಳಿಯ ಬಗ್ಗೆ ಮಾಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಿಐ, ಎಲ್ .ಟಿ.ಪಾಟೀಲರಿಗೆ ಹಾಗೆ ಯಾಕೆ ಅನಿಸಿದೆಯೋ ಗೊತ್ತಿಲ್ಲ. ಆದ್ರೆ, ನಮ್ಮ ಠಾಣೆಯಲ್ಲಿ ಅವ್ರು ಹೇಳಿದ ರೀತಿಯಲ್ಲಿ ಯಾವುದೇ ಏಜೇಂಟರುಗಳ ಹಾವಳಿ...

ಮುಂಡಗೋಡ ಜಂಬಗಿ ಆಸ್ಪತ್ರೆ ಪಕ್ಕದ ಹಣ್ಣಿ‌ನ ಅಂಗಡಿಗೆ ನುಗ್ಗಿದ ಟವೇರಾ ವಾಹನ..! ಅಂಗಡಿ ಧ್ವಂಸ, ಬೈಕ್ ಜಖಂ..!

ಮುಂಡಗೋಡ ಜಂಬಗಿ ಆಸ್ಪತ್ರೆ ಪಕ್ಕದ ಹಣ್ಣಿ‌ನ ಅಂಗಡಿಗೆ ನುಗ್ಗಿದ ಟವೇರಾ ವಾಹನ..! ಅಂಗಡಿ ಧ್ವಂಸ, ಬೈಕ್ ಜಖಂ..!

Accident News; ಮುಂಡಗೋಡ ಪಟ್ಟಣದ ಜಂಬಗಿ ಆಸ್ಪತ್ರೆಯ ಪಕ್ಕದ ಹಣ್ಣಿನ ಅಂಗಡಿಗೆ ಟವೆರಾ ವಾಹನವೊಂದು ಏಕಾಏಕಿ‌ನುಗ್ಗಿ ಹಾನಿಗೊಳಿಸಿದೆ. ಈಗ್ಗೆ ಕಲವೇ ನಿಮಿಷಗಳ ಹಿಂದೆ ನಡೆದಿರೋ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ, ಬದಲಾಗಿ ಒಂದು ಬೈಕ್ ಜಖಂಗೊಂಡಿದೆ. ಹಣ್ಣಿನ ಅಂಗಡಿಯಂತೂ ಚೆಲ್ಲಾಪಿಲ್ಲಿಯಾಗಿದೆ. KA – 25 ನೋಂದಣಿಯ ಟವೇರಾ ವಾಹನ ಏಕಾಏಕಿ ಹಣ್ಣಿನ ಅಂಗಡಿಗೆ ವೇಗವಾಗಿ ಬಂದು ನುಗ್ಗಿದೆ. ಪುಣ್ಯಕ್ಕೆ ಅಲ್ಲೇ ಇದ್ದ ಹಣ್ಣಿನ ವ್ಯಾಪಾರಿಗೆ ಏನೂ ಆಗಿಲ್ಲ. ಆದ್ರೆ, ಅದಕ್ಕೂ‌ ಮೊದಲು ಅಲ್ಲೇ ಇದ್ದ ಬೈಕ್ ಗೆ ವಾಹನ ಗುದ್ದಿದ ಪರಿಣಾಮ ಬೈಕ್ ಜಖಂ ಗೊಂಡಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Uttar Kannada News Today; ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

Uttar Kannada News Today; ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

Uttar Kannada News Today; ತಾಲೂಕಾ ಬಾಲಭವನ ಸೊಸೈಟಿ ಕಾರ್ಯಕ್ರಮ ಕಾರವಾರ;  ಕಾರವಾರದ ಸುಮತಿ ದಾಮ್ಲೆ ಹೈಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆದ ಬಾಲಭವನ ಸೊಸೈಟಿ ಕಾರ್ಯಕ್ರಮವನ್ನು ನಗರಸಭೆ ಸದಸ್ಯೆ ಸಂಧ್ಯಾ ಬಾಡಕರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಬಾಲಭವನ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶೋಭಾ ಡಿ ಮುಕಟಗಾರ ಮಾತನಾಡಿ, ಇಂದಿನ ಯುಗ ಸ್ಫರ್ಧಾತ್ಮಕ ಯುಗವಾಗಿದ್ದು, ಮಕ್ಕಳು ಸ್ಫರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ ಆಗ ಮಾತ್ರ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ . ಬಾಲ್ಯವಿವಾಹ ಹಾಗೂ ಫೋಕ್ಸೊ ಆಗುತ್ತಿದ್ದಲ್ಲಿ ನಮ್ಮ ಇಲಾಖೆಯ ಗಮನಕ್ಕೆ ಹಾಗೂ ಶಿಕ್ಷಕರಿಗೆ, ಪಾಲಕರಿಗೆ ಯಾವುದೇ ಮುಚ್ಚಮರೆ ಇಲ್ಲದೇ ತಿಳಿಸಬೇಕು. ಮಕ್ಕಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ವಿದ್ಯಾಭ್ಯಾಸ ಅಷ್ಟೇ ಅಲ್ಲದೇ ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು, ಎಲ್ಲಾ ಕ್ಷೇತ್ರದಲ್ಲೂ ಭಾಗವಹಿಸಿ ಮುಂದೆ ಬರಬೇಕು ಎಂದರು. ಕಾರ್ಯಕ್ರಮದಲ್ಲಿ ಸುಮತಿ ದಾಮ್ಲೆ ಹೈಸ್ಕೂಲ್ ಮುಖ್ಯೋಫಾದ್ಯಾಯ ಅರುಣ ರಾಣೆ, ವಿದ್ಯಾರ್ಥಿಗಳು, ಶಿಕ್ಷಕರು, ಮೇಲ್ವಿಚಾರಕಿಯರು ಉಪಸ್ಥಿತರಿದ್ದರು. ***********************...

