ಮುಂಡಗೋಡ: ಪಟ್ಟಣದ ಜ್ಯೋತಿ (ಕ್ರಿಶ್ಚಿಯನ್) ಆಸ್ಪತ್ರೆಯಲ್ಲಿ ಮೂರು ದಿನದ ಹಸುಗೂಸನ್ನು ಬಿಟ್ಟು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಹಾಕಲಾಗಿರೋ ವಿಶೇಷ ತೊಟ್ಟಿಲಿನಲ್ಲಿ ಮುದ್ದು ಕಂದಮ್ಮನನ್ನು ಹೆತ್ತವರೇ ಬಿಟ್ಟು ಹೋಗಿದ್ದಾರೆ. ಸದ್ಯ ಆ ಹಸುಗೂಸು ಸಂಬಂಧಪಟ್ಟ ಅಧಿಕಾರಿಗಳ ಆರೈಕೆಯಲ್ಲಿದೆ. ಬೆಳ್ಳಂ ಬೆಳಿಗ್ಗೆ..! ಅಂದಹಾಗೆ, ಆಸ್ಪತ್ರೆಯಲ್ಲಿ ಮಕ್ಕಳನ್ನು ಹೆತ್ತು, ಸಾಕಲು ಆಗದವರಿಗಾಗಿ ತೊಟ್ಟಿಲೊಂದನ್ನು ಕಟ್ಟಿಡಲಾಗಿದೆ. ಕಂದಮ್ಮಗಳನ್ನು ಸಾಕಲು ಆಗದವರು, ಆ ತೊಟ್ಟಿಲಿನಲ್ಲಿ ಇಟ್ಟು ಹೋಗಬಹುದಾಗಿದೆ. ಹಾಗಂತ ನಾಮಫಲಕವನ್ನೂ ಹಾಕಲಾಗಿದೆ. ಹೀಗಾಗಿ, ಅದ್ಯಾರೋ ಹೆತ್ತವರು ಪುಟ್ಟ ಹಸುಗೂಸನ್ನು ಶುಕ್ರವಾರ ಬೆಳ್ಳಂ ಬೆಳಿಗ್ಗೆ ತೊಟ್ಟಿಲಲ್ಲಿ ಹಾಕಿ ಹೋಗಿದ್ದಾರೆ. ಇನ್ನು, ಮಗುವನ್ನು ಗಮನಿಸಿದ ಆಸ್ಪತ್ರೆಯವರು ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮಗುವನ್ನು ಶಿರಸಿಯ ದತ್ತು ಕೇಂದ್ರಕ್ಕೆ ನೀಡಲು ಕ್ರಮ ವಹಿಸಿದ್ದಾರೆ. ಈ ವೇಳೆ ಕ್ರೈಂ ಪಿಎಸ್ಐ ಎಚ್ ಬಿ ಕುಡಗುಂಟಿ, ಹಾಗೂ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Top Stories
ಸಮರ್ಪಕ ಆರೋಗ್ಯ ಸೇವೆಗೆ ಆಗ್ರಹಿಸಿ ಮನವಿ, ಜನ ವೇದಿಕೆಯಿಂದ ಕಾರವಾರ ಡಿಸಿ ಹಾಗೂ ಡಿಹೆಚ್ಓ ಗೆ ಮನವಿ..!
ಸಿದ್ದಾಪುರದ ಗೀತಾಳನ್ನು ಕೊಂದ ಹಂತಕನಿಗೆ ಶಿಕ್ಷೆ ಪ್ರಕಟ..!
ಮರಾಠಾ ಸಮುದಾಯದ ಹಿಂದುಳಿದ ವರ್ಗದವರಿಗೆ, ಆಹಾರ ವಾಹನ ಖರೀದಿಗೆ ಅರ್ಜಿ ಆಹ್ವಾನ
ಉತ್ತರ ಕನ್ನಡ| ಜನನ, ಮರಣವನ್ನು 21 ದಿನಗಳ ಒಳಗೆ ನೋಂದಣಿ ಮಾಡಿ; ಅಪರ ಜಿಲ್ಲಾಧಿಕಾರಿ
ಫೆ.22 ಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ..!
