ಭಾರತದ ಷೇರುಪೇಟೆ ಸೋಮವಾರ ಭರ್ಜರಿ ಕಂಬ್ಯಾಕ್‌: ಸೆನ್ಸೆಕ್ಸ್ 677 ಪಾಯಿಂಟ್ಸ್‌ ಏರಿಕೆ! 5 ಪ್ರಮುಖ ಕಾರಣಗಳು..!

ಭಾರತದ ಷೇರುಪೇಟೆ ಸೋಮವಾರ ಭರ್ಜರಿ ಕಂಬ್ಯಾಕ್‌: ಸೆನ್ಸೆಕ್ಸ್ 677 ಪಾಯಿಂಟ್ಸ್‌ ಏರಿಕೆ! 5 ಪ್ರಮುಖ ಕಾರಣಗಳು..!

Stock Market Highlights : ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ನಡುವೆ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವು ಸತತ ನಷ್ಟದಿಂದ ಚೇತರಿಸಿಕೊಂಡಿದೆ. ಕಳೆದ ಕೆಲವು ಸೆಷನ್‌ಗಳಲ್ಲಿ ಇಳಿಕೆಗೆ ಸಾಕ್ಷಿಯಾಗಿದ್ದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕವು ಸೋಮವಾರ ಜಿಗಿತ ಸಾಧಿಸಿದೆ. ಎರಡು ಪ್ರಮುಖ ಸೂಚ್ಯಂಕಗಳು ಸುಮಾರು 1% ನಷ್ಟು ಹೆಚ್ಚಾಗಿವೆ. ಸೆನ್ಸೆಕ್ಸ್ ಮಾರುಕಟ್ಟೆ ಮುಕ್ತಾಯಕ್ಕೆ 677 ಪಾಯಿಂಟ್ಸ್ ಅಥವಾ 0.84% ಏರಿಕೆಗೊಂಡು 81,796 ಮಾರ್ಕ್‌ನಲ್ಲಿ ಕೊನೆಗೊಂಡಿದೆ. ಇದೇ ವೇಳೆಯಲ್ಲಿ ನಿಫ್ಟಿ 50 ಸೂಚ್ಯಂಕವು 227.90 ಪಾಯಿಂಟ್ಸ್ ಅಥವಾ 0.90% ಹೆಚ್ಚಾಗಿ 24,946.50 ಮಾರ್ಕ್‌ನಲ್ಲಿ ಮುಚ್ಚಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕವು ಶೇಕಡಾ 1ರಷ್ಟು ಇಂದು ಏರಿಕೆಯಾಗಿದೆ. ಭಾರತದ ಷೇರುಪೇಟೆ ಏರಿಕೆಗೆ ಪ್ರಮುಖ ಕಾರಣವೇನು? ಇಸ್ರೇಲ್ ಹಾಗೂ ಇರಾನ್ ದೇಶದ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಕಚ್ಚಾ ತೈಲ ಬೆಲೆ ಏರಿಕೆಯಾಗತೊಡಗಿದೆ. ಹೀಗಿರುವಾಗ ಭಾರತದ ಷೇರು ಮಾರುಕಟ್ಟೆ ಸೋಮವಾರ ಜಿಗಿಯಲು ಐದು ಪ್ರಮುಖ ಕಾರಣಗಳನ್ನು ಕಾರಣಬಹುದಾಗಿದೆ. ಷೇರು...

ವಿಶ್ವ ಯೋಗ ದಿನಾಚರಣೆಗೆ ಸಿದ್ದತೆ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ..!

ವಿಶ್ವ ಯೋಗ ದಿನಾಚರಣೆಗೆ ಸಿದ್ದತೆ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ..!

