ಬೆಂಗಳೂರು : ರಾಜ್ಯದ ಕರಾವಳಿ, ಒಳನಾಡು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕಳೆದೆರಡು ದಿನ ಗಳಿಂದಲೂ ಭಾರೀ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗದಲ್ಲಿ ಜುಲೈ 17ರ ವರೆಗೂ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಭಾರೀ ಮಳೆ ಸುರಿಯಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅಲ್ಲದೇ...
Top Stories
PSI ಮಹಾಂತೇಶ್ ವಾಲ್ಮೀಕಿ ಮುಂಡಗೋಡಿಗೆ ವರ್ಗ..! ವರ್ಗಾವಣೆ ಕ್ಯಾನ್ಸಲ್ ಮಾಡಿಸೋಕೆ ಕಾಣದ ಕೈಗಳ “ಜಂ”ಪಾಠ..! ಛೇ, ಹೀಗೂ ಇದೆಯಾ ವ್ಯವಸ್ಥೆ..?
ಹಳೂರು- ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೋ ನಡುವೆ ಅಪಘಾತ, ಐವರಿಗೆ ಸಣ್ಣಪುಟ್ಟ ಗಾಯ..!
ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!
ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..! ಅಷ್ಟಕ್ಕೂ, ಪೊಲೀಸ್ ಅಧಿಕಾರಿಯ ಮಗಳಿಗೆ ಏನಾಯ್ತು..?
ಇದು “ಜಬರ್ದಸ್ತ್ ಜಮಖಂಡಿ”ಯ ಮರ್ಡರ್ ಮಿಸ್ಟರಿ..! “ಮಾಯಾಂಗನೆ”ಯ ನೆರಳಲ್ಲಿ ನಡೆದಿತ್ತು ಆ ಭೀಕರ ಹತ್ಯೆ..!
ಇಂದ್ರಾ ನಗರದ ಮೆಹೆಬೂಬ್ ಅಲಿ ಜಮಖಂಡಿ ಮರ್ಡರ್ ಕೇಸ್ ಆರೋಪಿಗಳಿಗೆ ಶಿಕ್ಷೆ ಪ್ರಕಟ..! ಓರ್ವನಿಗೆ ಜೀವಾವಧಿ ಶಿಕ್ಷೆ..!
ಶಿಗ್ಗಾವಿ BEO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ಚಿಗಳ್ಳಿಯ ಪ್ರಸನ್ನ ಜಾಧವ್ ವಿಧಿವಶ, ಹಲವರ ಸಂತಾಪ..!
ಡ್ರಗ್ಸ್ ದಂಧೆ ಮಾಡುತಿದ್ದ 9 ದಂಧೆಕೋರರ ಬಂಧನ, 30 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ..!
ಮುಂಡಗೋಡ ತಾಲೂಕು ಸೇರಿ ಜಿಲ್ಲೆಯ ಹಲವು ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ..!
ನಾಳೆ ಮುಂಡಗೋಡ ತಾಲೂಕಿನಲ್ಲೂ ಶಾಲೆಗಳಿಗೆ ಮಳೆಯ ರಜೆ..!
ಮುಂಡಗೋಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ “ಮಳೆಯ” ರಜೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ 10 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ..!
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!
ಶಿಗ್ಗಾವಿಯಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ..!
ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!
Category: ಉತ್ತರ ಕನ್ನಡ
ಮನೆ ಗೋಡೆ ಕುಸಿದು ಮೃತಪಟ್ಟ ಮಹಿಳೆಯ ಬಡ ಕುಟುಂಬದ ಕಣ್ಣೀರು ಒರೆಸಿದ ಸಚಿವ..! ಮಾನವೀಯತೆ ಅಂದ್ರೆ ಇದೇ ಅಲ್ವಾ..?
ಶಿರಸಿ: ಮನೆ ಗೋಡೆ ಕುಸಿದು ಮೈಮೇಲೆ ಬಿದ್ದ ಪರಿಣಾಮ ವಿಶೇಷ ಚೇತನ ಮಹಿಳೆಯೊರ್ವಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪುರದ ಮುಂಡಗೆಹಳ್ಳಿಯಲ್ಲಿ ನಡೆದಿದೆ. ಗುಡ್ನಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಗೆಹಳ್ಳಿಯ 45 ವರ್ಷ ವಯಸ್ಸಿನ ಯಶೋಧಾ ಬಂಗಾರಿ ಗೌಡ ಮೃತಪಟ್ಟ ವಿಶೇಷ ಚೇತನ ಮಹಿಳೆ. ಈಕೆ ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಳೆಯದಾಗಿದ್ದ ಗೋಡೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾವಿಸಿ...
