ಮುಂಡಗೋಡ ತಾಲೂಕಿನ ಅರಣ್ಯ ಇಲಾಖೆಯಲ್ಲಿ ಇವತ್ತಿಗೂ ಪ್ರಾಮಾಣಿಕ, ಖಡಕ್ ಅಧಿಕಾರಿಗಳು ಫಿಲ್ಡಿನಲ್ಲಿ ಇದ್ದಾರೆ ಅನ್ನೋದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಪ್ರಭಾವಿಗಳ ದರ್ಪ ದೌಲತ್ತುಗಳ ನಡುವೆ ಅರಣ್ಯ ಇಲಾಖೆಯ ಅದೇಷ್ಟೋ ಸಂಪತ್ತು ಬರ್ಬಾದಾಗ್ತಿರೊ ಸಮಯದಲ್ಲಿ, ಅದೇಂತದ್ದೇ ಪ್ರಭಾವ ಇದ್ರೂ ತಮ್ಮ ನಿಯತ್ತಿನ ಕಾರ್ಯ ನಿರ್ವಹಿಸಿದ್ದಾರೆ ಇಲ್ಲಿನ ಅರಣ್ಯ ಅಧಿಕಾರಿಗಳು. ಅದಕ್ಕಾಗಿ ಅಂತವರಿಗೊಂದು ಹ್ಯಾಟ್ಸ್ ಅಪ್..! ಅದು ಮೈನಳ್ಳಿ ಭಾಗ..! ಅಂದಹಾಗೆ, ಮೈನಳ್ಳಿ ಭಾಗದ ಕಳಕಿಕಾರೆಯಲ್ಲಿ ಅರಣ್ಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅತಿಕ್ರಮಿತ ತೋಟದ ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಬೆಲೆಬಾಳುವ ಸಾಗವಾನಿ ಮರದ ತುಂಡುಗಳನ್ನು ವಶಕ್ಕೆ ಪಡಿಸಿ ಕೊಂಡಿದ್ದಾರೆ. ಈ ಮೂಲಕ ಇಲ್ಲಿನ ಅರಣ್ಯ ಅಧಿಕಾರಿಗಳು ಕೆಚ್ಚೆದೆ ತೋರಿಸಿದ್ದಾರೆ. ಜಪ್ಪಯ್ಯ ಅಂದ್ರೂ ಬಿಡಲಿಲ್ಲ..! ಮೈನಳ್ಳಿ ಭಾಗದಲ್ಲಿ ಪ್ರಭಾವಿ ಮುಖಂಡರೆನಿಸಿಕೊಂಡಿರೋ, ಕಳಕೀಕಾರೆಯ ದೇವು ಜಾನು ಪಾಟೀಲ್ ಎಂಬುವವರಿಗೆ ಸೇರಿದೆ ಎನ್ನಲಾದ ಅತಿಕ್ರಮಿತ ತೋಟದ ಶೆಡ್ ನಲ್ಲಿ ಅಕ್ರಮವಾಗಿ ಸಾಗವಾನಿ ಮರದ ತುಂಡುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಈ ಬಗ್ಗೆ ಖಚಿತ...
Top Stories
ಸಮರ್ಪಕ ಆರೋಗ್ಯ ಸೇವೆಗೆ ಆಗ್ರಹಿಸಿ ಮನವಿ, ಜನ ವೇದಿಕೆಯಿಂದ ಕಾರವಾರ ಡಿಸಿ ಹಾಗೂ ಡಿಹೆಚ್ಓ ಗೆ ಮನವಿ..!
ಸಿದ್ದಾಪುರದ ಗೀತಾಳನ್ನು ಕೊಂದ ಹಂತಕನಿಗೆ ಶಿಕ್ಷೆ ಪ್ರಕಟ..!