Yoga Day News;ಕಾರವಾರ: ಜೂನ್ 21 ರಂದು ನಡೆಯುವ ಅಂತರಾಷ್ರ್ಟೀಯ ಯೋಗ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಆಯುಷ್ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ, ಅಂತರಾಷ್ರ್ಟೀಯ ಯೋಗ ದಿಚಾರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಮುನ್ಸೂಚನೆಯಂತೆ ಕೋವಿಡ್ 19 ಮುನ್ನೆಚ್ಚರಿಕೆ ನಿಯಮಗಳನ್ನು ಅನುಸರಿಸಿ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಆಚರಿಸಬೇಕು, ಜಿಲ್ಲೆಯ ನರ್ಸಿಂಗ್ ವಿದ್ಯಾರ್ಥಿಗಳು, ಎನ್.ಸಿ.ಸಿ. ರೋಟರಿ ಕ್ಲಬ್, ಯೋಗ ತರಬೇತಿ ನೀಡುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಿಗಧಿತ ಸಂಖ್ಯೆಯ ಸಾರ್ವಜನಿಕರನ್ನು ಒಳಗೊಂಡು ಕಾರ್ಯಕ್ರಮ ಆಯೋಜಿಸುವಂತೆ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಯೋಗಾಭ್ಯಾಸ ಮಾಡಲು ಅಗತ್ಯ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಹಾಗೂ ತರಬೇತಿ ನೀಡಲು ಯೋಗ ಶಿಕ್ಷಕರನ್ನು ನಿಯೋಜಿಸುವಂತೆ ತಿಳಿಸಿದರು. Yoga Day News; ಕೆಮ್ಮು ನೆಗಡಿ, ಶೀತಜ್ವರದಿಂದ ಬಳಲುತ್ತಿರುವವರು...

ಭಾರೀ ಏರಿಕೆಯ ನಂತರ ಸ್ವಲ್ಪ ಇಳಿದ ಚಿನ್ನದ ಬೆಲೆ; 10 ಗ್ರಾಂಗೆ ₹170 ಕುಸಿತ, ಈಗ ಎಷ್ಟಿದೆ ಗೋಲ್ಡ್‌ ರೇಟ್‌..!

ಭಾರೀ ಏರಿಕೆಯ ನಂತರ ಸ್ವಲ್ಪ ಇಳಿದ ಚಿನ್ನದ ಬೆಲೆ; 10 ಗ್ರಾಂಗೆ ₹170 ಕುಸಿತ, ಈಗ ಎಷ್ಟಿದೆ ಗೋಲ್ಡ್‌ ರೇಟ್‌..!

Gold Price Today: ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಈ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆಗಳನ್ನು ಗಗನಕ್ಕೇರಿಸುತ್ತಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಹೂಡಿಕೆದಾರರು ತಮ್ಮ ಹಣಕ್ಕೆ ಭದ್ರತೆಯನ್ನು ಬಯಸುತ್ತಾರೆ.ಈ ಸಮಯದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಯಾವುದೇ ಅಪಾಯವಿಲ್ಲದ ಹೂಡಿಕೆ ಸಾಧನವಾಗಿರುವ ಚಿನ್ನದ ಮೇಲೆ ಹೂಡಿಕೆ ಹೆಚ್ಚುತ್ತಿದೆ. ಇದರಿಂದ ಸಹಜವಾಗಿಯೇ ಚಿನ್ನದ ದರಗಳು ವಿಪರೀತವಾಗಿ ಹೆಚ್ಚಾಗುತ್ತವೆ. ಆದರೆ, ಜೂನ್‌ 16ರಂದು ಸೋಮವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಪ್ರಸ್ತುತ ಬೆಂಗಳೂರಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಕಳೆದ ವಾರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಭಾರೀ ಏರಿಕೆಯಾಗಿತ್ತು. ಆದರೆ, ಈ ವಾರ ಮೊದಲ ದಿನವೇ ಅಂದರೆ, ಸೋಮವಾರ ಬಂಗಾರದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಬೆಂಗಳೂರಲ್ಲಿ ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ 170 ರೂಪಾಯಿ ಇಳಿಕೆಯಾಗಿದ್ದು, ₹101510ರಲ್ಲಿ ವಹಿವಾಟು ನಾಡೆಸುತ್ತಿದೆ. 22 ಕ್ಯಾರಟ್‌ ಆಭರಣ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ...

