ಶಿಗ್ಗಾವಿಯ ಭೀಕರ ಮರ್ಡರ್ ಕೇಸ್ ಹಾಗೂ ಫೈರಿಂಗ್ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಹಾವೇರಿ ಎಸ್ಪಿ..!

ಶಿಗ್ಗಾವಿಯ ಭೀಕರ ಮರ್ಡರ್ ಕೇಸ್ ಹಾಗೂ ಫೈರಿಂಗ್ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಹಾವೇರಿ ಎಸ್ಪಿ..!

Shiggaon Murder Case; ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣವನ್ನೇ ಬೆಚ್ಚಿ ಬೀಳಿಸಿದ್ದ ಶಿವಾನಂದ್ ಕುನ್ನೂರ್ ಎಂಬಾತನ ಮರ್ಡರ್ ಕೇಸಿನಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ ಪೊಲೀಸ್ರು. ಹಾವೇರಿ ಎಸ್ಪಿ ಅಂಶುಕುಮಾರ್, ಘಟನೆಯ ಕುರಿತು ಮಾದ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಬ್ಬರು ಆರೋಪಿಗಳ ಕಾಲಿಗೆ ಗುಂಡು..! ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಅವರ ಕೊಲೆ ಪ್ರಕರಣದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಅಶ್ರಫ್ ಮತ್ತು ನಾಗರಾಜ್‌ ಕಾಲಿಗೆ ಫೈರಿಂಗ್ ಮಾಡಲಾಗಿದೆ. ಮೊದಲು ಆರೋಪಿಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚುವರಿ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್​​ಗೆ ಕಳುಹಿಸಿ ಕೊಡಲಾಗಿದೆ ಅಂತಾ ಎಸ್ಪಿ ತಿಳಿಸಿದ್ರು. ಅದು ಹಾನಗಲ್‌ ನ ಕೊಂಡೊಜಿ ಕ್ರಾಸ್..! ಈ ಆರೋಪಿಗಳು ಗುತ್ತಿಗೆದಾರ ಶಿವಾನಂದ ಅವರನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ನಾಲ್ಕು ತಂಡಗಳನ್ನು ರಚಿಸಿ ಶೋಧ ನಡೆಸಲಾಗುತ್ತಿತ್ತು. ಹಾನಗಲ್ ತಾಲೂಕಿನ ಕೊಂಡೊಜಿ ಕ್ರಾಸ್ ಬಳಿ ಆರೋಪಿಗಳು...

ಉತ್ತರ ಕನ್ನಡ ಸೇರಿ ರಾಜ್ಯದ ಹಲವೆಡೆ ಮತ್ತೆ ಭಾರಿ‌ಮಳೆ ಮುನ್ಸೂಚನೆ..! ಎಲ್ಲೇಲ್ಲಿ..?

ಉತ್ತರ ಕನ್ನಡ ಸೇರಿ ರಾಜ್ಯದ ಹಲವೆಡೆ ಮತ್ತೆ ಭಾರಿ‌ಮಳೆ ಮುನ್ಸೂಚನೆ..! ಎಲ್ಲೇಲ್ಲಿ..?

Heavy Rains Forecast; ಬೆಂಗಳೂರು: ಉತ್ತ ಕನ್ನಡ ಜಿಲ್ಲೆ, ಕರಾವಳಿ ಮತ್ತು ಮಲೆನಾಡು ಭಾಗ ಸೇರಿದಂತೆ ಕರ್ನಾಟಕದಾದ್ಯಂತ ಭಾರೀ ಮಳೆ ಮುಂದುವರೆದಿದೆ. ಕೊಡಗಿನಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇನ್ನುಳಿದಂತೆ, ಉತ್ತರ ಕನ್ನಡ ಜಿಲ್ಲೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿರುವ ಇಲಾಖೆ ಉತ್ತರ ಕನ್ನಡ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಮಂಡ್ಯ, ಮೈಸೂರು ಹಾಗೂ ಧಾರವಾಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಎಲ್ಲೇಲ್ಲಿ ಮಳೆ..? ಯಲ್ಲಾಪುರ, ಖಾನಾಪುರ, ಕ್ಯಾಸಲ್​ರಾಕ್, ಕಿತ್ತೂರು, ಸಕಲೇಶಪುರ, ಕಮ್ಮರಡಿ, ಆಗುಂಬೆ, ಶೃಂಗೇರಿ, ಕಳಸ, ಸೋಮವಾರಪೇಟೆ, ಕೊಪ್ಪ, ನಾಪೋಕ್ಲುವಿನಲ್ಲಿ ಅತ್ಯಧಿಕ ಮಳೆಯಾಗಿದೆ. ಬೆಳ್ತಂಗಡಿ, ಮೂಡುಬಿದಿರೆ, ಧರ್ಮಸ್ಥಳ, ಸುಳ್ಯ, ಬಂಟ್ವಾಳ, ಮಂಗಳೂರು, ಹಳಿಯಾಳ, ಪೊನ್ನಂಪೇಟೆ, ಪಣಂಬೂರು, ಜೋಯ್ಡಾ, ಎನ್.​ಆರ್.​ಪುರ್, ಪುತ್ತೂರು, ನಿಪ್ಪಾಣಿ, ಹಿಡಕಲ್, ಕುಂದಾಪುರ, ಹುಬ್ಬಳ್ಳಿ, ಮಹಾಲಿಂಗಪುರ, ಭದ್ರಾವತಿ,...

