Home ಅಪರಾಧ ಜಗತ್ತು

Category: ಅಪರಾಧ ಜಗತ್ತು

Post
ಅಕ್ರಮ ಗಾಂಜಾ ಮಾರಾಟ ಯತ್ನ, ಇಬ್ಬರು ಆರೋಪಿಗಳ ಬಂಧನ..!

ಅಕ್ರಮ ಗಾಂಜಾ ಮಾರಾಟ ಯತ್ನ, ಇಬ್ಬರು ಆರೋಪಿಗಳ ಬಂಧನ..!

ಶಿರಸಿ: ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಹವಣಿಸುತ್ತಿದ್ದ ಆರೋಪಿಗಳನ್ನ ಬಂಧಿಸಿದ ಘಟನೆ ನಡೆದಿದೆ. ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮ ಕಾಲೋನಿಯಲ್ಲಿ 1 ಕೆಜಿ 910 ಗ್ರಾಂ ತೂಕದ ಅಂದಾಜು 25ಸಾವಿರ ರೂಪಾಯಿ ಮೌಲ್ಯದ ಗಾಂಜಾವನ್ನು ಅಕ್ರಮವಾಗಿ ಸೊರಬದಿಂದ ಸಾಗಾಟ ಮಾಡಿಕೊಂಡು ಶಿರಸಿಯಲ್ಲಿ ಮಾರಾಟ ಮಾಡುವುದಕ್ಕಾಗಿ, ಬಂದವರನ್ನು ದಾಳಿ ಮಾಡಿ ಗಾಂಜಾ ವಶಪಡಿಸಿಕೊಂಡಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ. ಮಂಜುನಾಥ ನಾಯ್ಕ(31) ಹಾಗೂ ವೀರಭದ್ರಪ್ಪ ತಂದೆ ಕರಿಯಪ್ಪ ಈಡಿಗ(42) ಬಂಧಿತ ಆರೋಪಿಗಳಾಗಿದ್ದು, ಇಬ್ಬರೂ ಶಿವಮೊಗ್ಗ ಜಿಲ್ಲೆಯ...

Post
ಕಳ್ಳತನ ಕೇಸ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಪರಿಶೀಲನೆ..!

ಕಳ್ಳತನ ಕೇಸ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಪರಿಶೀಲನೆ..!

ಮುಂಡಗೋಡ: ಪಟ್ಟಣದಲ್ಲಿ ಇಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ‌. ಯಲ್ಲಾಪುರ ರಸ್ತೆಯ ಶ್ರೀ ಮೊಬೈಲ್ ಶಾಪ್ ಹಾಗೂ ಶ್ರೀ ಶಕ್ತಿ ಪೋಟೋ ಸ್ಟುಡಿಯೋದಲ್ಲಿ ಕಳ್ಳತನವಾದ ಹಿನ್ನೆಲೆ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ರು.

Post
12 ಯುವಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಆರೋಪಿ ಮಾಜಿ ಪೊಲೀಸಪ್ಪ ಅಂದರ್..!

12 ಯುವಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಆರೋಪಿ ಮಾಜಿ ಪೊಲೀಸಪ್ಪ ಅಂದರ್..!

ಮುಂಡಗೋಡ: ಪೊಲೀಸ್ ಇಲಾಖೆಯಲ್ಲಿ ನೌಕರಿ ಕೊಡಿಸ್ತಿನಿ ಅಂತಾ ನಂಬಿಸಿ, 12 ಜನ ಯುವಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಆರೋಪಿಯನ್ನ ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಷರಶಃ ಭೂಗತನಾಗಿ ತಲೆಮರೆಸಿಕೊಂಡಿದ್ದ ಬಂಧಿತ, ವಂಚನೆಯ ಆರೋಪಿ ಸಂತೋಷ ಗುದಗಿಯನ್ನು ಮುಂಡಗೋಡ ಪೊಲೀಸರು ಬಂಧಿಸಿ ಇನ್ನೇನು ಸಂಜೆಯಷ್ಟೊತ್ತಿಗೆ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಇನ್ನು ಈ ವಂಚಕ ಆರೋಪಿಯನ್ನ ಮುಂಡಗೋಡ ಪೊಲೀಸರು ಬಂಧಿಸಿದ್ದೇ ರೋಚಕ ಕಣ್ರಿ.. ನಿನ್ನೆಯ ಕತೆ ಮುಂದುವರಿದ ಭಾಗ..! ಅದು ಕಳೆದ ಮಂಗಳವಾರ, ಮುಂಡಗೋಡ ಪೊಲೀಸರು, ವಂಚನೆಗೊಳಗಾದ ಯುವಕರು...