ಕಾಲುವೆಗೆ ಬಿದ್ದು 2 ವರ್ಷದ ಪುಟ್ಟ ಕಂದಮ್ಮ ಸಾವು..!

ಕಾಲುವೆಗೆ ಬಿದ್ದು 2 ವರ್ಷದ ಪುಟ್ಟ ಕಂದಮ್ಮ ಸಾವು..!

 Bhatkal Crime; ಭಟ್ಕಳ: ಪೋಷಕರ ನಿರ್ಲಕ್ಷದಿಂದಾಗಿ ಎರಡು ವರ್ಷದ ಮಗು ಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ನಗರದ ಆಝಾದ ನಗರದಲ್ಲಿ ನಡೆದಿದೆ. ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಪುಟ್ಟ ಮಗು ಮೃತ ಪಟ್ಟವಳಾಗಿದ್ದಾಳೆ. ಆಕೆ ಮನೆ ಎದುರು ಆಟವಾಡುತ್ತಾ ಮನೆ ಎದುರಿಗೆ ಇದ್ದ ಕಾಲುವೆ ಬಳಿ ಹೋಗಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕಾಲುವೆಯಲ್ಲಿ ಬಿದ್ದು ಮಗು ಮೃತಪಟ್ಟಿದ್ದಾಳೆ. ಪುಟ್ಟ ಮಗು ಕಾಲುವೆಗೆ ಬಿಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೋಷಕರ ನಿರ್ಲಕ್ಷದಿಂದಾ ಮಗು ಸಾವನ್ನಪಿದೆ.

ಕೇದಾರ‌ನಾಥ ಬಳಿ ಹೆಲಿಕಾಪ್ಟರ್ ಪತನ, ಮಗು ಸೇರಿ 7 ಜನರ ದುರ್ಮರಣ..!

ಕೇದಾರ‌ನಾಥ ಬಳಿ ಹೆಲಿಕಾಪ್ಟರ್ ಪತನ, ಮಗು ಸೇರಿ 7 ಜನರ ದುರ್ಮರಣ..!

Helicopter Crash; ಕೇದಾರನಾಥ ದೇವಸ್ಥಾನದಿಂದ ಉತ್ತರಾಖಂಡದ ಗುಪ್ತಕಾಶಿಗೆ ಹಾರುತ್ತಿದ್ದ ಹೆಲಿಕಾಪ್ಟರ್ ಕಾಡಿನಲ್ಲಿ ಪತನಗೊಂಡು ಏಳು ಜನರು ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಆರ್ಯನ್ ಏವಿಯೇಷನ್ ​​ಹೆಲಿಕಾಪ್ಟರ್ 10 ನಿಮಿಷಗಳ ಪ್ರಯಾಣದ ಸಮಯದಲ್ಲಿ ಗೌರಿಕುಂಡ ಮತ್ತು ಸೋನ್‌ಪ್ರಯಾಗ್ ನಡುವೆ ಪತನಗೊಂಡಿತು. ಅಪಘಾತದಲ್ಲಿ ಪೈಲಟ್ ಸೇರಿದಂತೆ ಏಳು ಜನರು ಸಾವಿಗೀಡಾಗಿದ್ದಾರೆ. ಈ ಘಟನೆ ಬೆಳಿಗ್ಗೆ 5:20 ಕ್ಕೆ ಸಂಭವಿಸಿದ್ದು,ಆರು ಯಾತ್ರಿಕರು (ಐದು ವಯಸ್ಕರು ಮತ್ತು 23 ತಿಂಗಳ ಮಗು) ಮತ್ತು ಒಬ್ಬ ಪೈಲಟ್ ಇದ್ದರು ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (ಯುಸಿಎಡಿಎ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. Helicopter Crash; ಕೇದಾರನಾಥ ಧಾಮ್ ಭೇಟಿಯ ನಂತರ ಹೆಲಿಕಾಪ್ಟರ್ ಹಿಂತಿರುಗುತ್ತಿದ್ದಾಗ, ಹವಾಮಾನ ಹದಗೆಟ್ಟಿತ್ತು. ಪೈಲಟ್ ಕಣಿವೆಯಿಂದ ಚಾಪರ್ ಅನ್ನು ಹೊರತರಲು ಪ್ರಯತ್ನಿಸಿದರು ಆದರೆ ಅದು ಅಪಘಾತಕ್ಕೀಡಾಯಿತು ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಯ ರಾಹುಲ್ ಚೌಬೆ ಹೇಳಿದ್ದಾರೆ. ಇದನ್ನೂ ಓದಿ👉 ಮನೆವರೆಗೇ ಬಂದು ಯುವಕನ ಮೇಲೆ ದಾಳಿ ಮಾಡಿದ ಚಿರತೆ, ಅಪಾಯದಿಂದ ಪಾರಾದ ಯುವಕ..!...

