ಆದಯಕ್ಕೂ ಮೀರಿ ಆಸ್ತಿ ಗಳಿಕೆ ಪೊಲೀಸ್ ಇನ್ಸಪೆಕ್ಟರ್ (CPI) ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ..!

ಆದಯಕ್ಕೂ ಮೀರಿ ಆಸ್ತಿ ಗಳಿಕೆ ಪೊಲೀಸ್ ಇನ್ಸಪೆಕ್ಟರ್ (CPI) ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ..!

Lokayukta raid; ಗದಗ ಶಹರ ಠಾಣೆ ಪಿಐ ಡಿ.ಬಿ.ಪಾಟೀಲ್ ಗೆ ಲೋಕಾತುಕ್ತರು ಬಿಸಿ ಮುಟ್ಟಿಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆಯ ಆರೋಪದಲ್ಲಿ ರೇಡ್ ಮಾಡಲಾಗಿದ್ದು, ಬೆಳ್ಳಂ ಬೆಳಿಗ್ಗೆ ಬ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗಿದೆ. ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಡಿ ಬಿ ಪಾಟೀಲ್ ಮನೆ ದಾಳಿ ನಡದಿದ್ದು, ಪಾಟೀಲ್ ಗೆ ಸೇರಿದ ಏಳು ಜಾಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. Lokayukta raid; ಗದಗಿನ ಶಿವಾನಂದ ನಗರದ ಬಾಡಿಗೆ ಮನೆ ಹಾಗೂ ಗದಗ ಶಹರ ಪೊಲೀಸ್ ಠಾಣೆಯ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಸಿಪಿಐ ಡಿ ಬಿ ಪಾಟೀಲ್ ಗೆ ಸೇರಿದ ಬಾಗಲಕೋಟೆ, ಜಮಖಂಡಿ, ಕೆರೂರು ಮನೆಗಳ ಮೇಲೂ ದಾಳಿ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ ಎಸ್ ಪಾಟೀಲ, ಲೋಕಾ ಸಿಪಿಐ ಪರಶುರಾಮ ಕವಟಗಿ ನೇತೃತ್ವದಲ್ಲಿ ದಾಳಿ ನಡೆದಿದೆ‌.

ಜೋಗನ ಹಕ್ಕಲು ಫಾಲ್ಸ್ ನಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಶಿರಸಿ ಯುವಕ..!

ಜೋಗನ ಹಕ್ಕಲು ಫಾಲ್ಸ್ ನಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಶಿರಸಿ ಯುವಕ..!

Death News: ಶಿರಸಿ :ಪವನ್ ಗಣಪತಿ ಜೋಗಿ ಎಂಬ ಯುವಕ ತನ್ನ ಸ್ನೇಹಿತ ವಾಸುದೇವ್ ಶಶಿಧರ್ ನಾಯ್ಕ್ ನೊಂದಿಗೆ ಬೆಳಿಗ್ಗೆ 11:30 ಗಂಟೆಗೆ ಮನೆಯಿಂದ ಹೊರಟು ಮತ್ತಿಘಟ್ಟ ಹತ್ತಿರದ ಜೋಗನ ಹಕ್ಕಲು ಫಾಲ್ಸ್ ನೋಡಲು ಹೋಗಿದ್ದು, ಫಾಲ್ಸ್ ಹತ್ತಿರ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನ ದಾಟುವಾಗ ಕಾಲು ಜಾರಿ ಬಿದ್ದು ಹಳ್ಳ ದಲ್ಲಿ ಕೊಚ್ಚಿಕೊಂಡು ಹೋಗಿ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ತಾಲೂಕಿನ ಸೋಮನಳ್ಳಿ ಗ್ರಾಮದ ಉಂಬಳೆಕೊಪ್ಪದ ಪವನ್ (24) ಎಂಬುವ ಯುವಕನೇ ಕಣ್ಮರೆಯಾಗಿದ್ದಾನೆ. ಹೀಗಾಗಿ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು, ಪ್ರವೀಣ್ ಜೋಗಿ ಕಣ್ಮರೆ ಯಾದ ತನ್ನ ತಮ್ಮನನ್ನು ಹುಡುಕಿಕೊಡುವಂತೆ ದೂರು ನೀಡಿದ್ದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೋಗಿ ಕಣ್ಮರೆಯಾದ ಪವನ್ ನನ್ನ ಹುಡುಕಿದರೂ ಫಲಕಾರಿಯಾಗಿಲ್ಲ. ರಾತ್ರಿಯಾದ್ದರಿಂದ ಬೆಳಿಗ್ಗೆ ಮತ್ತೆ ಈಜು ತಜ್ಞರೊಂದಿಗೆ ಹುಡುಕುವ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

ಶಿರಸಿಯಲ್ಲಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು, 33 ವರ್ಷದಿಂದ ತಲೆ ಮರೆಸಿಕೊಂಡಿದ್ದವ ಅಂದರ್ ಆದ..!

