Road Problem; ಮುಂಡಗೋಡ ತಾಲೂಕಿನ ಹುನಗುಂದದ ವಡಗಟ್ಟಾ ರಸ್ತೆ ಗೋಳು ಕೇಳುವವರೇ ಇಲ್ಲವೆನೊ..? ಯಾಕಂದ್ರೆ ಗ್ರಾಮದ ವಿರಕ್ತ ಮಠದ ಹತ್ತಿರ, ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಹತ್ತಿರ ರಸ್ತೆ ಅನ್ನೋದು ಹೊಂಡ ಮಯವಾಗಿದೆ. ವಾಹನಗಳಿರಲಿ, ಇಲ್ಲಿ ನಡೆದಾಡಲೂ ಆಗದ ಸ್ಥಿತಿ ಇದೆ. ಆದ್ರೆ, PWD ಅಧಿಕಾರಿಗಳು ಮಾತ್ರ ಈ ಕಡೆ ತಿರುಗಿಯೂ ನೋಡಿಲ್ಲ. ನೀವು, ಹುನಗುಂದ ಗ್ರಾಮಕ್ಕೆ ಬಂದಿದ್ದರೆ, ಗ್ರಾಮ ಪಂಚಾಯತಿಯ ಎದುರಿನ ವಡಗಟ್ಟಾ ರಸ್ತೆಗೆ ಬರಬೇಕು, ಅಸಲು, ಇಲ್ಲಿ ಕಾಂಕ್ರೀಟ್ ರಸ್ತೆ ಇದೆ. ಅದ್ರಿಂದ ಹಾಗೇ, ಮುಂದೆ ಬಂದ್ರೆ ಅಲ್ಲಿ ವಿರಕ್ತ ಮಠದ ಪಕ್ಕದ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದೆ. ಮಳೆಗಾಲವಾದ್ರಿಂದ ಗುಂಡಿಯಲ್ಲಿ ನೀರು ತುಂಬಿ ಅಕ್ಷರಶಃ ಕೆರೆಯಂತಾಗಿದೆ. ಈ ಬಗ್ಗೆ ಅದೇಷ್ಟು ಸಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾರೂ ಕ್ಯಾರೇ ಅಂದಿಲ್ಲ ಅನ್ನೋದು ಗ್ರಾಮಸ್ಥರ ಆಕ್ರೋಶವಾಗಿದೆ. ಗುಂಡಿಯಾದ್ರೂ ಮುಚ್ಚಬೇಕಲ್ವಾ..? ಈ ಲೋಕೋಪಯೋಗಿ ಅಧಿಕಾರಿಗಳಿಗೆ ಇವೇಲ್ಲ ಬಹುಶಃ ಕಣ್ಣಿಗೆ ಕಂಡಿಲ್ಲ ಅನಿಸತ್ತೆ. ಭಾರೀ ಪ್ರಮಾಣದ ಗುಂಡಿಗಳು ಬಿದ್ದು ವಾಹನ ಸವಾರರು...
Top Stories
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
School holiday News; ನಿರಂತರ ಮಳೆ; ಜಿಲ್ಲೆಯ 4 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆ ರಜೆ..!
School Holiday News; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ, ನಾಳೆ ಜುಲೈ 4 ರಂದು ಉತ್ತರ ಕನ್ನಡ ಜಿಲ್ಲೆಯ 4 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.
ಹುನಗುಂದದಲ್ಲಿ ಅನಾರೋಗ್ಯಕ್ಕೀಡಾದ ಶಿವಯ್ಯನವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ, ಶಾಸಕ ಹೆಬ್ಬಾರ್..!
Hebbar News; ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮಕ್ಕೆ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಶಾಸಕ ಶಿವರಾಮ್ ಹೆಬ್ಬಾರ್, ಗ್ರಾಮದ ಅನಾರೋಗ್ಯಕ್ಕೆ ಈಡಾಗಿರೋ ಶಿವಯ್ಯ ತೋಟಯ್ಯ ತೋಟಯ್ಯನವರ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ರು. ಕೆಲಹೊತ್ತು ಕುಳಿತು ಶಿವಯ್ಯರವರನ್ನು ಮಾತನಾಡಿಸಿ, ದೈರ್ಯ ತುಂಬಿದ್ರು. ಬೇಗ ಗುಣಮುಖರಾಗುವಂತೆ ಹಾರೈಸಿದರು. ಈ ವೇಳೆ ಹಲವರು ಶಾಸಕರಿಗೆ ಸಾಥ್ ನೀಡಿದ್ರು. ಇದನ್ನೂ ಓದಿ👉 ಅಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 20 ವರ್ಷ ವಯಸ್ಸಿನ ಯುವತಿ..! ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!
ಅಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 20 ವರ್ಷ ವಯಸ್ಸಿನ ಯುವತಿ..!
Death News; ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಯುವತಿಯೋರ್ವಳು ನೇಣಿಗೆ ಕೊರಳೊಡ್ಡಿದ್ದಾಳೆ. ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಗಡಿ ಗ್ರಾಮದ ಅನ್ನಪೂರ್ಣ ರಾಮಣ್ಣ ಲಮಾಣಿ(20), ಎಂಬುವವಳೆ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಅಸಲೀ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ👉 ಹುನಗುಂದದಲ್ಲಿ ಅನಾರೋಗ್ಯಕ್ಕೀಡಾದ ಶಿವಯ್ಯನವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ, ಶಾಸಕ ಹೆಬ್ಬಾರ್..! ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!
ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!
Shivaram Hebbar; ಮುಂಡಗೋಡ; ಶಾಸಕ ಶಿವರಾಮ ಹೆಬ್ಬಾರ್ ಅವರು ಇಂದು ಹುನಗುಂದ ಗ್ರಾಮದ ವಿರಕ್ತಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳೆಯರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಮ.ನಿ.ಪ್ರ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತಮಠ ಹಾಗೂ ಮಾತೆ ಬಸವೇಶ್ವರಿ ಬಸವಧಾಮ ಅತ್ತಿವೇರಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ; ನಿರ್ಲಕ್ಷ ಆರೋಪ PSI ಸಸ್ಪೆಂಡ್..!
PSI Suspended; ಬೆಳಗಾವಿ ಜಿಲ್ಲೆಯ ಇಂಗಳಿ ಗ್ರಾಮದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣದಲ್ಲಿ ಓರ್ವ ಪೊಲೀಸ್ ಅಧಿಕಾರಿ ತಲೆದಂಡವಾಗಿದೆ. ಗೋವು ಸಮೇತ ಠಾಣೆಗೆ ಹೋಗಿದ್ದ ಶ್ರೀರಾಮ ಸೇನೆ ಕಾರ್ಯಕರ್ತರ ದೂರು ಆಲಿಸದೇ, ಫ್ಐಆರ್ ಮಾಡದೇ ಬಿಟ್ಟು ಕಳ್ಸಿ ನಿರ್ಲಕ್ಷ್ಯ ತೋರಿದ ಪಿಎಸ್ಐ ಅಮಾನತುಗೊಂಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್ಐ ನಿಖಿಲ್ ಕಾಂಬ್ಳೆ ಅಮಾನತು ಆಗಿದ್ದು, ಅಮಾನತು ಮಾಡಿ ಎಸ್ಪಿ ಭೀಮಾಶಂಕರ್ ಗುಳೇದ್ ಆದೇಶ ಹೊರಡಿಸಿದ್ದಾರೆ. ಜೂನ್ 26 ರಂದು ಗೋವು ಸಾಗಿಸುತ್ತಿದ್ದ ವಾಹನ ಹಿಡಿದು ಠಾಣೆಗೆ ತಂದಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು. ಈ ವೇಳೆ ಕೇಸ್ ದಾಖಲಿಸದೇ ಬಿಟ್ಟು ಕಳ್ಸಿದ್ದ ಪಿಎಸ್ಐ. ಘಟನೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರದೇ ಬೇಜವಾಬ್ದಾರಿ ತೋರಿದ್ದ ಆರೋಪ, ಗಡಿಪಾರಾದ ರೌಡಿ ಶೀಟರ್ ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆಯನ್ನ ಕೂಡ ಪಿಎಸ್ಐ ಬಿಟ್ಟು ಕಳ್ಸಿದ್ದರು . ಹೀಗಾಗಿ, ಎಲ್ಲ ಅಂಶಗಳನ್ನ ಪರಿಗಣಿಸಿ ಎಸ್ಪಿ ಅಮಾನತು ಆದೇಶ ಮಾಡಿದ್ದಾರೆ. ಜುಲೈ 3ರಂದು ಇಂಗಳಿ ಚಲೋ...
