ಮುಂಡಗೋಡ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕಾ ಘಟಕದ ವತಿಯಿಂದ ಇಲ್ಲಿನ ಶಿವಾಜಿ ವೃತ್ತದಲ್ಲಿ ಕನ್ನಡ ದ್ವಜಾರೋಹಣ ನೆರವೇರಿಸಲಾಯಿತು. ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ್ರು. ವಿವಿಧ ರಾಜ್ಯದೆಡೆಯಿಂದ ಬಂದ ಪ್ರತಿಯೊಬ್ಬರೂ ಈ ನಾಡಿನ ಋಣ ತೀರಿಸುವ ಕೆಲಸ ಮಾಡಬೇಕಿದೆ ಇಲ್ಲಿ ದೊರಕುವ ಶಾಂತಿ ಸಂಹಿತೆ ದೇಶದ ಇತರೆ ಕಡೆ ಕಾಣಸಿಗುವುದಿಲ್ಲ ಎಂದ ಅವರು, ತಾಲೂಕಿಗೆ ನೂತನವಾಗಿ ಆಗಮಿಸಿರುವ ಪ್ರವೀಣ ಶೆಟ್ಟಿ ಬಣದಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗಿದೆ ನ್ಯಾಯಕ್ಕಾಗಿ ಬಡವರ ಪರವಾಗಿ ಹೋರಾಡಿ ಭ್ರಷ್ಟತೆ ಹೋಗಲಾಡಿಸಲು ಪಣ ತೊಡಲು ಕರೆ ನೀಡಿದ್ರು. ಈ ವೇಳೆ ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ ದೈವಜ್ಞ, ನಿವೃತ್ತ ಶಿಕ್ಷಕ ಬಸವರಾಜ ಹೂಗಾರ, ನಿವೃತ್ತ ಶಿರಸ್ತೇದಾರ್ ತಳವಾರ, ಸಂಗಮೇಶ್ವರ್ ಸೊಸೈಟಿ ಅಧ್ಯಕ್ಷ ಸಂಗಮೇಶ್ವರ್ ಕೋಳೂರ, ರಕ್ಷಣಾ ವೇದಿಕೆ ರೈತ ಘಟಕದ ಅಧ್ಯಕ್ಷ ರಾಮುಗೌಳಿ, ಸಂಘಟನಾ ಕಾರ್ಯದರ್ಶಿ ಮಣಿಕಂಠ...
Top Stories
ಮರಾಠಾ ಸಮುದಾಯದ ಹಿಂದುಳಿದ ವರ್ಗದವರಿಗೆ, ಆಹಾರ ವಾಹನ ಖರೀದಿಗೆ ಅರ್ಜಿ ಆಹ್ವಾನ
ಉತ್ತರ ಕನ್ನಡ| ಜನನ, ಮರಣವನ್ನು 21 ದಿನಗಳ ಒಳಗೆ ನೋಂದಣಿ ಮಾಡಿ; ಅಪರ ಜಿಲ್ಲಾಧಿಕಾರಿ
ಫೆ.22 ಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ..!
ನಾಳೆಯಿಂದ CBSE 10 ನೇ ತರಗತಿ ಬೋರ್ಡ್ ಪರೀಕ್ಷೆ..!
ತಡಸ ತಾಯವ್ವನ ದೇವಸ್ಥಾನದ ಬಳಿ ಸ್ವಿಪ್ಟ್ ಕಾರಿಗೆ ಬೊಲೆರೋ ವಾಹನ ಡಿಕ್ಕಿ..!
ಶಿವಶಕ್ತಿ ತಂಡಕ್ಕೆ ‘ಗಜಾನನ ಟ್ರೋಫಿ-2026’ ಮಕುಟ; ಗಣೇಶ್ ನಗರದ ದ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾವಳಿ ಸಂಪನ್ನ
KDCC ಬ್ಯಾಂಕ್ ನೂತನ ಅಧ್ಯಕ್ಷರಾಗಿ ಶಿವರಾಮ್ ಹೆಬ್ಬಾರ್ ಆಯ್ಕೆ, ಕೃಷ್ಣ ದೇಸಾಯಿಗೆ ಒಲಿದ ಉಪಾಧ್ಯಕ್ಷ ಸ್ಥಾನ..!
