ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಮಾಜಿ ಗ್ರಾಮ ಪಂಚಾಯತ ಸದಸ್ಯ ಮರಿಯಪ್ಪ ಮೇತ್ರಿ ಹೃದಯಾಘಾತದಿಂದ ತಡರಾತ್ರಿ ನಿಧನರಾಗಿದ್ದಾರೆ. ಮಂಗಳವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವ್ರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ರೈತರ ಬೋರವೆಲ್ ರಿಪೇರಿ ಮಾಡುತ್ತಿದ್ದ ಮರಿಯಪ್ಪ ಮೇತ್ರಿ ನಿಧನಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Category: ಉತ್ತರ ಕನ್ನಡ
ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನವರಾತ್ರಿ ಸಂಭ್ರಮ, ಆಂಜನೇಯ ಸ್ವಾಮಿಗೆ ಹೋಮ, ಹವನ..!
ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಇವತ್ತು ನವರಾತ್ರಿಯ ಸಂಭ್ರಮದಲ್ಲಿ, ಮಂತ್ರ ಘೋಷಗಳ ಸದ್ದು ರಿಂಗಣಿಸಿದೆ. ನವರಾತ್ರಿಯ ವಿಶೇಷ ಸಂದರ್ಭದಲ್ಲಿ, ಅದ್ರಲ್ಲೂ ಶನಿವಾರದ ದಿನ ಇಲ್ಲಿನ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಹೋಮ, ಹವನ ನಡೆಸಲಾಗಿದೆ. ನೂತನವಾಗಿ ಅಧಿಕಾರ ವಹಿಸಿಕೊಂಡಿರೋ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ್ ಮಬನೂರು ಸೇರಿದಂತೆ ಠಾಣೆಯ ಎಲ್ಲಾ ಸಿಬ್ಬಂದಿಗಳು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ರು.
ಮುಂಡಗೋಡ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಮಟ್ಕಾ ದಂಧೆ..! “ಕ್ರಮ ಕೈಗೊಳ್ಳಿ ಸಾಹೇಬ್ರೇ” ಅಂತಾ ಎಸ್ಪಿಗೆ ದೂರು..!!
ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಮನೆ ಮಾತಾಗಿದೆ. ಹಳ್ಳಿ, ಹಳ್ಳಿಗಳಲ್ಲಿ ಹೆಜ್ಜೆಗೊಬ್ರು ಮಟ್ಕಾ ಬುಕ್ಕಿಗಳು ತಲೆ ಎತ್ತಿದ್ದಾರೆ, ಆದ್ರೆ ಇದನ್ನೇಲ್ಲ ಕಂಟ್ರೋಲ್ ಮಾಡಬೇಕಿದ್ದ ಪೊಲೀಸರು ಮಾತ್ರ ಏನೂ ಮಾಡದ ಸ್ಥಿತಿಯಲ್ಲಿದ್ದಾರೆ.. ಹಾಗಂತ, ನಾವು ಹೇಳ್ತಿಲ್ಲ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಂಡಗೋಡಿನ ಯುವ ಪಡೆ ಲಿಖಿತವಾಗಿ ದೂರು ನೀಡಿ, ಕ್ರಮಕ್ಕೆ ಆಗ್ರಹಿಸಿದೆ. ಯಸ್, ಮುಂಡಗೋಡ ಭಜರಂಗದಳದ ಕಾರ್ಯಕರ್ತ ಮಂಜುನಾಥ್ ಪವಾರ್ ಇಂತಹದ್ದೊಂದು ದೂರನ್ನು ಎಸ್ಪಿ ಸಾಹೇಬ್ರಿಗೆ ಸಲ್ಲಿಸಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಅನ್ನೋದು ಬಡ ಜನರ ಜೀವ...
ಚೌಡಳ್ಳಿ ಗ್ರಾಪಂ ನಲ್ಲಿ ಮಹಿಳಾ ಸದಸ್ಯರ ಬದಲು ಸಂಬಂಧಿಕರದ್ದೇ ದರ್ಬಾರು..! ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು..!!