ಬಾಂಬ್ ಸ್ಪೋಟದ ಆರೋಪಿ ಬಂಧನ, 30 ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕ ಆರೋಪಿ..!
Suspect Arrested; ಬೆಂಗಳೂರು ನಗರ ಸೇರಿ ದಕ್ಷಿಣ ಭಾರತದ ಹಲವು ಬಾಂಬ್ ಸ್ಫೋಟ ಪ್ರಕರಣಗಳ ಪ್ರಮುಖ ಆರೋಪಿಯನ್ನು 30 ವರ್ಷಗಳ ಬಳಿಕ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ನಾಗೂರು ನಿವಾಸಿ ಅಬೂಬಕರ್ ಸಿದ್ದಿಕ್ (60) ಬಂಧಿತ ಉಗ್ರ ಎಂದು ಹೇಳಲಾಗಿದೆ. ಈತ 1995ರಿಂದ ತಲೆ ಮರೆಸಿಕೊಂಡಿದ್ದ. ಈತನನ್ನು ತಮಿಳುನಾಡು ಪೊಲೀಸರು ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಈತ ನಿಷೇಧಿತ ಸಂಘಟನೆಗಳಾದ ತಮಿಳುನಾಡಿದ ಅಲ್ ಉಮ್ಮ ಸೇರಿ ಹಲವು ಸಂಘಟನೆಗಳಿಗೆ ನೇಮಕಾತಿ ಮಾಡುತ್ತಿದ್ದ ಆರೋಪಿಯಾಗಿದ್ದ. ಈತನ ಜೊತೆಗಿದ್ದ ಮೊಹಮ್ಮದ್ ಅಲಿಯನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ. ಈತ 1999ರಿಂದ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ. Suspect Arrested; ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಸಿದ್ದಿಕ್ ಆರೋಪಿಯಾಗಿದ್ದಾನೆ. 1999ರ ಬೆಂಗಳೂರು ಸ್ಫೋಟ, 2013ರ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಸ್ಫೋಟ, 2011ರಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ನೇತೃತ್ವದ ರಥಯಾತ್ರೆಯ ಮೇಲೆ ಮಧುರೈಯಲ್ಲಿ ನಡೆದ ಪೈಪ್ ಬಾಂಬ್ ದಾಳಿ, 1991ರ ಚೆನ್ನೈ ಹಿಂದೂ ಮುನ್ನಣಿ ಕಾರ್ಯಾಲಯದ ಮೇಲೆ...
ಮುಂಡಗೋಡ ಕ್ರೈಂ ಪೊಲೀಸರ ಭರ್ಜರಿ ಕಾರ್ಯಾಚರಣೆ..!? ತೆಗ್ಗಿನಕೊಪ್ಪ ಬಳಿ “ಅಂದರ್ ಬಾಹರ್” ನಲ್ಲಿ ತೊಡಗಿದ್ದವರ “ಖೇಲ್” ಖತಂ..!?
Mundgod Police News; ಮುಂಡಗೋಡಿನ ಕ್ರೈಂ ಪಿಎಸ್ಐ ವಿನೋದ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ, ಮುಂಡಗೋಡ ತಾಲೂಕಿನ ತೆಗ್ಗಿನಕೊಪ್ಪದ ಬಳಿ, ಅಕ್ರಮವಾಗಿ ಹುಟ್ಟಿಕೊಂಡಿದ್ದ ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿ, ಏನಿಲ್ಲವೆಂದರೂ 6 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರೋ ಮಾಹಿತಿ ಲಭ್ಯವಾಗ್ತಿದೆ. ಏನಿಲ್ಲವೆಂದರೂ ಎರಡೂವರೇ ಲಕ್ಷಕ್ಕೂ ಹೆಚ್ಚು ಹಣವನ್ನು ಜಪ್ತಿ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ. ಶಿರಸಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ನಡೆದಿರೋ ದಾಳಿ ಎನ್ನಲಾಗಿದ್ದು, ಈ ಕ್ಷಣಕ್ಕೂ ಯಾವುದೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅಸಲು, ಆ ಇಸ್ಪೀಟು ಅಡ್ಡೆಯಲ್ಲಿ 20 ಕ್ಕೂ ಹೆಚ್ಚು ಜನ ಆಟದಲ್ಲಿ ಬ್ಯುಸಿಯಾಗಿದ್ರಂತೆ, ಇದೇ ವೇಳೆ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿರೋ ಕ್ರೈಂ ಟೀಂ ಎರಡೂವರೇ ಲಕ್ಷ ಹಣ, 10ಕ್ಕೂ ಹೆಚ್ಚು ಬೈಕ್, ಒಂದು ಕಾರ್ ಸೇರಿದಂತೆ ಕೆಲ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಸಮೀಪ, ತೆಗ್ಗಿನಕೊಪ್ಪದ ಬಳಿ ಇರುವ ಸಿಮೆಂಟ್...