Post
ಕಳ್ಳ ಇವನೇ ನೋಡಿ..! ಮೊಬೈಲ್ ಶಾಪ್ ದೋಚಿದ ಕಳ್ಳನ ಕರಾಮತ್ತು ಹೇಗಿದೆ ಗೊತ್ತಾ..?

ಕಳ್ಳ ಇವನೇ ನೋಡಿ..! ಮೊಬೈಲ್ ಶಾಪ್ ದೋಚಿದ ಕಳ್ಳನ ಕರಾಮತ್ತು ಹೇಗಿದೆ ಗೊತ್ತಾ..?

ಮುಂಡಗೋಡ: ಯಲ್ಲಾಪುರ ರಸ್ತೆಯ ಶ್ರೀ ಮೊಬೈಲ್ ಶಾಪ್ ದೋಚಿದ ಕಳ್ಳ ಕೊನೆಗೂ ತನ್ನ ಕುರುಹು ಬಿಟ್ಟು ಹೋಗಿದ್ದಾನೆ. ಕಳ್ಳ ಅಂಗಡಿಗೆ ನುಗ್ಗಿ ಮೊಬೈಲ್ ಎಗರಿಸೋ ಅಷ್ಟೂ ದೃಷ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿವೆ. “ಕತ್ತಲಿನಲ್ಲಿ ಯಾರಯ್ಯಾ ನನ್ನ ನೋಡ್ತಾರೆ” ಅಂತಾ ಬೆಳ್ಳಂ ಬೆಳಿಗ್ಗೆ ನಾಲ್ಕೂವರೇ ಹೊತ್ತಲ್ಲಿ, ಪುಟ್ಟದೊಂದು ಮೊಬೈಲ್ ಟಾರ್ಚ್ ಬೆಳಕಲ್ಲೇ ಮೊಬೈಲ್ ಅಂಗಡಿಗೆ ಕನ್ನ ಹಾಕೋ ಖದೀಮ, ತನ್ನ ಲೀಲೆಗಳನ್ನು ಅಲ್ಲೇ ಕಣ್ಣರಳಿಸಿ ಕೂತಿರೋ ಸಿಸಿಟಿವಿ ದಾಖಲಿಸಿಕೊಳ್ಳತ್ತೆ ಅಂತಾ ಬಹುಶಃ ಆತನಿಗೆ ಗೊತ್ತಿರಲಿಲ್ಲವೇನೋ. ಅಂದಹಾಗೆ, ಈ ಸಿಸಿಟಿವಿಯಲ್ಲಿ ಸೆರೆಯಾಗಿರೋ...

Post
ಅಯ್ಯೋ, ನಿನ್ನೆ ನಡೆದಿದ್ದು ಒಂದೇ ಕಳ್ಳತನ ಅಲ್ಲಾ..! ಅದೇ ರಸ್ತೆಯ ಪೋಟೊ ಸ್ಟುಡಿಯೋನೂ ದೋಚಿದ್ರು ನೋಡಿ ಕಳ್ಳರು..!!

ಅಯ್ಯೋ, ನಿನ್ನೆ ನಡೆದಿದ್ದು ಒಂದೇ ಕಳ್ಳತನ ಅಲ್ಲಾ..! ಅದೇ ರಸ್ತೆಯ ಪೋಟೊ ಸ್ಟುಡಿಯೋನೂ ದೋಚಿದ್ರು ನೋಡಿ ಕಳ್ಳರು..!!

