Home BIG BREAKING

Category: BIG BREAKING

Post
ಅಯ್ಯೋ ದೇವ್ರೇ, ಬಾಚಣಕಿ ಡ್ಯಾಂನಲ್ಲಿ ಹೆಣವಾದ್ರಾ ಪ್ರೇಮಿಗಳು..? ಆತ್ಮಹತ್ಯೆನಾ..?

ಅಯ್ಯೋ ದೇವ್ರೇ, ಬಾಚಣಕಿ ಡ್ಯಾಂನಲ್ಲಿ ಹೆಣವಾದ್ರಾ ಪ್ರೇಮಿಗಳು..? ಆತ್ಮಹತ್ಯೆನಾ..?

ಮುಂಡಗೋಡ: ಬಾಚಣಕಿ ಜಲಾಶಯದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ್ರಾ..? ಸಧ್ಯದ ಮಾಹಿತಿ ಪ್ರಕಾರ ಹೌದು ಅಂತಿವೆ ಮೂಲಗಳು‌. ಕಾಲೇಜು ಯೂನಿಫಾರ್ಮಿನಲ್ಲೇ ಯುವಕ ಹಾಗೂ ಯುವತಿ ಬಾಚಣಕಿ ಜಲಾಶಯದಲ್ಲಿ ದಾರುಣ ಸಾವು ಕಂಡಿರೋ ಘಟನೆ ನಡೆದಿದೆ. ಕಾಲೇಜಿನಿಂದ ನೇರವಾಗಿ ಬಾಚಣಕಿ ಜಲಾಶಯಕ್ಕೆ ಬಂದಿರೋ ಯುವಕ ಯುವತಿ ಜಲಾಶಯದಲ್ಲಿ ನೀರು ಪಾಲಾಗಿದ್ದಾರೆ ಎನ್ನಲಾಗ್ತಿದೆ. ಯುವತಿ ಶವ ಹೊರ ತೆಗೆಯಲಾಗಿದ್ದು, ಮೃತ ಯುವತಿ ಮುಂಡಗೋಡ ತಾಲೂಕಿನ ಕಲಕೇರಿ ಗ್ರಾಮದ ತನುಜಾ ಅಂತಾ ತಿಳಿದು ಬಂದಿದೆ. ಆದ್ರೆ ಯುವಕನ ಶವಕ್ಕಾಗಿ ಶೋಧ ಕಾರ್ಯ ನಡೆದಿದೆ....

Post
ಮುಂಡಗೋಡಿನ ಅಮ್ಮಾಜಿ ಕೆರೆ ಮೇಲೆ ಬೈಕ್ ಅಪಘಾತ, ಸವಾರನಿಗೆ ಗಂಭೀರ ಗಾಯ..!

ಮುಂಡಗೋಡಿನ ಅಮ್ಮಾಜಿ ಕೆರೆ ಮೇಲೆ ಬೈಕ್ ಅಪಘಾತ, ಸವಾರನಿಗೆ ಗಂಭೀರ ಗಾಯ..!

ಮುಂಡಗೋಡ: ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಮೇಲೆ ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ವಿರೂಪಾಕ್ಷಯ್ಯ ಜಂಬಯ್ಯನವರ್ (45) ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಈತ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಅಂದಲಗಿ ಗ್ರಾಮದವನು ಅಂತಾ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದ ತಕ್ಷಣವೇ 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ‌. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಮುಂಡಗೋಡಿನ ನ್ಯಾಸರ್ಗಿ ಬಳಿ ಭೀಕರ ಅಪಘಾತ, ಮರಕ್ಕೆ ಡಿಕ್ಕಿ ಹೊಡೆದ ಕಾರು,  ಓರ್ವ ಗಂಭೀರ..!!

ಮುಂಡಗೋಡಿನ ನ್ಯಾಸರ್ಗಿ ಬಳಿ ಭೀಕರ ಅಪಘಾತ, ಮರಕ್ಕೆ ಡಿಕ್ಕಿ ಹೊಡೆದ ಕಾರು, ಓರ್ವ ಗಂಭೀರ..!!

