ಟಿಬೇಟಿಗರ ಲೋಸಾರ್ ಸಂಭ್ರಮಕ್ಕೆ ಬಗೆ ಬಗೆಯ ಖಾದ್ಯ..! ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಲೋಸಾರ್ ಸಂಭ್ರಮ ಜೋರಾಗಿದೆ. ಇಡೀ ಟಿಬೇಟಿಯನ್ ಕಾಲೋನಿಗಳಲ್ಲಿ ಈಗ ಲೋಸಾರ್ ಹಿನ್ನೆಲೆ ಬಗೆ ಬಗೆಯ ತಿಂಡಿ ತಿನಿಸುಗಳದ್ದೇ ಹಬ್ಬ. ಅದ್ರಲ್ಲೂ ಟಿಬೇಟಿಯನ್ ಬೌದ್ದ ಸನ್ಯಾಸಿಗಳು ಸಾಮೂಹಿಕವಾಗಿ ಮಾಡುವ ವಿವಿಧ ಖಾದ್ಯಗಳ ಘಮ ಘಮ ಇಡೀ ಕಾಲೋನಿಗಳಲ್ಲಿ ಪಸರಿಸಿದೆ. ಸಾಮೂಹಿಕವಾಗಿ ಬಗೆ ಬಗೆಯ ತಿನಿಸುಗಳನ್ನು ತಯಾರಿಸೋ ಸನ್ಯಾಸಿಗಳು ಸಂಭ್ರಮಿಸುತ್ತಾರೆ. ಬಗೆ ಬಗೆ ಖಾದ್ಯಗಳನ್ನು ತಯಾರಿಸಲು ಜೊತೆ ಜೊತೆಯಾಗೇ ಸಾಂಘಿಕವಾಗಿ ಸೇರುವ ಸನ್ಯಾಸಿಗಳು ಖುಶಿಯಿಂದಲೇ ಬಂದು ಭಾಗವಹಿಸೋದು ಅವರ ಸಹಬಾಳ್ವೆಗೆ ಸಾಕ್ಷಿಯಾಗಿದೆ.
Top Stories
ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!
ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..! ಅಷ್ಟಕ್ಕೂ, ಪೊಲೀಸ್ ಅಧಿಕಾರಿಯ ಮಗಳಿಗೆ ಏನಾಯ್ತು..?
ಇದು “ಜಬರ್ದಸ್ತ್ ಜಮಖಂಡಿ”ಯ ಮರ್ಡರ್ ಮಿಸ್ಟರಿ..! “ಮಾಯಾಂಗನೆ”ಯ ನೆರಳಲ್ಲಿ ನಡೆದಿತ್ತು ಆ ಭೀಕರ ಹತ್ಯೆ..!
ಇಂದ್ರಾ ನಗರದ ಮೆಹೆಬೂಬ್ ಅಲಿ ಜಮಖಂಡಿ ಮರ್ಡರ್ ಕೇಸ್ ಆರೋಪಿಗಳಿಗೆ ಶಿಕ್ಷೆ ಪ್ರಕಟ..! ಓರ್ವನಿಗೆ ಜೀವಾವಧಿ ಶಿಕ್ಷೆ..!
ಶಿಗ್ಗಾವಿ BEO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ಚಿಗಳ್ಳಿಯ ಪ್ರಸನ್ನ ಜಾಧವ್ ವಿಧಿವಶ, ಹಲವರ ಸಂತಾಪ..!
ಡ್ರಗ್ಸ್ ದಂಧೆ ಮಾಡುತಿದ್ದ 9 ದಂಧೆಕೋರರ ಬಂಧನ, 30 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ..!
ಮುಂಡಗೋಡ ತಾಲೂಕು ಸೇರಿ ಜಿಲ್ಲೆಯ ಹಲವು ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ..!
ನಾಳೆ ಮುಂಡಗೋಡ ತಾಲೂಕಿನಲ್ಲೂ ಶಾಲೆಗಳಿಗೆ ಮಳೆಯ ರಜೆ..!
ಮುಂಡಗೋಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ “ಮಳೆಯ” ರಜೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ 10 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ..!
