Department of Horticulture;
ಮುಂಡಗೋಡ ತೋಟಗಾರಿಕಾ ಇಲಾಖೆ ಅಧಿಕಾರಿಗಳು ನಿಜಕ್ಕೂ ಎಚ್ಚರವಾಗಿದ್ದಾರಾ..? ಅಥವಾ ಯಾರದ್ದೂ ಬಿಡೆಯೇ ಬೇಡ ಅಂತಾ ಗಡದ್ದಾಗಿ ಮಲಗಿದ್ದಾರಾ..? ಒಂದೂ ಅರ್ಥವಾಗ್ತಿಲ್ಲ. ಯಾಕಂದ್ರೆ, ಅವ್ರ ನೆರಳಲ್ಲೇ ಬೆಳೆದಿದ್ದ, ಅದೇ ಇಲಾಖೆಯ ಜತನದಲ್ಲೇ ಜೀವಪಡೆದಿದ್ದ ನೂರಾರು ಸರ್ಕಾರಿ ಅಡಿಕೆ ಸಸಿಗಳು ಉಸಿರು ಚೆಲ್ಲಿವೆ. ಅದ್ಯಾವ ಕಾರಣಕ್ಕೋ ಏನೋ ಕಳೆನಾಶಕ ಸಿಂಪಡಿಸಿ ಎರಡು ವರ್ಷದ ಅಡಿಕೆ ಸಸಿಗಳನ್ನು ಅಕ್ಷರಶಃ ಮುಗಿಸಿ ಬಿಟ್ಟಿದ್ದಾರೆ ದುಷ್ಕರ್ಮಿಗಳು. ದುರಂತ ಅಂದ್ರೆ ಘಟನೆ ನಡೆದು ಭರ್ತಿ ಎರಡು ವಾರ ಕಳೆದ್ರೂ ಮುಂಡಗೋಡಿನ ತೋಟಗಾರಿಕಾ ಅಧಿಕಾರಿಗಳು ಈ ಬಗ್ಗೆ ತುಟಿ ಬಿಚ್ಚಿಲ್ಲ. ಬದಲಾಗಿ ಸಂಪೂರ್ಣ ಮುಚ್ಚಿ ಹಾಕುವ ಯತ್ನ ಮಾಡ್ತಿದಾರೆ ಅಂತಾ ಅನುಮಾನ ಶುರುವಾಗಿದೆ.
ಅದು ಎಮರ್ಜೆನ್ಸಿ ಕಳೆನಾಶಕ..!
ಯಸ್, ಮುಂಡಗೋಡ ತಾಲೂಕಿನ ಬಾಚಣಕಿಯ ತೋಟಗಾರಿಕಾ ಇಲಾಖೆಯ ಅಧೀನದಲ್ಲಿ, ಸುಮಾರು 50 ಎಕರೆ ಜಮೀನಿನಲ್ಲಿ ಕರ್ನಾಟಕ ತೋಟಗಾರಿಕಾ ಅಭಿವೃದ್ಧಿ ಏಜೆನ್ಸಿ ನಡೆಸುತ್ತಿರೋ ಸರ್ಕಾರಿ ತೋಟದ ಹಣೆ ಬರಹ ಇದು. ಇಲ್ಲಿ ಕಳೆದ ಎರಡು ವಾರಗಳ ಹಿಂದೆ, ಇಲ್ಲಿನ ಅಡಿಕೆ ತೋಟದಲ್ಲಿ ಬೆಳೆಯಲಾಗಿದ್ದ ಎರಡು ವರ್ಷದ ಅಡಿಕೆ ಸಸಿಗಳನ್ನು “ಎಮರ್ಜೆನ್ಸಿ” ಕಳೆನಾಶಕ ಸಿಂಪಡಿಸಿ ಸುಟ್ಟು ಹಾಕಲಾಗಿದೆ. ನೂರಾರು ಅಡಿಕೆ ಸಸಿಗಳ ಮಾರಣ ಹೋಮವಾಗಿದೆ. ಅಸಲು, ಸರ್ಕಾರದ ಹಣದಲ್ಲಿ ಬೆಳೆಸಲಾಗಿದ್ದ ಈ ಅಡಿಕೆ ಸಸಿಗಳನ್ನು ಕೊಂದು ಹಾಕಿದ್ರೂ ಅಧಿಕಾರಿಗಳು ಮಾತ್ರ ಈ ಕಡೆ ಸುಳಿದಿಲ್ಲ. ಸುಳಿಯೋದಿರಲಿ, ಎಲ್ಲಾ ಬಾನಗಡಿಗಳು ಗೊತ್ತಿದ್ರೂ ತುಟಿ ಬಿಚ್ಚಿಲ್ಲ. ಹೀಗಾಗಿ, ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.
ಅಲ್ಲಿದ್ದವರೇ ಮಾಡಿದ್ದ ಕೃತ್ಯವಾ..?
