Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ನಂದಿಕಟ್ಟಾದಲ್ಲಿ ಮೆಕ್ಕೆಜೋಳ ಬೆಳೆದ ಅನ್ನದಾತರಿಗೆ ಸನ್ಮಾನ ಕಾರ್ಯ..

ನಂದಿಕಟ್ಟಾದಲ್ಲಿ ಮೆಕ್ಕೆಜೋಳ ಬೆಳೆದ ಅನ್ನದಾತರಿಗೆ ಸನ್ಮಾನ ಕಾರ್ಯ..

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಖಾಸಗಿ ಮೆಕ್ಕೆಜೋಳ ಬೀಜ ಬಿತ್ತಿ ಉತ್ತಮ‌ ಫಸಲು ಪಡೆದ ರೈತರಿಗೆ ಕಂಪನಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉತ್ತಮವಾಗಿ ಫಸಲು ಬೆಳೆದ ನಂದಿಕಟ್ಟಾದ ರೈತ ಶಿವಾಜಿ ರಾಧಾಪುರ ಹಾಗೂ ಹುಲಿಹೊಂಡ ಗ್ರಾಮದ ರೈತ ಸಿದ್ದಣ್ಣ ವಾಲೀಕಾರ್ ಗೆ ಸನ್ಮಾನಿಸಲಾಯಿತು. ಈ ವೇಳೆ ನಂದಿಕಟ್ಟಾ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು, ಮುಖಂಡರು ಭಾಗಿಯಾಗಿದ್ರು.

Post
ಗಬ್ಬೇದ್ದು ಹೋಗಿದೆ ಹುನಗುಂದ ಬಸವಣ್ಣ ಹೊಂಡ, ಪಿಡಿಓ ಸಾಹೇಬ್ರೇ ಒಂದಿಷ್ಟು ಗಮನಿಸಿ..!

ಗಬ್ಬೇದ್ದು ಹೋಗಿದೆ ಹುನಗುಂದ ಬಸವಣ್ಣ ಹೊಂಡ, ಪಿಡಿಓ ಸಾಹೇಬ್ರೇ ಒಂದಿಷ್ಟು ಗಮನಿಸಿ..!

ಹುನಗುಂದ ಗ್ರಾಮ ಪಂಚಾಯತಿಯ ಪಿಡಿಓ ಸಾಹೇಬ್ರೇ ಒಮ್ಮೆಯಾದ್ರೂ ನೀವು ಗ್ರಾಮದಲ್ಲಿರೋ ಬಸವಣ್ಣ ದೇವರ ಹೊಂಡ ಕಣ್ತುಂಬ ನೋಡಿದ್ದೀರಾ..? ಅಧ್ಯಕ್ಷರೇ, ನೀವಾದ್ರೂ ಈ ಹೊಂಡದ ಅವ್ಯವಸ್ಥೆ, ಗಬ್ಬೇದ್ದು ಹೋಗಿರೋ ಪರಿಯನ್ನ ಕಂಡಿದ್ದೀರಾ.. ದಯವಿಟ್ಟು ಒಮ್ಮೆ ಬಂದು ದರ್ಶನ ಮಾಡ್ಕೊಳ್ಳಿ, ಹಾಗಂತ, ಬಸವಣ್ಣ ಹೊಂಡದ ಅಕ್ಕಪಕ್ಕದ ಜನ ಹಿಡಿಶಾಪ ಹಾಕ್ತಿದಾರೆ. ಆದ್ರೆ, ಹುನಗುಂದ ಗ್ರಾಮ ಪಂಚಾಯತಿಯ ಪಿಡಿಓ ಸಾಹೇಬ್ರು ಮಾತ್ರ ಗಪ್ ಚುಪ್ ಆಗಿದ್ದಾರೆ. ಈಗ ಈ ದೃಷ್ಯದಲ್ಲಿ ನೀವು ನೋಡಿರೋ ಈ ಹೊಂಡ ಒಂದು ಕಾಲದಲ್ಲಿ ಇಡೀ ಊರಿನ...

Post
ಮುಂಡಗೋಡ ತಾಲೂಕಿನಲ್ಲಿ ಶೇ‌. 99.53 ರಷ್ಟು ಶಾಂತಿಯುತ ಮತದಾನ..! ಭದ್ರತೆಯಲ್ಲಿ ಕಾರವಾರಕ್ಕೆ ಮತಪೆಟ್ಟಿಗೆ ರವಾನೆ..!!

