ಧಾರವಾಡದಲ್ಲಿ ಎಸಿಬಿ ದಾಳಿಯಾಗಿದೆ. ಆಹಾರ ನಾಗರಿಕ ಸರಬರಾಜು ಇಲಾಖೆಯ ಮೇಲೆ ದಾಳಿಯಾಗಿದ್ದು, ಸಾರ್ವಜನಿಕರಿಂದ ಹೆಚ್ಚು ಹಣ ತಗೆದುಕೊಳ್ಳುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಆಹಾರ ಇಲಾಖೆಯ ಶಿರಸ್ತೇದಾರ ಶಿವಶಂಕರ ಹಿರೇಮಠ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಹೀಗಾಗಿ, ಶಿರಸ್ತೇದಾರ ಶಿವಶಂಕರ್ ಹಿರೇಮಠರನ್ನು ವಶಕ್ಕೆ ಪಡೆದಿರೋ ಎಸಿಬಿ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.
Top Stories
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಖಡಕ್ ಸೂಚನೆ..!
ನಾಳೆ ನಾಡಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಉಷ್ಣ ಅಲೆ; ಎಚ್ಚರವಹಿಸುವಂತೆ ಜಿಲ್ಲಾಡಳಿತ ಸೂಚನೆ..!
ಕೆಂಪು ಕೋಟೆ ದಾಳಿಗೆ ಜೈಶ್-ಎ-ಮೊಹಮ್ಮದ್ ನಂಟು : ವಿಶ್ವಸಂಸ್ಥೆ ವರದಿ ; ಮಹಿಳಾ ಘಟಕದ ಬಗ್ಗೆ ಎಚ್ಚರಿಕೆ
ಗ್ರಾಮ ಪಂಚಾಯತಿಗಳು ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು; ಸಚಿವ ಮಾಂಕಾಳ ವೈದ್ಯ..!
ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!
“ಸಂಪಾಯಿತಲೇ ಪರಾಕ್” ಶ್ರೀಕ್ಷೇತ್ರ ಮೈಲಾರ ಕಾರ್ಣಿಕ..! ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದ ಗೊರವಯ್ಯ..!
ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ವಿಧಿವಶ..! 33 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸೂಪರ್ ಕಾಪ್..!
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!
ತಟ್ಟಿಹಳ್ಳಿ ಶಿವಾನಂದನ ಹತ್ಯೆ ಯತ್ನ ಕೇಸ್, ಆರೋಪಿಯ ಹೆಡೆಮುರಿ ಕಟ್ಟಿದ ಮುಂಡಗೋಡಿನ ಚಾಣಾಕ್ಷ ಪೊಲೀಸ್ರು..!
ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!
ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!
ವಿ.ಎಸ್.ಪಾಟೀಲರ “ಬಂದೂಕು” ನಾಪತ್ತೆ, ಹುಡಿಕಿಕೊಡುವಂತೆ ಮುಂಡಗೋಡ ಠಾಣೆಯಲ್ಲಿ ದೂರು..!
ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ
ಹೊನ್ನಾವರದಲ್ಲಿ ಭೀಕರ ಅಗ್ನಿ ದುರಂತ, ಸುಟ್ಟು ಕರಕಲಾದ ಕಾರು, ಕಾರಲ್ಲಿದ್ದ ಇಬ್ಬರು ಸಜೀವ ದಹನ..!
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..!
ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ, ತಪ್ಪಿದ ಭಾರೀ ಅನಾಹುತ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಮುಂಡಗೋಡ ತಾಲೂಕಿನ ಪ.ಪಂಗಡದ ಮೀನುಗಾರರಿಗೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಅಹ್ವಾನ..!
Category: BIG BREAKING
ಉತ್ತರ ಕನ್ನಡ ಎಸ್ಪಿ ಶಿವ ಪ್ರಕಾಶ್ ದೇವರಾಜು ವರ್ಗಾವಣೆ..! ಡಾ.ಸುಮನ್ ಡಿ. ಪನ್ನೇಕರ್ ನೂತನ ಎಸ್ಪಿ..!!