ಶಿಗ್ಗಾವಿ ಶಿವಾನಂದ್ ಕುನ್ನೂರ ಭೀಕರ ಹತ್ಯೆ ಪ್ರಕರಣ, ಆರೋಪಿಗಳ ಕಾಲಿಗೆ ಪೊಲೀಸರಿಂದ ಫೈರಿಂಗ್..! ಕಿಮ್ಸ್ ನಲ್ಲಿ ಚಿಕಿತ್ಸೆ..!

ಶಿಗ್ಗಾವಿ ಶಿವಾನಂದ್ ಕುನ್ನೂರ ಭೀಕರ ಹತ್ಯೆ ಪ್ರಕರಣ, ಆರೋಪಿಗಳ ಕಾಲಿಗೆ ಪೊಲೀಸರಿಂದ ಫೈರಿಂಗ್..! ಕಿಮ್ಸ್ ನಲ್ಲಿ ಚಿಕಿತ್ಸೆ..!

Police Firing Accused; ಶಿಗ್ಗಾವಿಯಲ್ಲಿ ಗುತ್ತಿಗೆದಾರನ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಹತ್ಯೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಹೀಗಾಗಿ, ಗಾಯಾಳು ಆರೋಪಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಹಾವೇರಿಯ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕೊಂಡೋಜಿ ಕ್ರಾಸ್ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಪರಿಣಾಮ, ಆರೋಪಿಗಳಾದ ಅಶ್ರಫ್ ಮತ್ತು ನಾಗರಾಜ ಕಾಲಿಗೆ ಗುಂಡೇಟು ಬಿದ್ದಿತ್ತು, ಗಾಯಳು ಆರೋಪಿಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪೊಲೀಸ್ ಪೈರಿಂಗ್ ಘಟನೆಯಲ್ಲಿ, ಹಾವೇರಿ ಎಸ್ಪಿ ಅಂಶುಕುಮಾರ ನೇತ್ರತ್ವದಲ್ಲಿ ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್ ಗೆ ರವಾನೆ ಮಾಡಲಾಗಿದೆ. ನಿರಂತರ ಸುದ್ದಿಗಾಗಿ, ನಮ್ಮ ವಾಟ್ಸಾಪ್ ಚಾನಲ್ ಸೇರಿಕೊಳ್ಳಲು ಈ ಕೆಂಪು ಅಕ್ಷರಗಳ ಮೇಲೆ ಕ್ಲಿಕ್ ಮಾಡಿ, ಫಾಲೋ ಮಾಡಿ

ನಿರಂತರ ಮಳೆ; ಜಿಲ್ಲೆಯ 2 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ  ಶಾಲೆಗಳಿಗೆ ನಾಳೆ ರಜೆ..!

ನಿರಂತರ ಮಳೆ; ಜಿಲ್ಲೆಯ 2 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆ ರಜೆ..!

School Holiday News; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ, ಹೀಗಾಗಿ, ನಾಳೆ ಜೂನ್ 26 ರಂದು ಉತ್ತರ ಕನ್ನಡ ಜಿಲ್ಲೆಯ 2 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.

ಬೆಡಸಗಾಂವನಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಬಿದ್ದ ಮರ..!

ಬೆಡಸಗಾಂವನಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಬಿದ್ದ ಮರ..!