ಮರಾಠಾ ಸಮುದಾಯದ ಹಿಂದುಳಿದ ವರ್ಗದವರಿಗೆ, ಆಹಾರ ವಾಹನ ಖರೀದಿಗೆ ಅರ್ಜಿ ಆಹ್ವಾನ
ಉತ್ತರ ಕನ್ನಡ| ಜನನ, ಮರಣವನ್ನು 21 ದಿನಗಳ ಒಳಗೆ ನೋಂದಣಿ ಮಾಡಿ; ಅಪರ ಜಿಲ್ಲಾಧಿಕಾರಿ
ಫೆ.22 ಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ..!
ನಾಳೆಯಿಂದ CBSE 10 ನೇ ತರಗತಿ ಬೋರ್ಡ್ ಪರೀಕ್ಷೆ..!
ತಡಸ ತಾಯವ್ವನ ದೇವಸ್ಥಾನದ ಬಳಿ ಸ್ವಿಪ್ಟ್ ಕಾರಿಗೆ ಬೊಲೆರೋ ವಾಹನ ಡಿಕ್ಕಿ..!
ಶಿವಶಕ್ತಿ ತಂಡಕ್ಕೆ ‘ಗಜಾನನ ಟ್ರೋಫಿ-2026’ ಮಕುಟ; ಗಣೇಶ್ ನಗರದ ದ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾವಳಿ ಸಂಪನ್ನ
KDCC ಬ್ಯಾಂಕ್ ನೂತನ ಅಧ್ಯಕ್ಷರಾಗಿ ಶಿವರಾಮ್ ಹೆಬ್ಬಾರ್ ಆಯ್ಕೆ, ಕೃಷ್ಣ ದೇಸಾಯಿಗೆ ಒಲಿದ ಉಪಾಧ್ಯಕ್ಷ ಸ್ಥಾನ..!
ಮುರುಡೇಶ್ವರದಲ್ಲಿ ಮಹಾಶಿವರಾತ್ರಿಯ ಜಾಗರಣೆ ಉತ್ಸವ, ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ : ಸಚಿವ ಮಾಂಕಾಳ ವೈದ್ಯ
ಹಾವೇರಿಯಲ್ಲಿ ಇಂದು ರಾಜ್ಯ ಮಟ್ಟದ “ಭೂ ಗ್ಯಾರಂಟಿ ಸಮರ್ಪಣಾ” ಸಮಾವೇಶ, ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಸಂಭ್ರಮಕ್ಕೆ ಸಜ್ಜು..!
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಖಡಕ್ ಸೂಚನೆ..!
ನಾಳೆ ನಾಡಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಉಷ್ಣ ಅಲೆ; ಎಚ್ಚರವಹಿಸುವಂತೆ ಜಿಲ್ಲಾಡಳಿತ ಸೂಚನೆ..!
ಕೆಂಪು ಕೋಟೆ ದಾಳಿಗೆ ಜೈಶ್-ಎ-ಮೊಹಮ್ಮದ್ ನಂಟು : ವಿಶ್ವಸಂಸ್ಥೆ ವರದಿ ; ಮಹಿಳಾ ಘಟಕದ ಬಗ್ಗೆ ಎಚ್ಚರಿಕೆ
ಗ್ರಾಮ ಪಂಚಾಯತಿಗಳು ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು; ಸಚಿವ ಮಾಂಕಾಳ ವೈದ್ಯ..!
ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!
“ಸಂಪಾಯಿತಲೇ ಪರಾಕ್” ಶ್ರೀಕ್ಷೇತ್ರ ಮೈಲಾರ ಕಾರ್ಣಿಕ..! ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದ ಗೊರವಯ್ಯ..!
ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ವಿಧಿವಶ..! 33 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸೂಪರ್ ಕಾಪ್..!
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!