ಶಿರಸಿಯಲ್ಲಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು, 33 ವರ್ಷದಿಂದ ತಲೆ ಮರೆಸಿಕೊಂಡಿದ್ದವ ಅಂದರ್ ಆದ..!

Sirsi Crime News; ಶಿರಸಿ: ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ಆತನ ಸಾವಿಗೆ ಕಾರಣವಾಗಿದ್ದ, ಆರೋಪಿಯೋರ್ವ ಕಳೆದ 33 ವರ್ಷಗಳಿಂದ ಭೂಗತನಾಗಿದ್ದ, ಆದ್ರೂ ಬಿಡದೇ ಪತ್ತೆ ಹಚ್ಚಿ ಹೆಡೆಮುರಿ ಕಟ್ಟಿರೋ ಶಿರಸಿ ಪೊಲೀಸರು ಹಳೆಯ ಪ್ರಕರಣಕ್ಕೆ ಮರಿಜೀವ ಕೊಟ್ಟಿದ್ದಾರೆ. ಅಂದಹಾಗೆ, 1992 ರಲ್ಲಿ ಶಿರಸಿಯಲ್ಲಿ ಮಾರ್ಷಲ್ ಲೂಯಿಸ್ ಕ್ಯಾಸ್ತಲಿನ್ ಕಾರ್ಕಳ ಎಂಬಾತ, ವಾಸು ಗೌಡಿ ಎಂಬ ಸೈಕಲ್ ಸವಾರನಿಗೆ ನಿರ್ಲಕ್ಷ ಚಾಲನೆಯಿಂದ ಅಪಘಾತ ಪಡಿಸಿ ಆತನ ಸಾವಿಗೆ ಕಾರಣವಾಗಿದ್ದನು. ಈ ಕುರಿತು ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿ 33 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಇಂದು ಈತನನ್ನು ಮೂಡಬಿದ್ರೆ ನಿಡ್ಡೋಡಿ ಯಲ್ಲಿ ಪತ್ತೆ ಮಾಡಿ ಶಿರಸಿ ಪೊಲೀಸ್ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಗರ ಠಾಣೆ ಪಿಎಸ್ಐ ನಾಗಪ್ಪ. ಬಿ, ಗ್ರಾಮೀಣ ಠಾಣೆ ಪಿಎಸ್ಐ ನಾರಾಯಣ ರಾಟೋಡ್(ಕ್ರೈಂ), ಎ. ಎಸ್. ಐ ನೆಲ್ಸನ್ ಮೊಂತೆರೊ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ

ಸೆನ್ಸೆಕ್ಸ್ 511 ಪಾಯಿಂಟ್ಸ್ ನಷ್ಟ, ಸೋಮವಾರ ಭಾರತದ ಷೇರುಪೇಟೆ ಕುಸಿತಕ್ಕೆ 5 ಕಾರಣಗಳು..!

ಸೆನ್ಸೆಕ್ಸ್ 511 ಪಾಯಿಂಟ್ಸ್ ನಷ್ಟ, ಸೋಮವಾರ ಭಾರತದ ಷೇರುಪೇಟೆ ಕುಸಿತಕ್ಕೆ 5 ಕಾರಣಗಳು..!