Tree Fell on a Vehicle; ಮುಂಡಗೋಡ ತಾಲೂಕಿನ ಬೆಡಸಗಾಂವ್ ನಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನದ ಮೇಲಿನ ಮರ ಬಿದ್ದಿದೆ. ವಾಹನದಲ್ಲಿ ಹತ್ತಕ್ಕೂ ಹೆಚ್ಚು ಕಾರ್ಮಿಕರು ಇದ್ದರೂ ಅದೃಷ್ಟವಶಾತ್ ಯಾರಿಗೂ ಅನಾಹುತ ಸಂಭವಿಸಿಲ್ಲ. ಬೆಡಸಗಾಂವನ ವಿಜಯ ನಾಯ್ಕ್ ಎಂಬುವವರು ಮರ ಮುರಿದು ಬಿಳುವ ಅನುಮಾನದಿಂದ, ಮೊದಲೇ ವಿದ್ಯುತ್ ಸಂಪರ್ಕ್ ಕಡಿತಗೊಳಿಸಿದ್ದರು‌. ಹೀಗಾಗಿ, ಮರದ ಜೊತೆ ವಿದ್ಯುತ್ ತಂತಿಯೂ ಬಿದ್ದರೂ ಏನೂ ಅನಾಹುತ ಸಂಭವಿಸಿಲ್ಲ. ಇದನ್ನೂ ಓದಿ👉ಮುಂಡಗೋಡ ಠಾಣೆಯಲ್ಲಿ ಏಜೇಂಟರುಗಳ ಹಾವಳಿ ಇಲ್ಲ, ನಿಮಗೆ ಕಂಡುಬಂದ್ರೆ ಅಂತವರ ಮಾಹಿತಿ ನೀಡಿ- ಎಲ್ಟಿ ಆರೋಪಕ್ಕೆ ಪಿಐ ರಂಗನಾಥ ಸ್ಪಷ್ಟನೆ..! ಹೀಗಾಗಿ,ವಾಹನದಲ್ಲಿ ರಾಮಾಪುರದಿಂದ ಹುಲೆಕಲ್ ಗೆ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿದಂತಾಗಿದೆ.

ಮುಂಡಗೋಡ ಠಾಣೆಯಲ್ಲಿ ಏಜೇಂಟರುಗಳ ಹಾವಳಿ ಇಲ್ಲ, ನಿಮಗೆ ಕಂಡುಬಂದ್ರೆ ಅಂತವರ ಮಾಹಿತಿ ನೀಡಿ- ಎಲ್ಟಿ ಆರೋಪಕ್ಕೆ ಪಿಐ ರಂಗನಾಥ ಸ್ಪಷ್ಟನೆ..!

ಮುಂಡಗೋಡ ಠಾಣೆಯಲ್ಲಿ ಏಜೇಂಟರುಗಳ ಹಾವಳಿ ಇಲ್ಲ, ನಿಮಗೆ ಕಂಡುಬಂದ್ರೆ ಅಂತವರ ಮಾಹಿತಿ ನೀಡಿ- ಎಲ್ಟಿ ಆರೋಪಕ್ಕೆ ಪಿಐ ರಂಗನಾಥ ಸ್ಪಷ್ಟನೆ..!

Mundgod Police News; ಮುಂಡಗೋಡ ಠಾಣೆಯಲ್ಲಿ ಯಾವುದೇ ಬ್ರಷ್ಟಾಚಾರ ನಡೀತಿಲ್ಲ, ಏಜೇಂಟರುಗಳ ಹಾವಳಿಯೂ ಇಲ್ಲ. ನಿತ್ಯವೂ ಇಲ್ಲಿ ಹತ್ತಾರು ಜನ ಜನಪ್ರತಿನಿಧಿಗಳು, ವಕೀಲರು, ಪತ್ರಕರ್ತರು, ಸಾರ್ವಜನಿಕರು ಬಂದು ಹೋಗ್ತಾರೆ, ಹಾಗೇನಾದ್ರೂ L.T. ಪಾಟೀಲ್ ರಿಗೆ ಏಜೇಂಟರುಗಳ ಹಾವಳಿ ಇದೆ ಅ.ಮತಾ ಕಂಡುಬಂದಲ್ಲಿ, ಆ ಏಜೇಂಟರುಗಳು ಯಾರು..? ಅವ್ರ ಹೆಸರೇನು ಅಂತಾ ನಮಗೆ ಮಾಹಿತಿ ನೀಡಿದ್ರೆ, ಖಂಡಿತ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ತಿವಿ ಅಂತಾ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್ ನಯವಾಗೇ ವಿನಂತಿಸಿದ್ದಾರೆ. ಅವ್ರು, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಿದ್ರು. ಬಿಜೆಪಿ ಮುಖಂಡ L.T. ಪಾಟೀಲ್ ನಿನ್ನೆ ಮಂಗಳವಾರ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಏಜೇಂಟರುಗಳ ಹಾವಳಿಯ ಬಗ್ಗೆ ಮಾಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಿಐ, ಎಲ್ .ಟಿ.ಪಾಟೀಲರಿಗೆ ಹಾಗೆ ಯಾಕೆ ಅನಿಸಿದೆಯೋ ಗೊತ್ತಿಲ್ಲ. ಆದ್ರೆ, ನಮ್ಮ ಠಾಣೆಯಲ್ಲಿ ಅವ್ರು ಹೇಳಿದ ರೀತಿಯಲ್ಲಿ ಯಾವುದೇ ಏಜೇಂಟರುಗಳ ಹಾವಳಿ...