ಮುಂಡಗೋಡ; ತಾಲೂಕಿನ ನ್ಯಾಸರ್ಗಿ ಬಳಿ ಭೀಕರ ಅಪಘಾತವಾಗಿದೆ. ವೇಗವಾಗಿ ಬಂದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದಾನೆ. ನ್ಯಾಸರ್ಗಿಯ ಅನ್ವರ್ ಷಹಜಹಾನ್ ದೊಡ್ಮನಿ(26) ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಈತ ನ್ಯಾಸರ್ಗಿಯಿಂದ ಮುಂಡಗೋಡಿಗೆ ಕಾರಲ್ಲಿ ಬರುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಮುಂಡಗೋಡಿನ 108 ಅಂಬ್ಯಲೆನ್ಸ್ ಗೆ ಕರೆ ಮಾಡಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುವಿನ ಕಾಲಿಗೆ ಭಾರೀ ಪೆಟ್ಟು ಬಿದ್ದಿದ್ದು ತಾಲೂಕಾಸ್ಪತ್ರೆಯಲ್ಲಿ ಪ್ರಥಮ...

Post
ಮುಂಡಗೋಡಿನಲ್ಲಿ ಮೊಬೈಲ್ ಎಗರಿಸಿದ್ದವನಿಗೆ ಬಿತ್ತು ಬಿಸಿ ಬಿಸಿ ಗೂಸಾ..!

ಮುಂಡಗೋಡಿನಲ್ಲಿ ಮೊಬೈಲ್ ಎಗರಿಸಿದ್ದವನಿಗೆ ಬಿತ್ತು ಬಿಸಿ ಬಿಸಿ ಗೂಸಾ..!

ಮುಂಡಗೋಡ; ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಮೊಬೈಲ್ ಕಳ್ಳತನ ಮಾಡಿದ್ದ ವ್ಯಕ್ತಿಗೆ ಧರ್ಮದೇಟು ಬಿದ್ದಿದೆ. ಪಟ್ಟಣದ ಮೊಬೈಲ್ ಶಾಪ್ ಒಂದರಲ್ಲಿ ಮೊಬೈಲ್ ಖರೀಧಿಸುತ್ತಿದ್ದಾಗ, ಹಿಂದಿನಿಂದ ಬಂದ ವ್ಯಕ್ತಿ ಮೊಬೈಲ್ ಎಗರಿಸಿಕೊಂಡು ಹೋಗಿದ್ದಾನೆ. ನಂತರ ಮೊಬೈಲ್ ಕಳೆದುಕೊಂಡ ಇಬ್ಬರು ವ್ಯಕ್ತಿಗಳು ಮೊಬೈಲ್ ಕಳ್ಳನಿಗಾಗಿ ತಡಕಾಡಿದ್ದಾರೆ. ನಂತ್ರ ಶಿವಾಜಿ ಸರ್ಕಲ್ ನಲ್ಲಿ ಅಚಾನಕ್ಕಾಗಿ ಮೊಬೈಲ್ ಕಳ್ಳ ತಗಲಾಕ್ಕೊಂಡಿದ್ದಾನೆ. ಹೀಗಾಗಿ, ಮೊಬೈಲ್ ಕಳೆದುಕೊಂಡಿದ್ದ ಇಬ್ಬರು ವ್ಯಕ್ತಿಗಳು ಮೊಬೈಲ್ ಕಳ್ಳನಿಗೆ ಗೂಸಾ ನೀಡಿದ್ದಾರೆ. ನಂತರ ಪೊಲೀಸ್ ಠಾಣೆಗೆ ಮೊಬೈಲ್ ಕಳ್ಳನನ್ನು ಕರೆದುಕೊಂಡು ಹೋಗಿದ್ದಾರೆ...

Post
ಮುಂಡಗೋಡಿನ ಕೊಪ್ಪ ಬಳಿ ಭೀಕರ ಅಪಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!

ಮುಂಡಗೋಡಿನ ಕೊಪ್ಪ ಬಳಿ ಭೀಕರ ಅಪಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!