ಮುಂಡಗೋಡ: ತಾಲೂಕಿನ ಚೌಡಳ್ಳಿಯ ಹಲವು ಯುವಕರು ಸಿಡಿದು ನಿಂತಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ, ಮಹಿಳಾ ಸದಸ್ಯರುಗಳ ಪತಿ, ಅಥವಾ ಸಂಬಂಧಿಕರೇ ದರ್ಬಾರು ನಡೆಸ್ತಿದಾರೆ ಅಂತಾ ಆರೋಪಿಸಿ ದೂರು ನೀಡಿದ್ದಾರೆ. ಯಸ್, ಮುಂಡಗೋಡ ತಾಲೂಕಿನ ಚೌಡಳ್ಳಿ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಗ್ರಾಮ ಪಂಚಾಯತ್ ಸದಸ್ಯರ ಪರವಾಗಿ, ಅವರ ಸಂಬಂಧಿಕರು ಹಾಗೂ ಮಹಿಳಾ ಸದಸ್ಯರ ಪತಿ, ಹೀಗೆ ಕುಟುಂಬಸ್ಥರು ಪಂಚಾಯತ್ ಕೆಲಸಕಾರ್ಯಗಳಲ್ಲಿ ತಾವು ಅವರ ಪರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ಇದನ್ನ ಖಂಡಿಸಿ ಗ್ರಾಮದ ವಿದ್ಯಾಧರ್ ಶಿವಾಜಿ...
ಮುಂಡಗೋಡಿನಲ್ಲಿ ಮತ್ತೊಂದು ಕಳ್ಳತನ, ಹಾರ್ಡವೇರ್ ಅಂಗಡಿ ದೋಚಿದ ಖದೀಮರು..!
ಮುಂಡಗೋಡಿನಲ್ಲಿ ಮತ್ತೊಂದು ಕಳ್ಳತನವಾಗಿದೆ. ಹಾರ್ಡವೇರ್ ಅಂಗಡಿಯ ಸೆಟರ್ಸ್ ಮುರಿದು ಕಳ್ಳರು ಕೈಚಳಕ ತೋರಿದ್ದಾರೆ. ಅಂಗಡಿಯಲ್ಲಿದ್ದ 15 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶಿರಸಿ ರಸ್ತೆಯ ಪೆಟ್ರೊಲ್ ಬಂಕ್ ಪಕ್ಕದಲ್ಲೇ ಇರುವ ಹಾರ್ಡವೇರ್ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಹಾರ್ಡವೇರ್ ಅಂಗಡಿಯ ಕೌಂಟರಿನಲ್ಲಿದ್ದ 15 ಸಾವಿರ ರೂ. ನಗದು ದೋಚಿಕೊಂಡು ಹೋಗಿದ್ದಾರೆ. ಮುಂಡಗೋಡ ಪೊಲೀಸರು ಯಥಾರೀತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿನ್ನೆಯಷ್ಟೇ ತಾಲೂಕಿನ ಮಳಗಿಯಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳ್ಳತನಕ್ಕೆ...
ಅಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರ ದಾಳಿ..? ಇದು ನಿಜವಾ..?
ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ ಅಂತಾ ತಿಳಿದು ಬಂದಿದೆ. ಇವತ್ತು ಗಾಂಧಿ ಜಯಂತಿ ಎಲ್ಲಿಯೂ ಮದ್ಯದ ಅಂಗಡಿಗಳನ್ನು ತೆರೆಯುವ ಹಾಗಿಲ್ಲ. ಆದ್ರೆ, ಅಗಡಿಯಲ್ಲಿ ಮಾತ್ರ ರಾಜಾರೋಶವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ, ಬಾತ್ಮಿ ತಿಳಿದು ಸ್ಥಳಕ್ಕೆ ಹೋಗಿದ್ದ ಪೊಲೀಸರಿಗೆ ಖಾತ್ರಿಯಾಗಿದೆ. ಮಾಲು ಸಮೇತ ಎಳೆದು ತಂದಿದ್ದಾರಂತೆ ಪೊಲೀಸ್ರು. ಹಾಗಂತ, ಮಾಹಿತಿಯಿದೆ, ಆದ್ರೆ, ಅಸಲು ಏನು ಅಂತಾ ಪೊಲೀಸರೇ ಹೇಳಬೇಕಿದೆ. ಅಷ್ಟಕ್ಕೂ ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಇರೋ ಈ...
ಮಳಗಿಯಲ್ಲಿ ಮತ್ತೊಂದು ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ..! ಆತಂಕದಲ್ಲಿದ್ದಾರೆ ಜನ..!!
ಮುಂಡಗೋಡ: ಮಳಗಿಯಲ್ಲಿ ಕಳ್ಳರು ಮತ್ತೆ ಕೈಚಳಕ ತೋರಿದ್ದಾರೆ. ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಸೆಟರ್ಸ್ ಮುರಿದು ಒಳನುಗ್ಗಿರೋ ಕಳ್ಳರು, ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ತಿಂಗಳಲ್ಲೇ ಇದು ಮಳಗಿಯಲ್ಲಿ ಮೂರನೇ ಕಳ್ಳತನದ ಪ್ರಕರಣವಾಗಿದೆ. ಹೀಗಾಗಿ, ಮಳಗಿಯಲ್ಲೇ ಠಾಣೆ ಇದ್ದರೂ ಅಲ್ಲಿನ ಪೊಲೀಸರು ಅದೇನು ಮಾಡ್ತಿದಾರೆ..? ಅನ್ನೋ ಪ್ರಶ್ನೆ ಎದುರಾಗಿದೆ. ನಿನ್ನೆ ತಡರಾತ್ರಿ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಹಿಂಬದಿಯ ಸೆಟರ್ಸ್ ಮುರಿದು ಒಳ ನುಗ್ಗಿರೋ ಕಳ್ಳರು, ಎಲ್ಲೆಂದರಲ್ಲಿ ತಡಕಾಡಿದ್ದಾರೆ. ಆದ್ರೆ, ಅದೃಷ್ಟವಶಾತ್...
“ಗುಂಡು ಹೊಡಿಯೋಕೂ ರೆಡಿ, ಗುಂಡು ಹೊಡಿಸಿಕೊಳ್ಳೋಕೂ ರೆಡಿ” ವಾವ್, ಏನ್ ಮಾತಾಡಿದ್ರಿ “ಪುಟ್ಟ” ಪ್ರಶಾಂತಣ್ಣ..?
“ನಾವು ಗುಂಡು ಹೊಡಿಲಿಕ್ಕೂ ರೆಡಿ, ಗುಂಡು ಹೊಡಿಸಿಕೊಳ್ಳೋಕೂ ರೆಡಿ” ಅಯ್ಯೋ ಪ್ರಶಾಂತಣ್ಣ ನಿಮ್ಮಂತವರ ಬಾಯಲ್ಲಿ ಇಂತಹ ಮಾತಾ..? ಚುನಾವಣೆ ಅಂದಮೇಲೆ ಒಂದು ಮಾತು ಹೆಚ್ಚು, ಒಂದು ಮಾತು ಕಡಿಮೆ ಇದ್ದೇ ಇರತ್ತೆ, ಅಷ್ಟಕ್ಕೇ ಗುಂಡಿನ ದಾಳಿಗಳ ಮಾತು ಹೇಳೋದಾ..? ಅಷ್ಟಕ್ಕೂ ಆರ್.ವಿ.ದೇಶಪಾಂಡೆಯವರ ಸುಪುತ್ರರಾಗಿರೋ ನಿಮಗೆ ಇಂತಹ ಮಾತುಗಳು ಸರಿಕಾಣತ್ತಾ..? ಹಾಗಂತ, ನಿಮ್ಮ ಬಾಯಲ್ಲಿ ಆ ನಿಮ್ಮ ಗುಂಡಿನ ಸದ್ದು ಕೇಳಿದವರು ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಿದಾರೆ. ಅದೇನಂದ್ರು ಪ್ರಶಾಂತಣ್ಣ ಕೇಳಿಬಿಡಿ..! ನಿಜ, ಇಂತಹದ್ದೊಂದು, “ಗುಂಡಿನ” ಮಾತನ್ನು ಯಲ್ಲಾಪುರ...