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!
ಶಿಗ್ಗಾವಿಯಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ..!
ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!
ಮುಂಡಗೋಡ ಪೊಲೀಸರ ಭರ್ಜರಿ ದಾಳಿ, ಪಾಳಾ ಕ್ರಾಸ್ ಬಳಿ ಗಾಂಜಾ ಸಾಗಿಸ್ತಿದ್ದ ಹಾನಗಲ್ಲಿನ ಇಬ್ಬರ ಬಂಧನ..!
ಜನ-ಧನ್ ಅಕೌಂಟ್ಗೆ ಮರು ಕೆವೈಸಿ : ಸೆ.30ಕ್ಕೆ ಡೆಡ್ಲೈನ್ ಫಿಕ್ಸ್ ಮಾಡಿದೆ RBI, ಅಪ್ಡೇಟ್ ಮಾಡುವುದು ಹೇಗೆ..?
ಟಿಬೇಟಿಯನ್ನರ ಲೋಸಾರ್ ಸಂಭ್ರಮದಲ್ಲಿ ಆಟಗಳ ಮೆರಗು.!
ಟಿಬೇಟಿಯನ್ನರ ಲೋಸಾರ್ ಸಂಭ್ರಮದಲ್ಲಿ ಆಟಗಳ ಮೆರಗು.! ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಈಗ ಸಂಭ್ರಮದ ವಾತಾವರಣ ಮನೆ ಮಾಡಿದೆ. ಲೋಸಾರ್ ಹಬ್ಬದ ಸಂಭ್ರಮದಲ್ಲಿ ಕ್ಯಾಂಪ್ ನಂಬರ್ 3 ರ ಮೈದಾನದಲ್ಲಿ ವಿಶೇಷ ಸ್ಪರ್ಧೆಗಳನ್ನ ಆಯೋಜನೆ ಮಾಡಲಾಗಿತ್ತು. ಟಿಬೇಟಿಯನ್ನರ ತಂಡಗಳ ನಡುವೆ ವಿವಿಧ ಸ್ಪರ್ಧೆಗಳು ಏರ್ಪಟ್ಟವು.. ಇಂದು ಟಿಬೇಟಿಯನ್ ಮಹಿಳೆಯರಿಗೆಂದೇ ವಿಶೇಷ ಹಗ್ಗ ಜಗ್ಗಾಟದ ಸ್ಪರ್ದೆ ನಿಜಕ್ಕೂ ರೋಮಾಂಚಕ ಅನುಭವ ನೀಡಿತು.. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ಹಗ್ಗಜಗ್ಗಾಟದ ರಣರೋಚಕ ಸ್ಪರ್ಧೆಯನ್ನ ನೋಡಿ ಸಂಭ್ರಮಿಸಿದ್ರು. ಗೆದ್ದ ತಂಡಗಳಿಗೆ ಆಕರ್ಶಕ ಬಹುಮಾನ ವಿತರಿಸಲಾಯಿತು..
ಹುಲಿಹೊಂಡದಲ್ಲಿ ಆಕಸ್ಮಿಕ ಬೆಂಕಿಗೆ ಕಬ್ಬು ಭಸ್ಮ..!
ಹುಲಿಹೊಂಡದಲ್ಲಿ ಆಕಸ್ಮಿಕ ಬೆಂಕಿಗೆ ಕಬ್ಬು ಭಸ್ಮ..! ಮುಂಡಗೋಡ: ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಕಬ್ಬು ಸುಟ್ಟು ಕರಕಲಾದ ಘಟನೆ ನಡೆದಿದೆ. ಆಕಸ್ಮಿವಾಗಿ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಗದ್ದೆಗೂ ಹರಡುವ ಸಾಧ್ಯತೆ ಇದ್ದ ಕಾರಣಕ್ಕೆ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟರು, ನಂತರ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ರು. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದ್ದು ರೈತನ ಬದುಕು ಮೂರಾಬಟ್ಟೆಯಾಗಿದೆ ಹೀಗಾಗಿ ರೈತನಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
108 ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..!