ನಾಳೆಯಿಂದ CBSE 10 ನೇ ತರಗತಿ ಬೋರ್ಡ್ ಪರೀಕ್ಷೆ..!
ತಡಸ ತಾಯವ್ವನ ದೇವಸ್ಥಾನದ ಬಳಿ ಸ್ವಿಪ್ಟ್ ಕಾರಿಗೆ ಬೊಲೆರೋ ವಾಹನ ಡಿಕ್ಕಿ..!
ಶಿವಶಕ್ತಿ ತಂಡಕ್ಕೆ ‘ಗಜಾನನ ಟ್ರೋಫಿ-2026’ ಮಕುಟ; ಗಣೇಶ್ ನಗರದ ದ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾವಳಿ ಸಂಪನ್ನ
KDCC ಬ್ಯಾಂಕ್ ನೂತನ ಅಧ್ಯಕ್ಷರಾಗಿ ಶಿವರಾಮ್ ಹೆಬ್ಬಾರ್ ಆಯ್ಕೆ, ಕೃಷ್ಣ ದೇಸಾಯಿಗೆ ಒಲಿದ ಉಪಾಧ್ಯಕ್ಷ ಸ್ಥಾನ..!
ಮುರುಡೇಶ್ವರದಲ್ಲಿ ಮಹಾಶಿವರಾತ್ರಿಯ ಜಾಗರಣೆ ಉತ್ಸವ, ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ : ಸಚಿವ ಮಾಂಕಾಳ ವೈದ್ಯ
ಹಾವೇರಿಯಲ್ಲಿ ಇಂದು ರಾಜ್ಯ ಮಟ್ಟದ “ಭೂ ಗ್ಯಾರಂಟಿ ಸಮರ್ಪಣಾ” ಸಮಾವೇಶ, ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಸಂಭ್ರಮಕ್ಕೆ ಸಜ್ಜು..!
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಖಡಕ್ ಸೂಚನೆ..!
ನಾಳೆ ನಾಡಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಉಷ್ಣ ಅಲೆ; ಎಚ್ಚರವಹಿಸುವಂತೆ ಜಿಲ್ಲಾಡಳಿತ ಸೂಚನೆ..!
ಕೆಂಪು ಕೋಟೆ ದಾಳಿಗೆ ಜೈಶ್-ಎ-ಮೊಹಮ್ಮದ್ ನಂಟು : ವಿಶ್ವಸಂಸ್ಥೆ ವರದಿ ; ಮಹಿಳಾ ಘಟಕದ ಬಗ್ಗೆ ಎಚ್ಚರಿಕೆ
ಗ್ರಾಮ ಪಂಚಾಯತಿಗಳು ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು; ಸಚಿವ ಮಾಂಕಾಳ ವೈದ್ಯ..!
ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!
“ಸಂಪಾಯಿತಲೇ ಪರಾಕ್” ಶ್ರೀಕ್ಷೇತ್ರ ಮೈಲಾರ ಕಾರ್ಣಿಕ..! ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದ ಗೊರವಯ್ಯ..!
ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ವಿಧಿವಶ..! 33 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸೂಪರ್ ಕಾಪ್..!
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!
ಮುಂಡಗೋಡ ಠಾಣೆಯಲ್ಲಿ “ಮಂತ್ಲಿ” ಬಾಬತ್ತಿಗಾಗಿ ಬರಗೆಟ್ಟವನ ಕಳ್ಳಾಟಗಳು ಒಂದಾ..? ಎರಡಾ..? ಪಿಐ ಬರಮಪ್ಪ ಸಾಹೇಬ್ರೆ ಕೊಂಚ ಗಮನಿಸಿ..!
