ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಲೊಯೊಲಾ ಶಾಲೆಯ ಹತ್ತಿರ ಭಾರೀ ದುರ್ಘಟನೆ ನಡೆದಿದೆ. ಪಾದಾಚಾರಿ ಮಹಿಳೆಯೋರ್ವಳಿಗೆ ಮಾರುತಿ ಇಕೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕರಗಿನಕೊಪ್ಪ ಗ್ರಾಮದ ಲೋಕವ್ವ ಧರ್ಮಣ್ಣ ಲಮಾಣಿ(50) ಅಪಘಾತದಲ್ಲಿ ಮೃತಪಟ್ಟ ಮಹಿಳೆಯಾಗಿದ್ದಾಳೆ. ಶಿರಸಿ ಕಡೆಯಿಂದ ಬರುತ್ತಿದ್ದ ಮಾರುತಿ ಇಕೊ ವಾಹನ, ಮುಂಡಗೋಡ ಕಡೆಯಿಂದ ಕಾಲ್ನಡಿಗೆಯಲ್ಲೇ ಬರುತ್ತಿದ್ದ ಮಹಿಳೆಗೆ ಡಿಕ್ಕಿಯಾಗಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸದ್ಯ ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಫುಲ್ ಟ್ರಾಫಿಕ್ ಜಾಮ್..!...
Top Stories
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
Category: BIG BREAKING
ಸನವಳ್ಳಿ ಜಲಾಶಯದ ಬಳಿ ಸ್ಕೂಟಿ ಅಪಘಾತ, ಸವಾರನಿಗೆ ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಸನವಳ್ಳಿ ಜಲಾಶಯದ ಹತ್ತಿರ ಅಪಘಾತವಾಗಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಶಿಗ್ಗಾವಿ ತಾಲೂಕಿನ ತಡಸ ಗ್ರಾಮದ ಅಬ್ದುಲ್ ಗಫಾರ್(26) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ. ಸನವಳ್ಳಿ ಜಲಾಶಯದ ಹತ್ತಿರ ಸ್ಕೂಟಿ ಸ್ಕಿಡ್ ಆಗಿರೋ ರೀತಿಯಲ್ಲಿ, ಗಂಭೀರ ಗಾಯಗೊಂಡು ಬಿದ್ದಿದ್ದ ಯುವಕನನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ 108 ಅಂಬ್ಯಲೆನ್ಸ್ ಗೆ ಕರೆ ಮಾಡಿದ್ದಾರೆ. ಹೀಗಾಗಿ, ಮುಂಡಗೋಡ 108 ಅಂಬ್ಯುಲೆನ್ಸ್ ನ ಧನರಾಜ್ ಬಳೂರು ಸೇರಿದಂತೆ ಸಿಬ್ಬಂದಿಗಳು, ಗಾಯಾಳುಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮುಂಡಗೋಡ ತಾಲೂಕಾಸ್ಪತ್ರೆಗೆ...
ವರದಕ್ಷಿಣೆ ಕಿರುಕುಳ ಕೇಸ್; ಲಂಚ ಪಡೆದ ಇನ್ಸ್ ಪೆಕ್ಟರ್ ಸಸ್ಪೆಂಡ್..!
ಬೆಂಗಳೂರು: ಲಂಚ ಪಡೆದ ಆರೋಪದಡಿ ಮಡಿವಾಳ ಠಾಣೆ ಇನ್ಸ್‌ಪೆಕ್ಟರ್ ಸುನೀಲ್ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ. ವರದಕ್ಷಿಣೆ ಕಿರುಕುಳ ಸಂಬಂಧ ಆರೋಪಿ ಅಜಯ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾಗದ ಅಜಯ್ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬೈಯಿಂದ ಆರೋಪಿ ಅಜಯ್‌ನನ್ನು ವಾರೆಂಟ್ ಮೇಲೆ ಕರೆತಂದಿದ್ದ ಪೊಲೀಸರು ಹಣ ಪಡೆದು ಬಿಟ್ಟು ಕಳಿಸಿದ್ದರು ಎನ್ನಲಾಗಿದೆ. ಆದರೆ, ಆರೋಪಿ ಪೊಲೀಸರಿಗೆ ಲಂಚದ ರೂಪದಲ್ಲಿ...
ಮುಂಡಗೋಡಿನ ವ್ಯಕ್ತಿಯ ಅನುಮಾನಾಸ್ಪದ ಸಾವು, ಹಲವು ಶಂಕೆ..!
ಮುಂಡಗೋಡ; ವ್ಯಕ್ತಿಯೊಬ್ಬ ಅನುಮಾನಾಸ್ಪದ ಸಾವು ಕಂಡಿದ್ದಾನೆ. ಮುಂಡಗೋಡ ನಿವಾಸಿ ಮೆಹೆಬೂಬ್ ಸಾಬ್ ಜಮಖಂಡಿ(45) ಸಾವು ಕಂಡಿದ್ದಾನೆ. ತಾಲೂಕಿನ ಸುಳ್ಳಳ್ಳಿಯ ಬ್ರಿಡ್ಜ್ ಬಳಿ ಘಟನೆ ನಡೆದಿದ್ದು, ಬೈಕ್ ಮೇಲಿಂದ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಶವ ಕಂಡು ಬಂದಿದೆ. ಮುಂಡಗೋಡ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಶಿರಸಿಯ ನಿಡಗೋಡ ಬಳಿ ಪೊಲೀಸ್ ಜೀಪ್ ಪಲ್ಟಿ, ಚಾಲಕ ಗಂಭೀರ, ಪಿಎಸ್ ಐ ಅಪಾಯದಿಂದ ಪಾರು..!
