Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ದಲೈ ಲಾಮಾರ ಹುಟ್ಟು ಹಬ್ಬ, ಟಿಬೇಟಿಯನ್  ಕಾಲೋನಿಗಳಲ್ಲಿ ಸಂಭ್ರಮವೋ ಸಂಭ್ರಮ..!

ದಲೈ ಲಾಮಾರ ಹುಟ್ಟು ಹಬ್ಬ, ಟಿಬೇಟಿಯನ್ ಕಾಲೋನಿಗಳಲ್ಲಿ ಸಂಭ್ರಮವೋ ಸಂಭ್ರಮ..!

 ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಇಂದು ಟಿಬೇಟಿಯನ್ ಧರ್ಮಗುರು ದಲೈ ಲಾಮಾರವರ 88 ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಲಾಯಿತು. ಇಲ್ಲಿನ ಕ್ಯಾಂಪ್ ನಂಬರ್ ಒಂದರ ಬೌದ್ದ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಅಂದಹಾಗೆ, ಇಲ್ಲಿನ ಟಿಬೇಟಿಯನ್ ಕಾಲೋನಿಯಲ್ಲಿ ಟಿಬೇಟಿಗರು ದಲೈ ಲಾಮಾರ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಪ್ರತೀ ಮನೆ ಮನೆಗಳಲ್ಲೂ ದಲೈ ಲಾಮಾರವರ ಹುಟ್ಟುಹಬ್ಬದ ವಿಶೇಷ ಸಂಭ್ರಮಗಳು ನಡೆಯುತ್ತಿವೆ. ದೀರ್ಘಾಯುಷ್ಯ ಕೋರಿ ಪ್ರಾರ್ಥನೆಗಳು ನಡೆಯುತ್ತಿವೆ. ಅಲ್ಲದೇ, ಹಲವು ಸಾಮಾಜಿಕ, ಸಾಂಸ್ಕೃತಿಕ, ದಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

Post
ಶಕ್ತಿ ಯೋಜನೆ ಎಫೆಕ್ಟ್​; ವಾಯುವ್ಯ ಸಾರಿಗೆ ವಿಭಾಗದ ಬಸ್ಸುಗಳಲ್ಲಿ ಇದುವರೆಗೂ ಎಷ್ಟೇಲ್ಲ ಮಹಿಳೆಯರು ಪ್ರಯಾಣಿಸಿದ್ದಾರೆ ಗೊತ್ತಾ..?

ಶಕ್ತಿ ಯೋಜನೆ ಎಫೆಕ್ಟ್​; ವಾಯುವ್ಯ ಸಾರಿಗೆ ವಿಭಾಗದ ಬಸ್ಸುಗಳಲ್ಲಿ ಇದುವರೆಗೂ ಎಷ್ಟೇಲ್ಲ ಮಹಿಳೆಯರು ಪ್ರಯಾಣಿಸಿದ್ದಾರೆ ಗೊತ್ತಾ..?

ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯು ಒಂದಾಗಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಇದೇ ತಿಂಗಳ 11 ರಂದು ಅಧಿಕೃತವಾಗಿ ಜಾರಿಗೊಳಿಸಿತು. ಅದರಂತೆ ಶಕ್ತಿ ಯೋಜನೆಯಡಿಯಲ್ಲಿ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನಲೆ ಎಲ್ಲಾ ಬಸ್​ಗಳು ಫುಲ್​ ಆಗಿ ಸಂಚರಿಸುತ್ತಿವೆ. ಈ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿದ್ದ ಮಹಿಳೆಯರು ದೇವಸ್ಥಾನ ಸೇರಿದಂತೆ ಪ್ರವಾಸಿ ಸ್ಥಳಗಳಿಗೆ ಸಂಚರಿಸಲು ಶುರು ಮಾಡಿದ್ದಾರೆ. ಅದರಂತೆ ವಾಯವ್ಯ ವಿಭಾಗಕ್ಕೆ...

Post
ಗುಂಜಾವತಿ ಕಟ್ಟಿಗೆ ಕಳ್ಳತನ ಕೇಸ್, ಇಬ್ಬರು ಆರೋಪಿಗಳನ್ನು ಬಂಧಿಸಿದ ಅರಣ್ಯ ಅಧಿಕಾರಿಗಳು, ಅಷ್ಟಕ್ಕೂ ಶಿರಾಳಕೊಪ್ಪದ ಗ್ಯಾಂಗ್ ಆ್ಯಕ್ಟಿವ್ ಆಯ್ತಾ..?

