ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಭೀಕರ ಹತ್ಯೆಯಾಗಿದೆ. ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ದುಷ್ಕರ್ಮಿಗಳು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ನಿಂಗಪ್ಪ ದಾಸಪ್ಪನವರ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಆಸ್ತಿ ವಿಚಾರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಇನ್ನು ನಡುಬೀದಿಯಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದಾರೆ ದುಷ್ಕರ್ಮಿಗಳು. ಇನ್ನು ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Category: ಅಪರಾಧ ಜಗತ್ತು
ಟಿಬೇಟಿಯನ್ ಕಾಲೋನಿಯಲ್ಲಿ ಅಕ್ರಮ ಗೋಮಾಂಸ ದಂಧೆ, ಇಬ್ಬರು ಆರೆಸ್ಟ್..!
ಮುಂಡಗೋಡ ಟಿಬೇಟಿಯನ್ ಕಾಲೋನಿಯಲ್ಲಿ ಗೋಮಾಂಸ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಓರ್ವ ಟಿಬೇಟಿಗನೂ ಸೇರಿದಂತೆ ಇಬ್ಬರನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಟಿಬೇಟಿಯನ್ ಕಾಲೋನಿ ನಂಬರ್ 3 ರಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಈ ಕುರಿತು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಮುಂಡಗೋಡಿನಲ್ಲಿ ಖತರ್ನಾಕ ATM ವಂಚಕಿಯ ಬಂಧನ, ಹಣ ಡ್ರಾ ಮಾಡಿ ಕೊಡುವುದಾಗಿ ವಂಚಿಸಿದ್ದ ಲೇಡಿ..!
ಮುಂಡಗೋಡ: ಎಟಿಎಂ ನಿಂದ ಹಣ ಡ್ರಾ ಮಾಡಿ ಕೊಡುವುದಾಗಿ ಹೇಳಿ, ಬರೋಬ್ಬರಿ 69 ಸಾವಿರ ರೂ. ವಂಚಿಸಿದ್ದ ಖತರ್ನಾಕ ವಂಚಕಿಯನ್ನು ಮುಂಡಗೋಡ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಕಳೆದ ಸೆಪ್ಟೆಂಬರ್ 29 ರಂದು ನಡೆದಿದ್ದ ಎಟಿಎಂ ವಂಚನೆ ಪ್ರಕರಣವನ್ನು ಭೇದಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಖಾರಿಪುರ ತಾಲೂಕಿನ ಶಿರಾಳಕೊಪ್ಪದ ಆರೋಪಿ ಮಹಿಳೆ ಕೌಸರಬಾನು ನಜೀರಸಾಬ ಹಿರೇಕರೂರು(35) ಎಂಬುವವಳನ್ನು ಬಂಧಿಸಿ, 12 ಸಾವಿರ ರೂ. ಹಣ ವಶಕ್ಕೆ ಪಡೆದಿದ್ದಾರೆ. ಅಂದಹಾಗೆ, ಮುಂಡಗೋಡ ತಾಲೂಕಿನ ಮೈನಳ್ಳಿಯ ಸಹೀನಾಜ್ ಮಹಮ್ಮದ್ ಸಲೀಂ...
ಹಾನಗಲ್ ನಲ್ಲಿ ಎರಡು ಪುಟ್ಟ ಕಂದಮ್ಮಗಳೂ ಸೇರಿ ಮೂವರ ಬರ್ಬರ ಹತ್ಯೆ..! ಮೈದುನನಿಂದಲೇ ನಡೀತಾ ಕೃತ್ಯ..?