ಹೀಗೆ ಹುಲಿರಾಯ ಹೆಜ್ಜೆ ಹಾಕಿದ್ದು ಬೆಡಸಗಾಂವ್ ಅರಣ್ಯದಲ್ಲಾ..?
ಮುಂಡಗೋಡ: ತಾಲೂಕಿನ ಬೆಡಸಗಾಂವ ಅರಣ್ಯ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷವಾಗಿದೆ ಅಂತಾ ಹೇಳಲಾದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಲ್ಲಿ ನಿರ್ಭಿಡೆಯಿಂದ ಓಡಾಡುತ್ತಿರೋ ಹುಲಿರಾಯ ಘರ್ಜನೆ ಮೊಳಗಿಸಿದ್ದಾನೆ. ಆದ್ರೆ ಈ ವಿಡಿಯೋ ಮುಂಡಗೋಡ ತಾಲೂಕಿ ಬೆಡಸಗಾಂವ್ ಅರಣ್ಯ ಪ್ರದೇಶದಲ್ಲಿಯದೋ ಅಥವಾ ಬೇರೆ ಕಡೆಯದ್ದೋ ಸ್ಪಷ್ಟವಾಗಿಲ್ಲ. ಅದ್ರೆ ಸಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮಾತ್ರ ಹರಿದಾಡುತ್ತಿದೆ.
ಪ್ರವಾಸಕ್ಕೆ ಬಂದವರು, ಸಮುದ್ರ ಪಾಲಾದ್ರು..!
ಕಾರವಾರ: ಸಮುದ್ರದಲ್ಲಿ ಈಜಲು ಹೋದ ಇಬ್ಬರು ನೀರುಪಾಲಾಗಿ, ಮತ್ತಿಬ್ಬರನ್ನು ಸ್ಥಳೀಯರೇ ರಕ್ಷಣೆ ಮಾಡಿದ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಣಿ ಹಾಗೂ ಬೇಕರಿ ಮಂಜುನಾಥ್ ಸಾವು ಕಂಡವರು. ನಾಗರಾಜ ಹಾಗೂ ಪ್ರವೀಣ್ ರಕ್ಷಣೆಗೊಳಗಾದವರು. ಇನ್ನು ಸಮುದ್ರ ಪಾಲಾಗಿದ್ದ ಮಣಿ ಶವ ಪತ್ತೆಯಾಗಿದೆ. ಆದ್ರೆ, ಮಂಜುನಾಥ್ ಶವ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ, ಶವಕ್ಕಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಲಾಗಿದೆ. ನಾಲ್ಕು ಜನ ಸ್ನೇಹಿತರು ಸೇರಿ ಶಿವಮೊಗ್ಗ ದಿಂದ ಮುರಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ರು.. ನಾಲ್ಕೂ ಜನ...
ಗುಂಜಾವತಿ ಭಾಗದಲ್ಲಿ ಕಾಡಾನೆ ಹಾವಳಿ, 5 ಎಕರೆ ಕಬ್ಬಿನ ಬೆಳೆ ತಿಂದು ತೇಗಿದ ಗಜ ಪಡೆ..!
ಮುಂಡಗೋಡ: ತಾಲೂಕಿನ ಗುಂಜಾವತಿ ಸೇರಿದಂತೆ ಸುತ್ತ ಮುತ್ತಲ ಭಾಗಗಳಲ್ಲಿ ಕಾಡಾನೆ ಹಾವಳಿ ಶುರುವಾಗಿದೆ. ಕಳೆದ 3 ದಿನಗಳಿಂದ ಕಾಡಾನೆಗಳ ಹಿಂಡು ಈ ಭಾಗದ ರೈತರ ನಿದ್ದೆಗೆಡಿಸಿವೆ. ಗುಂಜಾವತಿ ಭಾಗದ ರೈತರ ಕಬ್ಬಿನ ಗದ್ದೆ ಹಾಗೂ ಅಡಿಕೆ ತೋಟಕ್ಕೆ ನುಗ್ಗಿರೋ ಕಾಡಾನೆಗಳು ಗಬ್ಬಿನ ಬೆಳೆಯನ್ನು ತಿಂದು ಹಾಕಿ, ಹಾನಿ ಮಾಡಿವೆ. ಇಲ್ಲಿನ ಗುರುಬಸಯ್ಯ ಎಂಬುವವರ 5 ಎಕರೆ ಕಬ್ಬಿನ ಗದ್ದೆಯಲ್ಲಿ ಬೆಳೆ ತಿಂದು, ನಾಶಗೊಳಿಸಿವೆ. ಇಷ್ಟೇಲ್ಲ ಆದ್ರೂ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ ಅಂತಾ ರೈತರು ಆಕ್ರೋಶ...
