ಮುಂಡಗೋಡ: ತಾಲೂಕಿನ ಹನುಮಾಪುರದ ಬಳಿ ಭಾರೀ ದುರಂತವೊಂದು ಸಂಭವಿಸಿದೆ. ಜಲಮಿಷನ್ ಯೋಜನೆಯ ಕಾಮಗಾರಿ ವೇಳೆ ಬೃಹತ್ ಪೈಪು ಮೈಮೇಲೆ ಬಿದ್ದು ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿದ್ದಾನೆ. ಮೂಲತಃ ಬಿಹಾರದವನಾದ ರಾಜು ಯಾದವ್ (35) ಮೃತಪಟ್ಟ ದುರ್ಧೈವಿಯಾಗಿದ್ದು, ಇಂದು ಕಾರ್ಯನಿರ್ವಹಿಸುವ ವೇಳೆ ಆಕಸ್ಮಿಕವಾಗಿ ಬೃಹತ್ ಪೈಪ್ ಆಯತಪ್ಪಿ ಕಾರ್ಮಿಕನ ಮೈಮೇಲೆ ಬಿದ್ದಿದೆ. ಹೀಗಾಗಿ, ಕಾರ್ಮಿಕನ ದೇಹ ಚಿದ್ರಗೊಂಡಿದೆ. ಸದ್ಯ ಮುಂಡಗೋಡ ಪಿಎಸ್ ಐ ಬಸವರಾಜ್ ಮಬನೂರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.
Top Stories
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!
Category: BIG BREAKING
ಮುಂಡಗೋಡ ತಾಲೂಕಿನ ಹಲವೆಡೆ ಆಲಿಕಲ್ಲು, ಗಾಳಿ ಸಮೇತ ಭಾರೀ ಮಳೆ..!
ಮುಂಡಗೋಡ: ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಮುಂಡಗೋಡ ಪಟ್ಟಣ ಸೇರಿದಂತೆ ಹಲವು ಕಡೆ ಗಾಳಿ, ಗುಡುಗು, ಮಿಂಚು ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ಸುಮಾರು ಒಂದು ತಾಸಿಗೂ ಹೆಚ್ಚು ಸುರಿದ ಮಳೆಯ ಕಾರಣಕ್ಕೆ ಬಿಸಿಲ ಬೇಗೆಯಿಂದ ಬಸವಳಿದಿದ್ದ ತಾಲೂಕಿನ ಮಂದಿಗೆ ಮಳೆರಾಯ ಮತ್ತೆ ತಂಪೆರೆದಿದ್ದಾನೆ. ಮಳೆಯ ದೃಷ್ಯ ಕ್ಯಾಮೆರಾ ಕಣ್ಣಲ್ಲಿ.. ಅಲಿಕಲ್ಲು ಮಳೆ..! ಅಂದಹಾಗೆ, ಭರ್ಜರಿ ಮಳೆಗೂ ಮೊದಲು ಭಾರೀ ಗಾಳಿ ಬೀಸಿದೆ. ನಂತರ ಧಾರಾಕಾರ ಆಲಿಕಲ್ಲು ಬಿದ್ದಿವೆ. ಪರಿಣಾಮ ತಾಲೂಕಿನ ಮಾವು ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾದಂತೆ...
ಕಾತೂರು, ಹಿರೇಹಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ ನುಜ್ಜುಗುಜ್ಜು, ಚಾಲಕನಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಕಾತೂರು ಹಾಗೂ ಹಿರೇಹಳ್ಳಿ ಮದ್ಯದ ಬ್ರಿಡ್ಜ್ ಬಳಿ ಪೈಪು ತುಂಬಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರೀ ಚಾಲಕನಿಗೆ ಗಂಭೀರ ಗಾಯವಾಗಿದ್ದು ತಾಲುಕಾಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ ಪೈಪು ತುಂಬಿದ ಲಾರಿ ನಿಯಂತ್ರಣ ತಪ್ಪಿದೆ. ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಲಾರಿ ನುಜ್ಜು ಗುಜ್ಜಾಗಿದೆ. ಅಲ್ದೇ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೂ ಡಿಕ್ಕಿಯಾಗಿ ಡಿಕ್ಕಿಯ ರಭಸಕ್ಕೆ ಮರ ತುಂಡಾಗಿದೆ. ಸಧ್ಯ ಚಾಲಕ...
ತಹಶೀಲ್ದಾರ್ ಶ್ರೀಧರ್ ಮುಂದಲಮನಿ ವಿರುದ್ಧ ಸಿಡಿದೆದ್ದ ದಲಿತ ಸಂಘಟನೆಗಳು..! ಅಂದಹಾಗೆ, ಕಾರವಾರದಲ್ಲಿ ಏನಾಯ್ತು ಗೊತ್ತಾ..!
ಕಾರವಾರ: ನಕಲಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಹುದ್ದೆಯಲ್ಲಿರೋ ಆರೋಪ ಹೊತ್ತಿರೊ, ಮುಂಡಗೋಡ ತಹಶೀಲ್ದಾರ್ ಶ್ರೀಧರ ಮುಂದಲಮನಿ ವಿರುದ್ಧ ತನಿಖೆ ನಡೆಸಿ, ಆರೋಪದಿಂದ ಮುಕ್ತವಾಗುವವರೆಗೆ ಹುದ್ದೆಯಲ್ಲಿ ಮುಂದುವರಿಯದಂತೆ ಆದೇಶಿಸಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಚಿದಾನಂದ ಹರಿಜನ ಅವರು ಕಾರವಾರದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಜಿಲ್ಲಾಡಳಿತದ ಮೂಲಕ ಪತ್ರ..! ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿರುವ ಅವರು, ಮುಂಡಗೋಡ ತಾಲೂಕು ತಹಶೀಲ್ದಾರ ಶ್ರೀಧರ್ ಮುಂದಲಮನಿಯವರು ನಕಲಿ...