ಹಾನಗಲ್ ತಾಲೂಕಿನ ಯಳ್ಳೂರಿನಲ್ಲಿ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೈದುನನೇ ಅಣ್ಣನ ಹೆಂಡತಿ ಹಾಗೂ ಎರಡು ಪುಟ್ಟ ಪುಟ್ಟ ಕಂದಮ್ಮಗಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭೀಕರ ತ್ರಿಬಲ್ ಮರ್ಡರ್ ಆಗಿದೆ ಅನ್ನೋ ಅನುಮಾನ ವ್ಯಕ್ತವಾಗಿದ್ದು, ಗೀತಾ ಮರಿಗೌಡ್ರು (32), ಅಕುಲ್ (10), ಅಂಕಿತಾ (7) ಭೀಕರವಾಗಿ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಬೆಳಗಿನ ಜಾವ 3.30 ರ ಸುಮಾರಿನಲ್ಲಿ ಭೀಕರ ಹತ್ಯೆ ನಡೆದಿದೆ ಎನ್ನಲಾಗಿದೆ. ಕುಮಾರಗೌಡ್ ಮರಿಗೌಡ್ರು (35)ಎಂಬುವ ಮೈದುನನೇ...
ಮುಂಡಗೋಡ ಬೆಟ್ಟಿಂಗ್ ದಂಧೆಯಲ್ಲಿ ಅದ್ವಾನ, “ಬಾಬತ್ತು” ಎಜೇಂಟರನ ಯಡವಟ್ಟಿನಿಂದ ಅಮಾಯಕನಿಗೆ ಶಿಕ್ಷೆಯಾ..? ಇದು ಜಸ್ಟ್ ಬ್ರೇಕಿಂಗ್ ಮಾತ್ರ..!
ಮುಂಡಗೋಡಿನ ಅಕ್ರಮ ದಂಧೆಗಳ ಪೈಕಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಹಾಲೂ,ಹಣ್ಣು, ತುಪ್ಪ ಸುರಿದು ಸಲುಹುತ್ತಿರೋ ಅದೊಬ್ಬ ಸರ್ಕಾರಿ ಶೂರ ಯಡವಟ್ಟು ಮಾಡಿಕೊಂಡಿದ್ದಾನೆ ಅನ್ನೋ ಸುದ್ದಿ ಹರಿದಾಡ್ತಿದೆ. ಮಾನ್ಯ ಎಸ್ಪಿಯವರ ಹೆಸರಲ್ಲಿ ದಂಧೆಗಿಳಿದಿರೋ ಆ ಕಿಲಾಡಿಯ ಮಂಕು ಬುದ್ದಿಗೆ, ಅಸಲೀ ಆರೋಪಿಗಳು ಯಾರೂ ಅಂತಾನೇ ಅರ್ಥ ಆಗಿಲ್ಲ. ಹೀಗಾಗಿ, ತನ್ನ ದಂಧೆಯ ಕೊಂಡಿಯೊಬ್ಬ ನೀಡಿರೋ ಹೆಸರನ್ನೇ ಬರೆದುಕೊಂಡು ಕೇಸು ದಾಖಲಿಸಿರೋ ಆ ಅಡ್ನಾಡಿಗೆ ಇವಾಗ ಬಿಸಿ ಮುಟ್ಟುವ ಎಲ್ಲಾ ಸೂಚನೆ ಇದೆ. ಸದ್ಯ ಮೀಟಿಂಗ್ ನಡೀತಿದೆ.. ಅಲ್ಲಿ ಆತ...
ಪಕ್ಷಿಧಾಮದಲ್ಲಿ ಕಳ್ಳರ ಪಾಲಾಗಿದ್ದ ಶ್ರೀಗಂಧದಮರ ಎರಡಲ್ಲ ಕಣ್ರಿ; ಬರೋಬ್ಬರಿ ಐದು..!? ಅಷ್ಟಕ್ಕೂ ಈ ಮಸಲತ್ತಿನ ಸೂತ್ರದಾರಿಗಳು ಯಾರ್ಯಾರು ಗೊತ್ತಾ..?