ಹುನಗುಂದ ತಾಪಂ ಕ್ಷೇತ್ರ: ಬಿಜೆಪಿಯಲ್ಲಿ “ಹಳೇ” ಕಲಿಗಳ ಮದ್ಯೆ ಟಿಕೆಟ್ ಫೈಟ್..! “ಕೈ” ಅಂಗಳದಲ್ಲಿ ಎಲ್ಲವೂ ಸೀಕ್ರೆಟ್..!!
ಮುಂಡಗೋಡ: ತಾಲೂಕಿನಲ್ಲಿ ಈಗ ಬರೀ ರಾಜಕೀಯದ್ದೇ ಹವಾ. ಇನ್ನೇನು ತಾಲೂಕಾ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕು, ಮೀಸಲಾತಿಗಳೂ ಪ್ರಕಟವಾಗಿದೆ. ಹೀಗಾಗಿ, ಎಲ್ಲೇಲ್ಲೂ ರಾಜಕೀಯ ಚರ್ಚೆ ಶುರುವಾಗಿದೆ. ಅದ್ರಂತೆ ಇವತ್ತು ನಾವು ಹುನಗುಂದ ತಾಪಂ ಕ್ಷೇತ್ರದ ಹಕೀಕತ್ತು ನಿಮ್ಮ ಮುಂದೆ ಇಡ್ತಿದಿವಿ. ಇದು ಹುನಗುಂದ ಕ್ಷೇತ್ರ..! ಅಂದಹಾಗೆ, ಹುನಗುಂದ ತಾಪಂ ಕ್ಷೇತ್ರ ಹುನಗುಂದ, ಅಗಡಿ, ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳನ್ನು ಒಳಗೊಂಡಿದೆ. ಗ್ರಾಮ ಪಂಚಾಯತಿ ಆಡಳಿತ ಸಧ್ಯ ಕಾಂಗ್ರೆಸ್ ಬೆಂಬಲಿತರ “ಕೈ” ಯಲ್ಲಿದೆ. ಹೀಗಿದ್ದಾಗಲೂ...
ನಂದಿಕಟ್ಟಾ ತಾಪಂ ಕ್ಷೇತ್ರ; ಬಿಜೆಪಿಗೆ ಟಿಕೆಟ್ ಆಕಾಂಕ್ಷಿಗಳ ತಲೆಬಿಸಿ, ಕಾಂಗ್ರೆಸ್ ಗೆ ವರವಾಗೋ ಖುಶಿ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ತಾಲೂಕಾ ಪಂಚಾಯತಿ ಮತಕ್ಷೇತ್ರ ಬಿರುಸುಗೊಂಡಿದೆ. ಇನ್ನೂ ಚುನಾವಣೆಯೇ ಘೋಷಣೆಯಾಗಿಲ್ಲ, ಮೀಸಲಾತಿ ಪ್ರಕಟವಾಗ್ತಿದ್ದಂತೆ ರಾಜಕೀಯ ಚದುರಂಗದಾಟಗಳು ತೆರೆಮರೆಯಲ್ಲೇ ಚಾಲ್ತಿ ಪಡೆದುಕೊಂಡಿವೆ. ಬಿಜೆಪಿ ತಲೆಬಿಸಿ..! ಅಂದಹಾಗೆ, ನಂದಿಕಟ್ಟಾ ತಾಪಂ ಕ್ಷೇತ್ರಕ್ಕೆ ” ಸಾಮಾನ್ಯ” ಮೀಸಲಾತಿ ಪ್ರಕಟಗೊಂಡಿದೆ. ಹೀಗಾಗಿ, ಇಲ್ಲಿನ ಬಿಜೆಪಿಯಲ್ಲಿ ಈಗಾಗಲೇ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತುಗಳು ಜಾರಿಯಲ್ಲಿವೆ. ಹಾಗೆ ಆಕಾಂಕ್ಷಿತರ ಪಟ್ಟಿ ಹನುಂಮತನ ಬಾಲದಂಗಿದೆ. ಈ ಸಾರಿ ನಾನೂ ಒಂದು ಕೈ ನೋಡೇ ಬಿಡ್ತಿನಿ ಅಂತಾ ಆಕಾಂಕ್ಷಿಗಳು ತೋಳು ಏರಿಸಿಕೊಂಡು ಸನ್ನದ್ದವಾಗಿದ್ದಾರೆ. ಆದ್ರೆ ಆ...