ಗುಂಜಾವತಿ ಕಟ್ಟಿಗೆ ಕಳ್ಳತನ ಕೇಸ್, ಇಬ್ಬರು ಆರೋಪಿಗಳನ್ನು ಬಂಧಿಸಿದ ಅರಣ್ಯ ಅಧಿಕಾರಿಗಳು, ಅಷ್ಟಕ್ಕೂ ಶಿರಾಳಕೊಪ್ಪದ ಗ್ಯಾಂಗ್ ಆ್ಯಕ್ಟಿವ್ ಆಯ್ತಾ..?

  ಮುಂಡಗೋಡ ತಾಲೂಕಿನ ಗುಂಜಾವತಿ ಬಳಿ ಕಳೆದ ಜೂನ್ 12 ರಂದು ಅರಣ್ಯಗಳ್ಳತನದ ವಿಫಲ ಯತ್ನ ಕೇಸ್ ಬಟಾ ಬಯಲಾಗಿದೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಕೇಸಿಗೆ ಸಂಭಂಧಿಸಿದಂತೆ ಸದ್ಯ ಇಬ್ಬರು ಆರೋಪಿಗಳನ್ನ ವಾಹನ ಸಮೇತ ಅರಣ್ಯ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಹಾಗಂತ, ಯಲ್ಲಾಪುರ ವಿಭಾಗದ ಡಿಎಫ್ ಓ ಶಶಿಧರ್ ಹೆಗಡೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಶಿರಾಳಕೊಪ್ಪದ ಗ್ಯಾಂಗ್..? ಅಂದಹಾಗೆ, ಗುಂಜಾವತಿ ಅರಣ್ಯದಲ್ಲಿ ಕಟ್ಟಿಗೆ ಕಳ್ಳತನ ಪ್ರಕರಣದ ಮೂಲಕ, ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಅದೊಂದು ಗ್ಯಾಂಗ್...

Post
ಚಿಗಳ್ಳಿಯಲ್ಲಿ ಕ್ರಿಮಿನಾಶಕ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ, ಕಿಮ್ಸ್ ಗೆ ರವಾನೆ..!

ಚಿಗಳ್ಳಿಯಲ್ಲಿ ಕ್ರಿಮಿನಾಶಕ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ, ಕಿಮ್ಸ್ ಗೆ ರವಾನೆ..!

ಮುಂಡಗೋಡ ತಾಲೂಕಿನ ಚಿಗಳ್ಳಿಯಲ್ಲಿ ಯುವಕನೊರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಅಂದಹಾಗೆ, ಫಕ್ಕಿರಸ್ವಾಮಿ ಪಾಂಡು ರಾಣೋಜಿ ಎಂಬುವವನೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದು, ಆತ್ಮಹತ್ಯೆ ಯತ್ನಕ್ಕೆ ಕಾರಣವೇನು ಅಂತಾ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಠಾಣೆ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Post
ಶಿಗ್ಗಾವಿಯಲ್ಲಿ ಕೊಂದು ದೇವಿಮನೆ ಘಟ್ಟದಲ್ಲಿ ಮಹಿಳೆ ಶವ ಎಸೆದ, ಮುಂಡಗೋಡಿನ  ಆರೋಪಿಯೂ ಸೇರಿ ಐವರು ಅಂದರ್..!

ಶಿಗ್ಗಾವಿಯಲ್ಲಿ ಕೊಂದು ದೇವಿಮನೆ ಘಟ್ಟದಲ್ಲಿ ಮಹಿಳೆ ಶವ ಎಸೆದ, ಮುಂಡಗೋಡಿನ ಆರೋಪಿಯೂ ಸೇರಿ ಐವರು ಅಂದರ್..!

