ನಂದಿಕಟ್ಟಾ ಗ್ರಾಮದ ನವನಗರ ಪ್ಲಾಟ್ ನ ಜನರು ನಿತ್ಯವೂ ಪರದಾಡುತ್ತಿದ್ದಾರೆ. ಯಾಕಂದ್ರೆ, ಇವ್ರಿಗೆ ಕುಡಿಯಲು ನೀರೇ ಸಿಗುತ್ತಿಲ್ಲ. ನಿತ್ಯವೂ ಕುಡಿಯುವ ನೀರಿಗಾಗಿ ಮಕ್ಕಳು, ಮರಿಗಳೊಂದಿಗೆ ಕೊಡಹೊತ್ತು ಗದ್ದೆಗಳಲ್ಲಿ ತಿರುಗಾಡುವ ಪರಿಸ್ಥಿತಿ ಇಲ್ಲಿನ ಜನ್ರದ್ದು.. ಹೀಗಾಗಿ, ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸ್ತಿದಾರೆ ನಿವಾಸಿಗಳು. ಏನಿದು ಸಮಸ್ಯೆ..? ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ ನಂಬರ್ 2 ರಲ್ಲಿ ಬರೋ ನವನಗರ ಪ್ಲಾಟ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ, ಪ್ರತಿದಿನ ಇಲ್ಲಿನ ಜನ ಬಹುತೇಕ...
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Category: ಉತ್ತರ ಕನ್ನಡ
ಸಚಿವ ಹೆಬ್ಬಾರ್ ಅಂದ್ರೆ ರೈತರ ಪಾಲಿನ ಭಗೀರಥ: ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ
ಮುಂಡಗೋಡ; ಸಚಿವ ಶಿವರಾಮ್ ಹೆಬ್ಬಾರ್ ಕ್ಷೇತ್ರದ ರೈತರ ಮನಸಲ್ಲಿ ಭಗೀರಥರ ಸ್ಥಾನ ಪಡೆದಿದ್ದಾರೆ ಅಂತಾ ಹಿರಿಯ ಪತ್ರಕರ್ತ, ಸಂಪಾದಕ ಹರಿಪ್ರಕಾಶ್ ಕೋಣೆಮನೆ ಸಚಿವ ಹೆಬ್ಬಾರ್ ರವರನ್ನು ಹಾಡಿಹೊಗಳಿದ್ರು. ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಹಾಗೂ ಭಾರತೀಯ ವಿಕಾಸ ಟ್ರಸ್ಟ್ (ಸೆಲ್ಕೋ) ಸಂಸ್ಥೆಗಳು ನೀಡಿದ ಡಯಾಲಿಸಿಸ್ ಯಂತ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸಚಿವರ ಪ್ರಯತ್ನದಿಂದ ಮೊದಲ ಬಾರಿಗೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾಗುತ್ತಿದೆ. ಇನ್ನು, ಯಲ್ಲಾಪುರದ ಸರಕಾರಿ ಆಸ್ಪತ್ರೆಯಲ್ಲಿ ತಮ್ಮ ಸಂಸ್ಥೆಯ ಮೂಲಕವಾಗಿ 35 ಲಕ್ಷ...
ಇದು ಮುಂಡಗೋಡ ಕಾಂಗ್ರೆಸ್ ಸೀಕ್ರೆಟ್..! ಆ ಜಂಗಲ್ ರೆಸಾರ್ಟು, ಸೆಪ್ಟೆಂಬರ್ ಇಪ್ಪತ್ತು, ಏನಿದರ ಮಸಲತ್ತು..?