ಮುಂಡಗೋಡ ಜಂಬಗಿ ಆಸ್ಪತ್ರೆ ಪಕ್ಕದ ಹಣ್ಣಿ‌ನ ಅಂಗಡಿಗೆ ನುಗ್ಗಿದ ಟವೇರಾ ವಾಹನ..! ಅಂಗಡಿ ಧ್ವಂಸ, ಬೈಕ್ ಜಖಂ..!

ಮುಂಡಗೋಡ ಜಂಬಗಿ ಆಸ್ಪತ್ರೆ ಪಕ್ಕದ ಹಣ್ಣಿ‌ನ ಅಂಗಡಿಗೆ ನುಗ್ಗಿದ ಟವೇರಾ ವಾಹನ..! ಅಂಗಡಿ ಧ್ವಂಸ, ಬೈಕ್ ಜಖಂ..!

Accident News; ಮುಂಡಗೋಡ ಪಟ್ಟಣದ ಜಂಬಗಿ ಆಸ್ಪತ್ರೆಯ ಪಕ್ಕದ ಹಣ್ಣಿನ ಅಂಗಡಿಗೆ ಟವೆರಾ ವಾಹನವೊಂದು ಏಕಾಏಕಿ‌ನುಗ್ಗಿ ಹಾನಿಗೊಳಿಸಿದೆ. ಈಗ್ಗೆ ಕಲವೇ ನಿಮಿಷಗಳ ಹಿಂದೆ ನಡೆದಿರೋ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ, ಬದಲಾಗಿ ಒಂದು ಬೈಕ್ ಜಖಂಗೊಂಡಿದೆ. ಹಣ್ಣಿನ ಅಂಗಡಿಯಂತೂ ಚೆಲ್ಲಾಪಿಲ್ಲಿಯಾಗಿದೆ. KA – 25 ನೋಂದಣಿಯ ಟವೇರಾ ವಾಹನ ಏಕಾಏಕಿ ಹಣ್ಣಿನ ಅಂಗಡಿಗೆ ವೇಗವಾಗಿ ಬಂದು ನುಗ್ಗಿದೆ. ಪುಣ್ಯಕ್ಕೆ ಅಲ್ಲೇ ಇದ್ದ ಹಣ್ಣಿನ ವ್ಯಾಪಾರಿಗೆ ಏನೂ ಆಗಿಲ್ಲ. ಆದ್ರೆ, ಅದಕ್ಕೂ‌ ಮೊದಲು ಅಲ್ಲೇ ಇದ್ದ ಬೈಕ್ ಗೆ ವಾಹನ ಗುದ್ದಿದ ಪರಿಣಾಮ ಬೈಕ್ ಜಖಂ ಗೊಂಡಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Uttar Kannada News Today; ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

Uttar Kannada News Today; ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

Uttar Kannada News Today; ತಾಲೂಕಾ ಬಾಲಭವನ ಸೊಸೈಟಿ ಕಾರ್ಯಕ್ರಮ ಕಾರವಾರ;  ಕಾರವಾರದ ಸುಮತಿ ದಾಮ್ಲೆ ಹೈಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆದ ಬಾಲಭವನ ಸೊಸೈಟಿ ಕಾರ್ಯಕ್ರಮವನ್ನು ನಗರಸಭೆ ಸದಸ್ಯೆ ಸಂಧ್ಯಾ ಬಾಡಕರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಬಾಲಭವನ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶೋಭಾ ಡಿ ಮುಕಟಗಾರ ಮಾತನಾಡಿ, ಇಂದಿನ ಯುಗ ಸ್ಫರ್ಧಾತ್ಮಕ ಯುಗವಾಗಿದ್ದು, ಮಕ್ಕಳು ಸ್ಫರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ ಆಗ ಮಾತ್ರ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ . ಬಾಲ್ಯವಿವಾಹ ಹಾಗೂ ಫೋಕ್ಸೊ ಆಗುತ್ತಿದ್ದಲ್ಲಿ ನಮ್ಮ ಇಲಾಖೆಯ ಗಮನಕ್ಕೆ ಹಾಗೂ ಶಿಕ್ಷಕರಿಗೆ, ಪಾಲಕರಿಗೆ ಯಾವುದೇ ಮುಚ್ಚಮರೆ ಇಲ್ಲದೇ ತಿಳಿಸಬೇಕು. ಮಕ್ಕಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ವಿದ್ಯಾಭ್ಯಾಸ ಅಷ್ಟೇ ಅಲ್ಲದೇ ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು, ಎಲ್ಲಾ ಕ್ಷೇತ್ರದಲ್ಲೂ ಭಾಗವಹಿಸಿ ಮುಂದೆ ಬರಬೇಕು ಎಂದರು. ಕಾರ್ಯಕ್ರಮದಲ್ಲಿ ಸುಮತಿ ದಾಮ್ಲೆ ಹೈಸ್ಕೂಲ್ ಮುಖ್ಯೋಫಾದ್ಯಾಯ ಅರುಣ ರಾಣೆ, ವಿದ್ಯಾರ್ಥಿಗಳು, ಶಿಕ್ಷಕರು, ಮೇಲ್ವಿಚಾರಕಿಯರು ಉಪಸ್ಥಿತರಿದ್ದರು. ***********************...