 ಕುಮಟಾ ಕತಗಾಲ ಸಮೀಪದ ದೇವಿಮನೆ ಘಟ್ಟದಲ್ಲಿ ಸಿಕ್ಕಿದ್ದ ಮಹಿಳೆಯ ಶವ ಕೇಸ್ ಖುಲ್ಲಂ ಖುಲ್ಲಾ ಆದಂತಾಗಿದೆ. ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರಿನಲ್ಲಿ ಕೊಂದು ದೇವಿಮನೆ ಘಟ್ಟದಲ್ಲಿ ಹೆಣ ಎಸೆದು ಹೋಗಿದ್ದ ಹಂತಕರನ್ನು ಕುಮಟಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಸಲು, ಇಲ್ಲಿ ಖುದ್ದು ಪತಿಯ ಸಹೋದರನೇ ತನ್ನ ತಾಯಿ, ಸಹೋದರಿ, ದೊಡ್ಡಮ್ಮಳ ಜೊತೆ ಸೇರಿಕೊಂಡು ತಮ್ಮನ ಪತ್ನಿಯನ್ನ ಕೊಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಹೀಗಾಗಿ, ಈ ಕೇಸಲ್ಲಿ ಈಗ ಮುಂಡಗೋಡ ತಾಲೂಕಿನ ಇಂದೂರಿನ ಓರ್ವ ಆರೋಪಿ ಸೇರಿ...

Post
ಕುಮಟಾ ದೇವಿಮನೆ ಘಟ್ಟದಲ್ಲಿ ಸಿಕ್ಕ ಮಹಿಳೆಯ ಹೆಣ ಶಿಗ್ಗಾವಿಯದ್ದು, ಅಷ್ಟಕ್ಕೂ ಆ ಹೆಣ ಸಾಗಿಸಿದ್ದು ಮುಂಡಗೋಡ ತಾಲೂಕಿನ ಆ ಕ್ರೂಸರ್ ಚಾಲಕನಾ..?

ಕುಮಟಾ ದೇವಿಮನೆ ಘಟ್ಟದಲ್ಲಿ ಸಿಕ್ಕ ಮಹಿಳೆಯ ಹೆಣ ಶಿಗ್ಗಾವಿಯದ್ದು, ಅಷ್ಟಕ್ಕೂ ಆ ಹೆಣ ಸಾಗಿಸಿದ್ದು ಮುಂಡಗೋಡ ತಾಲೂಕಿನ ಆ ಕ್ರೂಸರ್ ಚಾಲಕನಾ..?

ಕುಮಟಾ ಕತಗಾಲ ಸಮೀಪದ ದೇವಿಮನೆ ಘಟ್ಟದಲ್ಲಿ ಮಹಿಳೆಯ ಮರ್ಡರ್ ಗೂ ಮುಂಡಗೋಡ ತಾಲೂಕಿಗೂ ನಂಟಿನ ಗಂಟು ಬಿದ್ದಿದೆಯಂತೆ. ಮುಂಡಗೋಡ ಪಟ್ಟಣದಿಂದ ಕಲಘಟಗಿಗೆ ಹೋಗುವ ಮಾರ್ಗದಲ್ಲಿ ಜಸ್ಟ್ 10 ಕಿಮೀ ದಾಟಿದ್ರೆ ಸಿಗುವ ಊರಿನ ಚಾಲಕನೊಬ್ಬ ಮಹಿಳೆಯ ಮರ್ಡರ್ ಮಿಸ್ಟ್ರಿಯಲ್ಲಿ ತಗಲಾಕ್ಕೊಂಡಿದ್ದಾನಾ..? ಹಾಗಂತ ಅನುಮಾನ ಶುರುವಾಗಿದೆ. ಹೀಗಾಗಿ, ಮುಂಡಗೋಡ ಪೊಲೀಸರ ಸಹಕಾರದಲ್ಲಿ ಕುಮಟೆಯ ಖಾಕಿಗಳು ಆರೋಪಿಯ ಬೆನ್ನು ಬಿದ್ದಿದ್ದಾರೆ ಎನ್ನಲಾಗಿದೆ. ಇನ್ನೇನು ಕನ್ಪರ್ಮ ಅನ್ನೋ ಕಾರಣ ಸಿಕ್ರೆ ಆತನ ಅರೆಸ್ಟ್ ಗ್ಯಾರಂಟಿ ಎನ್ನಲಾಗಿದೆ. ಹೀಗಾಗಿ, ಆ ಚಾಲಕನ ಬಗ್ಗೆ...

