ಶಿರಸಿ-ಇಡೀ ಜಿಲ್ಲೆಯಲ್ಲೇ ಎರಡು ವರ್ಷಗಳಿಂದೀಚೆ ನಡೆಯದ ಭರ್ಜರಿ ಪೊಲೀಸ್ ದಾಳಿ ನಡೆದಿದೆ. ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿರೋ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದ ತಂಡ, 49 ಲಕ್ಷ ಹಣ, ನಾಲಕ್ಉ ಕಾರು ಸೇರಿ 19 ಜನರನ್ನ ಬಂಧಿಸಿದೆ.
ಅಲ್ಲಿ ಕೈ ಬದಲಾಯಿದ್ದು ಲಕ್ಷ ಲಕ್ಷ ಹಣ..!
ಶಿರಸಿ ತಾಲೂಕಿನ ಬೈರುಂಬೆ ಸಮೀಪದ ರೆಸಾರ್ಟ್ ಒಂದರಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದ ಇಸ್ಪೀಟ್ ದಂಧೆ ಮಾಹಿತಿ ಖುದ್ದು ಡಿವೈಎಸ್ಪಿ ಮೇಡಮಮ್ಮಿಗೆ ಹೋಗಿದೆ. ಹೀಗಾಗಿ, ಭರ್ಜರಿ ಪ್ಲಾನ್ ಮೂಲಕ ದಾಳಿ ನಡೆಸಿರೋ ಡಿವೈಎಸ್ಪಿ ಟೀಂ, ಬಹುದೊಡ್ಡ ಅಡ್ಡೆಯನ್ನೇ ನಿರ್ನಾಮ ಮಾಡಿದೆ. ಲಕ್ಷ ,ಲಕ್ಷ ಹಣ ಕೈ ಬದಲಾಯಿಸುತ್ತಿದ್ದ ಅಂದರ್ ಬಾಹರ್ ನಲ್ಲಿ ತೊಡಗಿದ್ದವರ ಹೆಡೆಮುರಿ ಕಟ್ಟಿದ್ದಾರೆ ಪೊಲೀಸ್ರು.
ಅದು ಹಾವೇರಿ ವೈದ್ಯನ ರೆಸಾರ್ಟ್..!?
ಅಸಲು, ಹಾವೇರಿಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇಟ್ಟುಕೊಂಡಿದ್ದ ವೈದ್ಯನೊಬ್ಬ, ಬೈರುಂಬೆ ಸಮೀಪದಲ್ಲಿ ರೆಸಾರ್ಟ್ ಪ್ರಾರಂಭಿಸಿದ್ದ. ಇಲ್ಲಿಯೇ ಇಂತಹದ್ದೊಂದು ಬೃಹತ್ ಗಾತ್ರದ ಅಕ್ರಮ ಇಸ್ಪೀಟು ಅಡ್ಡೆ ನಡೆಸುತ್ತಿದ್ದ ಎನ್ನಾಲಾಗಿದೆ. ಹೀಗಾಗಿ, ಶಿರಸಿ ಡಿವೈಎಸ್ಪಿ ಮೇಡಮ್ಮಿಗೆ ಸಿಕ್ಕ ಖಚಿತ ಮಾಹಿತಿ ಮೇಲೆ ದಾಳಿ ಮಾಡಲಾಗಿದೆ.
ಕೋಟಿ ಕೋಟಿ ಕುಳಗಳು..!
ನಿಜ ಅಂದ್ರೆ, ಆ ಇಸ್ಪೀಟು ಅಡ್ಡೆಯ ಅಂದರ್ ಬಾಹರ್ 50ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರೆಂದು ಹೇಳಲಾಗ್ತಿದೆ. ಆದ್ರೆ, ದಾಳಿತ ಸಮಯದಲ್ಲಿ ಬಹಳಷ್ಟು ಜನ ಪರಾರಿಯಾಗಿದ್ದಾರೆ. ಅಸಲು, ಇಲ್ಲಿ ಬಂಧಿತರಾದವರೇಲ್ಲ ದೊಡ್ಡ ದೊಡ್ಡ ಉದ್ಯಮಿಗಳು, ರಿಯಲ್ ಎಸ್ಟೇಟ್ ಕುಳಗಳು ಎನ್ನಲಾಗ್ತಿದೆ. ಇಲ್ಲಿ ಸಿಕ್ಕಿರೋ ಕಾರುಗಳು ಏನಿಲ್ಲವೆಂದರೂ ಒಂದೊಂದಕ್ಕೆ 20 ರಿಂದ 30 ಲಕ್ಷ ತೂಗುತ್ತವೆ ಎನ್ನಲಾಗಿದೆ.
Massive Police Raid;
ಸ್ಥಳೀಯ ಪೊಲೀಸರಿಗೆ ಗೊತ್ತಿರಲಿಲ್ಲವಾ..?
ಹಾಗೆ ನೋಡಿದ್ರೆ, ಇಂತಹದ್ದೊಂದು ಅಕ್ರಮ ಇಸ್ಪೀಟು ಅಡ್ಡೆ, ಈ ಭಾಗದಲ್ಲಿ ರಾಜಾರೋಷವಾಗಿ ನಡೀತಿತ್ತು ಅನ್ನೋ ಮಾತುಗಳು ಸ್ಥಳೀಯ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಹಾಗಿದ್ರೆ, ಇದೇಲ್ಲ ಸ್ಥಳೀಯ ಠಾಣೆಯ ಪೊಲೀಸರಿಗೆ ಗೊತ್ತಿರಲಿಲ್ಲವಾ..? ಅಥವಾ ಗೊತ್ತಿದ್ದೂ ಬೆಪ್ಪಗಿದ್ರಾ..? ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಎಸ್ಪಿ, ಡಿವೈಎಸ್ಪಿ ಮಟ್ಟದ ಅಧಿಕಾರಿಗಳೇ ಬರಬೇಕಾ..? ಏನಾಗಿದೆ ನಮ್ಮ ವ್ಯವಸ್ಥೆಗೆ..? ಇಷ್ಟೇಲ್ಲ ಪ್ರಶ್ನೆಗಳು ಸಾರ್ವಜನಿಕರ ವಲಯದಲ್ಲಿ ಪುಟಿದೇಳುತ್ತಿವೆ.. ಆದ್ರೆ ಉತ್ತರಿಸುವವರ್ಯಾರು..?
ನಿಜ, ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಮೇಡಮ್ಮಿಗೆ ನಮ್ಮ ಕಡೆಯಿಂದ ಒಂದು ಸೆಲ್ಯೂಟ್ ಇರಲಿ..!
ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಗೆ ಲೋಕಾ ದಾಳಿ – ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿ ಪತ್ತೆ..!