ಅತ್ತಿವೇರಿ ಪಕ್ಷಿಧಾಮದಲ್ಲಿ ಶ್ರೀಗಂಧದ ಮರ ಕಳ್ಳತನ ಪ್ರಕರಣ ನಾವೇಲ್ಲ ಅಂದುಕೊಂಡಷ್ಟು ಸುಲಭವಾಗಿಲ್ಲ ಅನಿಸ್ತಿದೆ. ಮೇಲ್ನೋಟಕ್ಕೆ ಹೇಳೋದಾದ್ರೆ ಇಲ್ಲಿನ ಅಧಿಕಾರಿಗಳೇ ಇಲಾಖೆಯ ಕಣ್ಣಿಗೆ ಮಣ್ಣೆರೆಚಿದ್ದು ಬಹುತೇಕ ನಿಚ್ಚಳವಾದಂತಾಗಿದೆ. ಯಾಕಂದ್ರೆ, ನಾವು ನಿನ್ನೆ ತಮ್ಮೇದುರು ಬಯಲು ಮಾಡಿದ್ದ ಶ್ರೀಗಂಧದ ಮರಗಳ್ಳತನ ಕೇಸಿನಲ್ಲಿ ನಮಗೆ ಕೆವಲ ಎರಡೇ ಶ್ರೀಗಂಧದ ಮರ ದೋಚಿದ್ದಾರೆ ಅನ್ನೋ ಮಾಹಿತಿಯಿತ್ತು. ಆದ್ರೆ, ಅಲ್ಲಿನ ಅಸಲೀಯತ್ತೇ ಬೇರೆಯದ್ದಿದೆ. ಎರಡಲ್ಲ, ಬರೋಬ್ಬರಿ ಐದು..? ಅಸಲು, ಕರ್ನಾಟಕದ ವಿಖ್ಯಾತ ಅತ್ತಿವೇರಿ ಪಕ್ಷಿಧಾಮದಲ್ಲಿ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟದಲ್ಲಿ ಬಲಿಯಾಗಿದ್ದು ಕೇವಲ...
ಮುಂಡಗೋಡ ತಾಲೂಕಾಸ್ಪತ್ರೆಯ ಪಕ್ಕದಲ್ಲೇ ಶ್ರೀಗಂಧದ ಮರ ಕಳುವು, ಮತ್ತೆ ಆ್ಯಕ್ಟಿವ್ ಆಯ್ತಾ “ಗಂಧ” ಕಳ್ಳರ ಗ್ಯಾಂಗ್..?
ಮುಂಡಗೋಡ: ತಾಲೂಕಾಸ್ಪತ್ರೆಯ ಆರೋಗ್ಯಧಿಕಾರಿ ಕಾರ್ಯಾಲಯದ ಪಕ್ಕದಲ್ಲೇ ಶ್ರೀಗಂಧದ ಮರಗಳು ಕಳ್ಳತನವಾಗಿದೆ. ಬೆಲೆಬಾಳುವ ಎರಡು ಶ್ರೀಗಂಧದ ಮರಗಳನ್ನು ಅನಾಮತ್ತಾಗಿ ಎಗರಿಸಿಕೊಂಡು ಹೋಗಿದ್ದಾರೆ ಕಳ್ಳರು. ಕೋಟೆ ಕೊಳ್ಳೆ ಹೊಡೆದ ಮೇಲೆ ಅದೇಂತದ್ದೋ ಬಾಗಿಲು ಹಾಕಿದ್ರು ಅಂತಾರಲ್ಲ ಹಾಗೆ, ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಮುಗಿದ ಮೇಲೆ ಓಡೋಡಿ ಬಂದಿದ್ದಾರೆ. ಮತ್ತದೇ ತನಿಖೆಗಿಳಿದಿದ್ದಾರೆ. ಅದು ಜನವಸತಿ ಏರಿಯಾ..! ಅಸಲು, ಇವಾಗ ಶ್ರೀಗಂಧದ ಮರ ಕಳ್ಳತನ ಮಾಡಿಕೊಂಡು ಹೋಗಿರೋ ಜಾಗ ಇದೆಯಲ್ಲ, ಅದು ಬಹುತೇಕ ಜನವಸತಿಯ ಜಾಗವೇ, ಹೀಗಿದ್ದಾಗಲೂ ಯಾರಿಗೂ ಒಂಚೂರು...
