Jamakhandi Murder Mystery;
ಮುಂಡಗೋಡಿನ ಇಂದಿರಾನಗರದ ಮೆಹೆಬೂಬ್ ಅಲಿ ಜಮಖಂಡಿಯ ಭೀಕರ ಹತ್ಯೆ ಕೇಸಿನ ಮೂವರು ಹಂತಕರಿಗೆ ಜೈಲೂಟ ಫಿಕ್ಸ್ ಆಗಿದೆ. ಹತ್ಯೆ ನಡೆದು ನಾಲ್ಕು ವರ್ಷಗಳ ನಂತರ ಮಾನ್ಯ ಕೋರ್ಟ್ ಓರ್ವ ಅಪರಾಧಿಗೆ ಜೀವಾವಧಿ ಶಿಕ್ಷೆ ಸೇರಿದಂತೆ ಮೂವರನ್ನೂ ಜೈಲಿಗೆ ತಳ್ಳಿದೆ. ಅದರೊಟ್ಟಿಗೆ, ಇಡೀ ಮುಂಡಗೋಡ ತಾಲೂಕನ್ನೇ ತಲ್ಲಣಗೊಳಿಸಿದ್ದ ಈ ಮರ್ಡರ್ ಕೇಸನ್ನು ಬೇಧಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಅಂದಿನ ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದ ತಂಡ ಯಶಸ್ವಿಯಾಗಿದೆ.

ಅದು ಹೊಸ ವರ್ಷ..!
ಅಂದಹಾಗೆ, ಅದು 2021 ರ ಕೊನೆಯ ದಿನ, ಅಂದ್ರೆ, ಡಿಸೆಂಬರ್ 31, ಇಡೀ ವಿಶ್ವವೇ ಹೊಸ ವರ್ಷ, ಹೊಸ ದಿನದ ನಿರೀಕ್ಷೆಯ ಖುಶಿಯಲ್ಲಿದ್ದರೆ, ಅವನೊಬ್ಬ ಮಾತ್ರ ತನ್ನ ಬುಲೆಟ್ಟು ಗಾಡಿಯ ಜೊತೆ ಜೊತೆಗೆ ಶವವಾಗಿ ಬಿದ್ದಿದ್ದ. ಕಲ್ಳಳ್ಳಿ ಹಾಗೂ ಹನಮಾಪೂರ ಗ್ರಾಮಗಳ ಮಧ್ಯದಲ್ಲಿರುವ ಕಲ್ಲಳ್ಳಿ ಹಳ್ಳದ ಚಿಕ್ಕಬ್ರಿಡ್ಜ್ ಕೆಳಗೆ ಶವವಾಗಿ ಸಿಕ್ಕಿದ್ದ. ಅವತ್ತು ಅಲ್ಲಿ ಸಿಕ್ಕವನ ಶವದ ಮೇಲೆ ರಕ್ತದ ಕುರುಹುಗಳಿದ್ದವು. ಯಾರೋ ಹಂತಕರು ಭೀಕರವಾಗಿ ಹತ್ಯೆ ಮಾಡಿ ಬೀಸಾಕಿ ಹೋಗಿರುವ ಸ್ಪಷ್ಟತೆ ಆ ಹೆಣ ನೋಡಿದ್ದ ಎಂತವರಿಗೂ ಅನ್ನಿಸಿತ್ತು.

ಮಾಯಾಂಗನೆಯ ಆಟ..!
ಹೀಗಾಗಿ, ಕೊಲೆಯಾದವನ ಸಹೋದರ ನೀಡಿದ್ದ ದೂರು ಆಧರಿಸಿ ತನಿಖೆಗಿಳಿದಿದ್ದ ಮುಂಡಗೋಡ್ ಪೊಲೀಸರಿಗೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಸುಳಿವು ಸಿಕ್ಕಿತ್ತು. ಅದೊಂದು “ಮಾಯಾಂಗನೆ”ಯ ನೆರಳಲ್ಲಿ ನಡೆದಿದ್ದ ಆ ಕೊಲೆಯನ್ನು ಅಕ್ಷರಶಃ ಬೇಧಿಸಿದ್ದರು ಪೊಲೀಸ್ರು. ಅಸಲು, ಅವತ್ತು ಪೊಲೀಸರ ಕೈಗೆ ಸಿಕ್ಕಿಬಿದ್ದ ಆ ಮೂವರೂ ಹಂತಕರನ್ನು ಹೆಡೆಮುರಿ ಕಟ್ಟಿ, ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿದ್ದವರಿಗೆ ಇಡೀ ಪ್ರಕರಣದ ಪಿನ್ ಟೂ ಪಿನ್ ಹಕೀಕತ್ತುಗಳೂ ಬಟಾಬಯಲಾಗಿದ್ದವು. ಅದ್ರಂತೆ, ಯಥಾವತ್ತೂ ಚಾರ್ಜಸೀಟ್ ಕೋರ್ಟಿಗೆ ಸಲ್ಲಿಸಲಾಗಿತ್ತು. ಹೀಗಾಗಿ, ಹಂತಕರಿಗೆ ತಪ್ಪಿಸಿಕೊಳ್ಳಲು ದಾರಿನೇ ಇರಲಿಲ್ಲ. ಪರಿಣಾಮ ಜೈಲಿಗೆ ದಾರಿ ಸುಗಮ ಮಾಡಿಕೊಂಡಿದ್ದಾರೆ.