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ “ಕೈ” ಬಲಗೊಳ್ಳುತ್ತಿದೆ. ಮುಂಬರೋ ವಿಧಾನಸಭಾ ಚುನಾವಣೆ ಹೊತ್ತಿಗೆ ತನ್ನ ತೋಳ್ಬಲ ತೋರಿಸಲು ಏನೇನು ಬೇಕೋ ಅದನ್ನೇಲ್ಲ ಮಾಡಿಕೊಳ್ಳುವ ಉಮೇದಿನಲ್ಲಿದ್ದಾರೆ ದೇಶಪಾಂಡೆ ಪಡೆ. ಹೀಗಾಗಿನೇ, ಈಗಿಂದಲೇ ಅಂತಹದ್ದೊಂದು ರಣತಂತ್ರ ರೂಪಿಸಿ, ಕಾರ್ಯಕರ್ತರನ್ನು ಉತ್ತೇಜಿಸೋ ಕೆಲಸದಲ್ಲಿ ನಿರತವಾಗಿದೆ ಅದೋಂದು ಟೀಂ.. ಯುವಕರೇ ಟಾರ್ಗೆಟ್..! ಯಾವಾಗ, ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಚುನಾವಣೆಲಿ ಪ್ರಶಾಂತ್ ದೇಶಪಾಂಡೆಯವರೇ ಕಣಕ್ಕಿಳಿಯೋದು ಅಂತಾ ಘೋಷಣೆಯ ಹಂತಕ್ಕೆ ಬಂತೋ, ಅವತ್ತಿನಿಂದಲೇ, ಕ್ಷೇತ್ರದಲ್ಲಿ ಗಟ್ಟಿಗೊಳ್ಳಲು ಬೇಕಾದ ಒಂದಿಷ್ಟು ತಯಾರಿ ಶುರುವಿಟ್ಟುಕೊಂಡಿದ್ದಾರೆ ದೊಡ್ಡ...
ಇಂದೂರು ಸಂತೆಗೆ ಬರೋ ವ್ಯಾಪಾರಿಗಳಿಗೆ ಇದೇಂಥಾ ಕಿರಿಕಿರಿ..? ಪಿಡಿಓ ಸಾಹೇಬ್ರೆ ಎಲ್ಲಿದ್ದೀರಿ..?
ಮುಂಡಗೋಡ:ತಾಲೂಕಿನ ಇಂದೂರು ಸಂತೆಯಲ್ಲಿ ವ್ಯಾಪಾರಿಗಳಿಗೆ ಇನ್ನಿಲ್ಲದ ಕಿರಿಕಿರಿ ಆಗ್ತಿದೆ. ಕರ ವಸೂಲಿ ಹೆಸ್ರಲ್ಲಿ ಇಲ್ಲಿ ದಂಧೆ ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಟೆಂಡರ್ ಅವದಿ ಮುಗಿದು ತಿಂಗಳುಗಳೇ ಕಳೆದ್ರೂ ಇಲ್ಲಿ ವ್ಯಾಪಾರಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗ್ತಿದೆ. ಆದ್ರೆ ಇದನ್ನೇಲ್ಲ ನಿಭಾಯಿಸಬೇಕಿದ್ದ ಪಿಡಿಓ ಮಾತ್ರ ಅದೇನು ಮಾಡ್ತಿದಾರೋ ಯಾರಿಗೂ ಗೊತ್ತಿಲ್ಲ. ಬಾಯಿಗೆ ಬಂದದ್ದೇ ರೇಟು..! ಇಂದೂರು ಸಂತೆಯಲ್ಲಿ ಸುತ್ತ ಮುತ್ತಲ ತಾಲೂಕು ಸೇರಿದಂತೆ ಹೊರ ಜಿಲ್ಲೆಗಳಿಂದಲೂ ವ್ಯಾಪಾರಿಗಳು ಬರ್ತಾರೆ. ಅಲ್ಲದೇ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದ...
ಮುಂಡಗೋಡ ಪಿಐ ಪ್ರಭುಗೌಡರಿಗೆ ಕುಂದರ್ಗಿ ಯುವಕರಿಂದ ಸನ್ಮಾನ..!
ಮುಂಡಗೋಡ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಐ ಆಗಿ ಸೇವೆ ಸಲ್ಲಿಸಿ ಇದೀಗ ಡಿವೈಎಸ್ಪಿಯಾಗಿ ಬಡ್ತಿ ಹೊಂದಿ, ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆ ಆಗ್ತಿರೊ ಪ್ರಭುಗೌಡ ಕಿರೆದಳ್ಳಿಯವರಿಗೆ ಕುಂದರ್ಗಿಯ ಯುವಕರು ಸನ್ಮಾನಿಸಿದ್ರು. ಕುಂದರ್ಗಿ ಗ್ರಾಮದ ಓಂಕಾರ ಯುವಕ ಮಂಡಳದ ಯುವಕರು ಹಾಗೂ ಗ್ರಾಮಸ್ಥರು ಪ್ರಭುಗೌಡರವರಿಗೆ ಶಾಲು ಹೊದಿಸಿ, ಸಿಹಿ ತಿನ್ನಿಸಿ ಶುಭ ಕೋರಿದರು. ಈ ವೇಳೆ ಕುಂದರ್ಗಿ ಗ್ರಾಮದ ಹಲವರು ಭಾಗಿಯಾಗಿದ್ರು.
