Dharmasthala body case;
ಕಾರವಾರ; ಧರ್ಮಸ್ಥಳ ಶವ ಪ್ರಕರಣದಲ್ಲಿ ನಾವು ಸತ್ಯ ಹೊರಬರಲಿ ಎಂಬ ಉದ್ದೇಶ ಮಾತ್ರ ಇದೆ. ಬಲಪಂಥೀಯರದ್ದೇ ಒಂದು ವಾದ, ಎಡಪಂಥೀಯರದ್ದೇ ಒಂದು ವಾದ, ಈ ಕಾರಣ ಎಸ್ ಐಟಿ ರಚನೆಯಾಗಿದೆ. ತನಿಖೆ ಆರಂಭವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಾರವಾರದಲ್ಲಿ ಜಿಲ್ಲಾ ಪಂಚಾಯತ ಸಭೆಯ ನಂತರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಅವ್ರು ಮಾತನಾಡುತ್ತಿದ್ದರು, ಕೆಲವರು ಇದರಲ್ಲಿ ರಾಜಕೀಯ ಹುಡುಕುತ್ತಿದ್ದಾರೆ. ವಾಸ್ತವವಾಗಿ ಎಸ್ ಐ ಟಿ ಅವಶ್ಯಕತೆ ಇರಲಿಲ್ಲ. ದ.ಕ. ಜಿಲ್ಲಾ ಪೊಲೀಸರು ಈ ಪ್ರಕರಣ ಹೊರಗೆ ತರಲು ಸಮರ್ಥರಿದ್ದರು ಎಸ್ ಐಟಿ ಯಲ್ಲಿ ಇರುವವರು ಸಹ ನಮ್ಮ ಪೊಲೀಸ್ ಅಧಿಕಾರಿಗಳೆ. ಅವರನ್ನು ಅನುಮಾನಿಸಬೇಡಿ ಎಂದರು. ಮೊಹಂತಿ ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರಲ್ಲ ಎಂಬ ಪ್ರಶ್ನೆಗೆ, ಇದು ನೌಕರಿಯಲ್ಲಿ ಸಹಜ ಪ್ರಕ್ರಿಯೆ, ಅವರು ಕೇಂದ್ರಕ್ಕೆ ತೆರಳಿದರೆ, ಮತ್ತೆ ಸಮರ್ಥ ಅಧಿಕಾರಿಗಳನ್ನು ನಿಯೋಜಿಸುತ್ತದೆ ಎಂದರು .
ಅಂಬುಲೆನ್ಸ ಸೌಲಭ್ಯಕ್ಕೆ ಹೊಸ ಕಾನೂನು..!
ಸರ್ಕಾರಿ ಅಂಬುಲೆನ್ಸ108 ಸರ್ಕಾರದ ವಶಕ್ಕೆ ಬರಲಿದೆ. ಅಲ್ಲದೆ ಖಾಸಗಿ ಅಂಬುಲೆನ್ಸ ಸೇವೆಗೆ ದರ ನಿಗದಿ ಮಾಡುವ ಮತ್ತು ಇತರೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಒಂದು ಕಾನೂನು ಮಾಡಲಿದ್ದೇವೆ. ಈ ನೂತನ ಬಿಲ್ ಬರುವ ಅಧಿವೇಶನದಲ್ಲಿ ಮಂಡಿಸುವ ಉದ್ದೇಶ ಇದೆ . ಎಷ್ಟು ಕಿಮಿ ದೂರಕ್ಕೆ ಎಷ್ಟು ದರ ಎಂದು ಕಾನೂನು ತರುವ ಉದ್ದೇಶ ಇದೆ. ಇದರಿಂದ ರೋಗಿ ಕುಟುಂಬದವರ ಶೋಷಣೆ ತಪ್ಪಿಸಬಹುದು ಎಂಬ ಉದ್ದೇಶ ಇದೆ ಎಂದರು.
ಕೌನ್ಸಿಲಿಂಗ್ ಮೂಲಕ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಮೊದಲ ಬಾರಿಗೆ ಪಾರದರ್ಶಕವಾಗಿ ವರ್ಗಾವಣೆ ಮಾಡಲಾಗಿದೆ. ಜಿಲ್ಲೆಗೆ ವರ್ಗಾವಣೆ ಯಿಂದ ಲಾಭ ಆಗಿದೆ .ಅಲ್ಲದೆ ವೈದ್ಯರು, ನರ್ಸಗಳು, ಲ್ಯಾಬ್ ಟೆಕ್ನಿಷಿಯನ್ಸ, ಪ್ರಯೋಗಾಲಯ ತಜ್ಞರನ್ನು ಸೇರಿ ಒಂದು ಸಾವಿರ ಸಿಬ್ಬಂದಿ ನೇಮಕಾತಿ ನಡೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಹೇಳಿದರು. ಶಿರಸಿಯಲ್ಲಿ ನಿರ್ಮಾಣ ಆಗುತ್ತಿರುವ ಹೊಸ ಆಸ್ಪತ್ರೆಗೆ ಜಿಲ್ಲಾ ಆಸ್ಪತ್ರೆಯ ಸ್ಥಾನ ಮಾನ ನೀಡಿ, ಎಂ ಆರ್ ಐ, ಕ್ಯಾಥ್ ಲ್ಯಾಬ್ ,ಸಿಟಿಸ್ಕ್ಯಾನ್ ನೀಡಲಾಗುವುದು ಎಂದರು.
ಮಂಗನಕಾಯಿಲೆಗೆ ದೆಹಲಿ ಆರೋಗ್ಯ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನೆ ನಡೆಯುತ್ತಿದೆ. ಇದಕ್ಕೆ ಆರ್ಥಿಕ ಅನುದಾನವನ್ನು ಸರ್ಕಾರ ನೀಡಿದೆ ಎಂದರು . ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ,ಸಿಇಒ ದಿಲೀಶ್ ಸಸಿ ಇದ್ದರು.
ಇದನ್ನೂ ಓದಿ👇 ಮುಂಡಗೋಡ ತಾಲೂಕಾಸ್ಪತ್ರೆ ಆವರಣದಲ್ಲೇ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ..! ಕ್ಯಾಂಟೀನ್, ಜನೌಷಧಿ ಕೇಂದ್ರದಲ್ಲಿ ಏನದು ಸಮಸ್ಯೆ..?
ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!