ಮುಂಡಗೋಡ ಪೊಲೀಸ್ ಠಾಣೆಗೆ ನೂತನ ಪಿಐ ಆಗಿ ಬರಮಪ್ಪ ಲೋಕಾಪುರ ಅಧಿಕಾರ ಸ್ವೀಕರಿಸಿದ್ದಾರೆ. ಜೊತೆಗೆ ತಮ್ಮ ಹೊಸ ಠಾಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇದ್ರೊಂದಿಗೆ ಮುಂಡಗೋಡಿಗರು ಮತ್ತೊಮ್ಮೆ ಮೂಟೆ ಮೂಟೆಗಳಷ್ಟು ಭರವಸೆ ಹೊತ್ತು, ಬೆರಗುಗಣ್ಣಿನಿಂದ ಹೊಸ ಅಧಿಕಾರಿಯತ್ತ ನೋಡುತ್ತಿದ್ದಾರೆ. ಯಾಕಂದ್ರೆ, ಇತ್ತಿತ್ತಲಾಗಿ ನಮ್ಮ ಮುಂಡಗೋಡ ಪೊಲೀಸ್ ಠಾಣೆ ಅನ್ನೋದು ಅದ್ಯಾರ್ಯಾರದ್ದೋ “ರಾಜೀ” ಲೆಕ್ಕಗಳ ಅಡ್ಡೆಯಾದಂತಾಗಿತ್ತು. ಹಾಗಂತ, ನಾವು ಹೇಳ್ತಿಲ್ಲ, ಅದನ್ನೇಲ್ಲ ಕಣ್ಣಾರೆ ಕಂಡಿದ್ದ ಸಾರ್ವಜನಿಕರ ಬಹುದೊಡ್ಡ ಆರೋಪವಾಗಿತ್ತು. ಹಾಗಿದ್ರೆ ಅದೀಗ, ಬದಲಾಗತ್ತಾ..? ಬದಲಾಗಬೇಕಾದ್ರೆ ಸದ್ಯ ಮುಂಡಗೋಡ ಠಾಣೆಯಲ್ಲಿ ಏನೇನು ಬದಲಾವಣೆ ಆಗಬೇಕು..? ಇದೇಲ್ಲ ನೂತನ ಪಿಐ ಸಾಹೇಬ್ರು ಗಮನಿಸಲೇಬೇಕಿದೆ. ಇದು FIR..! ಬರಮಪ್ಪ ಲೋಕಾಪುರ, ಈಗಷ್ಟೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಯಶಸ್ವಿಯಾಗಿ ಕರ್ತವ್ಯ ನಿಭಾಯಿಸಿಕೊಂಡು ಬಂದಿರೋ ಪಿಐ. ಸದ್ಯ ಮುಂಡಗೋಡಿಗೆ ವರ್ಗವಾಗಿ ಬಂದಿದ್ದಾರೆ. ಹೀಗಾಗಿ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಜವಾಬ್ದಾರಿ ವಹಿಸಿಕೊಂಡ ಸಾಹೇಬ್ರಿಗೆ ಇಲ್ಲಿನ ಕೆಲವೊಂದಿಷ್ಟು ಒಳ ಹೊರಗಿನ ಮಾಹಿತಿಗಳನ್ನು ನೀಡಲೇ ಬೇಕಿದೆ. ತಾಲೂಕಿನ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೂತನ ಪಿಐ ಸಾಹೇಬ್ರು...
ಮುಂಡಗೋಡ ನೂತನ ಸಿಪಿಐ ಆಗಿ ಬಿ.ಎಸ್. ಲೋಕಾಪುರ್ ಅಧಿಕಾರ ಸ್ವೀಕಾರ..!
