ಕೋಡಿ ಶ್ರೀಗಳು ನುಡಿದ್ರು ಮತ್ತೊಂದು ಭಯಾನಕ ಭವಿಷ್ಯ..!

Kodi Sri Astrology; ಹಾಸನ; ಕೋಡಿ ಶ್ರೀಗಳು ಮತ್ತೊಂದು ಆತಂಕಕಾರಿ ಭವಿಷ್ಯ ನುಡಿದಿದ್ದಾರೆ. ಊಹೆಗೂ ನಿಲುಕದ ದು:ಖ ಎದುರಾಗಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆತಂಕಕಾರಿ ಭವಿಷ್ಯ ನುಡಿದಿದ್ದಾರೆ

ಹಾಸನದಲ್ಲಿ ಮಾತನಾಡಿರುವ ಕೋಡಿಶ್ರೀಗಳು, ರಾಜ್ಯ ಹಾಗೂ ದೇಶಕ್ಕೆ ಮತ್ತೊಂದು ಗಂಡಾಂತರ ಎದುರಾಗಲಿದೆ ಎಂದಿದ್ದಾರೆ. ಮೇಘಸ್ಫೋಟ, ಜಲಪ್ರಳಯ, ವಾಯುವಿನಿಂದ ಆಪತ್ತು ಎದುರಾಗಲಿದೆ ಎಂದು ಈ ಮೊದಲೇ ಹೇಳಿದ್ದೆ. ವಿಮಾನ ಆಪತ್ತು ಸೇರಿದಂತೆ ಕೆಲ ಆಪತ್ತುಗಳು ಸಂಭವಿಸಲಿವೆ. ಮುಂದೆ ಇನ್ನೊಂದು ಬ್ಭಾರಿ ಮೇಘಸ್ಫೋಟ ಸಂಭವಿಸಲಿದೆ. ಊಹೆಗೂ ಮೀರಿದ ದು:ಖ ಎದುರಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ👉 ಅಂಗನವಾಡಿಗಳಲ್ಲಿಯು ಬಂತು ಆಂಗ್ಲ ಪಠ್ಯ..!

Kodi Sri Astrology; ಮನುಷ್ಯ ಓಡಾಡುತ್ತಲೆ ಸಾಯುತ್ತಾನೆ ಎಂದು ಹೇಳಿದ್ದೆ. ಇನ್ನಷ್ಟು ಅಸ್ಥಿರತೆ ಹೆಚ್ಚಾಗಲಿದೆ ಎಂದಿದ್ದಾರೆ. ”ಸೂಳೆಯ ಮಗನುಟ್ಟಿ ಆಳುವನು ಮುನಿಪುರವ ಯುದ್ಧವಿಲ್ಲದ ಮಡಿಯೇ ಪುರವೆಲ್ಲ ಕೂಳಾದೀತು’ ಎಂದು ಮಾರ್ಮಿಕವಾಗಿ ಸ್ವಾಮೀಜಿ ಹೇಳಿದ್ದಾರೆ. ಇದನ್ನು ಬರೆದಿಟ್ಟುಕೊಳ್ಳಿ. ಇದಕ್ಕೆ ಪರಿಹಾರ ಆಮೇಲೆ ಸೂಚಿಸುತ್ತೇನೆ ಎಂದಿದ್ದಾರೆ. ಒಟ್ಟಾರೆ ಕೋಡಿಶ್ರೀ ಭವಿಷ್ಯದ ಪ್ರಕಾರ ರಾಜ್ಯಕ್ಕೆ, ದೇಶಕ್ಕೆ ಆಪತ್ತು ಕಾದಿದೆ ಎಂದು ಹೇಳಲಾಗಿದೆ.