Transfer of Sirsi AC;
ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿಯವರನ್ಜು ಸರ್ಕಾರ ವಾರ್ಗಾವಣೆ ಮಾಡಿದೆ. ಅಸಲು, ಕಾವ್ಯಾರಾಣಿಯವರು ಬಂದು ಇನ್ನೂ ಎರಡು ವರ್ಷವಾಗಿಲ್ಲ, ಅವಧಿಗೂ ಮುಂಚೆಯ ಏಕಾಏಕಿ ವರ್ಗಾವಣೆ ಮಾಡಿರೋದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಡಗೋಡಿನ ಬಂಜಾರಾ ಸಮಾಜದ ಮುಖಂಡ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ಶೇಖರ್ ಲಮಾಣಿ ಎಸಿಯವರ ವರ್ಗಾವಣೆಯನ್ನು ಖಂಡಿಸಿದ್ದಾರೆ.

ಶಿರಸಿ ವಿಭಾಗದಲ್ಲಿ ಎಸಿ ಕಾವ್ಯಾರಾಣಿಯವರು ಒಳ್ಳೆಯ ಕೆಲಸ ಮಾಡುತ್ತಿದ್ದರು. ಹಿಂದುಳಿದವರ, ಬಡವರ ಪರವಾಗಿ ಸಾಲಷ್ಟು ಕೆಲಸ ಮಾಡುತ್ತಿದ್ದರು. ಅದೇಷ್ಟೇ ಹೊತ್ತಿನಲ್ಲಿ ಸಮಸ್ಯೆ ಹೊತ್ತು ಹೋದ್ರೂ ತಕ್ಷಣವೇ ಸೂಕ್ತವಾಗಿ ಸ್ಪಂಧಿಸುತ್ತಿದ್ದರು.

ಆದ್ರೆ ಇಂತಹ ಅಧಿಕಾರಿಯನ್ನು ಏಕಾಏಕಿ ವರ್ಗಾವಣೆ ಮಾಡಿದ್ದು ನಮಗೆ ನೋವಾಗಿದೆ. ಇದು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳೊಗೆ ಬೆಲೆಯೇ ಇಲ್ಲದಂತಹ ಪರಿಸ್ಥಿತಿಯಾಗಿದ್ದು, ತಕ್ಷಣವೇ ಎಸಿ ಕಾವ್ಯಾರಾಣಿಯವರ ವರ್ಗಾವಣೆ ಆದೇಶ ರದ್ದು ಮಾಡಬೇಕು ಅಂತಾ ಶೇಖರ್ ಲಮಾಣಿ ಆಗ್ರಹಿಸಿದ್ದಾರೆ.