108 ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..! ಮುಂಡಗೋಡ : ತಾಲೂಕಿನ ಇಂದೂರಿನ ಗ್ರಾಮದ ಗರ್ಭಿಣಿಯೊಬ್ಬಳಿಗೆ 108 ಆಂಬ್ಯುಲೆನ್ಸನಲ್ಲಿ ಹೆರಿಗೆಯಾದ ಘಟನೆ ನಡೆದಿದೆ. 19 ವರ್ಷ ವಯಸ್ಸಿನ ದಾವಲಬಿ ಮಾಬೂಷಾ ಹನಕನಹಳ್ಳಿ ಎಂಬುವ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುಂಡಗೋಡ ತಾಲೂಕಾ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಗರ್ಭಿಣಿಗೆ ಮೊದಲ ಹೆರಿಗೆ ಆಗಿರೋ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿತ್ತು. ಆಂಬ್ಯುಲೆನ್ಸನಲ್ಲಿ ಕರೆ ತರುತ್ತಿರುವಾಗ ವರೂರು ಬಳಿ ಮಹಿಳೆಗೆ ಹೆರಿಗೆ ನೋವು ಕಾಣಿಸಿತು. ಆಗ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಅದರಲ್ಲಿದ್ದ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಬಳೂರು, ಚಾಲಕ ಕೆಂಚೇಶ್ ಅವರು ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ತಾಯಿ, ಮಗು ಆರೋಗ್ಯವಾಗಿದ್ದು, ಕಿಮ್ಸ್ ಗೆ ದಾಖಲಿಸಲಾಗಿದೆ.
ಹಳ್ಳಿ ಹಳ್ಳಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ, ಕಾತೂರಿನಲ್ಲಿ ಸಿಡಿದೆದ್ದ ಮಹಿಳೆಯರು, ಅಬಕಾರಿಗಳೇ ಎಲ್ಲಿದ್ದಿರಿ..?
ಮುಂಡಗೋಡ: ತಾಲೂಕಿನ ಕಾತೂರಿನಲ್ಲಿ ಮಹಿಳೆಯರು ಸಿಡಿದೆದ್ದಿದ್ದಾರೆ. ತಾಲೂಕಿನಲ್ಲಿ ಅಕ್ರಮವಾಗಿ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರೋ ದಂಧೆಗೆ ಕಡಿವಾಣ ಹಾಕಿ ನಮ್ಮನ್ನ ರಕ್ಷಿಸಿ ಅಂತಾ ಅಧಿಕಾರಿಗಳಿಗೆ, ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದಾರೆ. ಕಿರಾಣಿ ಅಂಗಡಿಯಲ್ಲೂ ಮದ್ಯ..? ನಿಜ, ಮುಂಡಗೋಡ ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಅದೇಷ್ಟರ ಮಟ್ಟಿಗೆ ತನ್ನ ಕಬಂದಬಾಹು ಚಾಚಿಕೊಂಡಿದೆ ಅಂದ್ರೆ, ತಾಲೂಕಿನ ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಲ್ಲೂ ಮದ್ಯ ಸಿಗತ್ತೆ. ಅಧಿಕೃತವಾಗಿ ಮಾರಾಟ ಮಾಡೋ ಕೆಲವೇ ಕೆಲವು ಅಂಗಡಿಗಳು ತಮ್ಮ ವೈನ್ ಶಾಪ್ ಗಳಲ್ಲಿ ಕುಳಿತು ಅಧಿಕೃತವಾಗಿ ಮದ್ಯ ಮಾರುವುದು ಅದೇಷ್ಟೋ ಗೊತ್ತಿಲ್ಲ. ಆದ್ರೆ ಹಳ್ಳಿಗಳಲ್ಲಿ ಹೀಗೆ ಮದ್ಯ ಮಾರಾಟಕ್ಕಾಗಿನೇ ಹುಟ್ಟಿಕೊಂಡಿರೋ ಗೂಡಂಗಡಿಗಳು ಇಡೀ ತಾಲೂಕಿನ ಕಾನೂನು ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ಅಬಕಾರಿಗಳು ಮಂತ್ಲಿಗಷ್ಟೇ ಸೀಮಿತ..? ಇನ್ನು, ಹೀಗೆ ತಾಲೂಕಿನ ಗಲ್ಲಿ ಗಲ್ಲಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರೋ ಸಂಗತಿ ಇಲ್ಲಿನ ಅಧಿಕಾರಿಗಳಿಗೆ ಗೊತ್ತಿಲ್ಲವೆಂದೇನಿಲ್ಲ.. ಪೊಲೀಸರಿಗೂ ಗೊತ್ತಿದೆ. ಅಬಕಾರಿಗಳಿಗೂ ಗೊತ್ತಿದೆ. ಆದ್ರೆ, ಅಬಕಾರಿಗಳು ಮಾತ್ರ ಪ್ರತೀ ತಿಂಗಳ ಮೊದಲ ವಾರದಲ್ಲಿ ಬಂದು ಸೂಟಕೇಸ್...