Stock Market Highlights: ಭಾರತದ ಷೇರು ಮಾರುಕಟ್ಟೆ ಸೋಮವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 500ಕ್ಕೂ ಅಧಿಕ ಪಾಯಿಂಟ್ಸ್ ಇಳಿಕೆಗೊಂಡಿದೆ. ಒಂದು ಹಂತದಲ್ಲಿ 900 ಪಾಯಿಂಟ್ಸ್‌ವರೆಗೆ ಇಳಿಕೆಯಾಗಿದ್ದ ಬಿಎಸ್‌ಇ ಸೂಚ್ಯಂಕವು ಕೊನೆಗೆ ಚೇತರಿಕೆ ಸಾಧಿಸಿ 511 ಪಾಯಿಂಟ್ಸ್ ಇಳಿಕೆಯಾಗಿ 81896 ಮಾರ್ಕ್‌ನಲ್ಲಿ ಮುಚ್ಚಿತು. ಇದೇ ವೇಳೆಯಲ್ಲಿ ನಿಫ್ಟಿ50 ಸೂಚ್ಯಂಕವು 140 ಪಾಯಿಂಟ್ಸ್ ಅಥವಾ 0.56 ಪರ್ಸೆಂಟ್ ಇಳಿಕೆಯಾಗಿ 25,000 ಗಡಿಯಿಂದ ಕೆಳಗಿಳಿದಿದೆ ಹಾಗೂ 24,971.90 ಮಾರ್ಕ್‌ನಲ್ಲಿ ಕೊನೆಗೊಂಡಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಹಾಗೂ ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಔಟ್‌ಪರ್ಫಾಮೆನ್ಸ್ ನೀಡಿದ್ದು, 0.20 ಪರ್ಸೆಂಟ್ ಮತ್ತು 0.57 ಪರ್ಸೆಂಟ್‌ ಏರಿಕೆಯಾಗಿದೆ. ಬಿಎಸ್‌ಇ ಲಿಸ್ಟೆಂಡ್ ಕಂಪನಿಗಳ ಮಾರುಕಟ್ಟೆ ಮೌಲ್ಯವು ಬಹುತೇಕ ಬದಲಾವಣೆ ಆಗದೆ 448 ಲಕ್ಷ ಕೋಟಿ ರೂಪಾಯಿಗಳಲ್ಲಿ ಉಳಿದಿದ್ದು, ಸ್ಮಾಲ್‌ ಕ್ಯಾಪ್‌ ಹಾಗೂ ಮಿಡ್‌ ಕ್ಯಾಪ್ ಸೆಗ್ಮೆಂಟ್‌ನ ಚೇತರಿಕೆಯಿಂದಾಗಿ ಏರಿಕೆ ಕಂಡಿದೆ. ಭಾರತದ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣಗಳು 1) ಇಸ್ರೇಲ್‌-ಇರಾನ್ ಯುದ್ಧ : ಇರಾನ್ ಮೇಲೆ ಅಮೆರಿಕಾದ ದಾಳಿ ಇರಾನ್‌-ಇಸ್ರೇಲ್ ನಡುವಿನ ಉದ್ವಿಗ್ನತೆ ಮತ್ತಷ್ಟು...

ರಾಜ್ಯದಲ್ಲಿ ಎಷ್ಟಿದೆ  ಇಂದಿನ ಬಂಗಾರದ ಬೆಲೆ..?

ರಾಜ್ಯದಲ್ಲಿ ಎಷ್ಟಿದೆ ಇಂದಿನ ಬಂಗಾರದ ಬೆಲೆ..?

Gold Price Today : ಬೆಂಗಳೂರು/ ಹೈದರಾಬಾದ್​: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ರೂ. ಭಾನುವಾರ 1,02,098 ರೂ. ಇತ್ತು. ಸೋಮವಾರ ಅದು ಸುಮಾರು 22ರೂ ಹೆಚ್ಚಾಗಿದ್ದು, 1,02,120 ರೂಗಳಿಗೆ ಏರಿಕೆ ಕಂಡಿದೆ. ಇನ್ನು ಬೆಳ್ಳಿ ಬೆಲೆ ಪ್ರತಿ ಕೆಜಿಗೆ ರೂ. ಶನಿವಾರ 1,09,815 ರೂ.ಗಳಷ್ಟಿತ್ತು. ಅದು ಸೋಮವಾರ 383 ಹೆಚ್ಚಳವಾಗುವ ಮೂಲಕ 1,10,198 ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಎಷ್ಟಿದೆ ಬಂಗಾರದ ಬೆಲೆ?: 99.9 ಫ್ಯೂರಿಟಿಯ 10 ಗ್ರಾಂ ಚಿನ್ನದ ನಾಣ್ಯದ ಬೆಲೆ 1,02,323 ರೂ ಇದೆ. ಇನ್ನು ಕೆ ಜಿ ಬೆಳ್ಳಿಯ ಬೆಲೆ 1,08,260 ರೂ ಇದೆ. 24 ಕ್ಯಾರೆಟ್​ ( 99.5) ನ 10 ಗ್ರಾಂ ಚಿನ್ನದ ಬೆಲೆ 60 ರೂ ಕಡಿಮೆ ಆಗುವ ಮೂಲಕ 1,00,690 ರೂ ಇತ್ತು. 22 ಕ್ಯಾರೆಟ್​ನ 10 ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 50 ಕಡಿಮೆ ಆಗಿ 92,300 ರೂ...

ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ..!

ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ..!

Bad News: ಮುಂಬೈ: ಮುಂಬೈನಲ್ಲಿ ಕಸದ ರಾಶಿಗಳ ಮೇಲೆ ಬಿದ್ದಿದ್ದ ವೃದ್ಧ ಮಹಿಳೆಯೊಬ್ಬರ ದಯನೀಯ ಸ್ಥಿತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಯನ್ನು ಅವರ ಮೊಮ್ಮಗ ಕಸ ಎಸೆಯುವ ಜಾಗದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿ, ಮಹಿಳೆಯ ಕುಟುಂಬಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಶನಿವಾರ ಮುಂಬೈ ಪೊಲೀಸರು ನಗರದ ಆರೆ ಕಾಲೋನಿಯ ರಸ್ತೆಯಲ್ಲಿರುವ ಕಸದ ರಾಶಿಯ ಬಳಿ 60 ವರ್ಷದ ಯಶೋದಾ ಗಾಯಕ್ವಾಡ ಎಂಬ ಮಹಿಳೆಯನ್ನು ಅತ್ಯಂತ ದುರ್ಬಲ ಸ್ಥಿತಿಯಲ್ಲಿ ಕಂಡುಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ತನಿಖೆಯ ನಂತರ, ಮಹಿಳೆ ತನ್ನ ಮೊಮ್ಮಗ ತನ್ನನ್ನು ಇಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಮಹಿಳೆ ಪತ್ತೆಯಾಗಿದ್ದರೂ, ಸಂಜೆ 5:30 ರ ಹೊತ್ತಿಗೆ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಯಿತು. ಅವರ ಸ್ಥಿತಿಗತಿಯನ್ನು ಪರಿಗಣಿಸಿ ಹಲವಾರು ಇತರ ಆಸ್ಪತ್ರೆಗಳು ಅವರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದ ನಂತರ ಅವರನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಯಿತು. ಮಹಿಳೆಗೆ...

ಉತ್ತರ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗದಿಂದ ಟ್ರಾವೆಲ್ಸ್ ಕಂಪನಿಗೆ ದಂಡ..!

ಉತ್ತರ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗದಿಂದ ಟ್ರಾವೆಲ್ಸ್ ಕಂಪನಿಗೆ ದಂಡ..!