ಮುಂಡಗೋಡಿನಲ್ಲಿ ಬಿಡಾಡಿ ದನಗಳದ್ದೇ ಕಾರುಬಾರು; ಪಪಂ ಬೇಜವಾಬ್ದಾರಿ ಕೇಳೋರ್ಯಾರು..?
ಮುಂಡಗೋಡ: ಪಟ್ಟಣದಲ್ಲಿ ಈಗ ಎಲ್ಲೆಂದರಲ್ಲಿ ಬಿಡಾಡಿ ದನಗಳ ಕಾರುಬಾರು ಜೋರಾಗಿದೆ. ಪಟ್ಟಣ ಪಂಚಾಯತಿಯವರ ನಿರ್ಲಕ್ಷದಿಂದ ವಾಹನ ಸವಾರರು ಪರದಾಡುವ ಸ್ಥಿತಿ ಇದೆ. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಹಾಗೂ ಪಟ್ಟಣದ ಹಲವು ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ರಸ್ತೆಯಲ್ಲೇ ಗುಂಪು ಗುಂಪಾಗಿ ಠಿಕಾಣಿ ಹೂಡುತ್ತವೆ. ರಸ್ತೆಯ ನಡುವೆಯೇ ಹಿಂಡು ಹಿಂಡಾಗಿ ಮಲಗಿರುತ್ತವೆ. ಹೀಗಾಗಿ, ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಕೆಲವು ಸಾರಿ ಅದೇಷ್ಟೋ ಜನ ಸವಾರರು ಬಿಡಾಡಿ ದನಗಳ ಕಾಟದಿಂದ ಬಿದ್ದು...
ಶಿರಸಿ ಜಿಪಂ ಕಚೇರಿಯಲ್ಲಿ ಎಸಿಬಿ ದಾಳಿ: ಇಬ್ಬರು ಬ್ರಷ್ಟರು ಬಲೆಗೆ..!
ಶಿರಸಿ: ಕಟ್ಟಡ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಶಿರಸಿ ನಗರದ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನಡೆದಿದೆ. ಶಿರಸಿ ಜಿಲ್ಲಾ ಪಂಚಾಯತಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯದುನಂದನ್ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿದ್ದ ಸುಬ್ರಹ್ಮಣ್ಯ ಬಂಧಿತ ಆರೋಪಿಗಳು. ಇವರನ್ನು ಶಿವಮೊಗ್ಗದ ಸುನೀಲ್ ಎಂಬ ಗುತ್ತಿಗೆದಾರನಿಂದ 12 ಸಾವಿರ ರು. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಗುತ್ತಿಗೆದಾರನಿಗೆ...
ಚೀಪ್ ರೇಟ್ ಚಿನ್ನದ ಗ್ಯಾಂಗ್, ಬಲೆಗೆ ಬಿದ್ದಿದ್ದೇ ರೋಚಕ..! “ಧರ್ಮೆ”ಯ ಅಂಗಳದ ದರೋಡೆ ಕೇಸ್ ನ ಇಂಚಿಂಚೂ ಕತೆಯಿದು..!
ಚೀಪ್ ರೇಟ್ ಚಿನ್ನದ ಹೆಸ್ರಲ್ಲಿ ದರೋಡೆಗಿಳಿದು ಲಕ್ಷ ಲಕ್ಷ ವಂಚಿಸುತ್ತಿದ್ದ ಖತರ್ನಾಕ ಗ್ಯಾಂಗ್ ನ ಹೆಡೆಮುರಿ ಕಟ್ಟುವಲ್ಲಿ ಮುಂಡಗೋಡ ಪೊಲೀಸ್ರು ಬಹುತೇಕ ಯಶಸ್ವಿಯಾಗಿದ್ದಾರೆ. ಪರಿಣಾಮ, ಮಳಗಿ ಧರ್ಮಾ ಜಲಾಶಯದ ಅಂಗಳದಲ್ಲಿ ನಡೆದು ಹೋಗಿದ್ದ ರಾಬರಿ ಕೇಸ್ ಒಂದು ಹಂತದಲ್ಲಿ ತಾರ್ಕಿಕ ಅಂತ್ಯದತ್ತ ಬಂದು ನಿಂತಿದೆ. ಕೇಸ್ ನಲ್ಲಿ ಕಂತೆಗಟ್ಟಲೇ ಹಣವನ್ನು ಎಗರಿಸಿ ಪರಾರಿಯಾಗಿದ್ದ ಖದೀಮರನ್ನು ನಮ್ಮ ಹೆಮ್ಮೆಯ ಮುಂಡಗೋಡ ಪೊಲೀಸ್ರು ಎಳೆದು ತಂದಿದ್ದಾರೆ. ಹೀಗಾಗಿ, ಮುಂಡಗೋಡ ಪೋಲಿಸರಿಗೊಂದು ಬಿಗ್ ಸೆಲ್ಯೂಟ್..! 9-ಮೈನೆಸ್-6…! ಅಂದಹಾಗೆ, ಸಧ್ಯ ಪ್ರಕರಣದಲ್ಲಿ ಬರೋಬ್ಬರಿ...