ಇಂದೂರಿನ 8 ನಂ. ಕ್ಯಾಂಪ್ ಕ್ರಾಸ್ ಬಳಿ ಪಾದಾಚಾರಿಗೆ ಅಪರಿಚಿತ ಬೈಕ್ ಡಿಕ್ಕಿ, ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಇಂದೂರ ಬಳಿಯ 8 ನಂಬರ್ ಟಿಬೇಟಿಯನ್ ಕ್ಯಾಂಪ್ ಕ್ರಾಸ್ ಬಳಿ ಪಾದಾಚಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ ಪಾದಾಚಾರಿ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಸಂಜು ಸುರಕೋಡ (35) ಗಂಭೀರ ಗಾಯಗೊಂಡಿರೋ ವ್ಯಕ್ತಿಯಾಗಿದ್ದಾನೆ. ರಾತ್ರಿ ವೇಳೆ ವೇಗವಾಗಿ ಬಂದಿರೋ ಅಪರಿಚಿತ ಬೈಕ್ ಪಾದಾಚಾರಿ ವ್ಯಕ್ತಿಗೆ ಡಿಕ್ಕಿಯಾಗಿದೆ ಅನ್ನೊ ಮಾಹಿತಿ ಬಂದಿದೆ. ಅಫಘಾತವಾದ ತಕ್ಷಣವೇ ಸ್ಥಳೀಯರು 108 ಅಂಬ್ಯುಲೆನ್ಸ್ ಮೂಲಕ ಪ್ರಥಮ ಚಿಕಿತ್ಸೆ ನೀಡಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿಗ್ಗಾವಿಯಲ್ಲಿ ಭರ್ಜರಿ ಪ್ರಚಾರ ಶುರು ಮಾಡಿದ JDS ಅಭ್ಯರ್ಥಿ ಶಶಿಧರ್ ಎಲಿಗಾರ್..!
ಶಿಗ್ಗಾವಿ: ಶಿಗ್ಗಾವಿ ಸವಣೂರ ಮತ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಅಬ್ಬರದ ಪ್ರಚಾರ ಶುರುವಾಗಿದೆ. JDS ಪಕ್ಷದ ಅಭ್ಯರ್ಥಿ ಶಶಿಧರ ಯಲಿಗಾರ ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿವು ಓಟ್ ಹಾಕಿ ಆರಿಸಿಕಳುಹಿಸಿದ ಶಾಸಕ ಬೆಂಗಳೂರಲ್ಲಿ ಜಿವನ ಮಾಡೋರು ಬೇಕೊ.? ನಿಮ್ಮ ಜೊತೆ ಸದಾ ಸೇವೆ ಮಾಡುವ ಶಾಸಕ ಬೇಕೊ..? ಎಂದು ನೀವೇ ತಿರ್ಮಾನ ಮಾಡಿ ಓಟ್ ಹಾಕಿ ಅಂತಾ ಮನವಿ ಮಾಡಿದ್ರು. ಈ ಸಂದರ್ಭದಲ್ಲಿ ಹಲವರು ಜೆಡಿಎಸ್ ಪಕ್ಷಕ್ಕೆ ಸೇಪ೯ಡೆಗೊಂಡರು. ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಚಾರವನ್ನು ಯಶಸ್ವಿಗೊಳಿಸಿದರು. JDS ತಾಲೂಕ ಅಧ್ಯಕ್ಷರಾದ ಈರಣ್ಣ ನವಲಗುಂದ, ಉಪಾಧ್ಯಕ್ಷರು B.C. ಗುದ್ಲಿ ಶೆಟ್ಟರ್, ತಾಲೂಕ ಪ್ರದಾನ ಕಾರ್ಯದರ್ಶಿ ರಾಜು ಮಾಳೋದೆ, ಶಹರ ಘಟಕದ ಅಧ್ಯಕ್ಷರು ಸಂಜೀವ್ ಮಣ್ಣನ್ನವರ, ಬಂಕಾಪುರ ಶಹರ ಘಟಕದ ಅಧ್ಯಕ್ಷರು ರವಿ ಕುರಗೊಡಿ, ಹಾಗೂ ಹಲವಾರು ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು… ವರದಿ: ಮಂಜುನಾಥ್ ಪಾಟೀಲ್
ನಂದಿಕಟ್ಟಾದಲ್ಲಿ ಬಿಜೆಪಿಗೆ ಆಘಾತ: ತಾಲೂಕಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಲ್ಲನಗೌಡ್ರು ಅಧ್ಯಕ್ಷ ಸ್ಥಾನ ಹಾಗೂ ಬಿಜೆಪಿಗೆ ಗುಡ್ ಬೈ..!