ಮುಂಡಗೋಡ: ಪಟ್ಟಣದಲ್ಲಿ ರಾತ್ರಿ ಮತ್ತೊಂದು ಕಳ್ಳತನ ನಡೆದಿದೆ. ಶ್ರೀ ಮೊಬೈಲ್ ಶಾಪ್ ದೋಚಿದ ಹಾಗೇ, ಅದೇ ಮಾದರಿಯಲ್ಲಿ ಯಲ್ಲಾಪುರ ರಸ್ತೆಯ ಶ್ರೀ ಶಕ್ತಿ ಪೋಟೋ ಸ್ಟುಡಿಯೋಗೆ ನುಗ್ಗಿ ಬೆಲೆ ಬಾಳುವ ವಿಡಿಯೊ ಕ್ಯಾಮೆರಾ, ಪೋಟೊ ಕ್ಯಾಮೆರಾ, ಹಾರ್ಡ್ ಡಿಸ್ಕ್ ಸೇರಿ ಹಲವು ವಸ್ತಗಳನ್ನು ಎಗರಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಬಹುಶಃ, ನಿನ್ನೆ ರಾತ್ರಿ ಮೊಬೈಲ್ ಶಾಪ್ ದೋಚಿರೋ ಕಳ್ಳರೇ, ಪೋಟೋ ಸ್ಟುಡಿಯೋಗೂ ನುಗ್ಗಿರೋ ಸಾಧ್ಯತೆ ಇದೆ. ಇನ್ನು ಯಲ್ಲಾಪುರ ರಸ್ತೆಯ ಈ ಏರಿಯಾದಲ್ಲಿ ಕಳ್ಳರು ಅಷ್ಟೊಂದು ಲೀಲಾಜಾಲವಾಗಿ...

Post
ಮುಂಡಗೋಡಿನಲ್ಲಿ ಮತ್ತೆ ಕಳ್ಳರ ಕರಾಮತ್ತು, ಮೊಬೈಲ್ ಶಾಪ್ ದೋಚಿದ ಖದೀಮರು..!

ಮುಂಡಗೋಡಿನಲ್ಲಿ ಮತ್ತೆ ಕಳ್ಳರ ಕರಾಮತ್ತು, ಮೊಬೈಲ್ ಶಾಪ್ ದೋಚಿದ ಖದೀಮರು..!

ಮುಂಡಗೋಡ: ಪಟ್ಟಣದಲ್ಲಿ ಅದ್ಯಾಕೋ ಏನೋ ಕಳ್ಳರ ಕೈಚಳಕಗಳು ಕಡಿಮೆಯೇ ಆಗುತ್ತಿಲ್ಲ‌. ಪಟ್ಟಣದ ವೈನ್ ಶಾಪ್ ಕಳ್ಳತನ ನಡೆದು ಇನ್ನೂ ತಿಂಗಳಾಗಿಲ್ಲ, ಈಗ ಮತ್ತೆ ಮೊಬೈಲ್ ಅಂಗಡಿಯೊಂದಕ್ಕೆ ಖದೀಮರು ಕನ್ನ ಹಾಕಿದ್ದಾರೆ. ನಿನ್ನೆ ರಾತ್ರಿ, ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರೋ ಶ್ರೀಧರ್ ಉಪ್ಪಾರ್ ಎಂಬುವವರ “ಶ್ರೀ ಮೊಬೈಲ್” ಶಾಪ್ ನ ಮೇಲ್ಚಾವಣಿ ತೆಗೆದ ಒಳನುಗ್ಗಿರೋ ಕಳ್ಳರು ಬೆಲೆಬಾಳುವ ಮೊಬೈಲ್ ಸೇರಿ ಹಲವು ವಸ್ತುಗಳನ್ನು ಎಗರಿಸಿದ್ದಾರೆ ಅಂತಾ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದ್ರೆ, ಕಳ್ಳತನವಾದ ವಸ್ತುಗಳ ಅಸಲೀ ಮೌಲ್ಯ ಎಷ್ಟು,...