ಟಿಬೇಟಿಯನ್ ಕ್ಯಾಂಪಿನಲ್ಲಿ ನಡೆದಿದ್ದ ದರೋಡೆ ಕೇಸಿನಲ್ಲಿ ಕೋರ್ಟ್ ತೀರ್ಪು, ನಾಲ್ವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಪ್ರಕಟ..!
ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ ನಂ 1 ರ ಟಿಬೇಟಿಗರ ಮನೆಯೊಂದರಲ್ಲಿ 2019 ರಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಅಪರಾಧಿಗಳಿಗೆ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮುಂಡಗೋಡಿನ ವಸಂತ ಕರಿಯಪ್ಪ ಕೊರವರ, ಮಂಜು ಅರ್ಜುನ ನವಲೆ, ಕಿರಣ ಪ್ರಕಾಶ ಸೋಳಂಕಿ ಮತ್ತು ಮಧುಸಿಂಗ್ ಗಂಗಾರಾಮಸಿಂಗ್ ರಜಪೂತ ಎಂಬುವವರಿಗೆ ಶಿಕ್ಷೆಯಾಗಿದೆ. 2019...
ಮುಂಡಗೋಡ ಶಿಂಗನಳ್ಳಿ ಡ್ಯಾಂ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆ..! ನೇಣು ಬಿಗಿದ ಸ್ಥಿತಿಯಲ್ಲಿರೋ ಶವದ ಸುತ್ತ ಅನುಮಾನದ ಹುತ್ತ..?
ಮುಂಡಗೋಡ ತಾಲೂಕಿನ ಶಿಂಗನಳ್ಳಿ ಜಲಾಶಯದ ಸಮೀಪದ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರೋ ಶವ, ಕೊಳೆತು ದುರ್ನಾತ ಬೀರುತ್ತಿದೆ. ಸುಮಾರು 38 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು, ಮುಖ ಕೊಳೆತು ವಿಕಾರವಾಗಿದೆ. ಕಾಡಿನಲ್ಲಿನ ಮರಕ್ಕೆ ನೇಣು ಹಾಕಿಕೊಂಡಿರೋ ಸ್ಥಿತಿಯಲ್ಲಿರೋ ಶವದ ಬಲಗೈ ಕಟ್ ಆಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೊ ಅನ್ನೋ ಬಗ್ಗೆ ಇನ್ನಷ್ಟೇ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ,...
ಸೆ.17 ರಂದು ಹಲ್ಲೆಗೊಳಗಾಗಿದ್ದ ನ್ಯಾಸರ್ಗಿಯ ದಲಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು..! ಬೀದಿಯಲ್ಲಿ ನಡೆದ ಜಗಳ ಸಾವಿನಲ್ಲಿ ಅಂತ್ಯವಾಯ್ತಾ..?
ಮುಂಡಗೋಡ ತಾಲೂಕಿನ ನ್ಯಾಸರ್ಗಿಯಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿದ್ದ ವ್ಯಕ್ತಿ ಸಾವು ಕಂಡಿದ್ದಾನೆ. ಕಳೆದ ಸೆಪ್ಟೆಂಬರ್ 17 ರ ರಾತ್ರಿ ನಡೆದಿದ್ದ ಹಲ್ಲೆ ಪ್ರಕರಣ ಈಗ ಸಾವಿನಲ್ಲಿ ದಿಕ್ಕು ಬದಲಿಸಿದೆ. ಹಲ್ಲೆ ನಡೆದು 13 ದಿನಗಳ ನಂತರ ಮೃತಪಟ್ಟಿದ್ದಾನೆ. ನ್ಯಾಸರ್ಗಿಯ ಮಂಜುನಾಥ ದುರ್ಗಪ್ಪ ಬೋವಿ(57) ಎಂಬುವವನೇ ಸದ್ಯ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಕಳೆದ ಸೆಪ್ಟೆಂಬರ್ 17 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನ್ಯಾಸರ್ಗಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದ ರಸ್ತೆಯಲ್ಲಿ ಹನುಮಂತ ಭೀಮಣ್ಣ ಹರಪನಹಳ್ಳಿ ಹಾಗೂ ಮೃತ...