ಮುಂಡಗೋಡ ತಾಲೂಕಿನಲ್ಲಿ ಶೇ‌. 99.53 ರಷ್ಟು ಶಾಂತಿಯುತ ಮತದಾನ..! ಭದ್ರತೆಯಲ್ಲಿ ಕಾರವಾರಕ್ಕೆ ಮತಪೆಟ್ಟಿಗೆ ರವಾನೆ..!!

ಮುಂಡಗೋಡ: ತಾಲೂಕಿನಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಯ ಮತದಾನ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಶೇ. 99.53 ರಷ್ಟು ಮತದಾನವಾಗಿದೆ. ಗುಂಜಾವತಿ ಗ್ರಾಮ ಪಂಚಾಯತಿಯ ಓರ್ವ ಮಹಿಳಾ ಸದಸ್ಯೆ ಮತದಾನ ಮಾಡಿಲ್ಲ. ಈ ಕಾರಣದಿಂದ ಶೇ.100 ರಷ್ಟು ಮತದಾನವಾಗಿಲ್ಲ. ಬೆಳಗಿನಿಂದಲೂ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲೂ ಮತದಾರರು ಸಂಯಮದಿಂದಲೇ ಬಂದು ಮತದಾನ‌ ಮಾಡಿದ್ರು. ಬಹುತೇಕ ಮದ್ಯಾಹ್ನದಷ್ಟೊತ್ತಿಗೆ ಮತದಾನ ಸಂಪೂರ್ಣತೆಯ ಮಟ್ಟ ತಲುಪಿತ್ತು. ಕೆಲವು ಕಡೆ‌ ಮಾತ್ರ ಒಂದಿಷ್ಟು ತಡವಾಗಿ ಬಂದು ಮತದಾರರು ಮತದಾನ‌ ಮಾಡಿದ್ರು. ತಾಲೂಕಿನಲ್ಲಿ ಬಹುತೇಕ ಗ್ರಾಮ ಪಂಚಾಯತಿ ಸದಸ್ಯರುಗಳು...

Post
ಮತ್ತೆ ಮಳೆಯ ಆತಂಕ, ಫಸಲು ಕಟಾವಿಗೆ ಯಂತ್ರಗಳ ಮೊರೆ ಹೋದ ರೈತ..!

ಮತ್ತೆ ಮಳೆಯ ಆತಂಕ, ಫಸಲು ಕಟಾವಿಗೆ ಯಂತ್ರಗಳ ಮೊರೆ ಹೋದ ರೈತ..!

ಮುಂಡಗೋಡ: ತಾಲೂಕಿನಲ್ಲಿ ಮತ್ತೆ ಮಳೆಯ ಆತಂಕ ಶುರುವಾಗಿದೆ ಹೀಗಾಗಿ, ಅನ್ನದಾತರು ಫಸಲುಗಳ ರಕ್ಷಣೆಗೆ ಮತ್ತೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆಯ ಆತಂಕದ ನಡುವೆ ಭತ್ತದ ಕೊಯ್ಲಿಗೆ ಮುಂದಾಗಿದ್ದಾನೆ ರೈತ.. ಇನ್ನು, ಈ ಸಾರಿ ಮಳೆಯಲ್ಲಿ ಸಿಲುಕಿ ಸಂಪೂರ್ಣ ಹಾಳಾದ ಸ್ಥಿತಿಯಲ್ಲಿರೋ ಭತ್ತದ ಫಸಲು ಕಟಾವು ಮಾಡಲು ರೈತ ಭತ್ತ ಕಟಾವು ಮಾಡುವ ಯಂತ್ರಗಳ‌ ಮೊರೆ ಹೋಗಿದ್ದಾನೆ.. ಹೀಗಾಗಿ ತಾಲೂಕಿನೆಲ್ಲೆಡೆ ಈಗ ಭತ್ತ ಕಟಾವು ಮಾಡೋ ಯಂತ್ರಗಳ ಸದ್ದೇ ಕೇಳುತ್ತಿದೆ. ಸಮಯವೂ ಉಳಿಯತ್ತೆ ಕೆಲಸವೂ ಕಡಿಮೆಯಾಗತ್ತೆ ಅನ್ನೋ ಕಾರಣಕ್ಕೆ...

Post
ನಂದಿಕಟ್ಟಾದಲ್ಲೂ ವಿಧಾನ ಪರಿಷತ್ ಚುನಾವಣೆಗೆ ಬಿರುಸಿನ ಮತದಾನ..!