Post
ಮೊಹರಂ ನಲ್ಲಿ ದೇವರಿಗೆ ವಿದ್ಯುತ್ ತಾಗಿ ಇಬ್ಬರ ದಾರುಣ ಸಾವು..!

ಮೊಹರಂ ನಲ್ಲಿ ದೇವರಿಗೆ ವಿದ್ಯುತ್ ತಾಗಿ ಇಬ್ಬರ ದಾರುಣ ಸಾವು..!

ರಾಯಚೂರು: ಮೊಹರಂ ಆಚರಣೆ ವೇಳೆ ವಿದ್ಯುತ್ ಅವಘಡದಲ್ಲಿ ಇಬ್ಬರ ಸಾವು ಕಂಡ ಘಟನೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರ ಗ್ರಾಮದಲ್ಲಿ ನಡೆದಿದೆ. ಹಸೇನಸಾಬ್ ಮುಲ್ಲಾ (55), ಹುಲಿಗೆಮ್ಮ (25) ಮೃತ ದುರ್ದೈವಿಗಳು. ಇಂದು ಬೆಳಗಿನ ಜಾವ 5:30 ಕ್ಕೆ ಘಟನೆ ನಡೆದಿದ್ದು, ಮೊಹರಂ ಕತ್ತಲರಾತ್ರಿ ನಿಮಿತ್ತ ಸಂತೆಕೆಲ್ಲೂರಿನಿಂದ ದಾದನದೊಡ್ಡಿಗೆ ದೇವರುಗಳು ಭೇಟಿ ನೀಡುವ ವೇಳೆ ಅವಘಡ ಸಂಭವಿಸಿದೆ. ಹುಸೇನ್ ಪಾಶಾ ದೇವರು ದಾದನ್ ದೊಡ್ಡಿ ದರ್ಗಾಕ್ಕೆ ಭೇಟಿ ನೀಡುವ ವೇಳೆ ದೇವರು ಮೇನ್ ವೈಯರ್ ಗೆ ತಾಗಿದೆ. ಪರಿಣಾಮ...

Post
ಮುಂಡಗೋಡ ತೃಪ್ತಿ ವೈನ್ ಶಾಪ್ ನಲ್ಲಿ ಕಳ್ಳರ ಕೈಚಳಕ, ಪೊಲೀಸರು ದೌಡು..!

ಮುಂಡಗೋಡ ತೃಪ್ತಿ ವೈನ್ ಶಾಪ್ ನಲ್ಲಿ ಕಳ್ಳರ ಕೈಚಳಕ, ಪೊಲೀಸರು ದೌಡು..!

ಮುಂಡಗೋಡ: ಪಟ್ಟಣದ ತೃಪ್ತಿ ವೈನ್ ಶಾಪ್ ನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ತಡರಾತ್ರಿ ಅಂಗಡಿಯ ಮೇಲ್ಚಾವಣಿಯ ಹೆಂಚು ತೆರೆದು ಒಳನುಗ್ಗಿ ಕಳ್ಳತನ ಮಾಡಿರೋ ಖದೀಮರು ವೈನ್ ಶಾಪ್ ನಲ್ಲಿದ್ದ ಹಣ ಸೇರಿದಂತೆ ಮದ್ಯದ ಬಾಟಲ್ ಗಳನ್ನೂ ಕದ್ದೋಯ್ದಿದ್ದಾರೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕಳ್ಳತನವಾದ ಹಣವೆಷ್ಟು..? ಯಾವ್ಯಾವ ವಸ್ತುಗಳನ್ನು ಎಗರಿಸಲಾಗಿದೆ ಅನ್ನೋ ಬಗ್ಗೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇನ್ನೇನು ಕೆಲವೇ ಹೊತ್ತಲ್ಲಿ ಕಳ್ಳತನದ ಅಸಲೀ ಮಾಹಿತಿಗಳು ಹೊರಬರಲಿದೆ.