ಶಿರಸಿ: ನಿಡಗೋಡ ಬಳಿ ಸಿದ್ದಾಪುರ ಪೊಲೀಸ್ ಠಾಣೆಯ ಜೀಪ್ ಪಲ್ಟಿಯಾಗಿದೆ. ಪರಿಣಾಮ ಚಾಲಕನಿಗೆ ತೀವ್ರ ಗಾಯವಾಗಿದ್ದು, ವಾಹನದಲ್ಲೇ ಇದ್ದ ಪಿಎಸ್ ಐ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿರಸಿಯಲ್ಲಿ ನಡೆಯುತ್ತಿರುವ ಪೊಲೀಸ್ ದೈಹಿಕ ಪರೀಕ್ಷೆಗೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಎದುರಿನಿಂದ ಅತಿವೇಗವಾಗಿ ಬಂದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಘಟನೆ ನಡೆದಿದೆ ಎನ್ನಲಾಗಿದ್ದು. ತೀವ್ರವಾಗಿ ಗಾಯಗೊಂಡ ಯಲ್ಲಪ್ಪ ಕಾಗವಾಡ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು, ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾದ ಪಿಎಸ್ಐ ಮಹಾಂತೇಶ ಕುಂಬಾರ ಸಿದ್ದಾಪುರ ಸರಕಾರಿ...
ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ..!
ಬೆಳಗಾವಿ: ತೀವ್ರ ವಿರೋಧದ ನಡುವೆಯೂ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರವಾಗಿದೆ. ಕಾಂಗ್ರೆಸ್ ಸದಸ್ಯರ ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ಮಾಡುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ.
ಆಕಾಶದಲ್ಲಿ ಸಾಲು ಸಾಲು ಚುಕ್ಕಿಗಳು, ಇದೇನಿದು ನಭದಲ್ಲಿ ಬೆಳಕಿನ ಚಿತ್ತಾರ..? ಅಸಲು ಏನ್ ಗೊತ್ತಾ..?
ಮುಂಡಗೋಡ: ನಭದಲ್ಲಿ ಕಾಣಿಸಿಕೊಂಡ ಸಾಲುಸಾಲು ತಾರೆಗಳು.. ಸರಳರೇಖೆಯಲ್ಲಿ ಹಾದುಹೋದ ನೂರಾರು ಬೆಳಕಿನ ಚುಕ್ಕಿಗಳು.. ಆಗಸದಲ್ಲಿ ನಡೆದ ಈ ವಿಸ್ಮಯವನ್ನು ಕಂಡು ಬೆರಗಾಗಿರುವ ತಾಲೂಕಿನ ಜನತೆ.. ಹೌದು, ಮುಂಡಗೋಡ ತಾಲೂಕಿನಲ್ಲಿ ರಾತ್ರಿ ಆಕಾಶದಲ್ಲಿ ವಿಸ್ಮಯ ನಡೆದಿದೆ. ಮುಂಡಗೋಡ ತಾಲೂಕಿನಾದ್ಯಂತ ಆಗಸದಲ್ಲಿ ಚುಕ್ಕಿಗಳ ಸಾಲು ಸಾಲು ಚಿತ್ತಾರಗಳು, ಬೆಳಕಿನ ಆಟಗಳು ನಡೆದಿದೆ. ಆದ್ರೆ ಇದು ಕೃತಕ ಉಪಗ್ರಹಗಳ ಚಲನೆ ಅಂತಾ ಖಗೋಳತಜ್ಞರು ಸ್ಪಷ್ಟಪಡಿಸಿದ್ದಾರೆ. ಅಸಲು ಏನ್ ಗೊತ್ತಾ..? ನಿಜ ಅಂದ್ರೆ, ಹಾಗೆ ನಮಗೇಲ್ಲ ಕಂಡ ಚುಕ್ಕಿಗಳ ಸಾಲುಗಳು ಎಲಾನ್ ಮಸ್ಕ್...
ಎಂಇಎಸ್ ಪುಂಡಾಟ ಖಂಡಿಸಿ ಕನ್ನಡಪರ ಸಂಘಟನೆಗಳಿಂದ ಸುವರ್ಣ ಸೌಧ ಮುತ್ತಿಗೆ ಯತ್ನ, ತಡೆದ ಪೊಲೀಸರು..!