ನಂದಿಕಟ್ಟಾದಲ್ಲೂ ವಿಧಾನ ಪರಿಷತ್ ಚುನಾವಣೆಗೆ ಬಿರುಸಿನ ಮತದಾನ..!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲೂ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಇಲ್ಲಿನ ಗ್ರಾಮ‌ ಪಂಚಾಯತಿ ಸದಸ್ಯರು ಮತದಾನ ಮಾಡಿದ್ರು. ಮತದಾನಕ್ಕೂ ಮೊದಲು ಸದಸ್ಯರೇಲ್ಲರೂ ಒಂದೆಡೆ ಸೇರಿ ಸಭೆ ಮಾಡಿದ್ರು. ಮತದಾನ ಪ್ರಕ್ರಿಯೆಯ ಕುರಿತು ಚರ್ಚಿಸಿದ್ರು. ಮತದಾನ‌ ಮಾಡುವ ವಿಧಾನಗಳ ಬಗ್ಗೆ ತಿಳುವಳಿಕೆ ಹಂಚಿಕೊಂಡ್ರು.. ಆನಂತರದಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ರು. ಅಂದಹಾಗೆ, ಮತದಾನ ಕೇಂದ್ರದಲ್ಲಿ ಸುಗಮ‌ ಮತದಾನಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿದ್ದು ಅಧಿಕಾರಿಗಳು ಬಿಗಿಯಾದ ಕ್ರಮಗಳನ್ನು ಕೈಗೊಂಡಿದ್ದಾರೆ.

Post
ಹುನಗುಂದದಲ್ಲಿ ವಿ.ಪರಿಷತ್ ಚುನಾವಣೆ ಭರ್ಜರಿ ಮತದಾನ..!

ಹುನಗುಂದದಲ್ಲಿ ವಿ.ಪರಿಷತ್ ಚುನಾವಣೆ ಭರ್ಜರಿ ಮತದಾನ..!

ಮುಂಡಗೋಡ: ತಾಲೂಕಿನಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಬೆಳಗಿನಿಂದಲೂ ಭರ್ಜರಿಯಾಗೇ ನಡೆದಿದೆ. ತಾಲೂಕಿನ ಹುನಗುಂದದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು ಮತದಾನ ಮಾಡಿದ್ರು. ಮತದಾನಕ್ಕೂ ಮೊದಲು ಹುನಗುಂದದ ಶ್ರೀ ವಿಠಲ ರುಕ್ಮಾಯಿ ಹರಿ ಮಂದಿರದಲ್ಲಿ ಪೂಜೆ ಸಲ್ಲಿಸಿದ ಸದಸ್ಯರು, ಅಲ್ಲೇ ಸಭೆ ನಡೆಸಿದ್ರು. ಆ ನಂತರದಲ್ಲಿ ಇಲ್ಲಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ರು. ಅದ್ರಂತೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರೂ ಕೂಡ ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮತದಾನ...

Post
ಚಿಗಳ್ಳಿಯಲ್ಲಿ ತೆಪ್ಪದ ರಥೋತ್ಸವ ಅಜ್ಜನ ರಥ ನೋಡಿ ಕಣ್ತುಂಬಿಕೊಂಡ ಭಕ್ತರು..!

ಚಿಗಳ್ಳಿಯಲ್ಲಿ ತೆಪ್ಪದ ರಥೋತ್ಸವ ಅಜ್ಜನ ರಥ ನೋಡಿ ಕಣ್ತುಂಬಿಕೊಂಡ ಭಕ್ತರು..!

ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಗುರುವೀರಯೋಗೇಂದ್ರ ಸ್ವಾಮೀಜಿಯ ತೆಪ್ಪದ ರಥೋತ್ಸವ ಶೃದ್ಧಾಭಕ್ತಿಯಿಂದ ಜರುಗಿತು. ಇಲ್ಲಿನ ಕಲ್ಯಾಣಿಯಲ್ಲಿ ನಡೆದ ತೆಪ್ಪದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಹೊಂಡದ ದಡದಲ್ಲಿ ನಿಂತಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದರು ಭಕ್ತಿ ತೋರಿದ್ರು. ಸಂಜೆಯಾಗುತ್ತಿದ್ದಂತೆ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ತೆಪ್ಪದ ರಥವು ಕೆರೆಯಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಂತೆ, ಭಕ್ತರ ಜಯಘೋಷಗಳು ಮೊಳಗಿದವು.

