ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭಾರೀ ಬೆಂಕಿ ಅವಘಡವಾಗಿದೆ. ಮನೆ ಮುಂದೆ ನಿಲ್ಲಿಸಿಟ್ಟಿದ್ದ ಆಟೋದ ಸಿಲಿಂಡರ್ ಸ್ಪೋಟವಾಗಿ ಬೆಂಕಿಯಿಂದ ಹೊತ್ತಿಉರಿದಿದೆ. ಮನೆಗೂ ಬೆಂಕಿ ತಗುಲಿ ಹಾನಿಯಾಗಿದೆ.

ವೀರಭದ್ರಪ್ಪ ಹಡಪದ್ ಎಂಬುವವರಿಗೆ ಸೇರಿದ ಆಟೋ ರಿಕ್ಷಾಗೆ ಮಂಗಳವಾರ ಬೆಳಿಗ್ಗೆ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ತಗುಲಿದೆ. ಬೆಂಕಿಯ ರಭಸಕ್ಕೆ ಧಗ ಧಗನೇ ಹೊತ್ತಿ ಉರಿದಿದೆ, ಮನೆಗೂ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಣಾಪಾಯಗಳು ಸಂಭವಿಸಿಲ್ಲ.