Consumer Court News : ಕಾರವಾರ; ಗ್ರಾಹಕರೊಬ್ಬರು ಪ್ರವಾಸಕ್ಕಾಗಿ ಮುಂಗಡವಾಗಿ ಪಾವತಿಸಿದ ಹಣವನ್ನು ನೀಡದೇ ಸೇವಾನ್ಯೂನತೆ ಹಾಗೂ ಅನುಚಿತ ವ್ಯಾಪಾರ ನೀತಿ ಅನುಸರಿಸಿರುವುದರಿಂದ ಮಲ್ಲಿಕಾರ್ಜುನ ಟ್ರಾವೆಲ್‌ರವರಿಗೆ 30 ಸಾವಿರ ದಂಡದೊAದಿಗೆ ಮುಂಗಡ ಪಾವತಿಸಿದ ರೂ. 40,000 ಗಳಿಗೆ ಶೇ.12ರ ಬಡ್ಡಿಯನ್ನು ಪಾವತಿಸುವಂತೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಪ್ರಕರಣದ ಹಿನ್ನಲೆ..! ಯಲ್ಲಾಪುರ ತಾಲೂಕಿನ ಕೊಡ್ಲಗದ್ದೆಯ ನಿವಾಸಿಯಾದ ಮನೋಹರ ರಾಮಕೃಷ್ಣ ಹೆಗಡೆರವರು ಮಲ್ಲಿಕಾರ್ಜುನ ಟ್ರಾವೆಲ್ಸ್ ಏಜೆನ್ಸಿ ಮೂಲಕ ಕಾಶಿ ಹಾಗೂ ಆಯೋಧ್ಯೆಯ ಪ್ರವಾಸಕ್ಕೆ ತೆರಳಲು ಪ್ಯಾಕೇಜನ್ನು ರೂ.60,000 ಗಳನ್ನು ಪಾವತಿಸಿ ಮುಂಗಡ ಆಸನಗಳನ್ನು ಕಾಯ್ದಿರಿಸಿದ್ದರು. ಆದರೆ ಅನಾರೋಗ್ಯ ಹಾಗೂ ತುರ್ತು ಕೆಲಸಗಳು ಬಂದಿದ್ದರಿಂದ ತಾವು ಕಾಯ್ದಿರಿಸಿದ ಆಸನಗಳನ್ನು ರದ್ದುಗೊಳಿಸುವಂತೆ ಪ್ರವಾಸ ಆರಂಭವಾಗುವ 45 ದಿನಗಳ ಮುಂಚಿತವಾಗಿಯೇ ಏಜೆನ್ಸಿಯವರಿಗೆ ತಿಳಿಸಿದ್ದರು. ಹೀಗೆ ಮುಂಚಿತವಾಗಿ ತಿಳಿಸಿದಾಗಲೂ ಕೂಡ ಏಜೆನ್ಸಿಯವರು ದೂರುದಾರರು ಪಾವತಿಸಿದ ಪೂರ್ಣ ಮೊತ್ತ ಪಾವತಿಸದೇ ಕೇವಲ ರೂ.20,000 ಗಳನ್ನು ದೂರುದಾರರಿಗೆ ಪಾವತಿಸಿದ್ದರು. ತಾನು ಪಾವತಿಸಿದ ಉಳಿದ ಮೊತ್ತವನ್ನು ಪಾವತಿಸದ್ದರಿಂದ ಮನೋಹರ ರಾಮಕೃಷ್ಣ...

ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

Uttar Kannada News Today; ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..! ************************** Uttar Kannada News Today; ಸಣ್ಣ ನೀರಾವರಿ ಮೂಲಗಳ ನಿಖರ ಗಣತಿ ಮಾಡಿ: ಅಪರ ಜಿಲ್ಲಾಧಿಕಾರಿ ಕಾರವಾರ: ಜಿಲ್ಲೆಯಲ್ಲಿ ನಡೆಯುವ ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿ ಸಂದರ್ಭದಲ್ಲಿ , ಜಿಲ್ಲೆಯಲ್ಲಿರುವ ಸಣ್ಣ ನೀರಾವರಿಯ ಎಲ್ಲಾ ಮೂಲಗಳನ್ನು ಸಂಪೂರ್ಣವಾಗಿ ಮತ್ತು ನಿಖರವಾಗಿ ಗಣತಿ ಮಾಡುವ ಮೂಲಕ ನೀರಾವರಿ ಮೂಲಗಳ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಮೊಬೈಲ್ ಅಪ್ಲಿಕೇಷನ್ ಮೂಲಕ ನಡೆಯುವ 7 ನೇ ಸಣ್ಣ ನೀರಾವರಿ ಗಣತಿ ಮತ್ತು 2 ನೇ ನೀರಿನಾಸರೆಗಳ ಗಣತಿ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಈ ಗಣತಿಯಿಂದ ರಾಜ್ಯದಲ್ಲಿ ಸಣ್ಣ ನೀರಾವರಿಯ ವಿವಿಧ ಮೂಲಗಳನ್ನು ಸಂಪೂರ್ಣವಾಗಿ ಗಣತಿ ಮಾಡುವುದರ ಮೂಲಕ, ಮುಂಗಾರು, ಹಿಂಗಾರು ಮತ್ತು ಬೇಸಿಗೆ ಕಾಲಗಳಲ್ಲಿ ನೀರಾವರಿಯಾದ ಕ್ಷೇತ್ರದ...

ಉತ್ತರ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗದಿಂದ ವಿಮಾ ಕಂಪನಿಗೆ ದಂಡ..!

ಉತ್ತರ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗದಿಂದ ವಿಮಾ ಕಂಪನಿಗೆ ದಂಡ..!