ಉತ್ತರ ಕನ್ನಡ ಜಿಲ್ಲಾ ಎಸ್ಪಿ ಶಿವ ಪ್ರಕಾಶ್ ದೇವರಾಜು ವರ್ಗಾವಣೆ. ನೂತನ ಎಸ್ಪಿಯಾಗಿ ಡಾ.ಸುಮನ್ ಡಿ. ಪನ್ನೇಕರ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದ್ದು, ಶಿವ ಪ್ರಕಾಶ್ ದೇವರಾಜು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂ ಗೆ ಆಗಮಿಸಿದ ಪುನೀತ್ ಪುತ್ರಿ..!
ನಟ ಪುನೀತ್ ರಾಜಕುಮಾರ್ ಮಗಳು ಧೃತಿ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದಿಂದ, ಕಂಠೀರವ ಸ್ಟೇಡಿಯಂನತ್ತ ಹೊರಟಿದ್ದಾರೆ. ದೇವನಹಳ್ಳಿ ಕೆಐಎ ಯಿಂದ ಅರೈವಲ್ ಬದಲಿಗೆ ಡಿಪಾರ್ಚರ್ ಮೂಲಕ ತೆರಳಿದ ಪುನೀತ್ ಮಗಳು ಧೃತಿ. ಈಗಾಗಲೇ ಕಂಠೀರವ ಸ್ಟೇಡಿಯಂ ತಲುಪಿದ್ದಾರೆ.
ಬೆಂಗಳೂರಿಗೆ ಬಂದಿಳಿದ ನಟ ಪುನೀತ್ ಪುತ್ರಿ ಧೃತಿ..!
ನಟ ಪುನೀತ್ ರಾಜಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ಪುನೀತ್ ಪುತ್ರಿ ಧೃತಿ, ಬೆಂಗಳೂರಿಗೆ ಬಂದಿಳಿದಿದ್ದಾರೆ. ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪುನೀತ್ ಪುತ್ರಿ ಆಗಮನವಾಗಿದ್ದು, ಧೃತಿಯಿದ್ದ ಏರ್ ಇಂಡಿಯಾ 502 ವಿಮಾನ ಲ್ಯಾಂಡಿಂಗ್ ಆಗಿದೆ. ವಿಮಾನ ನಿಲ್ದಾಣದಿಂದ ಧೃತಿಯನ್ನ ಕರೆದುಕೊಂಡು ಹೋಗಲು ಪೊಲೀಸ್ ಬೆಂಗಾವಲು ವಾಹನಗಳು ಬಂದಿವೆ., ಇನ್ನು ಕೆಲವೇ ಕ್ಷಣದಲ್ಲಿ ವಿಮಾನ ನಿಲ್ದಾಣದ ಒಳಗಿನಿಂದ ಹೊರಬರಲಿರುವ ಪುನೀತ್ ಪುತ್ರಿ, ನೇರವಾಗಿ ಕಂಠೀರವ ಸ್ಟೇಡಿಯಂಗೆ ತೆರಳಲಿದ್ದಾರೆ.
ಮುಂಡಗೋಡಿನ ಸೂಕ್ಷ್ಮ ಸ್ಥಳಗಳಲ್ಲಿ ಶ್ವಾನ ದಳ ಪರಿಶೀಲನೆ, ಟಿಬೇಟಿಯನ್ ಕಾಲೋನಿಯಲ್ಲೂ ಕಟ್ಟೇಚ್ಚರ..!
ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂದು ಶ್ವಾನ ದಳದಿಂದ ತೀವ್ರ ತಪಾಸಣೆ ನಡೆಸಲಾಗಿದೆ. ಹಾಗೇನೆ, ಟಿಬೇಟಿಯನ್ ಕಾಲೋನಿ ಸೇರಿದಂತೆ ತಾಲೂಕಿನ ಬಹುಮುಖ್ಯ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೇಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ಕಟ್ಟೇಚ್ಚರ ವಹಿಸಿದೆ. ಎಚ್ಚರಿಸಿದ್ದೇ ಕುಮಟಾ ಕೇಸ್..! ಅಂದಹಾಗೆ, ಇದು ಮುಂಡಗೋಡ ತಾಲೂಕಿಗಷ್ಟೇ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಡೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಎಲ್ಲಡೆಯೂ ಕಟ್ಟೇಚ್ಚರ ವಹಿಸಲಾಗಿದೆ. ಯಾಕಂದ್ರೆ, ಕುಮಟಾದ ಕಾಲೇಜು ಆವರಣದಲ್ಲಿ ಇತ್ತಿಚೆಗಷ್ಟೇ ಬಾಂಬ್ ಮಾದರಿಯ ವಸ್ತು ಸಿಕ್ಕು...