ವಾಟ್ಸಾಪ್ ಗ್ರೂಪ್ ಗಳಲ್ಲೂ ಸ್ಪೋಟವಾಯ್ತು ಬಿಜೆಪಿ ಅಸಮಾಧಾನ..! ಛೇ, ಏನಿದೇಲ್ಲ..?
ಮುಂಡಗೋಡ ಬಿಜೆಪಿಯ ಕಾರ್ಯಕರ್ತರ ಒಳ ಗುದ್ದಾಟ ಮುಗಿಯುವ ಲಕ್ಷಣಗಳು ಸದ್ಯಕ್ಕಂತೂ ಕಾಣ್ತಿಲ್ಲ. ಅದ್ಯಾವ ಕಾರಣಕ್ಕೋ ಏನೋ ಹಲವ್ರಿಗೆ ಅಸಮಾಧಾನ ಅನ್ನೋದು ಒಳಗೊಳಗೇ ಕುದಿಯುತ್ತಿದೆ. ಹೀಗಾಗಿ, ಇಲ್ಲಿನ ಬಿಜೆಪಿ ಕಾರ್ಯಕರ್ತರ ಒಳನೋವು ವಾಟ್ಸಾಪ್ ಗ್ರೂಪ್ ಗಳಲ್ಲೂ ಸ್ಪೋಟಗೊಳ್ತಿವೆ. ಒಂದು ಕಣ್ಣಿಗೆ ಸುಣ್ಣ..! ಅಸಲು, ಮುಂಡಗೋಡ ಬಿಜೆಪಿಯಲ್ಲಿ ಕಾರ್ಯಕರ್ತರ ನೋವು ಕೇಳುವವರೇ ಇಲ್ವಾ..? ಕಾರ್ಯಕರ್ತರಲ್ಲಿ ಮುಖಂಡರ ನಡುವೆ ಅದೇಷ್ಟರ ಮಟ್ಟಿಗೆ ಗುಂಪುಗಾರಿಕೆಯಿದೆಯೋ ಅದೇಲ್ಲ ಜಾತಿಯಾದಾರಿತವಾ..? ಜಾತಿಗೊಂದು ಬಣ ಸೃಷ್ಟಿಯಾಗಿದೆಯಾ ಕಮಲ ಪಡೆಯಲ್ಲಿ..? ಇಂತಹ ಅನುಮಾನಗಳು ಸದ್ಯಕ್ಕಂತೂ ತಲೆ ಚಿಟ್ಟು ಹಿಡಿಸಿದೆ....
ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ..!
ಭಟ್ಕಳ- ಸಿಇಎನ್ ಪೊಲೀಸರು ಕಾರ್ಯಚರಣೆ ನಡೆಸಿ, ಭಟ್ಕಳದ ರೈಲ್ವೇ ನಿಲ್ದಾಣದ ಬಳಿ, ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಗಾಂಜಾ ಸಮೇತ ಬಂಧಿಸಿದ್ದಾರೆ. ಅಬ್ದುಲ್ ರಷೀದ್, ಮಹಮ್ಮದ್ ಇರ್ಷಾದ ಬಂಧಿತರು. ಬಂಧಿತ ಆರೋಪಿತರಿಂದ 560 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಭಟ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.