ಮನೆವರೆಗೇ ಬಂದು ಯುವಕನ ಮೇಲೆ ದಾಳಿ ಮಾಡಿದ ಚಿರತೆ, ಅಪಾಯದಿಂದ ಪಾರಾದ ಯುವಕ..!

ಮನೆವರೆಗೇ ಬಂದು ಯುವಕನ ಮೇಲೆ ದಾಳಿ ಮಾಡಿದ ಚಿರತೆ, ಅಪಾಯದಿಂದ ಪಾರಾದ ಯುವಕ..!

Leopard Attack; ಕಾರವಾರ: ನಿರ್ಮಾಣ ಹಂತದ ಹೊಸ ಮನೆ ಸೇರಿಕೊಂಡಿದ್ದ ಚಿರತೆಯೊಂದು ಯುವಕನ ಮೇಲೆ ದಾಳಿ ಮಾಡಿದ ಘಟನೆ ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗೆ ಗ್ರಾ.ಪಂ.ವ್ಯಾಪ್ತಿಯ ಉಳಗದ್ದೆ ಗ್ರಾಮದಲ್ಲಿ ನಡೆದಿದೆ. ಸಂತೋಷ್​ ಹೂವಣ್ಣ ಗೌಡ (24) ಎಂಬುವರು ಗಾಯಗೊಂಡಿದ್ದಾರೆ. ಮನೆಯ ಪಕ್ಕದ ಹೊಸ ಮನೆಯಲ್ಲಿ ಚಿರತೆ ಅವಿತುಕೊಂಡಿತ್ತು. ಅಲ್ಲಿ ಒಣ ಹಾಕಿದ್ದ ಬಟ್ಟೆ ತರಲು ಹೋದ ಯುವತಿ ಚಿರತೆಯನ್ನು ಕಂಡು ಕಿರುಚುತ್ತಾ ಓಡಿ ಹೊರಬಂದಿದ್ದು, ಚಿರತೆಯೂ ಹೊರಗೆ ಬಂದಿದೆ. ಅದೇ ಕ್ಷಣದಲ್ಲಿ ಸಂತೋಷ್​ ಗೌಡ ಕೂಡ ಮನೆಯಿಂದ ಹೊರಬಂದಿದ್ದು, ಚಿರತೆ ದಾಳಿ ಮಾಡಿ ಓಡಿ ಹೆದರಿ ಓಡಿ ಹೋಗಿದೆ. ಸಂತೋಷ್ ಅವರ ಎರಡೂ ಕೈಗಳಿಗೆ ಪರಚಿದ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾ ಪಿಐ ಚಂದ್ರಶೇಖರ್​ ಮಠಪತಿ ಮತ್ತು ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ👉ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು, ಶಿರಸಿ-ಕುಮಟಾ ರಸ್ತೆ ಬಂದ್..!

ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು, ಶಿರಸಿ-ಕುಮಟಾ ರಸ್ತೆ ಬಂದ್..!

ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು, ಶಿರಸಿ-ಕುಮಟಾ ರಸ್ತೆ ಬಂದ್..!