Consumer Court News: ಕಾರವಾರ; ಸಮುದ್ರದಲ್ಲಿ ಮುಳುಗಿದ ಮೀನುಗಾರಿಕಾ ದೋಣಿಗೆ ಮಾಡಿಸಲಾಗಿದ್ದ ವಿಮಾ ಮೊತ್ತ 40 ಲಕ್ಷ ರೂಪಾಯಿಗಳನ್ನು ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಪ್ರಕರಣದ ಹಿನ್ನಲೆ..! ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜುಗುಣಿಯ ನಿವಾಸಿ ಉಲ್ಲಾಸ ದತ್ತಾ ತಾಂಡೇಲರವರು ಮೀನುಗಾರರಾಗಿದ್ದು, ಮೀನುಗಾರಿಕೆಗಾಗಿ ಸ್ವತಃ ತಮ್ಮದೇ ದೋಣಿಯನ್ನು ಹೊಂದಿದ್ದರು. ಮೀನುಗಾರಿಕೆಗೆ ತೆರಳಿದಾಗ ಮೀನುಗಾರರ ದೋಣಿ ಮುಳುಗಿದ್ದು, ಈ ದೋಣಿಗೆ ಉಲ್ಲಾಸ ಅವರು ರೂ.1,32,083/-ಗಳನ್ನು ಪಾವತಿಸಿ 40 ಲಕ್ಷಗಳ ವಿಮೆ ಪಡೆದಿದ್ದರು. ದೋಣಿ ಮುಳಗಿದ್ದರಿಂದ ದೋಣಿಗೆ ವಿಮೆ ಇದ್ದಿದ್ದರಿಂದ ವಿಮಾ ಮೊತ್ತವನ್ನು ಪಾವತಿಸಲು ದೂರುದಾರರು ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಗೆ ವಿನಂತಿಸಿದ್ದರು. ಸರ್ವೇಯರ್ ವರದಿ ಆಧಾರದ ಮೇಲೆ ವಿಮಾ ಕಂಪನಿ ವಿಮಾ ಮೊತ್ತ ನೀಡದೇ ವಿಮಾ ಅರ್ಜಿ ತಿರಸ್ಕರಿಸಿತ್ತು. ಈ ಹಿನ್ನಲೆಯಲ್ಲಿ ತಾಂಡೇಲರವರು ಕಾರವಾರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಪ್ರಭಾರ...

ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡಕ್ಕೆ ಮುಂದಿನ 3 ಗಂಟೆಗಳಲ್ಲಿ ಭಾರೀ ಮಳೆ, ಗಾಳಿಯ ಮುನ್ಸೂಚನೆ..!

ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡಕ್ಕೆ ಮುಂದಿನ 3 ಗಂಟೆಗಳಲ್ಲಿ ಭಾರೀ ಮಳೆ, ಗಾಳಿಯ ಮುನ್ಸೂಚನೆ..!

Rain forecast; ಬೆಂಗಳೂರು: ಬೆಳ್ಳಂ ಬೆಳಿಗ್ಗೆ ರಾಜ್ಯ ಹವಾಮಾನ ಇಲಾಖೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಭಾರಿ ಗಾಳಿ ಮಳೆಯ ಎಚ್ಚರಿಕೆ ಕೊಟ್ಟಿದೆ. Rain forecast; ಬೆಳ್ಳಂಬೆಳಗ್ಗೆ 7 ಗಂಟೆ ಗಂಟೆಗೆ ಅಲರ್ಟ್ ನೀಡಿರೊ ಹವಾಮಾನ ಇಲಾಖೆ, ಮುಂದಿನ 3 ಗಂಟೆಯಲ್ಲಿ ಉತ್ತರ ಕನ್ನಡ ಹಾಗೂ ದಕಗಷಿಣ ಕನ್ನಡಕ್ಕೆ ಭಾರಿ ಮಳೆ ಹಾಗೂ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಕೆ ಕೊಟ್ಟಿದೆ. ಯಲ್ಲೋ ಅಲರ್ಟ್..! Rain forecast; ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಭಾರಿ ಮಳೆ ಹಿನ್ನೆಲೆ ಜೂನ್‌ 29 ರವರೆಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಉಳಿದೆಡೆ ಜೂನ್ 26 ರ ನಂತರ ಮಳೆ ಪ್ರಮಾಣ ಹೆಚ್ಚಾಗಲಿದ್ದು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಇನ್ನು ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಕಲಬುರ್ಗಿ ಹಾಗೂ ವಿಜಯಪುರಕ್ಕೆ ಯೆಲ್ಲೋ ಅಲೆರ್ಟ್ ಕೊಡಲಾಗಿದೆ.

error: Content is protected !!