ಮುಂಡಗೋಡ ಪೊಲೀಸ್ ಠಾಣೆಯ ನೂತನ ಸಿಪಿಐ ಆಗಿ ಬಿ.ಎಸ್. ಲೋಕಾಪುರ ಮಂಗಳವಾರ ರಾತ್ರಿಯೇ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿ ಸಿಪಿಐ ಆಗಿದ್ದ ಸಿದ್ದಪ್ಪ ಸಿಮಾನಿಯವರಿಗೆ ಸರ್ಕಾರ ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ಲೋಕಾಪುರ್ ರವರನ್ನು ನೇಮಕಗೊಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಅಧಿಕಾರ ವಹಿಸಿಕೊಂಡರು. ಈ ವೇಳೆ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್, ಕ್ರೈಂ ಪಿಎಸ್ಐ ಸೇರಿದಂತೆ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.
ಹಳೂರಿನಲ್ಲಿ ಬೆಂಕಿ ಅವಘಡದಿಂದ 7 ಹಸುಗಳನ್ನು ಕಳೆದುಕೊಂಡಿದ್ದ ಮಾಲೀಕರಿಗೆ ಪರಿಹಾರದ ಚೆಕ್ ವಿತರಣೆ..!
ಮುಂಡಗೋಡ ಪಟ್ಟಣದ ಹಳೂರು ಓಣಿಯಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ನೊಂದವರಿಗೆ ಪರಿಹಾರ ವಿತರಿಸಲಾಯಿತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಬರೋಬ್ಬರಿ 7 ಜಾನುವಾರುಗಳು ಸಜೀವ ದಹನಗೊಂಡ ಹಿನ್ನೆಲೆಯಲ್ಲಿ, ಹಸುಗಳ ಮಾಲೀಕರಿಗೆ ಶಾಸಕ ಶಿವರಾಮ್ ಹೆಬ್ಬಾರ್ ಚೆಕ್ ವಿತರಿಸಿದ್ರು. ಅಂದಹಾಗೆ, ಬುಧವಾರ ಬೆಳಿಗ್ಗೆ ಹಳೂರಿನ ಹಸುಗಳ ಮಾಲೀಕ ಮಂಜುನಾಥ್ ಶೇಟ್ ಮನೆಗೆ ತೆರಳಿದ ಶಾಸಕರು, ಕೆ.ಡಿ.ಸಿ.ಸಿ ಬ್ಯಾಂಕ್ ನ ರೈತ ಕಲ್ಯಾಣ ನಿಧಿಯಿಂದ 1 ಲಕ್ಷ ರೂಪಾಯಿಗಳ ಪರಿಹಾರ ಧನದ ಚೆಕ್ ಅನ್ನು ಹಸ್ತಾಂತರಿಸಿದರು.
ಮುಂಡಗೋಡ ಸಿಪಿಐ ಸಿದ್ದಪ್ಪ ಸಿಮಾನಿ ಎತ್ತಂಗಡಿ..! ಹೊಸ ಸಿಪಿಐ ಯಾರು ಗೊತ್ತಾ..?
ಮುಂಡಗೋಡ ಪೊಲೀಸ್ ಠಾಣೆಯ ಸಿಪಿಐ ಸಿದ್ದಪ್ಪ ಸಿಮಾನಿ ಎತ್ತಂಗಡಿಯಾಗಿದ್ದಾರೆ. ನೂತನ ಸಿಪಿಐ ಆಗಿ ಬಿ.ಎಸ್. ಲೋಕಾಪುರ ಆಗಮಿಸುತ್ತಿದ್ದಾರೆ. ಹಾಗಂತ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿದೆ.
ಮುಂಡಗೋಡ ಲೊಯೋಲಾ ಶಾಲೆಯಲ್ಲಿ ಪಾಲಕ ಸಂತ ಇಗ್ನಾಶಿಯಸ್ ರವರ ಸಂಭ್ರಮದ ಮಹೋತ್ಸವ..!