ಮುಂಡಗೋಡ ತಾಲೂಕಿನ ನಂದಿಕಟ್ಟಾದಲ್ಲಿ ಬಿಜೆಪಿಗೆ ಭಾರೀ ಆಘಾತವಾಗಿದೆ. ತಾಲೂಕಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ನಂದಿಕಟ್ಟಾ ಭಾಗದ ಹಿರಿಯ ಬಿಜೆಪಿ ಮುಖಂಡ ಕಲ್ಲನಗೌಡ ಬಿ. ಬಸನಗೌಡ್ರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ನಂದಿಕಟ್ಟಾ ಭಾಗದಲ್ಲಿ ಹಲವು ವರ್ಷಗಳಿಂದ ಕಟ್ಟಿ ಬೆಳೆಸಿದ್ದ ಬಿಜೆಪಿಯನ್ನೇ ತೊರೆದಿದ್ದಾರೆ. ಮೂಲ ಬಿಜೆಪಿಗರಿಗೆ ಬೆಲೆಯಿಲ್ವಂತೆ..! ಅಸಲು, ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿದ ಕಲ್ಲನಗೌಡ ಬಸನಗೌಡ್ರು ಬಿಜೆಪಿಯಲ್ಲಿ ಈಗ ಎಲ್ಲ ಸರಿಯಾಗಿಲ್ಲ.. ಮೂಲ ಬಿಜೆಪಿಗರನ್ನು ಕಸದಂತೆ ನೋಡಿಕೊಳ್ಳಲಾಗ್ತಿದೆ. ಇಲ್ಲಿ ನಮ್ಮನ್ನ ಯಾವುದಕ್ಕೂ ಗಣನೆಗೆ ಪಡೆಯೋದೇ ಇಲ್ಲ. ಹೀಗಾಗಿ ಇಲ್ಲಿನ ಪರಿಸ್ಥಿತಿ ನಮಗೆ ಅಸಮಾಧಾನ ತಂದಿದ್ದು ನಾವು ಪಕ್ಷ ತೊರೆಯುವಂತೆ ಮಾಡಿದೆ ಅಂತಾ ಅಸಮಾಧಾನ ತೋಡಿಕೊಂಡ್ರು. ನಾಮಕೆವಾಸ್ತೆ ಇವೆ ಸಮಿತಿಗಳು..! ಇನ್ನು, ಬಿಜೆಪಿಗೆ ಗುಡ್ ಬೈ ಹೇಳಿರೋ ಕಲ್ಲನಗೌಡ್ರು ಹೇಳೋ ಪ್ರಕಾರ ಮುಂಡಗೋಡ ಬಿಜೆಪಿಯಲ್ಲಿ ಸಮಿತಿಗಳಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತೇ ಇಲ್ಲವಂತೆ. ತಾಲೂಕಾ ರೈತ ಮೋರ್ಚಾ...