ಮುಂಡಗೋಡ: ತಾಲೂಕಿನ ಕೊಪ್ಪ ಬಳಿ ಬೀಕರ ಅಪಘಾತ ಸಂಭವಿಸಿದೆ. ಲಾರಿ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸ್ಕಿಡ್ ಆಗಿ ಲಾರಿಯಡಿ ಬಿದ್ದು ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ನಂದಿಕಟ್ಟಾ ಗ್ರಾಮದ ಷರೀಫ್ ಎಂಬುವ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಇನ್ನು ಮತ್ತೋರ್ವ ಸವಾರ ವಿಶ್ವನಾಥ್ ಸವಣೂರ್ ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾನೆ. ಇಬ್ಬರೂ ಯುವಕರು ನಂದಿಕಟ್ಟಾ ಗ್ರಾಮದಿಂದ ಮುಂಡಗೋಡಿಗೆ ಹೋಗುವ ವೇಳೆ, ಮುಂಡಗೋಡ ಕಡೆಗೆ ಹೋಗುತ್ತಿದ್ದ ಲಾರಿ ಓವರ್ ಟೇಕ್ ಮಾಡಲು...

Post
ಇಂದಿರಾನಗರ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರರು, ಇಬ್ಬರು ಗಂಭೀರ..!

ಇಂದಿರಾನಗರ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರರು, ಇಬ್ಬರು ಗಂಭೀರ..!

ಮುಂಡಗೋಡ: ತಾಲೂಕಿನ ಇಂದಿರಾನಗರ ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದಾರೆ‌. ಮುಂಡಗೋಡ ಗಾಂಧಿ ನಗರದ ದುರ್ಗಪ್ಪ ಕೊರವರ್(25) ಎಂದು ಗುರುತಿಸಲಾಗಿದೆ‌. ಮತ್ತೋರ್ವ ಓಣಿಕೇರಿ ಗ್ರಾಮದವನು ಅಂತಾ ಮಾಹಿತಿ ಲಭ್ಯವಾಗಿದೆ. ಅಪಘಾತ ನಡೆದ ಕೆಲವೇ ಹೊತ್ತಲ್ಲಿ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

Post

ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು..!

ಬೆಂಗಳೂರು : ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತಾ ತಿಳಿದು ಬಂದಿದೆ. ಬಿಎಸ್ ಯಡಿಯೂರಪ್ಪ ಅವರ ಎರಡನೇ ಪುತ್ರಿ ಪದ್ಮಾವತಿಯವರ ಮಗಳು ಸೌಂದರ್ಯ(30) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಸೌಂದರ್ಯ ಅವರ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Post
ಕೋಡಂಬಿಯಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆ ಆಯೋಜಕರಿಗೆ ಸಂಕಷ್ಟ..! ನಾಲ್ವರು ವಶಕ್ಕೆ..!

ಕೋಡಂಬಿಯಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆ ಆಯೋಜಕರಿಗೆ ಸಂಕಷ್ಟ..! ನಾಲ್ವರು ವಶಕ್ಕೆ..!

ಮುಂಡಗೋಡ: ಉತ್ತರ ಕರ್ನಾಟಕದ ಯುವಕರ ಪಾಲಿನ ರಣರೋಚಕ ಹೋರಿ ಹಬ್ಬಕ್ಕೆ ಮುಂಡಗೋಡ ತಾಲೂಕಿನಲ್ಲಿ ಭಾರೀ ಹಿನ್ನಡೆಯಾಗಿದೆ. ಕೋಡಂಬಿಯಲ್ಲಿ ನಿನ್ನೆ ನಡೆದ ಹೋರಿ ಬೆದರಿಸೋ ಸ್ಪರ್ಧೆಯ ಮೇಲೆ ಮುಂಡಗೋಡ ಪೊಲೀಸರು ದಾಳಿ ನಡೆಸಿ ಬರೋಬ್ಬರಿ 17 ಜನರ ಮೇಲೆ ಕೇಸು ಜಡೆದಿದ್ದಾರೆ. ಅದ್ರಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ‌. ಉಳಿದ 13 ಜನ ಪರಾರಿಯಾಗಿದ್ದಾರೆ. ಅನುಮತಿ ಪಡೆದಿರಲಿಲ್ಲವಾ‌..? ಕೋಡಂಬಿಯಲ್ಲಿ ನಿನ್ನೆ ಮಂಗಳವಾರ ನಡೆದ “ಹೋರಿ ಬೆದರಿಸುವ ಸ್ಪರ್ಧೆ” ಅಯೋಜಕರಿಗೆ ಸಂಕಷ್ಟ ತಂದೊಡ್ಡಿದೆ‌. ಕೊರೋನಾ ಸಂಕಷ್ಟದ ನಡುವೆ ಸರ್ಕಾರದ ಯಾವುದೇ ಅನುಮತಿ...