ಹೌದು, ಇಲ್ಲಿನ ರೈತರು, ಸಾರ್ವಜನಿಕರು ಹೇಳೊ ಪ್ರಕಾರ, ಈ ಕೃತ್ಯ ಎಸಗಿದ್ದು, ಇದೇ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದ ಇಬ್ಬರು ಕಾರ್ಮಿಕರಂತೆ, ಅವರಿಗೆ ಅದ್ಯಾರ ಮೇಲೆ ಕೋಪವೋ ಗೊತ್ತಿಲ್ಲ. ಅವ್ರೇ ಈ ತರಹ ಬೇಕು ಅಂತಲೇ ಕಳೆನಾಶಕ ಸಿಂಪಡಿಸಿ ನೂರಾರು ಅಡಿಕೆ ಸಸಿಗಳನ್ನು ಸುಟ್ಟು ಹಾಕಿದ್ದಾರೆ ಅನ್ನೋ ಆರೋಪ ಇದೆ. ಇದೇಲ್ಲ ಇಲ್ಲಿನ ಅಧಿಕಾರಿಗಳಿಗೂ ಗೊತ್ತಾಗಿದೆಯಂತೆ. ಆದ್ರೆ, ಪಾಪ ಅಧಿಕಾರಿಗಳಿಗೆ ಇದೇಲ್ಲ ಬೇಕಿಲ್ಲವೆನೋ..? ಸರ್ಕಾರದ ಸಂಪತ್ತನ್ನು ಯಾರ್, ಏನ್ ಬೇಕಾದ್ರೂ ಮಾಡಿಕೊಳ್ಳಲಿ ಇವ್ರಿಗೆ ಅದರ ಬಗ್ಗೆ ಕನಿಷ್ಟ ಖಬರೂ ಬೇಕಿಲ್ಲವೇನೋ ಎಂಬಂತಾಗಿದೆ.
ಈಗಲಾದ್ರೂ ಎಚ್ಚೆತ್ತುಕೊಳ್ಳಿ..!
ಬಾಚಣಕಿಯ ಕೆಲ ಪ್ರಜ್ಞಾವಂತ ನಾಗರೀಕರು ಪಬ್ಲಿಕ್ ಫಸ್ಟ್ ಗೆ ಮಾಹಿತಿ ನೀಡಿದ್ದರು, ಹೀಗಾಗಿ, ತಕ್ಷಣವೇ ಸ್ಥಳಕ್ಕೆ ಹೋದಾಗ, ಅಲ್ಲಿನ ಅಡಿಕೆ ಗಿಡಗಳ ಸ್ಥಿತಿ ಕಂಡು ನಿಜಕ್ಕೂ ಬೇಸರವೆನಿಸಿತು. ಯಾಕಂದ್ರೆ, ನಮ್ಮ, ನಿಮ್ಮೇಲ್ಲರ ಹಣ ಖರ್ಚು ಮಾಡಿ ಬೆಳೆಸಲಾಗಿದ್ದ ನೂರಾರು ಅಡಿಕೆ ಸಸಿಗಳನ್ನು ಹಾಗೆ ನಿರ್ದಯವಾಗಿ ಕೊಂದು ಹಾಕಿದ್ದು ಇಲ್ಲಿನ ಅಧಿಕಾರಿಗಳಿಗೆ ಏನೂ ಅನಿಸಲೇ ಇಲ್ವಾ..? ಇಲ್ಲಿನ ಅಷ್ಟೂ ಮಜಕೂರಗಳು ಕಣ್ಣೆದುರಿಗೆ ಕಂಡ್ರೂ ಆ ಅಧಿಕಾರಿಗಳಿಗೆ ದಯವೇ ಬರಲಿಲ್ಲವಾ..? ದುಷ್ಕೃತ್ಯ ಎಸಗಿರೋರ ವಿರುದ್ಧ ಕ್ರಮ ಕೈಗೊಳ್ಳದೇ ಯಾಕೆ ಮೌನಕ್ಕೆ ಜಾರಿದ್ದಾರೆ..? ಅಷ್ಟಕ್ಕೂ, ಈ ಕೃತ್ಯದ ಹಿಂದೆ ಅಧಿಕಾರಿಗಳ ಹುಂಬತನಗಳು ಕೆಲಸ ಮಾಡಿದೆಯಾ..? ಈ ಘಟನೆ ಅಧಿಕಾರಿಗಳ ಬುಡಕ್ಕೇ ಎಗರುವ ಸಾಧ್ಯತೆ ಇತ್ತಾ..? ಅದಕ್ಕಾಗೇ, ಕೃತ್ಯ ಎಸಗಿದವರನ್ನು ರಕ್ಷಣೆ ಮಾಡಲಾಗ್ತಿದೆಯಾ..? ಇದೇಲ್ಲ ಪ್ರಶ್ನೆಗಳಿಗೆ ಉತ್ತರಿಸುವವರಾರು “ಗೋಪಿ” ಲೋಲಾ..? ಅಂತಾ ಜನ ಕೇಳ್ತಿದಾರೆ.. “ಹೇ ಕೃಷ್ಣ” ಪರಮಾತ್ಮ ನೀನೇ ಕಾಪಾಡು ಅಂತಿದಾರೆ.