ಯಲ್ಲಾಪುರ ಕ್ಷೇತ್ರದಲ್ಲಿ ಗಾಂಧಿಗಿರಿ ಹಾಗೂ ದಾದಾಗಿರಿ ನಡುವೆ ಚುನಾವಣೆ: ನಿಮಗೆ ಗಾಂಧಿಗಿರಿ ಬೇಕಾ..? ಗುಂಡಾಗಿರಿ ಬೇಕಾ..? ಸಂತೋಷ ಲಾಡ್ ಪ್ರಶ್ನೆ
ಮುಂಡಗೋಡ: ಯಲ್ಲಾಪುರ ಕ್ಷೇತ್ರದಲ್ಲಿ ನಿಮಗೆ ಗಾಂಧಿಗಿರಿ ಬೇಕಾ..? ದಾದಾಗಿರಿ ಬೇಕಾ..? ಅಂತಾ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಪ್ರಶ್ನಿಸಿದ್ರು, ಈ ಕ್ಷೇತ್ರದಲ್ಲಿ ಒಂದು ಕಡೆ ದುಡ್ಡು, ಮತ್ತೊಂದು ಕಡೆ ಧರ್ಮದ ಚುನಾವಣೆ ನಡೆಯುತ್ತಿದೆ ಪ್ರತಿಯೊಬ್ಬರೂ ಆ ದುಡ್ಡನ್ನು ಸೋಲಿಸಲು ಸಾಲ ಮಾಡಿಯಾದರೂ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ ಅವರನ್ನು ಗೆಲ್ಲಿಸಬೇಕು ಅಂತಾ ಸಂತೋಷ ಲಾಡ್ ಕರೆ ನೀಡಿದರು. ತಾಲೂಕಿನ ಕಲಕೇರಿ ಗ್ರಾಮದಲ್ಲಿ ಅವರು ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಂಧಿಗಿರಿ ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಬಹುಮತದಿಂದ ಆಯ್ಕೆ ಮಾಡಿ. ನಮ್ಮ ಯಾವ ಕಾರ್ಯಕರ್ತರೂ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಬಿಜೆಪಿಯವರು ಸುಳ್ಳು ಸುಳ್ಳು ಪ್ರಚಾರ ಮಾಡುತ್ತಾರೆ ಆದರೆ ಅಭಿವೃದ್ಧಿ ಮಾತ್ರ ಏನೂ ಇಲ್ಲ. ಟಿವಿ, ಪತ್ರಿಕೆ ಮೂಲಕ ಪ್ರಚಾರ ಮಾಡಿ ಆಮೇಲೆ ದುಡ್ಡಿನ ಮೂಲಕ ಮತದಾರರನ್ನು ಹಾದಿ ತಪ್ಪಿಸುತ್ತಾರೆ. ಸಾವಿರಾರು ಕೋಟಿ ಹಣ ಖರ್ಚು ಮಾಡಿ ಚುನಾವಣೆ ಮಾಡುತ್ತಾರೆ. ಅವರ ಬಳಿ ಬೇರೇನೂ...
ಮೇ 4 ಕ್ಕೆ ಮುಂಡಗೋಡಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ “ಟಗರು” ಎಂಟ್ರಿ..!
ಮೇ 4 ರಂದು ಮುಂಡಗೋಡಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಪರವಾಗಿ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಅಂತಾ ಕಾಂಗ್ರೆಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಂದಹಾಗೆ, ಮೇ ನಾಲ್ಕರಂದು ಮದ್ಯಾನ 2.30 ಗೆ ಹೆಲಿಕಾಪ್ಟರ್ ಮೂಲಕ ಮುಂಡಗೋಡಿಗೆ ಆಗಮಿಸಲಿರೋ ಮಾಜಿ ಸಿಎಂ ಸಿದ್ದರಾಮಯ್ಯ, ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಏರ್ಪಡಿಸುವ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯಲ್ಲಾಪುರ ಕ್ಷೇತ್ರ ಸದ್ಯ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು, ಸಚಿವ ಶಿವರಾಮ್ ಹೆಬ್ಬಾರ್ ರವರಿಗೆ ತೊಡೆತಟ್ಟಿರೋ ವಿ.ಎಸ್.ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ. ಅಸಲು, ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೆಕ್ ಟೂ ನೆಕ್ ಫೈಟ್ ಏರ್ಪಟ್ಟಿದೆ. ಹೀಗಿರೋ ವೇಳೆ ಸಿದ್ದರಾಮಯ್ಯನವರ ಪ್ರಚಾರ ನಿಜಕ್ಕೂ ಕ್ಷೇತ್ರದ ಕಾಂಗ್ರೆಸ್ ಗೆ ಮತ್ತಷ್ಟು ಹುರುಪು ತರಬಲ್ಲ ಸಾಧ್ಯತೆ ಇದೆ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಛತ್ತೀಸಗಡದಲ್ಲಿ ಬಾಂಬ್ ಸ್ಪೋಟ, ಹಾನಗಲ್ಲಿನ CRPF ಯೋಧ ಹುತಾತ್ಮ, ಗರ್ಭಿಣಿ ಪತ್ನಿಗೆ, ತಂದೆ ತಾಯಿಗೆ ಮಗನ ಸಾವಿನ ಸುದ್ದಿಯೇ ತಿಳಿದಿಲ್ಲ ಕಣ್ರಿ..!
