ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!

Forest Smugglers;
ಮುಂಡಗೋಡ ತಾಲೂಕಿನ ಕಾತೂರು ಅರಣ್ಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬಾಳೆಕೊಪ್ಪ (ಕರ್ಕಲ ಜಡ್ಡಿ) ಹತ್ತಿರ ಎರಡು ಬೈಕ್ ನಲ್ಲಿ ಜಿಂಕೆ ಚರ್ಮ ಹಾಗೂ ಕಾಡು ಹಂದಿಯ ಮಾಂಸ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಹೆಡೆಮುರಿ‌ಕಟ್ಟಿದ್ದಾರೆ.

ಬಾಳೆಕೊಪ್ಪದ ಕನಕಪ್ಪ ದುರ್ಗಪ್ಪ ಮಾದರ್,
ಪರಶುರಾಮ್ ಕನಕಪ್ಪ ಮಾದರ್, ಸೊರಬ ತಾಲೂಕು ಕೋಡಿಕೊಪ್ಪದ ಸುರೇಶ ಬಿನ್ ದೇವಪ್ಪ, ಉಮೇಶ್ ಬಿನ್ ಗುಡ್ಡಪ್ಪ, ಶಿವಪುತ್ರಪ್ಪ ಬಿನ್ ಹನುಮಂತಪ್ಪ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಎರಡು ಬೈಕ್, ಒಂದು ಜಿಂಕೆ ಚರ್ಮ, 3.9 ಕೆಜಿ ಕಾಡುಹಂದಿಯ ಮಾಂಸ ವಶಪಡಿಸಿಕೊಳ್ಳಲಾಗಿದೆ.

error: Content is protected !!