Police Raid; ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಓರ್ವ ಆರೋಪಿಯನ್ನು ಮಾಲು ಸಮೇತ ಎಳೆದು ತಂದಿದ್ದಾರೆ. ಮುಂಡಗೋಡ ಬಂಕಾಪುರ್ ರಸ್ತೆಯ, ಹೆಬ್ಬಾರ ನಗರ ಕ್ರಾಸ್ ಬಳಿ ಗಾಂಜಾ ಮಾರಾಟದಲ್ಲಿ ತೊಡಗಿದ್ದವನು ಅಂದರ್ ಆಗಿದ್ದಾನೆ.
ಅಂದಹಾಗೆ, ಖಾಕಿಗಳ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದವನು ಮುಂಡಗೋಡ ಇಂದ್ರಾನಗರ ಪ್ಲಾಟಿನ ಸೈಯದ್ ಅಲಿ ಹುಸೇನ್ ಸಾಬ್ ಬೆಂಡಿಗೇರಿ ಎಂಬುವವ.. ಬಂಕಾಪುರ ರಸ್ತೆಯ ಹೆಬ್ಬಾರ್ ಕ್ರಾಸ್ ಬಳಿ, ಸ್ಕೂಟಿಯ ಮೇಲೆ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿರೊ ಪೊಲೀಸರು15 ಸಾವಿರ ರೂ.ಮೌಲ್ಯದ 260 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಸಿಪಿಐ ರಂಗನಾಥ್ ನೀಲಮ್ಮನವರ್ ನೇತೃತ್ವದಲ್ಲಿ, ಪಿಎಸ್ಐ ಪರಶುರಾಮ್, ಸಿಬ್ಬಂದಿಗಳಾದ ಕೋಟೆಶ್ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ್, ಮಹಾಂತೇಶ್ ಮುಧೋಳ್, ಬಸವರಾಜ್ ಒಡೆಯರ್, ಮಂಜುನಾಥ್ ಓಣಿಕೇರಿ ಪಾಲ್ಗೊಂಡಿದ್ದರು.