DDPI Transfer News; ಶಿರಸಿ ಶೈಕ್ಷಣಿಕ ಜಿಲ್ಲೆಯ ಬಲು ಜನಪ್ರಿಯ DDPI ಆಗಿದ್ದ ಸನ್ಮಾನ್ಯ ಬಸವರಾಜ್ ರವರನ್ನು, ಸರ್ಕಾರ ಸ್ಥಳವನ್ನೂ ತೋರಿಸದೇ ಎತ್ತಂಗಡಿ ಮಾಡಿದೆ. ನೂತನ DDPI ಆಗಿ D.R. ನಾಯ್ಕ್ ನೇಮಕವಾಗಿದ್ದಾರೆ.

ನೂತನ ಡಿಡಿಪಿಐ ನಾಯ್ಕ್

ಬೆಳಗಾವಿ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರವಾಚಕರಾಗಿ ಕಾರ್ಯನಿರ್ವಹಿಸುತಿದ್ದ ಡಿ. ಆರ್. ನಾಯ್ಕ್,
ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಆಗಿ ಬಂದಿದ್ದಾರೆ. ಹೀಗಾಗಿ, ಸದ್ಯ ಡಿಡಿಪಿಐ ಆಗಿದ್ದ ಬಸವರಾಜ್ ಅವರನ್ನು ಸ್ಥಳ ನಿಯುಕ್ತಿಗಾಗಿ ಸರಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ನಿರ್ಗಮಿತ ಡಿಡಿಪಿಐ ಬಸವರಾಜು

ಅಂದಹಾಗೆ, ಡಿ. ಆರ್. ನಾಯ್ಕ್ ರವರು ಈ ಹಿಂದೆ ಸಿದ್ದಾಪುರ BEO ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು ಅನ್ನೊ ಮಾಹಿತಿ ಇದೆ. ಪುಣ್ಯಕ್ಕೆ, ಇವ್ರಿಂದಲಾದ್ರೂ ನಮ್ಮ ಮುಂಡಗೋಡಿನ ಶಿಕ್ಷಣ ಕ್ಷೇತ್ರ ಸುಧಾರಿಸಲಿ ಅನ್ನೋದು, ಅಸಂಖ್ಯ ಶಿಕ್ಷಣಾಭಿಮಾನಿಗಳ ಆಶಯ..! ಹೀಗಾಗಿ, ನಿರ್ಗಮಿಸುತ್ತಿರೋ DDPI ರವರಿಗೆ ಹೃದಯಪೂರ್ವಕವಾಗಿ, ಸಂಭ್ರಮ, ಸಡಗರದ ಖುಶಿಯಿಂದಲೇ ಇಲ್ಲಿನ ಜನ ಬೀಳ್ಕೊಡುತ್ತಿದ್ದಾರೆ.

error: Content is protected !!