School holiday News; ನಿರಂತರ ಮಳೆ; ಜಿಲ್ಲೆಯ 4 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ  ಶಾಲೆಗಳಿಗೆ ನಾಳೆ ರಜೆ..!

School holiday News; ನಿರಂತರ ಮಳೆ; ಜಿಲ್ಲೆಯ 4 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆ ರಜೆ..!

School Holiday News; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ, ಹೀಗಾಗಿ, ನಾಳೆ ಜೂನ್ 25 ರಂದು ಉತ್ತರ ಕನ್ನಡ ಜಿಲ್ಲೆಯ 4 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ಶಿಗ್ಗಾವಿಯಲ್ಲಿ ಹಾಡಹಗಲೇ ಭೀಕರ ಹತ್ಯೆ.! ಅಲ್ಲಿ ಹೆಣವಾಗಿದ್ದವನ ಹೆಸರು ಶಿವಾನಂದ ಕುನ್ನೂರ..!

ಶಿಗ್ಗಾವಿಯಲ್ಲಿ ಹಾಡಹಗಲೇ ಭೀಕರ ಹತ್ಯೆ.! ಅಲ್ಲಿ ಹೆಣವಾಗಿದ್ದವನ ಹೆಸರು ಶಿವಾನಂದ ಕುನ್ನೂರ..!

Shiggaon Murder News; ಶಿಗ್ಗಾವಿಯಲ್ಲಿ ಹಾಡಹಗಲೇ ಭೀಕರ ಹತ್ಯೆಯಾಗಿದೆ. ಶಿವಾನಂದ ಕುನ್ನೂರ ಎಂಬುವವನನ್ನು ಬೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಹಂತಕರು. ಶಿಗ್ಗಾವಿಯ ಹುಬ್ಬಳ್ಳಿ ರಸ್ತೆಯ ಸಮೀಪ, ಮಹೇಶ್ ದಾಬಾದ ಎದುರೇ ಹತ್ಯೆ ಮಾಡಲಾಗಿದೆ. ಹೀಗಾಗಿ ಇಡೀ ಶಿಗ್ಗಾವಿ ತಾಲೂಕೇ ಬೆಚ್ಚಿ ಬಿದ್ದಿದೆ. ಹಾಡಹಗಲೇ ಮರ್ಡರ್..! ಅಸಲು, ಶಿಗ್ಗಾವಿಲಿ ಇತ್ತಿಚೆಗೆ ಹಲವು ರೀತಿಯ ಕ್ರೈಮುಗಳು ಚಾಲ್ತಿ ಪಡೆದುಕೊಂಡಿವೆ. ಎರಡು ದಿನದ ಹಿಂದೆಯಷ್ಟೇ ಇಲ್ಲಿ CRPF ಯೋಧನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಇದೀಗ, ಹಾಡಹಗಲೇ ಶಿವಾನಂದ್ ಕುನ್ನೂರ ಎಂಬುವವನ ಭೀಕರ ಹತ್ಯೆಯಾಗಿದ್ದು ಇಡೀ ಶಿಗ್ಗಾವಿ ಪಟ್ಟಣ ಬೆಚ್ಚಿ ಬಿದ್ದಿದೆ. ಪೊಲೀಸರು ದೌಡು..! ಹಾಡಹಗಲೇ, ಇಂತಹದ್ದೊಂದು ಬೀಕರ ಮರ್ಡರ್ ನಡೆದಿದ್ದ ಕಾರಣಕ್ಕಾಗಿ ಇಡೀ ಶಿಗ್ಗಾವಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ.

