Police Operation;
ಮುಂಡಗೋಡಿನ ಪಿಐ ರಂಗನಾಥ್ ನೀಲಮ್ಮನವರ್ ಹಾಗೂ ಪಿಎಸ್ಐ ಯಲ್ಲಾಲಿಂಗ ಕುನ್ನೂರು ನೇತೃತ್ವದಲ್ಲಿ ಯುವ ಕ್ರೈಂ ಟೀಂ ಭರ್ಜರಿ ಕಾರ್ಯ ಮಾಡಿದೆ. ಬಹುಶಃ ಮುಂಡಗೋಡಿನ ಇತಿಹಾಸದಲ್ಲೇ ಮೊದಲ ಬಾರಿ ಅನಿಸತ್ತೆ. “ಚರಸ್” ಅನ್ನೋ ಮಾದಕ ವಸ್ತುವನ್ನು ಬಿಕರಿ ಮಾಡುತ್ತ ಅಕ್ರಮ ದಂಧೆ ಮಾಡುತ್ತಿದ್ದವನನ್ನು ಎಳೆದು ತರಲಾಗಿದೆ. ಇದ್ರೊಂದಿಗೆ ರಾತ್ರಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 8 ಲಕ್ಷ ಮೌಲ್ಯದ 781 ಗ್ರಾಂ ತೂಕದ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.

ಅಂದಹಾಗೆ, ಮುಂಡಗೋಡಿನ ಸುಭಾಷ ನಗರದ ಇಂಜಿನೀಯರ್ ಸಚಿನ್ ಟೇಕಬಹುದ್ದೂರ್ ಗೋರ್ಖಾ(26) ಎಂಬುವ ಆರೋಪಿಯನ್ನ ಹೆಡೆಮುರಿ ಕಟ್ಟಲಾಗಿದೆ. ಈತ ಮುಂಡಗೋಡಿನ ಹುಬ್ಬಳ್ಳಿ ರಸ್ತೆಯ ಬಸ್ ಡೀಪೋ ಹತ್ತಿರ ತನ್ನ ಬೈಕಿನಲ್ಲಿ ಚರಸ್ ಎಂಬುವ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ. ಹೀಗಾಗಿ, ಖಚಿತ ಮಾಹಿತಿ ಆಧಾರದಲ್ಲಿ ತಡರಾತ್ರಿಯೇ ದಾಳಿ ಮಾಡಿರೋ ಮುಂಡಗೋಡ ಪೊಲೀಸ್ರು ಆರೋಪಿಯನ್ನು ಬಲೆಗೆ ಕೆವಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಕೋಟೇಶ ನಾಗರೊಳ್ಳಿ, ಅಣ್ಣಪ್ಪ ಬುಡಿಗೇರ್,
ಮಹಾಂತೇಶ ಮುಧೋಳ, ಶಿವಾನಂದ ದಾನಣ್ಣನವರ, ಅನ್ವರ್ ಬಮ್ಮಿಗಟ್ಟಿ, ಗುರು ಬಿಶಟ್ಟಪ್ಪನವರ ಅವರು ಭಾಗವಹಿಸಿದ್ದರು.
