Shiggaon Murder News; ಶಿಗ್ಗಾವಿ: ಪಟ್ಟಣದ ಹೊರವಲಯದ ಖಾಸಗಿ ಶಾಲೆಯ ಹತ್ತಿರ, ಇಟ್ಟಿಗೆಗಳ ಪಕ್ಕ CRPF ಯೋಧನ ಶವ ಪತ್ತೆಯಾಗಿದೆ. ಕೊಳೆತ ಸ್ಥಿತಿಗೆ ತಲುಪಿರೋ ಶವದ ಸುತ್ತ ಹಲವು ಅನುಮಾನಗಳು ಸುಳಿದಾಡುತ್ತಿವೆ. ಬಹುತೇಕ, ಮರ್ಡರ್ ಮಾಡಿ, ಇಲ್ಲಿ ತಂದು ಬೀಸಾಕಿದ್ದಾರಾ ದುಷ್ಕರ್ಮಿಗಳು..? ಅನ್ನೊ ಅನುಮಾನ ಪೊಲೀಸರಿಗೆ ಕಾಡುತ್ತಿದೆ.

ಅಂದಹಾಗೆ, ಪಟ್ಟಣದ ಹೊರವಲಯದ ಪಿನಿಕ್ಸ್ ಶಾಲೆಯ ಹತ್ತಿರ ಎನ್ ಎಚ್ 48 ರಸ್ತೆಯ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿರೊ ಯೋಧ, ಹಾಸನ ಜಿಲ್ಲೆಯ ಅರಸಿಕೇರೆ ತಾಲೂಕಿನ ತಾಳನಕೊಪ್ಪಲು ಗ್ರಾಮದವನು ಅನ್ನೋ ಪ್ರಾಥಮಿಕ ಮಾಹಿತಿ ಲಭಿಸಿದೆ. ತಾರೇಶ್ ಎನ್.ಬಿ. ಎಂಬುವವನೇ ಇಲ್ಲಿ ಹೆಣವಾಗಿ ಬಿದ್ದಿದ್ದಾನೆ. ಅಸಲು, ಶವದ ಪಕ್ಕದಲ್ಲಿ ಬಿದ್ದಿದ್ದ ಐಡಿ ಕಾರ್ಡಿನಿಂದ ಈ‌ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಇಟ್ಟಂಗಿ ಭಟ್ಟಿಯ ಹಿಂಭಾಗದಲ್ಲಿ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಎಫ್.ಎಸ್.ಎಲ್ ಅಧಿಕಾರಿಗಳು, ಶಿಗ್ಗಾವಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!