Heavy rain Land Slide: ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಕುಮಟಾ ತಾಲೂಕಿನಲ್ಲಿ ಸುರಿದ ಮಳೆಗೆ ಕುಮಟಾ ತಾಲೂಕಿನ ದೇವಿಮನೆ ಘಟ್ಟದಲ್ಲಿ ಇಂದು ಬೆಳಿಗ್ಗೆ ಮತ್ತೆ ಗುಡ್ಡ ಕುಸಿದಿದೆ. ಪರಿಣಾಮ ರಸ್ತೆ ಮೇಲೆ ಮಣ್ಣು, ಕಲ್ಲುಗಳು ಬಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 766E ನಲ್ಲಿ ಕಲ್ಲು ಮಣ್ಣು ಬಿದ್ದ ಪರಿಣಾಮ, ಕುಮಟಾ-ಶಿರಸಿ ಹೆದ್ದಾರಿಯ ರಸ್ತೆ ಸಂಚಾರ ಬಂದ್ ಆಗಿದೆ. ಮೊದಲೇ ರಸ್ತೆ ಕಾಮಗಾರಿ ಪ್ರಗತಿಯಲ್ಲಿ ಇರೋದ್ರಿಂದ ಸಂಚಾರಕ್ಕೆ ಕಿರಿಕಿರಿ ಆಗಿದೆ. ಇನ್ನು, ಗುಡ್ಡ ಕುಸಿತವಾಗಿ ರಸ್ತೆ ಮೇಲೆ ಬಿದ್ದಿರೊ ಮಣ್ಣು, ಕಲ್ಲು ತೆರವು ಕಾರ್ಯ ನಡೆದಿದೆ. ಆದ್ರೆ, ಶಿರಸಿ ತಾಲೂಕಿನ ಭಾಗದಲ್ಲಿ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಿಲ್ಲ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ☝ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತದ ತೆರವು ಕಾರ್ಯ ಇದನ್ನೂ ಓದಿ👉 60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಅತ್ಯಾಚಾರ, ಕಾಡಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ...

60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಅತ್ಯಾಚಾರ, ಕಾಡಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು..!

60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಅತ್ಯಾಚಾರ, ಕಾಡಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು..!

 Dandeli Crime News; ದಾಂಡೇಲಿ ತಾಲ್ಲೂಕಿನ ಕುಳಗಿ ಅರಣ್ಯ ಪ್ರದೇಶದಲ್ಲಿ ಗುಂಡಿನ ಸದ್ದು ಮೊಳಗಿದೆ. ತಪ್ಪಿಸಿಕೊಳ್ಳಲು ಯತ್ನಿಸಿದ ಅತ್ಯಾಚಾರ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ಕೊಟ್ಟಿದ್ದಾರೆ. 60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ತಲೆ ಮೆರಸಿಕೊಂಡಿದ್ದ ಆರೋಪಿಯನ್ನು ದಾಂಡೇಲಿ ನಗರಠಾಣೆ ಪೋಲಿಸರು ಬಂಧಿಸುವ ವೇಳೆ ಈ ಘಟನೆ ನಡೆದಿದೆ. ಬಂಧಿತ ಫೈರೋಜ್ ಯರಗಟ್ಟಿ (23) ಎಂಬುವವನ ಕಾಲಿಗೆ ಗುಂಡು ಹಾರಿಸಲಾಗಿದೆ. ಗುರುವಾರ ಮಧ್ಯಾಹ್ನ ಬೈಯಲಪಾರು ಐ.ಪಿ.ಎಮ್ ಏರಿಯಾದ ಹತ್ತಿರದ ಅರಣ್ಯ ಪ್ರದೇಶದಲ್ಲಿ 60 ವಯಸ್ಸಿನ ಅಂಗವಿಕಲ ವೃದ್ದೆಯನ್ನು ಕಾಡಿನ ಪ್ರದೇಶಕ್ಕೆ ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದ. ವಿಷಯ ತಿಳಿದ ಸ್ಥಳೀಯರು ಅತ್ಯಾಚಾರಕ್ಕೊಳಗಾದ ವೃದ್ಧೆಯನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಅತ್ಮಾಚಾರ ಮಾಡಿದ ಆರೋಪಿಯ ಭಾವಚಿತ್ರವನ್ನು ಪೊಲೀಸ್ರು ತೋರಿಸಿದಾಗ ಆರೋಪಿಯನ್ನು ಸಂತ್ತಸ್ಥ ವೃದ್ದೆ ಗುರುತಿಸಿದ್ದಾರೆ. ಹೀಗಾಗಿ, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ರು, ಕಳೆದ ಎರಡು ದಿನಗಳಿಂದ ಆರೋಪಿಗಾಗಿ ಬಲೆ ಬೀಸಿದ್ದರು. ಕುಳಗಿ ಅರಣ್ಯ ಪ್ರದೇಶದಲ್ಲಿ ಪಿಎಸ್ಐ ಕಿರಣ್ ಪಾಟೀಲ್...