ಮುಂಡಗೋಡ: ಲೊಯೋಲ ಶಿಕ್ಷಣ ಸಂಸ್ಥೆಯ ಲೊಯೋಲ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಸಂತ ಇಗ್ನಾಶಿಯವರ ಮಹೋತ್ಸವ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಮಾತನಾಡುತ್ತ, ಈ ಶಿಕ್ಷಣ ಸಂಸ್ಥೆ ಮುಂಡಗೋಡ ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದೆ. ಇಂಥಾ ಶಾಲೆಯಲ್ಲಿ ಓದಿದ ನೀವು ಧನ್ಯರು .ಸಾಧನೆ ಮಾಡಲು ನನಗೆ ಈ ಶಾಲೆಯ ವೇದಿಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂಬುದರ ಬಗ್ಗೆ ಪ್ರೌಢಿಮೆ ಇರಬೇಕು ಎಂದರು. ಲಯೋಲದ ಶಿಸ್ತು -ಶಿಕ್ಷಣ- ಸಂಸ್ಕಾರ ವನ್ನು ಕಾರ್ಯಕ್ರಮದ ಅಚ್ಚುಕ್ಕಟ್ಟಿನ ತಯಾರಿಯಿಂದ ಗೊತ್ತಾಗುತ್ತದೆ ಹಾಗೂ ಇನ್ನೊಬ್ಬರಿಗೆ ಮಾದರಿಯಾಗಿದೆ ಅಂತಾ ಶ್ಲಾಘಿಸಿದ್ರು. ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಅಥ್ಲೀಟ್ಸ್ ವಿಭಾಗದಲ್ಲಿ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿನಿ ಕು.ನಯನ ಕೊಕರೆ ಇವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಮುಂದಿನ ಕ್ರೀಡಾ ಭವಿಷ್ಯಕ್ಕೆ ಶುಭ ಕೋರಲಾಯಿತು. ತಾಲೂಕಿನಲ್ಲಿ ಶಾಲೆಯು ಶೈಕ್ಷಣಿಕ ಚಟುವಟಿಕೆ ಹಾಗೂ ಶೈಕ್ಷಣಿಕೇತರ ಚಟುವಟಿಕೆಗೂ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಬ್ರೀಜಸ್ ಆಫ್ ಸ್ಪೋರ್ಟ್ಸ್ ಸಂಸ್ಥೆಯೊಂದಿಗೆ ಅನ್ಯೋನ್ಯತೆ ಹೊಂದಿರುವ...
ಉಗ್ನಿಕೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ..!
ಮುಂಡಗೋಡ ತಾಲೂಕಿನ ಉಗ್ನಿಕೇರಿಯ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಯಾವುದೋ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಾಮು ಮಾಕು ಕೊಕರೆ (23) ಎಂಬುವ ಯುವಕನೇ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದು, ವಿಷ ಸೇವಿಸಿ ನರಳುತ್ತಿದ್ದ ವೇಳೆ ತಕ್ಷಣವೇ ಕುಟುಂಬಸ್ಥರು 108 ಅಂಬ್ಯಲೆನ್ಸ್ ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸ್ಥಳಕ್ಕೆ ಆಗಮಿಸಿದ ಅಂಬ್ಯಲೆನ್ಸ್ ಸಿಬ್ಬಂದಿ ಧನರಾಜ್ ಹಾಗೂ ಚಾಲಕ ವಿಜಯ್ ಪಾಟೀಲ್ ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ಗೊಟಗೋಡಿಕೊಪ್ಪದಲ್ಲಿ ಹಾಡಹಗಲೇ ತಾಯಿ ಮಗಳ ಮೇಲೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ..!
