Shiggaon Crime News;
ಶಿಗ್ಗಾವಿಯಲ್ಲಿ ಮಚ್ಚಿನಿಂದ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಪಟ್ಟಣದ ಅಪೊಲೋ ಫಾರ್ಮಸಿ ಎದುರು ಘಟನೆ ನಡೆದಿದ್ದು, ಮಚ್ಚಿನಿಂದ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸ್ರು ಬಂಧಿಸಿದ್ದಾರೆ.
ಅಂದಹಾಗೆ, ಶಿಗ್ಗಾವಿ ಪಟ್ಟಣದ ಅಪೋಲೋ ಫಾರ್ಮಸಿ ಅಂಗಡಿಯ ಎದುರು ಮಹಮ್ಮದ್ ಸಲೀಮ್ ಶೇಕ್ (27) ಎಂಬಾತನು, ಚಂದಾಪುರ ಗ್ರಾಮದ ಪಿಗ್ಮಿ ಕಲೆಕ್ಟರ್ ಗಂಗಪ್ಪ ಹೂವಣ್ಣನವರ್(32) ಎಂಬುವವನ ಮೇಲೆ ಹಲ್ಲೆ ಮಾಡಿದ್ದಾನೆ.
ಅಸಲು, ಎರಡು ತಿಂಗಳ ಹಿಂದೆ 2 ಲಕ್ಷ ರೂ ಗಳನ್ನು ಬಡ್ಡಿಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ, ಗಂಗಪ್ಪನನ್ನು ಶಿಗ್ಗಾವ್ ಪಟ್ಟಣದ ಅಪೋಲೋ ಫಾರ್ಮಸಿ ಎದರು ಕರೆದು, ಕಣ್ಣಿಗೆ ಕಾರಪುಡಿ ಎರಚಿ ಮಚ್ಚಿನಿಂದ ಹೊಡೆದಿದ್ದಾನೆ. ಅದೃಷ್ಟವಶಾತ್ ಗಂಗಪ್ಪ ಮಚ್ಚಿನ ಏಟಿನಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡು ಪಾರಾಗಿದ್ದಾನೆ. ಕತ್ತಿಗೆ ಬೀಳಬೇಕಾದ ಮಚ್ಚಿನ ಏಟು ಬೆನ್ನಿಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೀಗಾಗಿ, ಗಾಯಾಳುವನ್ನು ತಕ್ಷಣವೇ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ಮಹ್ಮದ್ ಸಲೀಂ ನನ್ನು ಪೊಲೀಸ್ರು ಬಂಧಿಸಿದ್ದಾರೆ.
ಇದನ್ನೂ ಓದಿ👉ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!