ಅಕ್ರಮ ಗಾಂಜಾ ಮಾರಾಟ ಯತ್ನ, ಇಬ್ಬರು ಆರೋಪಿಗಳ ಬಂಧನ..!
ಶಿರಸಿ: ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಹವಣಿಸುತ್ತಿದ್ದ ಆರೋಪಿಗಳನ್ನ ಬಂಧಿಸಿದ ಘಟನೆ ನಡೆದಿದೆ. ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮ ಕಾಲೋನಿಯಲ್ಲಿ 1 ಕೆಜಿ 910 ಗ್ರಾಂ ತೂಕದ ಅಂದಾಜು 25ಸಾವಿರ ರೂಪಾಯಿ ಮೌಲ್ಯದ ಗಾಂಜಾವನ್ನು ಅಕ್ರಮವಾಗಿ ಸೊರಬದಿಂದ ಸಾಗಾಟ ಮಾಡಿಕೊಂಡು ಶಿರಸಿಯಲ್ಲಿ ಮಾರಾಟ ಮಾಡುವುದಕ್ಕಾಗಿ, ಬಂದವರನ್ನು ದಾಳಿ ಮಾಡಿ ಗಾಂಜಾ ವಶಪಡಿಸಿಕೊಂಡಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ. ಮಂಜುನಾಥ ನಾಯ್ಕ(31) ಹಾಗೂ ವೀರಭದ್ರಪ್ಪ ತಂದೆ ಕರಿಯಪ್ಪ ಈಡಿಗ(42) ಬಂಧಿತ ಆರೋಪಿಗಳಾಗಿದ್ದು, ಇಬ್ಬರೂ ಶಿವಮೊಗ್ಗ ಜಿಲ್ಲೆಯ...
ಹುನಗುಂದದಲ್ಲಿ ಮನೆಯಲ್ಲೇ ಯುವಕ ನೇಣಿಗೆ ಶರಣು..!
ಮುಂಡಗೋಡ: ಯುವಕನೋರ್ವ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುನಗುಂದ ದೇಶಪಾಂಡೆ ನಗರದಲ್ಲಿ ನಡೆದಿದೆ. ಸಂಜೀವ್ ಫಕ್ಕೀರಪ್ಪ ಹೊನ್ನಳ್ಳಿ(30) ನೇಣಿಗೆ ಶರಣಾದ ಯುವಕನಾಗಿದ್ದಾನೆ. ರಾತ್ರಿ 8 ಗಂಟೆಯ ಹೊತ್ತಿಗೆ ಮನೆಯಲ್ಲೇ ಎಲ್ಲರೊಂದಿಗೆ ಇದ್ದ ಮೃತ ಯುವಕ, ಮನೆಯವರೇಲ್ಲರೂ ಹೊರಗಡೆ ಕುಳಿತಿದ್ದಾಗ, ಒಳಗೆ ಹೋಗಿ ಮನೆಯ ಜಂತಿಗೆ ನೇಣು ಬಿಗಿದುಕೊಂಡಿದ್ದಾನೆ. ಪೋಷಕರು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಅಷ್ಟೊತ್ತಿಗಾಗಲೇ ಯುವಕ ಮೃತಪಟ್ಟಿದ್ದಾನೆ ಅಂತಾ ತಿಳಿದು ಬಂದಿದೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ...









