ಕಾರವಾರ ಜಿಲ್ಲೆಯಲ್ಲಿ ಡಿಸೆಂಬರ್ 31 ರಂದು ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ರೀತಿಯಲ್ಲಿ ಹೊಸ ವರ್ಷದ ಆಚರಣೆಯನ್ನು ಮಾಡುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ತಿಳಿಸಿದ್ದಾರೆ.
ಡಿಸೆಂಬರ್ 31 ರಂದು ಸಂಜೆ 6 ಗಂಟೆಯ ನಂತರ ಯಾರೂ ಕೂಡಾ ಸಮುದ್ರಕ್ಕೆ ಇಳಿಯಬಾರದು, ಬೀಚ್ಗಳಲ್ಲಿ ಯಾವುದೇ ರೀತಿಯ ಸಮಾರಂಭಗಳನ್ನು ಆಯೋಜಿಸಲು ಯಾರಿಗೂ ಅನುಮತಿಯನ್ನು ನೀಡಿರುವುದಿಲ್ಲ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ರಾತ್ರಿ 12.30 ರ ನಂತರ ಬೀಚ್ ಗಳಲ್ಲಿ ಯಾರೂ ಉಳಿಯದೇ ತಮ್ಮ ಮನೆಗಳಿಗೆ ತೆರಳುವಂತೆ ಅವ್ರು ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಹೋಟೆಲ್ , ರೆಸಾರ್ಟ್, ಹೋಂ ಸ್ಟೇ ಸೇರಿದಂತೆ ಯಾವುದೇ ಸ್ಥಳಗಳಲ್ಲಿ ಡಿ. 31 12.30 ರ ನಂತರ ಎಲ್ಲಾ ತರಹದ ಚಟುಚಟಿಕೆಗಳನ್ನು ಸ್ಥಬ್ಧಗೊಳಿಸುವಂತೆ ಸೂಚಿಸಿದ್ದಾರೆ.
ಹೊಸ ವರ್ಷಾಚರಣೆಯನ್ನು ಸುರಕ್ಷಿತವಾಗಿ ಆಚರಿಸಿ..!ಪ್ರಸ್ತುತ ಡಿಸೆಂಬರ್ 31 ರಂದು ಹೊಸ ವರ್ಷ ಆಚರಣೆಗೆ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಕಡಲತೀರಗಳಲ್ಲಿ ವಿವಿಧ ರಾಜ್ಯದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು. ಪ್ರವಾಸಿಗರ ಸುರಕ್ಷತಾ ದೃಷ್ಠಿಯಿಂದ ಜಿಲ್ಲೆಯ ಪ್ರಮುಖ ಕಡಲತೀರಗಳಾದ ಕಾರವಾರ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಗೋಕರ್ಣ ಕಡಲತೀರ, ಓಂ ಕಡಲತೀರ, ಕುಡ್ಲೆ ಕಡಲತೀರ ಹಾಫ ಮೂನ, ಪ್ಯಾರಾಡೈಸ್ ಬೀಚ್, ಕಾಸರಕೋಡ ಕಡಲತೀರ, ಅಪ್ಸರಕೊಂಡ ಕಡಲತೀರ, ಮುರ್ಡೇಶ್ವರ ಕಡಲತೀರಗಳಲ್ಲಿ ಈಗಾಗಲೇ ಎಲ್ಲಾ ರಿತೀಯ ಸುರಕ್ಷತಾ ಸಾಮಾಗ್ರಿಗಳೊಂದಿಗೆ ಲೈಫಗಾರ್ಡ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿರುತ್ತದೆ.
ಅಲ್ಲದೇ ಪ್ರಮುಖ ಪ್ರವಾಸಿ ತಾಣಗಳಾದ ಯಾಣ, ಬನವಾಸಿ, ಶಿರಸಿ, ಸಹಸ್ರಲಿಂಗ ತಾಣಗಳಲ್ಲಿ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿರುತ್ತದೆ.
ಆದರೂ ಸಹ ಪ್ರವಾಸಿಗರು ಹೆಚ್ಚಿನ ಎಚ್ಚರಿಕೆಯಿಂದ ಹೊಸ ವರ್ಷ ಆಚರಿಸಬೇಕಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿಯ ಅಂಚಟಗೇರಿ ಬಳಿ ಭೀಕರ ಅಪಘಾತ- ತಂದೆ, ಎರಡು ಮಕ್ಕಳು ದುರಂತ ಸಾವು..!
ಹುನಗುಂದದಲ್ಲಿ ಬೆಂಕಿ ಅವಘಡ, ಸಿಲಿಂಡರ ಸ್ಪೋಟಗೊಂಡು ಹೊತ್ತಿಉರಿದ ಆಟೋ ರಿಕ್ಷಾ, ಮನೆಗೂ ಹಾನಿ..!