ಇಂದೂರಿನಲ್ಲಿ ಆಕಸ್ಮಿಕ ಬೆಂಕಿಗೆ ಭಸ್ಮವಾದ ಮೇವಿನ ಬಣಿವೆಗಳು..!
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದ ಪ್ರೌಢಶಾಲೆಯ ಬಳಿ ಮೇವಿನ ಬಣಿವೆಗೆ ಬೆಂಕಿ ತಗುಲಿದೆ. ಮದ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಬೆಂಕಿ ತಗುಲಿದ ತಕ್ಷಣವೇ ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟರು. ಇಂದೂರು ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ರಾಯ್ಕರ್ ರವರಿಗೆ ಸೇರಿದ ಮೇವಿನ ಬಣವಿ ಇದಾಗಿದ್ದು, ಜಾನುವಾರುಗಳ ಪಾಲನೆಯಲ್ಲಿ ತೊಡಗಿರುವ ನಿವೃತ್ತ ಶಿಕ್ಷಕರಿಗೆ ಭಾರೀ ನಷ್ಟವಾಗಿದೆ. ಮದ್ಯಾಹ್ನದ ಸಮಯದಲ್ಲಿ ಬೆಂಕಿಯು ಕೆನ್ನಾಲಿಗೆ ಚಾಚಿದ್ದು, ಅಕ್ಕಪಕ್ಕದ ಮನೆಗಳಿಗೂ ಹರಡುವ ಸಾಧ್ಯತೆ ಇತ್ತು, ಆದ್ರೆ ಅದೃಷ್ಟವಶಾತ್ ಬೆಂಕಿ ಹತೋಟಿಗೆ ತರುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.
ಬಾಚಣಕಿ ಡ್ಯಾಂ ನಲ್ಲಿ ಪತ್ತೆಯಾಯ್ತು ಮಹೇಶನ ಶವ..! ಕೊನೆಗೂ ನೀರು ಪಾಲಾಯ್ತು 3 ವರ್ಷದ ಮುಗ್ದ ಪ್ರೀತಿ..!!