ಛತ್ತೀಸಗಡದಲ್ಲಿ ಸಂಭವಿಸಿದ್ದ ಬಾಂಬ್ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಹಾನಗಲ್ ತಾಲೂಕಿನ CRPF ಯೋಧ ಚಿಕಿತ್ಸೆ ಫಲಿಸದೇ ಹುತಾತ್ಮರಾಗಿದ್ದಾರೆ. ದುರಂತ ಅಂದ್ರೆ, ತನ್ನ ಮದುವೆ ವಾರ್ಷಿಕೋತ್ಸವದ ದಿನವೇ ಇಹಲೋಕ ತ್ಯಜಿಸಿರೋ ವೀರಯೋಧನ ಪತ್ನಿ ಈಗ ಎರಡು ತಿಂಗಳ ಗರ್ಭಿಣಿಯಾಗಿದ್ದಾರೆ. ತಂದೆ ತಾಯಿಗೆ ಸುದ್ದಿ ತಿಳಿಸಿಲ್ಲ..! ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬ್ಯಾತನಾಳ ಗ್ರಾಮದ ಸೈನಿಕ, 26 ವರ್ಷ ವಯಸ್ಸಿನ ರವಿ ಕೆಳಗಿನಮನಿ ಎಂಬುವ ಯೋಧ ಹುತಾತ್ಮರಾಗಿದ್ದಾರೆ. ಇನ್ನು ಮತ್ತೊಂದು ಮನಕಲಕುವ ಸಂಗತಿಯೆಂದ್ರೆ, ತನ್ನ ಮಗನ ಸಾವಿನ ಸುದ್ದಿ ಆತನ ಪತ್ನಿಗೆ, ತಂದೆ-ತಾಯಿಗೆ ಹೇಳದೆ ಮುಚ್ಚಿಡಲಾಗಿದೆ. ಯಾಕಂದ್ರೆ, ಕಾರಣ 2 ಮೃತ ಯೊಧನ ಹೆಂಡತಿ ಅಶ್ವಿನಿ ಈಗ ಎರಡು ತಿಂಗಳ ಗರ್ಭಿಣಿ. ಮಾರ್ಚ 30 ರಂದು ಛತ್ತಿಸಗಡದಲ್ಲಿ ಬಾಂಬ್ ದಾಳಿಯಾಗಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಯೋಧ ರವಿ ಇಂದು ಬೆಳಿಗ್ಗೆ ಚಿಕಿತ್ಸೆ ಫಲಸದೆ ಛತ್ತೀಸಗಡದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇನ್ನು, ಮೃತ ಯೋಧನ ಪಾರ್ಥೀವ ಶರೀರ ದೆಹಲಿಯಲಿಂದ ಕರ್ನಾಟಕಕ್ಕೆ ಇಂದು ಬರಲಿದೆ. ಹಾಗೆನೇ,...
ನೀವು ಕೊಟ್ಟ ಮತ ಮಾರಿಕೊಂಡು ಶ್ರೀಮಂತರಾಗಿದ್ದು “ಬಾಂಬೆ ಬಾಯ್ಸ್” ಪರೋಕ್ಷವಾಗಿ ಹೆಬ್ಬಾರ್ ವಿರುದ್ಧ ಶ್ರೀನಿವಾಸ್ ಮಾನೆ ವಾಗ್ದಾಳಿ..!