ನಟ ಪುನೀತ್ ಅಂತ್ಯಕ್ರಿಯೆ ಇವತ್ತು ಅಲ್ಲ, ನಾಳೆ: ರಾಘವೇಂದ್ರ ರಾಜಕುಮಾರ್..!
ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಅಂತ್ಯಕ್ರಿಯೆ ನಾಳೆ ನಡೆಸಲು ತೀರ್ಮಾನಿಸಲಾಗಿದೆ. ಹಾಗಂತ, ಪುನೀತ್ ಸಹೋದರ ನಟ ರಾಘವೇಂದ್ರ ರಾಜಕುಮಾರ್ ತಿಳಿಸಿದ್ದಾರೆ. ಇನ್ನು ನಟ ಪುನೀತ್ ಪುತ್ರಿ ದೃತಿ, ನ್ಯೂಯಾರ್ಕ್ ನಿಂದ ದೆಹಲಿಗೆ ಆಗಮಿಸಿದ್ದಾರೆ. ಏರ್ ಇಂಡಿಯಾ 102 ವಿಮಾನದಲ್ಲಿ ದೆಹಲಿಗೆ ಆಗಮಿಸಿರೋ ದೃತಿ, ದೆಹಲಿಯಿಂದ 1.30 ರ ಏರ್ ಇಂಡಿಯಾ ವಿಮಾನ ಹತ್ತಿ, 502 ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 4.15 ಕ್ಕೆಆಗಮಿಸೋ ಸಾಧ್ಯತೆ...
ಮತ್ತೊಬ್ಬ “ಅಪ್ಪು” ಅಭಿಮಾನಿ ನೇಣಿಗೆ ಶರಣು..! ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಹತ್ಯೆ..! ಇದೇಲ್ಲಾ ಬೇಕಾ..?
ಬೆಳಗಾವಿ: ನಟ ಪುನೀತ್ ರಾಜಕುಮಾರ್ ವಿಧಿವಶವಾದ ಹಿನ್ನೆಲೆಯಲ್ಲಿ ಮನನೊಂದ ಅಭಿಮಾನಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ರಾಹುಲ್ ಗಾಡಿವಡ್ಡರ ಎಂಬ ಯುವಕ ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯಾಗಿದ್ದಾನೆ. ಪುನಿತ್ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಟ ಪುನೀತ್ ಸಾವಿನ ಸುದ್ದಿಗೆ ಹೃದಯಾಘಾತ: ಮೃತಪಟ್ಟ ಅಪ್ಪು ಅಭಿಮಾನಿ..!!
ಚಾಮರಾಜನಗರ: ಪುನೀತ್ ರಾಜಕುಮಾರ್ ನಿಧನ ವಿಷಯ ಕೇಳಿ ಹೃದಯಾಘಾತವಾಗಿ ಪುನೀತ್ ಅಭಿಮಾನಿ ಸಾವಿಗೀಡಾಗಿದ್ದಾನೆ. ಚಾಮರಾಜನಗರ ಜಿಲ್ಲೆ ಹನೂರು ತಾಲೋಕು ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದ, ಮುನಿಯಪ್ಪ(29) ಹೃದಯಾಘಾತದಿಂದ ಮೃತಪಟ್ಟ ಅಭಿಮಾನಿ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಮುನಿಯಪ್ಪ, ಪುನೀತ್ ಸಾವಿನ ವಿಷಯ ಕೇಳುತ್ತಲೇ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ, ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮದ್ಯೆ ಕೊನೆಯುಸಿರು ಎಳೆದಿದ್ದಾನೆ ಪುನೀತ್ ಅಭಿಮಾನಿ. ಪುನೀತ್ ಅವರ ಪ್ರತಿಯೊಂದು ಚಿತ್ರವನ್ನು ತಪ್ಪದೆ ನೋಡುತ್ತಿದ್ದ ಮುನಿಯಪ್ಪ, ಆಗಾಗ್ಗೆ ಬೆಂಗಳೂರಿಗೆ ತೆರಳಿ...