ಮುಂಡಗೋಡಿಗೆ ಡಿಕೆಶಿ ಭೇಟಿ, ಹೂವಿನ ಮಳೆ ಸುರಿಸಿ ಕಾರ್ಯಕರ್ತರ ಉತ್ಸಾಹ..!
ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಪ್ರತಿಭಟನೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂಡಗೋಡ ಪಟ್ಟಣಕ್ಕೆ ಭೇಟಿ ನೀಡಿದ್ರು. ಶಿರಸಿಯಿಂದ ಹುಬ್ಬಳ್ಳಿಗೆ ತೆರಳುವ ವೇಳೆ ಮುಂಡಗೋಡ ಪಟ್ಟಣದಲ್ಲೂ ಕೆಲಹೊತ್ತು ನಿಂತು ಕಾರ್ಯಕರ್ತರನ್ನು ಭೇಟಿ ಮಾಡಿದ್ರು. ಡಿಕೆಶಿ ಬರ್ತಿದ್ದಾರೆ ಅಂತಾ ಮಾಹಿತಿ ತಿಳಿದು ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು ಜಮಾವಣೆ ಆಗಿದ್ರು. ಡಿ.ಕೆ.ಶಿವಕುಮಾರ್ ಬರುತ್ತಿದ್ದಂತೆ ಘೋಷಣೆ ಕೂಗಿ ಹೂವಿನ ಮಳೆ ಸುರಿಸಿದ್ರು. ಹಾರ...
ತೈಲ ಬೆಲೆ ಏರಿಕೆಗೆ ಖಂಡನೆ: ಶಿರಸಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ; ಸೈಕಲ್ ಏರಿ ಡಿಕೆಶಿ ಆಕ್ರೋಶ..!
ಶಿರಸಿ: ನಗರದಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ, ತೈಲ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ ನಡೆಯಿತು. ಕೋವಿಡ್ ನಿಯಮ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಸೈಕಲ್ ಜಾಥಾಗೆ ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆದರೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ರು. ಕಾಂಗ್ರೆಸ್ ಹಿರಿಯ ಮುಖಂಡ ಆರ್. ವಿ.ದೇಶಪಾಂಡೆ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ರು.
ಇದು ಮುಂಡಗೋಡ ಕಾಂಗ್ರೆಸ್ ಹಕೀಕತ್ತು..! ಯುವ ಪಡೆಗೆ “ಗದ್ದುಗೆ” ಪ್ರಿಯರದ್ದೇ ಆಪತ್ತು..! ಇನ್ನಾದ್ರೂ ಎದ್ದೇಳತ್ತಾ “ಕೈ” ಪಡೆ..?
ಮುಂಡಗೋಡ ತಾಲೂಕಿನಲ್ಲಿ ಕಾಂಗ್ರೆಸ್ ಇನ್ನೂ ಉಸಿರಾಡ್ತಿದೆಯಾ..? ಇಂತಹದ್ದೊಂದು ಪ್ರಶ್ನೆ ಬಹುತೇಕ ಕ್ಷೇತ್ರದ ಜನರಲ್ಲಿದೆ. ಯಾಕಂದ್ರೆ, ಯಾವಾಗ, ಶಿವರಾಮ್ ಹೆಬ್ಬಾರ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಬಾವುಟ ಹಿಡಿದ್ರೊ, ಆ ಕ್ಷಣದಿಂದಲೇ ಇಡೀ ಮುಂಡಗೋಡ ತಾಲೂಕಿನ “ಕೈ” ಪಡೆಯ ಜಂಘಾಬಲವೇ ಕುಗ್ಗಿಹೋಯ್ತು, ಇನ್ನೇನು ತಾಲೂಕಿನಲ್ಲಿ ಕಾಂಗ್ರೆಸ್ ಖತಂ ಆಯ್ತು ಅನ್ನೋ ವಾತಾವರಣ ಇತ್ತು. ಇದು ಇತಿಹಾಸ..! ಹಾಗೆ ನೋಡಿದ್ರೆ, ಇದುವರೆಗೂ ತಾಲೂಕಿನ ಮೂರೂ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪ್ರಭಲವಾಗಿಯೇ ಇತ್ತು. ಬಿಜೆಪಿ ಯಾವುದೇ ಒಂದು...