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನಿತ್ಯವೂ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿವೆ. ಅದ್ರ ಜೊತೆ ನಿತ್ಯವೂ ಪಕ್ಷಾಂತರದ ಪರ್ವ ಚಾಲ್ತಿಯಲ್ಲಿದೆ. ಇವತ್ತು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಪರ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅಬ್ಬರದ ಪ್ರಚಾರ ಕೈಗೊಂಡ್ರು. ಶ್ರೀನಿವಾಸ್ ಮಾನೆ ಪ್ರಚಾರ..! ಬೆಳಿಗ್ಗೆ ಮುಂಡಗೋಡ ತಾಲೂಕಿನ ಬಾಚಣಕಿಯಲ್ಲಿ ಪ್ರಚಾರ ನಡೆಸಿದ ಶ್ರೀನಿವಾಸ್ ಮಾನೆ, ಬಾಂಬೆ ಬಾಯ್ಸ್ ಬಗ್ಗೆ ಲೇವಡಿ ಮಾಡಿದ್ರು. ನಿಮ್ಮ ಹತ್ತಿತ ಮತ ಪಡೆದ ಬಾಂಬೆ ಬಾಯ್ಸ್ ಆ ಮತವನ್ನು ಕೋಟಿ ಕೋಟಿಗೆ ಮಾರಿಕೊಂಡು ಶ್ರೀಮಂತರಾಗಿದ್ದಾರೆ, ಆದ್ರೆ ಮತ ಕೊಟ್ಟ ನಿಮ್ಮನ್ನೇಲ್ಲ ಬಡವರನ್ನಾಗಿಸಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ರು. ಇನ್ನು, ಕಳೆದ ಹಾನಗಲ್ ಉಪ ಚುನಾವಣೆ ವೇಳೆ ಇಡೀ ಆಡಳಿತವೇ ನನ್ನ ಸೋಲಿಸಲು ಠಿಕಾಣಿ ಹೂಡಿದ್ರು, ಆದ್ರೆ ಅವತ್ತು ಪ್ರಬುದ್ಧ ಮತದಾರರು ನನ್ನ ಗೆಲ್ಲಿಸುವ ಮೂಲಕ ಬಿಜೆಪಿ ಆಡಳಿತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ರು ಅಂತಾ ಹೇಳಿದ್ರು....
ಯಲ್ಲಾಪುರ ವಿಧಾನಸಭಾ ಕ್ಷೇತ್ರ ನಾಲ್ವರು ಪಕ್ಷೇತರರು ಸೇರಿ ಒಟ್ಟೂ 10 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ..!
ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ನಾಲ್ವರು ಪಕ್ಷೇತರ ಅಭ್ಯರ್ಥಿಗಳೂ ಸೇರಿ ಒಟ್ಟೂ 10 ಉಮೇದುವಾರರು ನಾಮಪತ್ರ ಸಲ್ಲಿಸಿದ್ದಾರೆ. ಇಂದು ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ನಾಮಪತ್ರ ಸಲ್ಲಿಸಿದವರ ವಿವರ ಹೀಗಿದೆ. 1. ಅಂದಲಗಿ ವೀರಭದ್ರಗೌಡ ಪಾಟೀಲ್, ಕಾಂಗ್ರೆಸ್ 2. ಲಕ್ಷ್ಮಣ ಭೀಮಣ್ಣ ಬನಸೋಡೆ, ಕಾಂಗ್ರೆಸ್ ಬಂಡಾಯ 3. ಆನಂದ ಗಣಪತಿ ಭಟ್ಟ, ಪಕ್ಷೇತರ 4.