Post
ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಧಿವಶ, ಹಲವರ ಸಂತಾಪ..!

ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಧಿವಶ, ಹಲವರ ಸಂತಾಪ..!

ಮುಂಡಗೋಡ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನರಸಿಂಹ ಪರಮೇಶ್ವರ ಭಟ್ (56) ವಿಧಿವಶರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಾಂಶುಪಾಲರು ತಡರಾತ್ರಿ ನಿಧನರಾಗಿದ್ದಾರೆ ಅಂತಾ ತಿಳಿದು ಬಂದಿದೆ. ಮೂಲತಃ ಯಲ್ಲಾಪುರ ಪಟ್ಟಣದವರಾಗಿದ್ದ ನರಸಿಂಹ ಪರಮೇಶ್ವರ ಭಟ್, ಕಳೆದ 13 ವರ್ಷಗಳಿಂದ ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಆ ನಂತರದಲ್ಲಿ ಕಳೆದ ಫೆಬ್ರುವರಿಯಲ್ಲಿ ಮುಂಡಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ಅಲ್ದೇ ಫೆ. 7...

Post
ಬಾರದ ಮಳೆಗಾಗಿ ಕಲಕೇರಿ ಗ್ರಾಮದ ಮಹಿಳೆಯರ ವಿಶೇಷ ಆಚರಣೆ, ಹುಯ್ಯೋ ಹುಯ್ಯೋ ಮಳೆರಾಯ ಅಂದ್ರು ಮಹಿಳೆಯರು..!

ಬಾರದ ಮಳೆಗಾಗಿ ಕಲಕೇರಿ ಗ್ರಾಮದ ಮಹಿಳೆಯರ ವಿಶೇಷ ಆಚರಣೆ, ಹುಯ್ಯೋ ಹುಯ್ಯೋ ಮಳೆರಾಯ ಅಂದ್ರು ಮಹಿಳೆಯರು..!

 ಮುಂಡಗೋಡ: ಜೂನ್ ತಿಂಗಳು ಕಳೆಯುತ್ತ ಬಂದರೂ ಮಳೆರಾಯನ ಆಗಮನ ಇನ್ನೂ ಆಗಿಲ್ಲದಿರುವುದು ತಾಲೂಕಿನ ಅನ್ನದಾತರಿಗೆ ಭಾರೀ ಆತಂಕ ತಂದಿಟ್ಟಿದೆ. ಬಹುತೇಕ ಬಿತ್ತನೆ ಕಾರ್ಯಕ್ಕೆ ಮಳೆರಾಯನ ಮುನಿಸಿನಿಂದ ಭಾರೀ ಅಡಚಣೆಯಾಗಿದೆ. ಕೆಲವು ಕಡೆ ಬೀಜ ಬಿತ್ತನೆ ಕಾರ್ಯ ಮಾಡಿದ್ದರೂ ಬೀಜ ಮೊಳಕೆಯೊಡೆಯಲು ನೀರಿನ ಅಭಾವ ತಲೆದೋರಿದೆ. ಹೀಗಾಗಿ, ತಾಲೂಕಿನ ಕಲಕೇರಿಯ ಮಹಿಳೆಯರು ಮಳೆಗಾಗಿ ವಿಶೇಷ, ವಿಶಿಷ್ಟ ಕಾರ್ಯ ಮಾಡಿದ್ದಾರೆ. ಕಪ್ಪೆಯ ಮೆರವಣಿಗೆ..! ಯಸ್, ಕಲಕೆರಿಯ ಮಹಿಳೆಯರು ಇಂದು ಬೆಳಗಿನಿಂದ ಮಳೆಗಾಗಿ ಕಪ್ಪೆಯ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ‌. ಮಳೆರಾಯನಿಗೆ...

Post
ಬಾಚಣಕಿ ಸಮೀಪ ಸ್ಕೂಟಿ ಅಪಘಾತ, ಮುಂಡಗೋಡಿನ ಉದಯ್ ಕುರ್ಡೇಕರ್ ಸಾವು..! ಯಮರೂಪಿ ರಸ್ತೆ ಗುಂಡಿಗೆ ಬಲಿಯಾದ್ರಾ ಉದಯ್..?