ಮುರುಡೇಶ್ವರದಲ್ಲಿ ಮಹಾಶಿವರಾತ್ರಿಯ ಜಾಗರಣೆ ಉತ್ಸವ, ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ : ಸಚಿವ ಮಾಂಕಾಳ ವೈದ್ಯ
ಹಾವೇರಿಯಲ್ಲಿ ಇಂದು ರಾಜ್ಯ ಮಟ್ಟದ “ಭೂ ಗ್ಯಾರಂಟಿ ಸಮರ್ಪಣಾ” ಸಮಾವೇಶ, ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಸಂಭ್ರಮಕ್ಕೆ ಸಜ್ಜು..!
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಖಡಕ್ ಸೂಚನೆ..!
ನಾಳೆ ನಾಡಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಉಷ್ಣ ಅಲೆ; ಎಚ್ಚರವಹಿಸುವಂತೆ ಜಿಲ್ಲಾಡಳಿತ ಸೂಚನೆ..!
ಕೆಂಪು ಕೋಟೆ ದಾಳಿಗೆ ಜೈಶ್-ಎ-ಮೊಹಮ್ಮದ್ ನಂಟು : ವಿಶ್ವಸಂಸ್ಥೆ ವರದಿ ; ಮಹಿಳಾ ಘಟಕದ ಬಗ್ಗೆ ಎಚ್ಚರಿಕೆ
ಗ್ರಾಮ ಪಂಚಾಯತಿಗಳು ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು; ಸಚಿವ ಮಾಂಕಾಳ ವೈದ್ಯ..!
ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!
“ಸಂಪಾಯಿತಲೇ ಪರಾಕ್” ಶ್ರೀಕ್ಷೇತ್ರ ಮೈಲಾರ ಕಾರ್ಣಿಕ..! ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದ ಗೊರವಯ್ಯ..!
ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ವಿಧಿವಶ..! 33 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸೂಪರ್ ಕಾಪ್..!
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!
ತಟ್ಟಿಹಳ್ಳಿ ಶಿವಾನಂದನ ಹತ್ಯೆ ಯತ್ನ ಕೇಸ್, ಆರೋಪಿಯ ಹೆಡೆಮುರಿ ಕಟ್ಟಿದ ಮುಂಡಗೋಡಿನ ಚಾಣಾಕ್ಷ ಪೊಲೀಸ್ರು..!
ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!
ಮುಂಡಗೋಡಿನಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ರಾಜ್ಯೋತ್ಸವ, ಧ್ವಜಾರೋಹಣ ಮಾಡಿದ ಪಿಐ ಸಿಮಾನಿ
ಬಾಚಣಕಿಯ ಗುತ್ತಿಗೆದಾರ ಬರಮಪ್ಪ ಏಗಪ್ಪನವರ್ ಅಕಾಲಿಕ ನಿಧನ
ಮುಂಡಗೋಡ ತಾಲೂಕಿನ ಬಾಚಣಕಿಯ ಹಿರಿಯ ಗುತ್ತಿಗೆದಾರ ಬರಮಪ್ಪ ಏಗಪ್ಪನವರ್(70) ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರು ಎಳೆದಿರೋ ಬರಮಪ್ಪ ಜನಾನುರಾಗಿಯಾಗಿದ್ದರು. ಮಂಗಳವಾರ ಮದ್ಯಾಹ್ನ ಮನೆಯಲ್ಲಿ ಊಟ ಮುಗಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದ ಬರಮಪ್ಪ, ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದು ಅಸು ನೀಗಿದ್ದಾರೆ. ಮೃತರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ. ಇನ್ನು ಬರಮಪ್ಪ ಏಗಪ್ಪನವರ್ ನಿಧನಕ್ಕೆ ತಾಲೂಕಿನ ಜೈನ ಸಮಾಜ ಕಂಬನಿ ಮಿಡಿದಿದೆ.
ವಿ.ಎಸ್.ಪಾಟೀಲ್ “ಕಮಲ” ತೊರೆದು “ಕೈ” ಹಿಡಿಯೊ ಮುಹೂರ್ತ ಫಿಕ್ಸ್: ಸಂಚಲನ ಪಕ್ಕಾನಾ..?