ಅರಬೈಲ ಹೆಬ್ಬಾರ ಶಿವರಾಮ, ಬಿಜೆಪಿ 5.ನಾಗೇಶ ಹೊನ್ನಯ್ಯ ನಾಯ್ಕ, ಜೆಡಿಎಸ್ 6. ಸಂತೋಷ ಮಂಜುನಾಥ ಶೇಟ್ ರಾಯ್ಕರ, ಕೆಆರ್ ಪಿಪಿ 7.ಮಂಜುನಾಥ ಲವಾ ಕುಲುಮಕರ, ಆಮ್ ಆದ್ಮಿ ಪಾರ್ಟಿ 8. ಮಂಜುನಾಥ ಶಿರಹಟ್ಟಿ, ಕರ್ನಾಟಕ ರಾಷ್ಟ್ರ ಸಮಿತಿ 9.ಚಿದಾನಂದ ಹನ್ಮಂತಪ್ಪ ಹರಿಜನ, ಪಕ್ಷೇತರ 10. ಶೆಟ್ಟಪ್ಪ ಯಲ್ಲಪ್ಪ ಭೋವಿವಡ್ಡರ, ಪಕ್ಷೇತರ ಇವ್ರೆಲ್ಲರೂ ಯಲ್ಲಾಪುರ ವಿಧಾನಸಭೆಗೆ ಆಯ್ಕೆ ಬಯಸಿ ಸಧ್ಯ ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ ಅಂತಿಮವಾಗಿ ಕಣದಲ್ಲಿ ಉಳಿಯೋದು ಯಾರ್ಯಾರು ಅನ್ನೋದು ಇನ್ನೇನು ಎರಡು ದಿನದಲ್ಲಿ ತಿಳಿಯಲಿದೆ.
ಕರುಳ ಕುಡಿಗಳನ್ನು ಕಳೆದುಕೊಂಡಿದ್ದ ಸಿರಿಗೆರಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಹೆಬ್ಬಾರ್..!
ಮುಂಡಗೋಡ ತಾಲೂಕಿನ ಸಿರಿಗೇರಿಯಲ್ಲಿ ತಮ್ಮ ಕರುಳ ಕುಡಿಗಳನ್ನು ಕಳೆದುಕೊಂಡು ನೊಂದಿದ್ದ ಕುಟುಂಬಗಳಿಗೆ ಶಿವರಾಮ್ ಹೆಬ್ಬಾರ್ ಸಾಂತ್ವನ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯಲ್ಲಿ ಈಜಲು ಹೋಗಿದ್ದ ಐವರು ಯುವಕರು ದುರಂತ ಸಾವು ಕಂಡಿದ್ದರು. ಹೀಗಾಗಿ, ಆ ಯುವಕರ ಕುಟುಂಬಗಳು ಅಕ್ಷರಶಃ ದಿಕ್ಕೆ ತೋಚದಂತಾಗಿದ್ದವು. ಸಿರಿಗೇರಿ ಗ್ರಾಮದ ಸಂತೋಷ ಬಾಬು ಎಡಗೆ, ಅಜಯ ಬಾಬು ಜೋರೆ, ಕೃಷ್ಣ ಬಾಬು ಜೋರೆ ಹಾಗೂ ಆನಂದ್ ವಿಷ್ಣು ಕೋಕರೆ ಅವರ ಮನೆಗೆ ಭೇಟಿ ನೀಡಿದ ಶಿವರಾಮ್ ಹೆಬ್ಬಾರ್ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ, ಸಾಂತ್ವನ ಹೇಳಿ ಧೈರ್ಯ ತುಂಬಿದರು. ನಿಮ್ಮೊಂದಿಗೆ ನಾನಿದ್ದಿನಿ ದೈರ್ಯ ಕಳೆದುಕೊಳ್ಳಬೇಡಿ ಅಂತಾ ಅಭಯ ನೀಡಿದ್ರು. ಘಟನೆ ತಿಳಿದು ಅತೀವ ದುಃಖವಾಗಿದೆ. ಕುಟುಂಬಕ್ಕೆ ಆಧಾರವಾಗಬೇಕಿದ್ದವರನ್ನು ಕಳೆದುಕೊಂಡಿರುವ ನಿಮಗೆ ದೇವರು ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ. ನಿಮ್ಮ ಕಷ್ಟದಲ್ಲಿ ನಾನೂ ಭಾಗಿ ಅಂತಾ ಹಬ್ಬಾರ್ ತಿಳಿಸಿದರು.