Post
ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಕೋವಿಡ್ ಕಟ್ಟೇಚ್ಚರ..!

ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಕೋವಿಡ್ ಕಟ್ಟೇಚ್ಚರ..!

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಗಳಲ್ಲಿ ಕೆಲಸಕ್ಕೆ ಹೋಗುವ ಸುತ್ತ ಮುತ್ತಲ ಹಳ್ಳಿಗಳ ಕೂಲಿ ಕಾರ್ಮಿಕರಿಗೆ ಆತಂಕ ಶುರುವಾಗಿದೆ. ರವಿವಾರ ತಾಲೂಕಿನ ಹುನಗುಂದ ಗ್ರಾಮದ ಮಹಿಳೆಯೋರ್ವಳಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದ್ದು ಮತ್ತಷ್ಟು ಆತಂಕಕ್ಕೇ ಕಾರಣವಾಗಿದೆ. ನಿತ್ಯವೂ ಇಲ್ಲಿನ ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ತೆರಳುವ ನೂರಾರು ಕಾರ್ಮಿಕರು ತಕ್ಷಣವೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆಯಾ ಗ್ರಾಮಗಳ ಗ್ರಾಮ ಪಂಚಾಯತಿಗಳು ಸೂಚನೆ ನೀಡಿವೆ.

Post
ಹುನಗುಂದಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಓರ್ವ ಮಹಿಳೆಗೆ ಸೋಂಕು ದೃಢ..!

ಹುನಗುಂದಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಓರ್ವ ಮಹಿಳೆಗೆ ಸೋಂಕು ದೃಢ..!

ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಮತ್ತೆ ಕೊರೊನಾ ಎಂಟ್ರಿ ಕೊಟ್ಟಿದೆ. ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಹೋಗುತ್ತಿದ್ದ ಹುನಗುಂದದ ಮಹಿಳೆಯೊಬ್ಬಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಅಂತಾ ಗ್ರಾಮ ಪಂಚಾಯತಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಮಹಿಳೆ ಪ್ರತಿನಿತ್ಯ ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಅಂತಾ ಅಡುಗೆ ಮಾಡಲು ಹೋಗುತ್ತಿದ್ದಳು ಎನ್ನಲಾಗಿದೆ. ಹೀಗಾಗಿ, ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಟೆಸ್ಟ್ ಮಾಡಿದ್ದರು. ನಂತರ ಆ ವರದಿಯಲ್ಲಿ ಮಹಿಳೆಗೆ ಕೊರೋನಾ ದೃಢ ಪಟ್ಟಿದೆ. ಹೀಗಾಗಿ, ಗ್ರಾಮ ಪಂಚಾಯತಿ ಸದಸ್ಯರುಗಳು, ಸಿಬ್ಬಂದಿಗಳು ಸೋಂಕಿತೆಯ ಮನೆಗೆ ಭೇಟಿ ನೀಡಿ...

Post
ಹುನಗುಂದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ..!

ಹುನಗುಂದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕ ಅಮವಾಸ್ಯೆಯ ನಿಮಿತ್ತ ಕಾರ್ತಿಕೋತ್ಸವ ಆಚರಿಸಲಾಯಿತು.‌ ವಿವಿದ ಚಿತ್ರಗಳ ರೂಪದಲ್ಲಿ ದೀಪ ಬೆಳಗಿಸಿ ಭಕ್ತರು ಸಂಭ್ರಮಿಸಿದ್ರು.‌ ದೇವಸ್ಥಾನದ ಅಂಗಳದಲ್ಲಿ ರಂಗೋಲಿ ಬಿಡಿಸಿ ಅದರ ಪ್ರಕಾರವೇ ದೀಪಗಳನ್ನು ಬೆಳಗಿಸಿದ್ರು‌. ಕಾರ್ತಿಕ ದೀಪ ಬೆಳಗಿಸೋ ಮೊದಲು ದೇವಿಗೆ ವಿಶೇಷ ಪೂಜೆ ಮಾಡಲಾಯಿತು.. ಇನ್ನು ಕಾರ್ತಿಕೋತ್ಸವದ ನಂತರ ಅನ್ನ ಸಂತರ್ಪಣೆ ನೆರವೇರಿಸಲಾಯಿತು.

error: Content is protected !!