ಜೂನ್ 17ರವರೆಗೂ ಭಾರಿ ಮಳೆ ಮುನ್ಸೂಚನೆ: ಉತ್ತರ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್..!

ಜೂನ್ 17ರವರೆಗೂ ಭಾರಿ ಮಳೆ ಮುನ್ಸೂಚನೆ: ಉತ್ತರ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್..!

Heavy Rain Alert; ಬೆಂಗಳೂರು: ನೈಋತ್ಯ ಮುಂಗಾರು ಪ್ರಬಲವಾಗಿದ್ದು, ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ, ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಜೂನ್ 17ರವರೆಗೆ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಲಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ಇದೆ. ಹೀಗಾಗಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. Heavy Rain Alert; ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ, ಧಾರವಾಡ, ಗದಗ, ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಬಳ್ಳಾರಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಇದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಉತ್ತರ ಕರ್ನಾಟಕ,...

ಸ್ಕೂಟಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ..!

ಸ್ಕೂಟಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ..!

Crime News: ಶಿರಸಿ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸ್ಕೂಟಿಯಲ್ಲಿ ಕುಮಟಾ‌ ದಿಂದ ಶಿರಸಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನೀಲೇಕಣಿ ಕ್ರಾಸ್ ಬಳಿ ಬಂಧಿಸಿದ್ದಾರೆ. ಅನುರಾಗ ಗುರು ಜೋಗಳೇಕರ್ (23) , ಸೋಹನ್ ಎಲ್. ಭಂಡಾರಿ‌(23) ಗಾಂಜಾ ಸಾಗಾಟದಲ್ಲಿ ಸಿಕ್ಕಿ ಬಿದ್ದವರು. ಅನುರಾಗ ಶಿರಸಿ ತಾಮೀರ್ ಕೋಅಪರೇಟಿವ್ ಸೊಸೈಟಿ ಹತ್ತಿರದ ನಿವಾಸಿ. ಸೋಹನ್ ಶಿರಸಿ ಬಸ್ ಡಿಪೋ ಹತ್ತಿರದ ನಿವಾಸಿ. ಇವರಿಂದ 101 ಗ್ರಾಂ‌, ಗಾಂಜಾ, ಸ್ಕೂಟಿ ವಶಪಡಿಸಿ ಕೊಳ್ಳಲಾಗಿದೆ. ಡಿವೈಎಸ್ಪಿ ಗೀತಾ,‌ ಸಿಪಿಐ ಶಶಿಕಾಂತ ವರ್ಮ ಮಾರ್ಗದರ್ಶನದಲ್ಲಿ, ಪಿಎಸ್ ಐ ನಾಗಪ್ಪ ‌ಬಿ. ಹನುಮಂತ ಕಬಾಡಿ ಹಾಗೂ ಸಿಬ್ಬಂದಿಗಳು ಗಾಂಜಾ ಆರೋಪಿಗಳನ್ನು ‌ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.

error: Content is protected !!