ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!

Deportation Orders; ವಿವಿಧ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಮುಂಡಗೋಡಿನ ಕಿರಣ್ ಸಾಳುಂಕೆಗೆ ಶಿರಸಿ ಸಹಾಯಕ ಆಯುಕ್ತರು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಹಲವು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿ, ಸಾಮಾಜಿಕ ಸ್ವಾಸ್ತ್ಯ ಹಾಳು ಮಾಡಬಾರದು ಅನ್ನೋ ಮುಂಜಾಗ್ರತಾ ಕ್ರಮವಾಗಿ ಶಿರಸಿ ಸಹಾಯಕ ಆಯುಕ್ತೆ ಕಾವ್ಯಾರಾಣಿ ಆದೇಶ ಹೊರಡಿಸಿದ್ದಾರೆ ಅಂತಾ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್ ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಪಿಐ ರಂಗನಾಥ್ ನೀಲಮ್ಮನವರ್ ರವರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಎಸಿ ಕೋರ್ಟ್ ನಲ್ಲಿ ವಿಚಾರಣೆ ನಡೆಸಿದ್ದ ಶಿರಸಿ ಸಹಾಯಕ ಆಯುಕ್ತೆ ಕಾವ್ಯಾರಾಣಿಯವರು ತಕ್ಷಣಕ್ಕೆ ಜಾರಿಗೆ ಬರುವಂತೆ ಕಿರಣ್ ಸಾಳುಂಕೆಗೆ, ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಪಟ್ಟಣದ ಇಂದಿರಾನಗರದ ನಿವಾಸಿ ಕಿರಣ ಸಾಳುಂಕೆಯ ಮೇಲೆ ಕೊಲೆ, ಸುಲಿಗೆ, ಸೇರಿದಂತೆ ವಿವಿಧ ಪ್ರಕರಣಗಳು ಇದ್ದು ಸೋಮವಾರ ಶಿರಸಿ ಸಹಾಯಕ ಆಯುಕ್ತರಾದ ಕಾವ್ಯಾರಾಣಿ ಅವರು ಕಿರಣನನ್ನು ಮೂರು ತಿಂಗಳವರೆಗೆ ಕಾರವಾರ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ.

ಆದೇಶ ಹೊರಬರುತ್ತಿದ್ದಂತೆ ಮುಂಡಗೋಡ ಪೊಲೀಸರು ಕಿರಣ್ ಸಾಳುಂಕೆಯನ್ನು ಯಾದಗಿರಿ ಜಿಲ್ಲೆಗೆ ರವಾನಿಸಿದ್ದಾರೆ.

error: Content is protected !!