Post
ಉತ್ತರ ಕನ್ನಡಕ್ಕೆ ನೂತನ ಉಸ್ತುವಾರಿ ಸಚಿವರ ನೇಮಕ, ಹೆಬ್ಬಾರ್ ಸಾಹೇಬ್ರಿಗೆ ಹಾವೇರಿ ಹೊಣೆ..!!

ಉತ್ತರ ಕನ್ನಡಕ್ಕೆ ನೂತನ ಉಸ್ತುವಾರಿ ಸಚಿವರ ನೇಮಕ, ಹೆಬ್ಬಾರ್ ಸಾಹೇಬ್ರಿಗೆ ಹಾವೇರಿ ಹೊಣೆ..!!

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರ ಬದಲಾವಣೆಯಾಗಿದೆ. ಈ ಮೊದಲು ಉಸ್ತುವಾರಿಯಾಗಿದ್ದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಗೆ ಕೋಕ್ ನೀಡಿ, ಕೋಟಾ ಶ್ರೀನಿವಾಸ್ ಪೂಜಾರಿಯವರನ್ನ ಉತ್ತರ ಕನ್ನಡಕ್ಕೆ ಉಸ್ತುವಾರಿ ಸಚಿವರನ್ನಾಗಿಸಿದ್ದಾರೆ. ಹಾಗೇ, ಶಿವರಾಮ್ ಹೆಬ್ಬಾರ್ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ.

Post
ಬಸಾಪುರದಲ್ಲಿ ಯುವಕರ ಪುಂಡಾಟ..? KSRTC ಚಾಲಕನಿಗೆ ಥಳಿಸಿದ್ರಾ ಹುಡುಗ್ರು..?

ಬಸಾಪುರದಲ್ಲಿ ಯುವಕರ ಪುಂಡಾಟ..? KSRTC ಚಾಲಕನಿಗೆ ಥಳಿಸಿದ್ರಾ ಹುಡುಗ್ರು..?

ಮುಂಡಗೋಡ : ತಾಲೂಕಿನ ಬಸಾಪುರದಲ್ಲಿ KSRTC ಚಾಲಕ ಹಾಗೂ ನಿರ್ವಾಹಕನ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದ್ದು ಸದ್ಯ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಬಸ್ ನಿಲ್ಲಿಸಿದ್ರೂ ಹಲ್ಲೆ..? ಬೆಳಿಗ್ಗೆ ಬಸಾಪುರದಿಂದ ಮುಂಡಗೋಡಿಗೆ ಹೊರಟಿದ್ದ, “ಮುಂಡಗೋಡ ಹುಲಿಹೊಂಡ ಮುಂಡಗೋಡ” ಬಸ್, KA-42-F-1309 ಸಂಖ್ಯೆಯ KSRTC ಬಸ್ ನಲ್ಲಿ ಓರ್ವ ಯುವಕ ಬಸ್ ಹತ್ತಲು ಬಂದಿದ್ದ ಎನ್ನಲಾಗಿದೆ‌. ಅಷ್ಟೊತ್ತಿಗಾಗಲೇ ಹೊರಟಿದ್ದ ಬಸ್ ಗೆ ಕೂಗಿ ನಿಲ್ಲಿಸಿದ್ದಾರೆ. ಆದ್ರೆ ಬಸ್ ನಿಲ್ಲಿಸಿದ್ರೂ...