ಮುಂಡಗೋಡ; ಬಾಚಣಕಿ ಜಲಾಶಯದಲ್ಲಿ ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಕೊನೆಗೂ ಪತ್ತೆಯಾಗಿದೆ. ಇಂದೂ ಕೂಡ ಬೆಳಿಗ್ಗೆಯಿಂದ ಶೋಧ ಕಾರ್ಯ ಜಾರಿಯಲ್ಲಿತ್ತು. ಆದ್ರೆ ಈಗಷ್ಟೇ ಶವ ಪತ್ತೆಯಾಗಿದೆ. ಇದ್ರೊಂದಿಗೆ ಮೂರು ವರ್ಷಗಳ ಪ್ರೀತಿ ಬಾಚಣಕಿ ಜಲಾಶಯದಲ್ಲಿ ನೀರು ಪಾಲಾಗಿದೆ. ಸೋಮವಾರ ಇದೇ ಬಾಚಣಕಿ ಡ್ಯಾಂ ಅಂಗಳದಲ್ಲಿ ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ ಪಿಯೂ ಎರಡನೇ ವರ್ಷದಲ್ಲಿ ಓದುತ್ತಿದ್ದ ಕಲಕೇರಿ ಗ್ರಾಮದ ತನುಜಾ ಎನ್ನುವ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಅಲ್ಲದೇ, ಆಕೆಯ ಜೊತೆಗೆ ಬಂದಿದ್ದ ಅಂತಾ ಹೇಳಲಾಗಿದ್ದ ಮಹೇಶ್ ಎಂಬುವ ಪ್ರಿಯಕರನ ಪಾದರಕ್ಷೆಗಳು ಜಲಾಶಯದ ದಡದಲ್ಲಿ ದೊರೆತಿದ್ದವು. ಹೀಗಾಗಿ, ವಿದ್ಯಾರ್ಥಿ ಕೂಡ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿತ್ತು. ಆದ್ರೆ, ಇವತ್ತು ಶವ ದೊರೆತ ಹಿನ್ನೆಲೆಯಲ್ಲಿ ಪ್ರೇಮಿಗಳ ಆತ್ಮಹತ್ಯೆ ಖಾತ್ರಿಯಾದಂತಾಗಿದೆ. ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಜಲಾಶಯದಲ್ಲಿ ವಿದ್ಯಾರ್ಥಿಯ ಶವಕ್ಕಾಗಿ ಶೋಧ ನಡೆಸಲಾಗಿತ್ತು. ನಿನ್ನೆಯಿಂದಲೂ ವಿದ್ಯಾರ್ಥಿಯ ಶವಕ್ಕಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು.
“ಹರ್ಷನ ಹತ್ಯೆ” ಮುಂಡಗೋಡಿನಲ್ಲಿ ಮೇಣದ ಬತ್ತಿ ಬೆಳಗಿಸಿ ಹಿಂದುಗಳಿಂದ ಶೃದ್ಧಾಂಜಲಿ..!
ಮುಂಡಗೋಡ: ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹಿಂದು ಯುವಕ, ಭಜರಂಗದಳ ಕಾರ್ಯಕರ್ತ ಹರ್ಷ ಸಾವಿಗೆ ಮುಂಡಗೋಡಿನ ಹಿಂದುಪರ ಸಂಘಟನೆಗಳು ತೀವ್ರ ಸಂತಾಪ ಸೂಚಿಸಿವೆ. ಪಟ್ಟಣದ ಶಿವಾಜಿ ವೃತ್ತದಲ್ಲಿ ಮಂಗಳವಾರ ಸಂಜೆ ಹರ್ಷ ಭಾವಚಿತ್ರಕ್ಕೆ ವಿಶೇಷ ಗೌರವ ಸಲ್ಲಿಸಿದ್ರು. ಮೇಣದ ಬತ್ತಿ ಬೆಳಗಿಸಿ ಶೃದ್ಧಾಂಜಲಿ ಅರ್ಪಿಸಿದ್ರು. ಹಿಂದು ಕಾರ್ಯಕರ್ತನಿಗೆ ಚಿರಶಾಂತಿ ಸಿಗಲಿ ಅಂತಾ ಮೌನಾಚರಣೆ ಮಾಡಿದ್ರು. ಶೀಘ್ರವೇ ಹತ್ಯೆಯ ಆರೋಪಿಗಳನ್ನು ಹೆಡೆಮುರಿ ಕಟ್ಟುವಂತೆ ಸರ್ಕಾರಕ್ಕೆ ಆಗ್ರಹಿಸಿದ್ರು. ಮತ್ತೊಮ್ಮೆ ಹುಟ್ಟಿ ಬಾ “ಹಿಂದು ಕಂದ” ಅಂತಾ ಹಾರೈಸಿದ್ರು. ಈ ವೇಳೆ ಮುಂಡಗೋಡಿನ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ರು.
ಬಾಚಣಕಿ ಡ್ಯಾಂ ನಲ್ಲಿ ನಾಪತ್ತೆಯಾಗಿರೋ ವಿದ್ಯಾರ್ಥಿಗಾಗಿ ಶೋಧ..! ಹಾಗಾದ್ರೆ ಆತ ಏನಾದ..?