ಬಾಚಣಕಿ ಸಮೀಪ ಸ್ಕೂಟಿ ಅಪಘಾತ, ಮುಂಡಗೋಡಿನ ಉದಯ್ ಕುರ್ಡೇಕರ್ ಸಾವು..! ಯಮರೂಪಿ ರಸ್ತೆ ಗುಂಡಿಗೆ ಬಲಿಯಾದ್ರಾ ಉದಯ್..?

ಮುಂಡಗೋಡ: ತಾಲೂಕಿನ ಬಾಚಣಕಿ ಸಮೀಪ ಸ್ಕೂಟಿ ಅಪಘಾತವಾಗಿದೆ. ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಡರಾತ್ರಿ ನಡೆದಿರೋ ಘಟನೆಯಲ್ಲಿ ಬಹುಶಃ ಯಮರೂಪಿ ರಸ್ತೆ ಗುಂಡಿಗೆ ಒಂದು ಜೀವ ಬಲಿಯಾದಂತಾಗಿದೆ. ಮೃತ ಬೈಕ್ ಸವಾರನನ್ನು ಮುಂಡಗೋಡಿನ ನಂದೀಶ್ವರ ನಗರದ ನಿವಾಸಿ ಉದಯ್ ಕುರ್ಡೇಕರ್ (47) ಅಂತಾ ಗುರುತಿಸಲಾಗಿದೆ. ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಉದಯ್ ರಸ್ತೆ ಬದಿಯಲ್ಲಿ ಬಿದ್ದು ನರಳಾಡಿದ್ದಾರೆ. ದುರಂತ ಅಂದ್ರೆ ರಾತ್ರಿ ಆಗಿದ್ದ ಕಾರಣ ತಕ್ಷಣವೇ ಯಾರೂ...

Post
ಮುಂಡಗೋಡ ಟಿಂಬರ್ ಡೀಪೋದಲ್ಲಿ ಕಟ್ಟಿಗೆ ಕಳ್ಳಾಟ ಕೇಸ್, ಐವರು DyRFO ಗಳು ಸಸ್ಪೆಂಡ್, RFO ಅಮಾನತ್ತಿಗೆ ಪ್ರಸ್ತಾವನೆ..!

ಮುಂಡಗೋಡ ಟಿಂಬರ್ ಡೀಪೋದಲ್ಲಿ ಕಟ್ಟಿಗೆ ಕಳ್ಳಾಟ ಕೇಸ್, ಐವರು DyRFO ಗಳು ಸಸ್ಪೆಂಡ್, RFO ಅಮಾನತ್ತಿಗೆ ಪ್ರಸ್ತಾವನೆ..!

ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಲ್ಲಿನ ಕಳ್ಳಾಟ ಕೇಸ್ ನಲ್ಲಿ ಸದ್ಯ ಐವರು DyRFO ಗಳು ನಿರ್ಧಾಕ್ಷಿಣ್ಯವಾಗಿ ಅಮಾನತ್ತಾಗಿದ್ದಾರೆ. ಐವರನ್ನೂ ಅಮಾನತ್ತು ಮಾಡಿ ಶಿರಸಿ ಸಿಸಿಎಫ್ ಕೆ. ವಿ. ವಸಂತ ರೆಡ್ಡಿರವರು ಆದೇಶಿಸಿದ್ದಾರೆ. ಇನ್ನು ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರೋ RFO ಜಿ.ಟಿ.ರೇವಣಕರ್ ಸಾಹೇಬ್ರನ್ನು ಅಮಾನತ್ತುಗೊಳಿಸುವಂತೆ ಬೆಂಗಳೂರು PCCF ರವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಹುಶಃ ನಾಳೆ ಸಂಜೆಯಷ್ಟೊತ್ತಿಗೆ RFO ಸಾಹೇಬ್ರೂ ಕೂಡ ಸಸ್ಪೆಂಡ್ ಆಗಿ ವಿಶ್ರಾಂತಿ ಪಡಿಯೋದು ನಿಕ್ಕಿಯಾಗಿದೆ‌. ಅದ್ರ ಜೊತೆ, ಇಡೀ ಇಲಾಖೆಯ ಮಾನವನ್ನು...

error: Content is protected !!