ಯಲ್ಲಾಪುರ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಮಾಜಿ NWKSRTC ಅಧ್ಯಕ್ಷ ವಿ.ಎಸ್. ಪಾಟೀಲ್ “ಕೈ” ಪಡೆ ಸೇರುವ ಮುಹೂರ್ತ ಫಿಕ್ಸ್ ಆಗಿದೆ. ನೆವೆಂಬರ್ 4 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲೇ ಕಮಲ ತೊರೆದು “ಕೈ” ಹಿಡಿಯಲಿದ್ದಾರೆ ಪಾಟೀಲರು. ಅಂದಹಾಗೆ, ಇವತ್ತು ಬೆಂಗಳೂರಿನಲ್ಲಿ ಇಂತಹದ್ದೊಂದು ತೀರ್ಮಾನ ಹೊರಬಿದ್ದಿದೆ. ಡಿಕೆಶಿ ಭೇಟಿ..! ಅಸಲು, ಹಲವು ತಿಂಗಳುಗಳಿಂದಲೇ ಬಿಜೆಪಿ ಜೊತೆಗಿನ ಸಂಬಂಧ ಕಳೆದುಕೊಂಡಿದ್ದ ವಿಎಸ್ಪಿ, ಬಹುತೇಕ ಕಾಂಗ್ರೆಸ್ಸಿನ ಪಡಸಾಲೆಯಲ್ಲಿ ಒಂದು ಹೆಜ್ಜೆ ಇಟ್ಟಾಗಿತ್ತು. ಆದ್ರೆ, ಕಾಂಗ್ರೆಸ್ ನ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರು ಬ್ಯುಸಿಯಾಗಿದ್ದ ಕಾರಣಕ್ಕೆ ಪಕ್ಷ ಸೇರುವ ದಿನಾಂಕ ಮಾತ್ರ ಬಾಕಿ ಉಳಿಸಿಕೊಳ್ಳಲಾಗಿತ್ತು. ಇವತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರನ್ನು ಹಲವು ಮುಖಂಡರ ಜೊತೆ ಡಿಕೆಶಿ ನಿವಾಸದಲ್ಲೇ ಭೇಟಿಮಾಡಿದ ವಿ.ಎಸ್.ಪಾಟೀಲ್, ಕಾಂಗ್ರೆಸ್ ಸೇರ್ಪಡೆಯ ದಿನಾಂಕ ಪಿಕ್ಸ್ ಮಾಡಿಕೊಂಡಿದ್ದಾರೆ. ಮೊದಲು ಸೇರ್ಪಡೆ ನಂತ್ರ ಸಮಾವೇಶ..! ಬೆಂಗಳೂರಿನಲ್ಲಿ ನಡೆದ ಡಿಕೆಶಿ ಭೇಟಿ ವೇಳೆ ಚರ್ಚಿತವಾದಂತೆ, ನವೆಂಬರ್ 4 ರಂದು ಕೆಪಿಸಿಸಿ ಕಚೇರಿಯಲ್ಲೇ ಪಕ್ಷ ಸೇರ್ಪಡೆ ಕಾರ್ಯಕ್ರಮ...