ಮುಂಡಗೋಡ ತಾಲೂಕಿನ ಗೊಟಗೋಡಿಕೊಪ್ಪದಲ್ಲಿ ತಾಯಿ ಮಗಳ ಮೇಲೆ ಹಾಡಹಗಲೇ ಮಾರಣಾಂತಿಕ ಹಲ್ಲೆಯಾಗಿದೆ. ಖುದ್ದು ಅಳಿಯನೇ ಅತ್ತೆ ಹಾಗೂ ಹೆಂಡತಿಯ ಮೇಲೆ ಕುಡುಗೋಲಿನಿಂದ ಮಾರಣಾಂತಿಕವಾಗಿ ಎರ್ರಾಬಿರ್ರಿ ಕೊಚ್ಚಿದ್ದಾನೆ ಅನ್ನೋ ಅರೋಪ ಕೇಳಿ ಬಂದಿದೆ, ಅಕ್ಷರಶಃ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮಗಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಟಗೋಡಿಕೊಪ್ಪದ ಹೊನ್ನಮ್ಮ ಬಸವರಾಜ್ ಚಿನ್ನಳ್ಳಿ ಹಾಗೂ ಮಗಳು ಅನ್ನಪೂರ್ಣ ಎಂಬುವವರೇ ಕುಡುಗೋಲಿನಿಂದ ಹಲ್ಲೆಗೆ ಒಳಗಾದವರಾಗಿದ್ದಾರೆ. ಘಟನೆ ಏನು..? ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪದಲ್ಲಿ ಅನ್ನಪೂರ್ಣ ಎಂಬುವ ಯುವತಿಯನ್ನು ಅದೇ ಗ್ರಾಮದ ನಾಗರಾಜ್ ವಡಲಣ್ಣವರ್ ಎಂಬುವ ಯುವಕನಿಗೆ ಕಳೆದ 10 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಆದ್ರೆ ಮದುವೆ ಆದಾಗಿನಿಂದ ಗಂಡನ ಕಿರುಕುಳ ವಿಪರೀತವಾಗಿತ್ತಂತೆ. ನಿತ್ಯವೂ ಕುಡಿದು ಬಂದು ಪತ್ನಿಯನ್ನು ಹೊಡೆಯುವ ಹೀನ ಚಾಳಿಯಿತ್ತಂತೆ. ಇದರ ನಡುವೆಯೇ ಅದು ಹೇಗೋ ಹೊಂದಿಕೊಂಡು ಸಂಸಾರ ಮಾಡಿದ್ದರ ಫಲವಾಗಿ ಇಬ್ಬರು ಮುದ್ದಾದ ಗಂಡು ಮಕ್ಕಳು ಹುಟ್ಟಿದ್ದಾರೆ. ಆದ್ರೆ, ಇದರ ಮೇಲೆಯೂ ಗಂಡನ ಕಿರುಕುಳ ನಿರಂತರವಾಗಿಯೇ ಇತ್ತು ಅನ್ನೋ ಆರೋಪ...
ಮುಂಡಗೋಡ ಹಳೂರಿನಲ್ಲಿ ಭಾರೀ ಬೆಂಕಿ ಅನಾಹುತ, ಏಳು ಆಕಳುಗಳು ಸಜೀವ ದಹನ..!