School holiday News; ನಿರಂತರ ಮಳೆ; ಜಿಲ್ಲೆಯ 4 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ  ಶಾಲೆಗಳಿಗೆ ನಾಳೆ ರಜೆ..!

School holiday News; ನಿರಂತರ ಮಳೆ; ಜಿಲ್ಲೆಯ 4 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆ ರಜೆ..!

School Holiday News; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ, ಹೀಗಾಗಿ, ನಾಳೆ ಜೂನ್ 25 ರಂದು ಉತ್ತರ ಕನ್ನಡ ಜಿಲ್ಲೆಯ 4 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ಶಿಗ್ಗಾವಿಯಲ್ಲಿ ಹಾಡಹಗಲೇ ಭೀಕರ ಹತ್ಯೆ.! ಅಲ್ಲಿ ಹೆಣವಾಗಿದ್ದವನ ಹೆಸರು ಶಿವಾನಂದ ಕುನ್ನೂರ..!

ಶಿಗ್ಗಾವಿಯಲ್ಲಿ ಹಾಡಹಗಲೇ ಭೀಕರ ಹತ್ಯೆ.! ಅಲ್ಲಿ ಹೆಣವಾಗಿದ್ದವನ ಹೆಸರು ಶಿವಾನಂದ ಕುನ್ನೂರ..!

Shiggaon Murder News; ಶಿಗ್ಗಾವಿಯಲ್ಲಿ ಹಾಡಹಗಲೇ ಭೀಕರ ಹತ್ಯೆಯಾಗಿದೆ. ಶಿವಾನಂದ ಕುನ್ನೂರ ಎಂಬುವವನನ್ನು ಬೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಹಂತಕರು. ಶಿಗ್ಗಾವಿಯ ಹುಬ್ಬಳ್ಳಿ ರಸ್ತೆಯ ಸಮೀಪ, ಮಹೇಶ್ ದಾಬಾದ ಎದುರೇ ಹತ್ಯೆ ಮಾಡಲಾಗಿದೆ. ಹೀಗಾಗಿ ಇಡೀ ಶಿಗ್ಗಾವಿ ತಾಲೂಕೇ ಬೆಚ್ಚಿ ಬಿದ್ದಿದೆ. ಹಾಡಹಗಲೇ ಮರ್ಡರ್..! ಅಸಲು, ಶಿಗ್ಗಾವಿಲಿ ಇತ್ತಿಚೆಗೆ ಹಲವು ರೀತಿಯ ಕ್ರೈಮುಗಳು ಚಾಲ್ತಿ ಪಡೆದುಕೊಂಡಿವೆ. ಎರಡು ದಿನದ ಹಿಂದೆಯಷ್ಟೇ ಇಲ್ಲಿ CRPF ಯೋಧನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಇದೀಗ, ಹಾಡಹಗಲೇ ಶಿವಾನಂದ್ ಕುನ್ನೂರ ಎಂಬುವವನ ಭೀಕರ ಹತ್ಯೆಯಾಗಿದ್ದು ಇಡೀ ಶಿಗ್ಗಾವಿ ಪಟ್ಟಣ ಬೆಚ್ಚಿ ಬಿದ್ದಿದೆ. ಪೊಲೀಸರು ದೌಡು..! ಹಾಡಹಗಲೇ, ಇಂತಹದ್ದೊಂದು ಬೀಕರ ಮರ್ಡರ್ ನಡೆದಿದ್ದ ಕಾರಣಕ್ಕಾಗಿ ಇಡೀ ಶಿಗ್ಗಾವಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ.

error: Content is protected !!