ಇಂದಿರಾನಗರದ ಬಳಿ ಬೈಕ್ ಅಪಘಾತ ಓರ್ವನಿಗೆ ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಇಂದಿರಾನಗರದ ಬಳಿ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಪರಿಣಾಮ ಬೈಕ್ ನಲ್ಲಿದ್ದ ಓರ್ವನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡಿನಿಂದ ಕಲಘಟಗಿ ಕಡೆಗೆ ಹೋಗುತ್ತಿರುವಾಗ, ಇಂದಿರಾ ನಗರ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಬೈಕ್ ನಲ್ಲಿದ್ದ ಕುಂದಗೋಳ ತಾಲೂಕಿನ ಸುರೇಶ ಶಿವಪ್ಪ ಗುಡಿಯಾಳ್(33) ಎಂಬುವವರಿಗೆ ತಲೆಗೆ ಹಾಗೂ ಮುಖಕ್ಕೆ ಗಾಯವಾಗಿದೆ. ಅದೃಷ್ಟವಶಾತ್ ಮತ್ತೊರ್ವನಿಗೆ ಯಾವುದೇ ಗಾಯವಾಗದೆ ಸುರಕ್ಷಿತವಾಗಿದ್ದಾನೆ. ಇನ್ನು ಅಪಘಾತ ನಡೆದ ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ಗಾಯಾಳುವನ್ನು ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ
ಮುಂಡಗೋಡ ತಾಲೂಕಿನ ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ರಾಜ್ಯ ಸರ್ಕಾರ ಇಂದು ಘೋಷಣೆ ಮಾಡಿದೆ. ಅಂದಹಾಗೆ, ಸಹದೇವಪ್ಪ ನಡಗೇರಿಯವರು ತಾಲೂಕಿನ ಹಿರಿಯ ಜನಪದ ಕಲಾವಿದರಾಗಿದ್ದು, ವಿಶೇಷ ಶೈಲಿಯ ಜನಪದ ಗೀತೆಗಳನ್ನು ಹಾಡುತ್ತ ಜನಮನ ಗೆದ್ದಿದ್ದಾರೆ. ಸದ್ಯ ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸ್ತಿರೋ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ತಾಲೂಕಿನ ಜನರ ಹರ್ಷಕ್ಕೆ ಕಾರಣವಾಗಿದೆ. ಪಬ್ಲಿಕ್ ಫಸ್ಟ್ ನ್ಯೂಸ್ ಪರವಾಗಿ ಸಾಧಕ ಸಹದೇವಪ್ಪ ನಡಗೇರಿಯವರಿಗೆ ಅಭಿನಂದನೆಗಳು
ಕೊಪ್ಪ ಇಂದಿರಾನಗರದಲ್ಲಿ ಹಾಡಹಗಲೇ ಮನೆ ಕಳ್ಳತನ, ಅಪ್ರಾಪ್ತ ಬಾಲಕರ ಕೃತ್ಯವಾ..?
ಮುಂಡಗೋಡ ತಾಲೂಕಿನ ಕೊಪ್ಪ ಇಂದಿರಾನಗರದಲ್ಲಿ ಹಾಡಹಗಲೇ ಮನೆ ಕಳ್ಳತನವಾಗಿದೆ. ಮನೆಯ ಹೆಂಚು ತೆರೆದು ಮನೇಲಿದ್ದ ಹಣ ಎಗರಿಸಿಕೊಂಡು ಹೋಗಿದ್ದಾರೆ. ರೇಣುಕಾ ಬಸವರಾಜ್ ಕುಕ್ಕಾಟಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅಂದಹಾಗೆ, ದೀಪಾವಳಿ ಹಬ್ಬದ ಸಂಭ್ರಮ ಮುಗಿಸಿಕೊಂಡು ಹೊಳೆಯಮ್ಮ ದೇವಿಯ ದರ್ಶನಕ್ಕಾಗಿ ಹೋಗಿದ್ದರು ರೇಣುಕಾ. ಹೀಗಾಗಿ, ಕಳೆದ ಎರಡು ದಿನದಿಂದಲೂ ಮನೆಲಿ ಯಾರೂ ಇಲ್ಲದ್ದನ್ನು ಗಮನಿಸಿ ಹೊಂಚು ಹಾಕಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಇಂದು ಮದ್ಯಾಹ್ನವೇ ಹೆಂಚು ತೆಗೆದು ಮನೆಯೊಳಗೆ ಹೊಕ್ಕಿದ್ದಾರೆ. ನಂತರ ಮನೆಯೊಳಗೆ ಟ್ರೆಂಕ್ ನಲ್ಲಿ ಇಟ್ಟಿದ್ದ ಸುಮಾರು 30 ಸಾವಿರ ಹಣವನ್ನು ಕಳ್ಳತನ ಮಾಡಿಕೊಂಡಿದ್ದಾರೆ. ಈ ವೇಳೆ ಮನೆಯಲ್ಲಿನ ಪಾತ್ರೆಗಳ ಶಬ್ಧವಾಗಿದೆ. ಹೀಗಾಗಿ, ಅಕ್ಕಪಕ್ಕದ ಜನ ಈ ಮನೆಲಿ ಯಾರೋ ಒಳನುಗ್ಗಿದ್ದಾರೆ ಅಂತ ಅನುಮಾನಿಸಿ ಮನೆಯ ಮಾಲೀಕರಿಗೆ ತಿಳಿಸಿದ್ದಾರೆ. ಅಲ್ಲದೇ ಮನೆಯ ಬಾಗಿಲು ತೆರೆದು ನೋಡಿದಾಗ ಇಬ್ಬರು ಬಾಲಕರು ಕೃತ್ಯದಲ್ಲಿ ಭಾಗಿಯಾಗಿರೋದು ಗೊತ್ತಾಗಿದೆ. ಹೀಗಾಗಿ, ತಕ್ಷಣವೇ ಅವ್ರನ್ನ ಹಿಡಿಯಲು ಗ್ರಾಮಸ್ಥರು ಬೆನ್ನತ್ತಿದ್ದಾರೆ. ಆದ್ರೆ ತಕ್ಷಣವೇ ಆ ಇಬ್ಬರು ಬಾಲಕರು...
ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ, ನವೆಂಬರ್ ಅಂತ್ಯಕ್ಕೆ ಬಿಡುಗಡೆ..!
ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್ ನವೆಂಬರ್ ಅಂತ್ಯದ ವೇಳೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಚಿಂತನೆ ನಡೆಸಿದೆ. ಬುಧವಾರ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜೊತೆಗೆ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ಸಿಎಲ್ಪಿ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. “ಎ” ಕೆಟೆಗರಿ ಸಭೆಯಲ್ಲಿ ನವೆಂಬರ್ ಅಂತ್ಯದ ವೇಳೆಗೆ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕಾಂಗ್ರೆಸ್ ಚುನಾವಣಾ ತಂತ್ರಗಾರ ಸುನೀಲ್ ಕುನುಗೋಲು ನೀಡಿರುವ ವರದಿ ಆಧರಿಸಿ ಚರ್ಚೆ ಮಾಡಿದ ನಾಯಕರು ಸುಲಭವಾಗಿ ಗೆಲುವು ಸಾಧಿಸಬಹುದಾದ ಕ್ಷೇತ್ರಗಳನ್ನು ಎ ಕೆಟಗೆರಿಗೆ ಸೇರಿಸಿ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. “ಬಿ” ಕೆಟೆಗರಿ ಗೆಲ್ಲುವ ಅವಕಾಶಗಳು ಹೆಚ್ಚಿರುವ ಕ್ಷೇತ್ರಗಳನ್ನು ಬಿ ಕೆಟಗೆರಿಯಲ್ಲಿ ಸೇರಿಸಿದ್ದು, ಎರಡನೇ ಹಂತದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಮತ್ತು ಗೆಲುವು ಕಷ್ಟ ಎನಿಸಿಕೊಳ್ಳುವ ಕ್ಷೇತ್ರಗಳನ್ನು ಸಿ ವರ್ಗಕ್ಕೆ ಸೇರಿಸಲಾಗಿದೆ....
ವಿಷಕಾರಿ ಹಾವು ಕಚ್ಚಿ ಗರ್ಭಿಣಿ ಮಹಿಳೆ ದಾರುಣ ಸಾವು..!
ವಿಜಯಪುರ: ವಿಷಕಾರಿ ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವು ಕಂಡ ದಾರುಣ ಘಟನೆ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿಯಲ್ಲಿ ನಡೆದಿದೆ. ನಾಲ್ಕು ತಿಂಗಳ ಗರ್ಭಿಣಿ ನಿರ್ಮಲಾ ಯಲ್ಲಪ್ಪ ಚಲವಾದಿ(25) ಹಾವು ಕಚ್ಚಿ ಸಾವು ಕಂಡಿದ್ದಾಳೆ. ಹಾವು ಕಚ್ಚಿದ ವೇಳೆಯಲ್ಲಿ ಹೆಚ್ಚಿನ ಚಿಕಿತ್ಸೆಗೆಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾಳೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ, ಸವದತ್ತಿಯಲ್ಲಿ ಮಡುಗಟ್ಟಿದ ಮೌನ
ಬೆಳಗಾವಿ: ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ(56) ವಿಧಿವಶರಾಗಿದ್ದಾರೆ. ಹೀಗಾಗಿ, ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿರುವ ಆನಂದ ಮಾಮನಿ ನಿವಾಸದಲ್ಲಿ ಮೌನ ಮಡುಗಟ್ಟಿದೆ. ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸವದತ್ತಿಯ ನಿವಾಸಕ್ಕೆ ಆಗಮಿಸಲಿರುವ ಆನಂದ ಮಾಮನಿ ಪಾರ್ಥಿವ ಶರೀರ, ಮನೆಯಲ್ಲಿ ಒಂದು ಗಂಟೆ ಕಾಲ ಪೂಜೆ ಹಾಗೂ ಕುಟುಂಬಸ್ಥರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ತಾಲೂಕು ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ, ಮಧ್ಯಾಹ್ನ 3 ಗಂಟೆಗೆ ಯಡ್ರಾವಿ ರಸ್ತೆಯ ಚಂದ್ರಮಾ ಫಾರ್ಮ್ಹೌಸ್ನಲ್ಲಿ ಲಿಂಗಾಯತ ಧರ್ಮದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನಡೆಯಲಿದೆ.
ಚಿಗಳ್ಳಿ ಪ್ರೌಢಶಾಲೆಯ ಕಂಪೌಂಡ್ ರಾತ್ರೋ ರಾತ್ರಿ ಕೆಡವಿ ಹಾಕಿದ ದುಷ್ಟರು, ಅಯ್ಯೋ, ಜ್ಞಾನದೇಗುಲದ ಮೇಲೆ ಇದೇಂಥಾ ವಿಕೃತಿ..?
ಮುಂಡಗೋಡ ತಾಲೂಕಿನಲ್ಲಿ ಕಾನೂನಿನ ಭಯವೇ ಹೊರಟು ಹೋಯ್ತಾ..? ಅಥವಾ ಆನೆ ನಡೆದದ್ದೇ ದಾರಿ ಅನ್ನುವ ಹುಂಬತನವಾ..? ಅಥವಾ ಬಂಢತನವಾ..? ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ರಾತ್ರೋ ರಾತ್ರಿ ಸಾರ್ಕಾರದ ಆಸ್ತಿಯೊಂದನ್ನ ಅನಾಮತ್ತಾಗಿ ಕೆಡವಿ ಹಾಕಲಾಗಿದೆ. ಚಿಗಳ್ಳಿಯ ದಿ. ದೇವಕಿ ಚಾಯಪ್ಪ ಕಲಾಲ್ ಸರ್ಕಾರಿ ಪ್ರೌಢಶಾಲೆಯ ಕಂಪೌಂಡ್ ನೆಲಸಮ ಮಾಡಿದ್ದಾರೆ ಕಿಡಿಗೇಡಿಗಳು..! ಆದ್ರೆ, ಯಾರು ಅಂದ್ರೆ ಯಾರೂ ಈ ಬಗ್ಗೆ ಮಾತಾಡ್ತಿಲ್ಲ.. ಇಡೀ ತಾಲೂಕಾಡಳಿತವೇ ಮೌನವಹಿಸಿದೆ.. ಈ ಕ್ಷಣದವರೆಗೂ ಯಾವೊಬ್ಬ ಅಧಿಕಾರಿಗಳೂ ತುಟಿ ಬಿಚ್ಚಿಲ್ಲ. ಇತಿಹಾಸವಿದೆ..! ಅಂದಹಾಗೆ, ಚಿಗಳ್ಳಿಯ ಸರ್ಕಾರಿ ಪ್ರೌಢಶಾಲೆ ದಶಕಗಳ ಇತಿಹಾಸ ಹೊಂದಿರೋ ಪ್ರೌಢಶಾಲೆ. ಇದೇ ಶಾಲೆಯಲ್ಲಿ ಕಲಿತು ಇವತ್ತು ಅದೇಷ್ಟೋ ಪ್ರತಿಭಾನ್ವಿತರು ಉನ್ನತ ಹುದ್ದೆಗಳಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಎಂ.ಸಿ.ಕಲಾಲರು ಈ ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ಬೇಕಾಗಿದ್ದ ಜಾಗವನ್ನು ದಾನ ನೀಡಿ ಉಧಾರತೆ ತೋರಿದ್ದರು. ಹೀಗಾಗಿನೇ ಕಳೆದ ಕೆಲ ದಿನಗಳ ಹಿಂದೆ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ದಾನಿಗಳು ಸೇರಿದಂತೆ ಹಲವರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಆದ್ರೆ, ಈಗ ಅದೇ ಪ್ರೌಢಶಾಲೆಯ ಅಂಗಳದಲ್ಲಿ...