ಮುಂಡಗೋಡ ಪಟ್ಟಣದ ಹಳೂರಿನಲ್ಲಿ ಭಾರೀ ಬೆಂಕಿ ಅನಾಹುತವಾಗಿದೆ. ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಬರೋಬ್ಬರಿ 7 ಆಕಳುಗಳು ಸಜೀವ ದಹನವಾಗಿ ಸುಟ್ಟು ಕರಕಲಾಗಿವೆ. ಆದ್ರೆ, ಬೆಂಕಿ ತಗುಲಿದ್ದು ಹೇಗೆ ಅಂತಾ ಇನ್ನು ಖಚಿತತೆ ಸಿಕ್ಕಿಲ್ಲ. ಹಳೂರಿನ ಮಂಜುನಾಥ್ ನಾಗೇಶ್ ಶೇಟ್ ಎಂಬುವವರಿಗೆ ಸೇರಿದ, ದನದ ಕೊಟ್ಟಿಗೆಯಲ್ಲಿ ದುರಂತ ಸಂಭವಿಸಿದೆ. ತಡರಾತ್ರಿ ನಡೆದಿರೋ ಘಟನೆಯಲ್ಲಿ ಇಡೀ ದನದ ಕೊಟ್ಟಿಗೆ ಆಕಳುಗಳ ಸಮೇತವಾಗಿಯೇ ಸುಟ್ಟು ಕರಕಲಾಗಿದೆ. ದುರಂತ ಅಂದ್ರೆ ಘಟನೆ ನಡೆದಾಗ ರಾತ್ರಿ ಯಾರಿಗೂ ಗಮನಕ್ಕೆ ಬಂದಿಲ್ಲ, ಬೆಳಿಗ್ಗೆಯಷ್ಟೇ ಘಟನೆ ಬೆಳಕಿಗೆ ಬಂದಿದೆ. ಈ ಅನಾಹುತದಲ್ಲಿ ಹಾನಿಯಾದ ಅಂದಾಜು ಇನ್ನು ಲಭ್ಯವಾಗಿಲ್ಲ. ಸದ್ಯ ಮುಂಡಗೋಡ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾತೂರು ಬಳಿ ಮಿನಿ ಲಾರಿ ಪಲ್ಟಿ, ಲಾರಿಯಡಿ ಸಿಲುಕಿಕೊಂಡ ಚಾಲಕನ ಹೊರತೆಗೆಯಲು ಹರಸಾಹಸ, ಇಬ್ಬರಿಗೆ ಗಾಯ..!
ಮುಂಡಗೋಡ ತಾಲೂಕಿನ ಕಾತೂರು ಬಳಿಮಿನಿ ಲಾರಿ ಪಲ್ಟಿಯಾದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಲಾರಿಯಡಿ ಚಾಲಕ ಸಿಲುಕಿಕೊಂಡಿದ್ದು ಚಾಲಕನ ರಕ್ಷಣಾ ಕಾರ್ಯ ನಡಿತಿದೆ. ಜಿಯೋ ಟವರ್ ಕೆಲಸ ಮಾಡಲು ಮುಂಡಗೋಡಿಗೆ ಬಂದಿದ್ದ ಕೃಷ್ಣ ಸಿಂಗನಳ್ಳಿ ಹಾಗೂ ಚಾಲಕ ಶಶಿ, ಶಿರಸಿ ಕಡೆಗೆ ಹೋಗುತ್ತಿದ್ದಾಗ ಮಳೆಯಾದ ಹಿನ್ನೆಲೆಯಲ್ಲಿ ರಸ್ತೆ ಬದಿ ಮಿನಿ ಲಾರಿ ಪಲ್ಟಿಯಾಗಿದೆ. ಇನ್ನು ಘಟನೆಯಲ್ಲಿ ಚಾಲಕ ಲಾರಿಯಡಿಯಲ್ಲೇ ಸಿಲುಕಿಕೊಂಡಿದ್ದು, ನರಳುತ್ತಿದ್ದಾನೆ. ಹೀಗಾಗಿ, ಚಾಲಕನನ್ನು ಹೊರತೆಗೆಯಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಕಟ್ಟರ್ ಸಹಾಯದಿಂದ ಚಾಲಕನನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಕಟ್ಟರ್ ನಿಂದ ಕಾರ್ಯಾಚರಣೆ ಮಾಡುವ ವೇಳೆ ಯುವಕನೊಬ್ಬನಿಗೆ ಕಟ್ಟರ್ ತಾಗಿ ಗಾಯವಾಗಿದೆ. 108 ಅಂಬ್ಯುಲೆನ್ಸ್ ಸಿಬ್ಬಂದಿ ಧನರಾಜ್ ಹಾಗೂ ಚಾಲಕ ವಿಜಯ್ ಪಾಟೀಲ್ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲು ಸ್ಥಳಕ್ಕೆ ಧಾವಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