ಬೆಳಗಾವಿ: ಇಂದು ಕನ್ನಡಪರ ಸಂಘಟನೆಗಳ ಬೃಹತ್ ಹೋರಾಟ ಹಿನ್ನೆಲೆಯಲ್ಲಿ, ನಾಡದ್ರೊಹಿ ಎಂಇಎಸ್ ಕಾರ್ಯಕರ್ತರ ಪುಂಡಾಟ ಖಂಡಿಸಿ, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬರುತ್ತಿದ್ದ ಕನ್ನಡಪರ ಹೋರಾಟಗಾರರನ್ನು ತಡೆಯಲಾಗಿದೆ. ಹಿರೇಬಾಗೇವಾಡಿ ಟೊಲ್ ಗೇಟ್ ಬಳಿ ಹೋರಾಟಗಾರರನ್ನ ತಡೆದಿರೊ ಪೊಲೀಸರು, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದ ಕನ್ನಡಪರ ಹೋರಾಟಗಾರ ವಶಕ್ಕೆ ಪಡೆದಿದ್ದಾರೆ. ಪ್ರವಿಣ ಶೆಟ್ಟಿ ಬಣದ ಕಾರ್ಯಕರ್ತರನ್ನು ನೂರಾರು ಕಾರ್ಯಕರ್ತರನ್ನು ವಶಕ್ಕೆ ವಶಕ್ಕೆ ಪಡೆಯಲಾಗಿದೆ.. ಈ ವೇಳೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಕಲಘಟಗಿ ತಂಬೂರು ಕಾಡಿನಲ್ಲಿ ಅರಣ್ಯ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕಾಡಾನೆ ದಾಳಿ, ಹಲವರಿಗೆ ಗಾಯ..!
ಕಲಘಟಗಿ: ತಾಲ್ಲೂಕಿನ ತಂಬೂರ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾರ್ಯಾಚರಣೆ ವೇಳೆ ಆನೆಗಳು ದಿಡೀರನೆ ದಾಳಿ ಮಾಡಿದ ಘಟನೆ ನಡೆದಿದೆ. ಹಲವಾರು ದಿನಗಳಿಂದ 8 ಆನೆಗಳ ಹಿಂಡು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಆಲದಕಟ್ಟಿ, ತಂಬೂರ, ಸಂಗಮೇಶ್ವರ ಡಿಂಬವಳ್ಳಿ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಬಿಡು ಬಿಟ್ಟಿದ್ದ ಆನೆಗಳನ್ನು ಅರಣ್ಯ ಅಧಿಕಾರಿಗಳು ನಿರಂತರ ಕಾಡಿಗೆ ಅಟ್ಟಲು ಕಾರ್ಯಚರಣೆ ಮಾಡುತ್ತಿದ್ದ ವೇಳೆ ಅಧಿಕಾರಿಗಳ ಮೇಲೆ ದಾಳಿ ನಡೆಸಿವೆ. ಬಮ್ಮಿಗಟ್ಟಿ ವಲಯದ ಅಧಿಕಾರಿ ಉಮೇಶ್ ಕಡಿ, ಮೌನೇಶ ಲಿಂಗನಶೆಟ್ಟಿಕೊಪ್ಪ,...
ಮುಂಡಗೋಡಿನಲ್ಲಿ ಮತ್ತೆ ಮಟ್ಕಾ ಶುರು..? ಬರಗೆಟ್ಟವನ ಮಂತ್ಲಿ ಆಸೆಗೆ ದಕ್ಕಿದ್ದು ಎಷ್ಟು ಲಕ್ಷ..?
ಮುಂಡಗೋಡ ತಾಲೂಕಿನ ಮಟ್ಕಾ ಪ್ರಿಯರಿಗೆ ಸಂತಸದ ಸುದ್ದಿಯಿದು. ಇನ್ನೇನು ಇವತ್ತಿನಿಂದ ಅಂದ್ರೆ ಸೋಮವಾರದಿಂದ ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಭರ್ಜರಿ ಶುಭಾರಂಭ ಮಾಡ್ತಿದೆಯಂತೆ. ಅಷ್ಟಕ್ಕೂ ಮಟ್ಕಾ ದಂಧೆಯ ಮಂತ್ಲಿ ಹಣದ ಕೈ ಬಿಸಿ ಇಲ್ಲದೇ ಈ ಛಳಿಗಾಲ ಸಾಗೋಕೆ ಸಾಧ್ಯವೇ ಇಲ್ಲ ಅಂತಾ ಅವನೊಬ್ಬ ಚಕ್ಕಂಬಕ್ಕಳ ಹಾಕ್ಕೊಂಡು ಡೀಲಿಗೆ ಕುಳಿತಿದ್ದನಂತೆ. ಅವನ ಪರಿಶ್ರಮದ ಫಲವಾಗೇ ಈಗ ಮತ್ತೆ ಮಟ್ಕಾ ಅನ್ನೋದು ಮನೆ ಮಾತಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆಯಂತೆ. ಹೀಗೆ ಇತ್ಯಾದಿ ಇತ್ಯಾದಿಯಾಗಿ ಇಡೀ ಮುಂಡಗೋಡ ತಾಲೂಕಿನಲ್ಲಿ ಗುಲ್ಲೆದ್ದಿದೆ. ಗುಲ್ಲು...