Post
ಇಬ್ಬರು ಅಂತರ್ ಜಿಲ್ಲಾ ಕಳ್ಳರ ಹೆಡೆಮುರಿ ಕಟ್ಟಿದ ಮುಂಡಗೋಡ ಪೊಲೀಸ್ರು..!

ಇಬ್ಬರು ಅಂತರ್ ಜಿಲ್ಲಾ ಕಳ್ಳರ ಹೆಡೆಮುರಿ ಕಟ್ಟಿದ ಮುಂಡಗೋಡ ಪೊಲೀಸ್ರು..!

ಮುಂಡಗೋಡ: ಅವ್ರು ದೇವಸ್ಥಾನ, ಒಂಟಿ ಮನೆಗಳನ್ನು ಗುಡಿಸಿ ಗುಂಡಾಂತರ ಮಾಡೋ ಮಹಾನ್ ಖದೀಮರು, ಅವಕಾಶ ಸಿಕ್ರೆ ರಾಬರಿ ಮಾಡಿ ಬಾಚಿಕೊಂಡು ಹೋಗೋ ಖತರ್ನಾಕ ಕಿರಾತಕರು, ಆದ್ರೆ ಈಗ ಮುಂಡಗೋಡ ಪೊಲೀಸರ ಕೈಗೆ ತಗಲಾಕ್ಕೊಂಡು ಬಿಟ್ಟಿದ್ದಾರೆ. ತಾಲೂಕಿನ ಮಂದಿಗೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ದೇವರನ್ನೇ ಬಿಡದವರು..! ಯಸ್, ಇವ್ರು ಅಕ್ಷರಶಃ ಅಂತರ್ ಜಿಲ್ಲಾ ಪ್ರೊಫೆಷನಲ್ ಕಳ್ಳರು. ಮುಂಡಗೋಡ ತಾಲೂಕಿನಲ್ಲಿ ದೇವಸ್ಥಾನ, ಮನೆ ಕಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಆದ್ರೆ ನಸೀಬು...

Post
ಸವಣೂರಿನಲ್ಲಿ ನಿನ್ನೆ ನಡೆದ ಮರ್ಡರನ ಎದೆ ನಡುಗಿಸುವ ರಣಭೀಕರ ದೃಷ್ಯ..!

ಸವಣೂರಿನಲ್ಲಿ ನಿನ್ನೆ ನಡೆದ ಮರ್ಡರನ ಎದೆ ನಡುಗಿಸುವ ರಣಭೀಕರ ದೃಷ್ಯ..!

ಸವಣೂರು: ಇಲ್ಲಿನ ಕಾರಡಗಿ ಕ್ರಾಸ್ ಬಳಿ ನಿನ್ನೆ ರವಿವಾರ, ನಡು ರಸ್ತೆಯಲ್ಲೇ ನಡೆದಿದ್ದ ರೌಡಿಶೀಟರ್ ಬರ್ಬರ ಹತ್ಯೆಯ ಭಯಾನಕ ದೃಷ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಚ್ಚು ಹಾಗೂ ಕೊಡಲಿಯಿಂದ ಮನಸೊಯಿಚ್ಚೆ ಹೊಡೆದು ಕೊಂದು ಹಾಕಿದ್ದಾರೆ ಕೊಲೆ ಪಾತಕಿಗಳು. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಾರಡಗಿ ಕ್ರಾಸ್‌ ಬಳಿ ನಿನ್ನೆ ಸಂಜೆ ನಡೆದಿದ್ದ ಘಟನೆಯಲ್ಲಿ, ಅನ್ವರ ಶೇಕ್ ಅಲಿಯಾಸ್ ಹಜರತ್ ಅಲಿ ಮೂಮಿನ್ ಎಂಬುವ 40 ವರ್ಷ ವಯಸ್ಸಿನ ರೌಡಿಶೀಟರ್ ಬರ್ಬರ ಹತ್ಯೆಯಾಗಿದ್ದ‌. ಇಮ್ರಾನ್ ಚೌದರಿ (28) ಹಾಗೂ...

error: Content is protected !!