Teacher Missing; ಮುಂಡಗೋಡಿನ ಪ್ರತಿಷ್ಟಿತ ಲೊಯೋಲಾ ವಿದ್ಯಾ ಸಂಸ್ಥೆಯ ಪ್ರೌಢಶಾಲೆಯ ಪ್ರತಿಭಾನ್ವಿತ ಹಿಂದಿ ಶಿಕ್ಷಕ ವಿನಾಯಕ ಶೇಟ್ ನಿನ್ನೆಯಿಂದ ಕಾಣೆಯಾಗಿದ್ದಾರೆ ಅಂತಾ ಅವರ ಪತ್ನಿ ಪದ್ಮಶ್ರೀ ವಿನಾಯಕ್ ಶೇಟ್ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಿನಾಂಕ 12.08.2025 ರಂದು ಅಂದ್ರೆ ಮಂಗಳವಾರ ಸಾಯಂಕಾಲ 5 ಗಂಟೆಯಿಂದ ರಾತ್ರಿ 8 ಗಂಟೆಯ ನಡುವಿನ ಅವಧಿಯಲ್ಲಿ, “ನಾನು ಸ್ವಲ್ಪ ಹೊರಗಡೆ ಹೋಗಿ ಬರ್ತಿನಿ” ಅಂತಾ ಹೇಳಿ ಮನೆಯಿಂದ ಹೋದವರು, ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಪರಿಚಯಸ್ಥರು ಹಾಗೂ ಸಂಬಂಧಿಕರಲ್ಲಿ ಹುಡುಕಾಡಿ ವಿಚಾರಿಸಿದ್ರೂ ಈವರೆಗೂ ಸಿಕ್ಕಿಲ್ಲ, ಹೀಗಾಗಿ, ಹುಡುಕಿ ಕೊಡುವಂತೆ ಅವ್ರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ👉ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!