ಚಿಗಳ್ಳಿ ಪ್ರೌಢಶಾಲೆಯಲ್ಲಿ ಆ “ಮಾಜಿ”ಗಳ ವಿರುದ್ಧ ಪಾಲಕರ ಆಕ್ರೋಶ; ಅಷ್ಟಕ್ಕೂ, ಆ ಆರೋಪಗಳೇಲ್ಲ ನಿಜವಾ..? ಹಾಗಿದ್ರೆ ತನಿಖೆ ಯಾವಾಗ..?
Education Department News; ಮುಂಡಗೋಡ ತಾಲೂಕಿನ ಚಿಗಳ್ಳಿ ಸರ್ಕಾರಿ ಪ್ರೌಢಶಾಲೆಯ ಹಕೀಕತ್ತುಗಳು ದಿನಕ್ಕೊಂದು ತಿರುವು ಪಡೆದುಕೊಳ್ತಿವೆ. ಕಳೆದ ಎರಡು ದಿನಗಳ ಹಿಂದಷ್ಟೇ, ಈ ಶಾಲೆಯ ಕೆಲವು ಪಾಲಕರು, ಹಲವು ವಿಷಯಗಳ ಒಕ್ಕಣಿಕೆ ಬರೆದು ಬಿಇಓ, ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳಿಗೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಪಬ್ಲಿಕ್ ಫಸ್ಟ್ ನ್ಯೂಸ್ ಕೂಡ ವರದಿ ಮಾಡಿತ್ತು. ಇದು ದೂರಿಗೆ, ಪ್ರತಿದೂರು..! ಆದ್ರೆ ಇದೀಗ, ಅದೇ ಪ್ರೌಢಶಾಲೆಯ ಅಂಗಳದಿಂದ ಮತ್ತೊಂದು ಪ್ರತಿದೂರು ಬಂದಿದೆ. ಅಸಲು ಸದ್ಯ ಬಂದಿರೋ ಪ್ರತಿದೂರಿನಲ್ಲಿ ಹಲವು ಆರೋಪಗಳನ್ನು ಮಾಡಲಾಗಿದೆ. ಎರಡು ದಿನದ ಹಿಂದೆ ನೀಡಿರೋ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ, ಬದಲಾಗಿ ಅದೇಲ್ಲ ಸುಳ್ಳು ಆರೋಪವಾಗಿದೆ. ಶಾಲೆಯ ಪರಿಸರವನ್ನು ಹಾಳು ಮಾಡಲು ಕೆಲವರು ಕುತಂತ್ರ ಮಾಡ್ತಿದಾರೆ ಅಂತಾ ಸದ್ಯ ಅದೇ ಶಾಲೆಯ ಕೆಲ ಪಾಲಕರು ಆರೋಪಿಸಿದ್ದಾರೆ. ಇನ್ನು, ಬಿಇಓ, ಡಿಡಿಪಿಐ ಗೆ ಮನವಿ ಪತ್ರ ಬರೆದು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ. ಸುಳ್ಳು ಹೇಳಿ...
ಮುಂಡಗೋಡಿನ ಇಂದಿರಾನಗರ ಬಳಿ ಬೈಕ್ ಅಪಘಾತ, ಇಂದೂರಿನ ವ್ಯಕ್ತಿಗೆ ಗಂಭೀರ ಗಾಯ..!
Bike Accident; ಮುಂಡಗೋಡ ತಾಲೂಕಿನ ಇಂದಿರಾನಗರ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಅಂಬುಲೆನ್ಸ್ ಗೆ ಕರೆಮಾಡಿದ್ರೂ ಅಂಬುಲೆನ್ಸ್ ದೊರೆಯದ ಹಿನ್ನೆಲೆಯಲ್ಲಿ ಟಾಟಾ ಎಸ್ ವಾಹನದಲ್ಲಿ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಅಂದಹಾಗೆ, ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಇಂದೂರು ಗ್ರಾಮದವನು ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ, ಹೆಸರು ತಿಳಿದುಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