ಲಕ್ಕೊಳ್ಳಿಯವರು..!
ಅಪಾದಿತರಾದ ಲಕ್ಕೊಳ್ಳಿಯ ಇಬ್ರಾಹಿಂ ಮಮ್ಮದಸಾಬ ಶಿಗ್ಗಾಂವ(32), ಷರೀಪ್ ತ ಮಹ್ಮದಸಾಬ ಶಿಗ್ಗಾಂವ(38), ಶ್ರೀಮತಿ ನಾಜೀಯಾ ಕೋಂ ಇಬ್ರಾಹಿಂ ಶಿಗ್ಗಾಂವ(24)
ಎಂಬುವ ಮೂವರನ್ನು ಕೊಲೆ ನಡೆದ ಎರಡು ದಿನಗಳಲ್ಲೇ ದಸ್ತಗೀರಿ ಆಗಿ, ಇದೀಗ ಶಿಕ್ಷೆಗೆ ಒಳಪಟ್ಟಿದ್ದಾರೆ.
ಅಸಲು, ಪ್ರಮುಖ ಕೊಲೆ ಆರೋಪಿ ಮುಂಡಗೋಡ ತಾಲೂಕಿನ ಲಕ್ಕೊಳ್ಳಿಯ ಇಬ್ರಾಹಿಂ ಗೆ ಜೀವಾವಧಿ ಶಿಕ್ಷೆ, ಹಾಗೂ 10 ಸಾವಿರ ರೂ ದಂಡ ಪ್ರಕಟಿಸಲಾಗಿದೆ. ಅದ್ರಂತೆ, ಕೊಲೆಗೆ ಸಹಕರಿಸಿದ ಆರೋಪಿಗಳಾದ ಶರೀಫ್ ಮತ್ತು ನಾಝಿಯಾಗೆ ತಲಾ 3 ವರ್ಷ ಸಜೆ ಹಾಗು ತಲಾ 3 ಸಾವಿರ ರೂ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ, ಕೊಲೆಯಾದ ಮೆಹಬೂಬ್ ಅಲಿ ಪತ್ನಿ ಬೇಬಿ ಆಯಿಶಾಗೆ 25 ಸಾವಿರ ರೂ ಪರಿಹಾರ ನೀಡುವಂತೆ ಮಹತ್ವದ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಪಬ್ಲಿಕ್ ಪ್ರೊಸಿಕ್ಯೂಟರ್ ರಾಜೇಶ ಎಂ ಮಳಗಿಕರ್ ಸಮರ್ಥವಾಗಿ ತಮ್ಮ ವಾದ ಮಂಡಿಸಿದ್ದರು.
ಈ ಮೇಲಿನ ಪ್ರಕರಣವನ್ನು ತನಿಖೆ ಮಾಡಿ ಆರೋಪಿತನಿಗೆ ಕಠಿಣ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಉತ್ತರ ಕನ್ನಡ ಎಸ್ಪಿ ದೀಪನ್ ಎಮ್.ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಜಗದೀಶ ನಾಯ್ಕ್, ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ ರವರ ಮಾರ್ಗದರ್ಶನದಲ್ಲಿ ಕೊರ್ಟ ಮೊನಟರಿಂಗ್ ಮಾಡಿದ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್, ತನಿಖಾ ಸಹಾಯಕರಾದ ಗಣಪತಿ ಹುನ್ನಳ್ಳಿ, ತಿರುಪತಿ ಚೌಡಣ್ಣನವರ ಮತ್ತು ಕೊರ್ಟ ಮೊನಟರಿಂಗ್ ಸಿಬ್ಬಂದಿ ಕರಬಸಪ್ಪ ಅಂಗಸೂರು ಪ್ರಮುಖಪಾತ್ರ ವಹಿಸಿದ್ದು ಪ್ರಶಂಸೆಗೆ ಕಾರಣರಾಗಿದ್ದಾರೆ.
ಇದನ್ನೂ ಓದಿ👉 ಶಿಗ್ಗಾವಿ BEO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ಚಿಗಳ್ಳಿಯ ಪ್ರಸನ್ನ ಜಾಧವ್ ವಿಧಿವಶ, ಹಲವರ ಸಂತಾಪ..!
ಇದನ್ನೂ ಓದಿ👉 ಇಂದ್ರಾ ನಗರದ ಮೆಹೆಬೂಬ್ ಅಲಿ ಜಮಖಂಡಿ ಮರ್ಡರ್ ಕೇಸ್ ಆರೋಪಿಗಳಿಗೆ ಶಿಕ್ಷೆ ಪ್ರಕಟ..! ಓರ್ವನಿಗೆ ಜೀವಾವಧಿ ಶಿಕ್ಷೆ..!