ಆದಯಕ್ಕೂ ಮೀರಿ ಆಸ್ತಿ ಗಳಿಕೆ ಪೊಲೀಸ್ ಇನ್ಸಪೆಕ್ಟರ್ (CPI) ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ..!

ಆದಯಕ್ಕೂ ಮೀರಿ ಆಸ್ತಿ ಗಳಿಕೆ ಪೊಲೀಸ್ ಇನ್ಸಪೆಕ್ಟರ್ (CPI) ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ..!

Lokayukta raid; ಗದಗ ಶಹರ ಠಾಣೆ ಪಿಐ ಡಿ.ಬಿ.ಪಾಟೀಲ್ ಗೆ ಲೋಕಾತುಕ್ತರು ಬಿಸಿ ಮುಟ್ಟಿಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆಯ ಆರೋಪದಲ್ಲಿ ರೇಡ್ ಮಾಡಲಾಗಿದ್ದು, ಬೆಳ್ಳಂ ಬೆಳಿಗ್ಗೆ ಬ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗಿದೆ. ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಡಿ ಬಿ ಪಾಟೀಲ್ ಮನೆ ದಾಳಿ ನಡದಿದ್ದು, ಪಾಟೀಲ್ ಗೆ ಸೇರಿದ ಏಳು ಜಾಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. Lokayukta raid; ಗದಗಿನ ಶಿವಾನಂದ ನಗರದ ಬಾಡಿಗೆ ಮನೆ ಹಾಗೂ ಗದಗ ಶಹರ ಪೊಲೀಸ್ ಠಾಣೆಯ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಸಿಪಿಐ ಡಿ ಬಿ ಪಾಟೀಲ್ ಗೆ ಸೇರಿದ ಬಾಗಲಕೋಟೆ, ಜಮಖಂಡಿ, ಕೆರೂರು ಮನೆಗಳ ಮೇಲೂ ದಾಳಿ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ ಎಸ್ ಪಾಟೀಲ, ಲೋಕಾ ಸಿಪಿಐ ಪರಶುರಾಮ ಕವಟಗಿ ನೇತೃತ್ವದಲ್ಲಿ ದಾಳಿ ನಡೆದಿದೆ‌.

ಜೋಗನ ಹಕ್ಕಲು ಫಾಲ್ಸ್ ನಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಶಿರಸಿ ಯುವಕ..!

ಜೋಗನ ಹಕ್ಕಲು ಫಾಲ್ಸ್ ನಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಶಿರಸಿ ಯುವಕ..!

Death News: ಶಿರಸಿ :ಪವನ್ ಗಣಪತಿ ಜೋಗಿ ಎಂಬ ಯುವಕ ತನ್ನ ಸ್ನೇಹಿತ ವಾಸುದೇವ್ ಶಶಿಧರ್ ನಾಯ್ಕ್ ನೊಂದಿಗೆ ಬೆಳಿಗ್ಗೆ 11:30 ಗಂಟೆಗೆ ಮನೆಯಿಂದ ಹೊರಟು ಮತ್ತಿಘಟ್ಟ ಹತ್ತಿರದ ಜೋಗನ ಹಕ್ಕಲು ಫಾಲ್ಸ್ ನೋಡಲು ಹೋಗಿದ್ದು, ಫಾಲ್ಸ್ ಹತ್ತಿರ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನ ದಾಟುವಾಗ ಕಾಲು ಜಾರಿ ಬಿದ್ದು ಹಳ್ಳ ದಲ್ಲಿ ಕೊಚ್ಚಿಕೊಂಡು ಹೋಗಿ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ತಾಲೂಕಿನ ಸೋಮನಳ್ಳಿ ಗ್ರಾಮದ ಉಂಬಳೆಕೊಪ್ಪದ ಪವನ್ (24) ಎಂಬುವ ಯುವಕನೇ ಕಣ್ಮರೆಯಾಗಿದ್ದಾನೆ. ಹೀಗಾಗಿ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು, ಪ್ರವೀಣ್ ಜೋಗಿ ಕಣ್ಮರೆ ಯಾದ ತನ್ನ ತಮ್ಮನನ್ನು ಹುಡುಕಿಕೊಡುವಂತೆ ದೂರು ನೀಡಿದ್ದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೋಗಿ ಕಣ್ಮರೆಯಾದ ಪವನ್ ನನ್ನ ಹುಡುಕಿದರೂ ಫಲಕಾರಿಯಾಗಿಲ್ಲ. ರಾತ್ರಿಯಾದ್ದರಿಂದ ಬೆಳಿಗ್ಗೆ ಮತ್ತೆ ಈಜು ತಜ್ಞರೊಂದಿಗೆ ಹುಡುಕುವ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

error: Content is protected !!