ಹಾವೇರಿ: ಗೋವಿನಜೋಳಕ್ಕೆ ನೀರು ಹಾಯಿಸಲು ಹೋಗಿದ್ದ ರೈತ ಸಹೋದರರ ಮೇಲೆ ಚಿರತೆಯ ಭಯಾನಕ‌ ದಾಳಿಯಿಂದ ಓರ್ವ ರೈತ ಸಾವನ್ನಪ್ಪಿ ಇನ್ನೋರ್ವ ನಿಗೆ ಗಂಭೀರ ಗಾಯವಾಗಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ದಗೇರಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

ಚಿರತೆದಾಳಿಯಿಂದ‌ ಸಾವನ್ನಪ್ಪಿರುವ ರೈತನನ್ನು ಬೀರೆಶ ಬಳಗಾವಿ(28)ಎಂದು ಗುರುತಿಸಲಾಗಿದೆ. ಗಂಭೀರವಾಗಿ
ಗಾಯಗೊಂಡ ರೈತನನ್ನು ಗಣೇಶ ಬಳಗಾವಿ ಎಂದು ತಿಳಿದುಬರುತ್ತದೆ. ಇತನನ್ನು‌ಚಿಕಿತ್ಸೆಗೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೆಕ್ಕೆಜೋಳಕ್ಕೆ ನೀರು ಹಾಯಿಸಲು ಹೋದಾಗ ಅ‌19 ರ ರಾತ್ರಿ 11 ಗಂಟೆಯ ಸುಮಾರಿಗೆ ಚಿರತೆ ಸಹೋದರರ ಮೇಲೆ ದಾಳಿ‌ ಮಾಡಿತ್ತು.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆನಡೆಸಿದರು. ರಟ್ಟಿಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.