ಮುಂಡಗೋಡ; ಬಾಚಣಕಿ ಜಲಾಶಯದಲ್ಲಿ ನಿನ್ನೆ ನಾಪತ್ತೆಯಾಗಿರೋ ವಿದ್ಯಾರ್ಥಿಗಾಗಿ ಇಂದೂ ಕೂಡ ಶೋಧ ಕಾರ್ಯ ಜಾರಿಯಲ್ಲಿತ್ತು. ಆದ್ರೆ ಇದುವರೆಗೂ ವಿದ್ಯಾರ್ಥಿ ಪತ್ತೆಯಾಗಿಲ್ಲ. ನಿನ್ನೆ ಇದೇ ಬಾಚಣಕಿ ಡ್ಯಾಂ ಅಂಗಳದಲ್ಲಿ ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ ಪಿಯೂ ಓದುತ್ತಿದ್ದ ಕಲಕೇರಿ ಗ್ರಾಮದ ತನುಜಾ ಎನ್ನುವ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಅಲ್ಲದೇ, ಆಕೆಯ ಜೊತೆಗೆ ಬಂದಿದ್ದ ಅಂತಾ ಹೇಳಲಾಗಿರೊ ವಿದ್ಯಾರ್ಥಿಯ ಪಾದರಕ್ಷೆಗಳು ಜಲಾಶಯದ ದಡದಲ್ಲಿ ದೊರೆತಿದ್ದವು. ಹೀಗಾಗಿ, ವಿದ್ಯಾರ್ಥಿ ಕೂಡ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ವಿದ್ಯಾರ್ಥಿಯ ಶವಕ್ಕಾಗಿ ಶೋಧ ನಡೆಸಲಾಗಿತ್ತು. ನಿನ್ನೆಯಿಂದಲೂ ವಿದ್ಯಾರ್ಥಿಯ ಶವಕ್ಕಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜು ತಜ್ಞರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಆದ್ರೆ ಇದುವರೆಗೂ ಆ ವಿದ್ಯಾರ್ಥಿ ಏನಾದ ಅನ್ನೊ ಯಾವುದೇ ಸುಳಿವು ಇನ್ನೂ ಪತ್ತೆಯಾಗಿಲ್ಲ.
ಹರ್ಷ ಕೊಲೆಯ ಕಿಚ್ಚು..! ಮುಂಡಗೋಡಿನಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ..!
ಮುಂಡಗೋಡ: ಪಟ್ಟಣದಲ್ಲಿ ಇಂದು ಶ್ರೀರಾಮ ಸೇನೆ ಹಾಗೂ ಹಿಂದೂ ಪರ ಸಂಘಟನೆಗಳು ಬೀದಿಗಿಳಿದಿದ್ದವು. ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೀತು. ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಕೈಗೊಂಡ ಹಿಂದು ಕಾರ್ಯಕರ್ತರು ಶೀಘ್ರವೇ ಹಿಂದು ಕಾರ್ಯಕರ್ತ ಹರ್ಷ ಹತ್ಯೆಯ ಆರೋಪಿಗಳನ್ನ ಬಂಧಿಸಿ, ಅವ್ರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಂತಾ ಅಗ್ರಹಿಸಿದ್ರು. ಈ ವೇಳೆ ನೂರಾರು ಸಂಖ್ಯೆಯ ಹಿಂದು ಕಾರ್ಯಕರ್ತರು ಭಾಗಿಯಾಗಿದ್ರು. ಪ್ರತಿಭಟನೆಗೆ ಗೋ ಮಾತೆ ಸಾಥ್..! ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಹಿಂದು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗೋಮಾತೆಯೊಂದು ಪ್ರತಿಭಟನಾ ಸ್ಥಳಕ್ಕೆ ಬಂದು ನಿರ್ಭಿಡೆಯಿಂದ ಪ್ರತಿಭಟನೆಗೆ ಸಾಥ್ ನೀಡಿತು. ಇದನ್ನು ಕಂಡ ಹಿಂದು ಕಾರ್ಯಕರ್ತರು ಸಂತಸಗೊಂಡರು.