Gold Price Today: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಮತ್ತೊಮ್ಮೆ ಗಗನಕುಸುಮವಾಗತೊಡಗಿದೆ. ಮುಂಬರುವ ವರಮಮಹಾಲಕ್ಷ್ಮೀ ಹಬ್ಬಕ್ಕೂ ಮುನ್ನ ಬಂಗಾರ ಖರೀದಿಸಬೇಕು ಎಂದುಕೊಂಡಿದ್ದವರಿಗೆ ದುಬಾರಿಯಾಗಿ ಪರಿಣಮಿಸಿದೆ.
ಕಳೆದ ವಾರ ಇಳಿಕೆಯಾಗಿದ್ದ ಹಳದಿ ಲೋಹವು ಕೊನೆಯ ವೀಕೆಂಡ್‌ನಿಂದ ಸತತ ಏರಿಕೆಯಾಗ್ತಲೇ ಇದೆ. 22 ಕ್ಯಾರೆಟ್ ಆಭರಣ ಚಿನ್ನ ಹಾಗೂ 24 ಕ್ಯಾರೆಟ್ ಶುದ್ಧ ಬಂಗಾರಗಳೆರಡು ಸಹ ಬೆಲೆ ಹೆಚ್ಚಳಕ್ಕೆ ಸಾಕ್ಷಿಯಾಗಿದ್ದು, ಖರೀದಿದಾರರ ಬಜೆಟ್‌ಗೆ ಹೊಡೆತ ಬಿದ್ದಿದೆ.
ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವೇನು?
ಜಾಗತಿಕ ಮಟ್ಟದಲ್ಲಿ ರಷ್ಯಾ-ಉಕ್ರೇನ್ ಯುದ್ಧದ ನಡುವೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕದ ಬೆದರಿಕೆಗಳು ಮಾರುಕಟ್ಟೆಯಲ್ಲಿ ಕರೆಕ್ಷನ್‌ಗೆ ಕಾರಣವಾಗಿದೆ. ಭಾರತವು ರಷ್ಯಾದಿಂದ ಅಗ್ಗದ ಬೆಲೆಗೆ ತೈಲ ಖರೀದಿಸುತ್ತಿದೆ ಎಂಬ ಕಾರಣವನ್ನಿಟ್ಟುಕೊಂಡು ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಸುಂಕವನ್ನು ಮುಂದಿನ 24ಗಂಟೆಯಲ್ಲಿ ಏರಿಕೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು.
ಮುಂದಿನ ದಿನಗಳಲ್ಲಿ ಭಾರತದ ರಫ್ತುಗಳ ಮೇಲೆ ಸುಂಕವನ್ನು ಗಣನೀಯ ಏರಿಕೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಭಾರತವು ತಕ್ಕ ತಿರುಗೇಟು ನೀಡಿದ್ದರೂ ಸಹ ಹೂಡಿಕೆದಾರರು ಭಯಗೊಂಡಿದ್ದಾರೆ. ಇದ್ರಿಂದಾಗಿ ಸುರಕ್ಷಿತ ಹೂಡಿಕೆಯಾದ ಚಿನ್ನದ ಮೇಲೆ ಹೂಡಿಕೆ ಹೆಚ್ಚಿಸಿದ್ದಾರೆ.
ದೆಹಲಿಯಲ್ಲಿ ಚಿನ್ನದ ಬೆಲೆ ಎಷ್ಟಿದೆ?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 100 ರೂಪಾಯಿ ಏರಿಕೆಗೊಂಡು 93,950 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 110 ರೂಪಾಯಿ ಹೆಚ್ಚಾಗಿ 1,02,480 ರೂಪಾಯಿ ದಾಖಲಾಗಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 1,000 ರೂಪಾಯಿ ಜಿಗಿದು 1,16,000 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು – ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು – 1,02,330 ರೂಪಾಯಿ
ನಾಗ್ಪುರ – 1,02,330 ರೂಪಾಯಿ
ಮುಂಬೈ – 1,02,330 ರೂಪಾಯಿ
ಚೆನ್ನೈ – 1,02,330 ರೂಪಾಯಿ
ಕೋಲ್ಕತ್ತಾ – 1,02,330 ರೂಪಾಯಿ
ಪಾಟ್ನಾ – 1,02,280 ರೂಪಾಯಿ
ಸೂರತ್ – 1,02,280 ರೂಪಾಯಿ
ಚಂಡೀಗಢ – 1,02,380 ರೂಪಾಯಿ
ಲಕ್ನೋ – 1,02,380 ರೂಪಾಯಿ
ಈ ಮೇಲ್ಕಂಡ ನಗರಗಳಲ್ಲಿ ಬೆಳ್ಳಿಯ ಬೆಲೆ (ಪ್ರತಿ ಕೆಜಿಗೆ)
ನಗರಗಳು ಬೆಲೆ (ಪ್ರತಿ ಕೆಜಿಗೆ)
ದೆಹಲಿ – 1,16,000 ರೂ.
ಬೆಂಗಳೂರು – 1,16,000 ರೂ.
ಚೆನ್ನೈ – 1,26,000 ರೂ.
ಮುಂಬೈ – 1,16,000 ರೂ..
ಕೋಲ್ಕತ್ತಾ – 1,16,000 ರೂ.
ಕೇರಳ – 1,26,000 ರೂ.
ಪಾಟ್ನಾ – 1,16,000 ರೂ.
ಸೂರತ್ – 1,16,000 ರೂ.
ಚಂಡೀಗಢ – 1,16,000 ರೂ.
ಲಕ್ನೋ – 1,16,000 ರೂ.