ಮುಂಡಗೋಡ ತಾಲೂಕಾಡಳಿತ, ಅಧಿಕಾರಿಗಳ ವಿರುದ್ಧ ರಿಂಚನ್ ಲಾಮೊ ಭಾರೀ ಆಕ್ರೋಶ..!
ಮುಂಡಗೋಡ: ಟಿಬೇಟಿಯನ್ ಕಾಲೋನಿಗಳ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪೂರೈಸುವಲ್ಲಿ ಇಲ್ಲಿನ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಗಳು ಕಾಳಜಿ ತೋರಿಸಿಲ್ಲ ಅಂತಾ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ರಿಂಚನ್ ಲಾಮೊ ಅಸಮಾಧಾನ ಹೊರಹಾಕಿದ್ದಾರೆ.. ಮೂರು ದಿನಗಳ ಕಾಲ ಮುಂಡಗೋಡ ಟಿಬೇಟಿಯನ್ ಕಾಲೋನಿಗಳ ಪ್ರವಾಸದಲ್ಲಿರೋ ರಿಂಚನ್ ಲಾಮೊ, ಟಿಬೇಟಿಯನ ಕ್ಯಾಂಪ್ ನಂಬರ್ 6 ರ ಸೈನ್ಸ್ ಭವನದಲ್ಲಿ ನಡೆದ, ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ರು. ಬೌದ್ಧ ಸನ್ಯಾಸಿಗಳು ಅಹಿಂಸಾವಾದಿಗಳು, ಯಾರ ಹತ್ತಿರವೂ ನಿರ್ಭಿಡೆಯಿಂದ ಮಾತನಾಡುವವರಲ್ಲ. ಇವ್ರಿಗೆ ಸಿಗಬೇಕಿದ್ದ...
ಉದ್ಯಮಿ ಆರ್.ಎನ್. ನಾಯ್ಕ್ ಹತ್ಯೆ ಕೇಸ್, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿಗಳು..!
ಅಂಕೋಲಾ: ಉದ್ಯಮಿ ಆರ್.ಎನ್.ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ ಅಂತಾ ಸಾಬೀತಾಗಿದೆ. ಬನ್ನಂಜೆ ರಾಜಾ ವಿರುದ್ಧದ ಆರೋಪಗಳೆಲ್ಲವೂ ಸಾಬೀತಾಗಿದ್ಧು, ಬೆಳಗಾವಿ ಕೋಕಾ ನ್ಯಾಯಾಲಯ ನ್ಯಾಯಾಧೀಶ ಸಿ.ಎಂ.ಜೋಶಿ ತೀರ್ಪು ನೀಡಿದ್ದಾರೆ. ಎಪ್ರಿಲ್ 4 ಶಿಕ್ಷೆ ತೀರ್ಪು..! ಇನ್ನು, ಏಪ್ರಿಲ್ 4ರವರೆಗೆ ಶಿಕ್ಷೆಯ ತೀರ್ಪು ಕಾಯ್ದಿರಿಸಿದ ಬೆಳಗಾವಿ ಕೋಕಾ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಶಿ, ಪ್ರಕರಣದ 6, 11 ಹಾಗೂ 16ನೇ ಆರೋಪಿಗಳು ನಿರ್ದೋಷಿ ಎಂದು ತೀರ್ಪು ನೀಡಿದೆ. ಆರನೇ ಆರೋಪಿ...
ಮುಂಡಗೋಡ ತಹಶೀಲ್ದಾರ್ ಬಂಧನವಾಗ್ತಾರಾ..? ಅಷ್ಟಕ್ಕೂ ಪೊಲೀಸ್ರು ತಹಶೀಲ್ದಾರ್ ಮನೆ ಮುಂದೆ ಠಿಕಾಣಿ ಹೂಡಿದ್ಯಾಕೆ..?
ಮುಂಡಗೋಡಿನ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಸಂಕಷ್ಟಕ್ಕೆ ಸಿಲುಕಿದ್ರಾ..? ನಕಲಿ ಜಾತಿ ಪ್ರಮಾಣ ಪತ್ರ ನೀಡಿ ತಹಸೀಲ್ದಾರ್ ಪದವಿ ಗಿಟ್ಟಿಸಿಕೊಂಡಿರೋ ಆರೋಪಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಬಂಧನಕ್ಕೆ..? ಕಲಬುರ್ಗಿಯಿಂದ ಪೊಲೀಸ್ ಅಧಿಕಾರಿಗಳು ಮದ್ಯರಾತ್ರಿಯೇ ಮುಂಡಗೋಡಿಗೆ ಬಂದಿಳಿದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ, ಪೊಲೀಸ್ ಅಧಿಕಾರಿಗಳು ಬಂದು ಬಾಗಿಲು ಬಡಿದ್ರೂ ತಹಶೀಲ್ದಾರ್ ಸಾಹೇಬ್ರು ಮಾತ್ರ ಬಾಗಿಲು ತೆರೆಯುತ್ತಿಲ್ಲವಂತೆ. ಹೀಗಾಗಿ, ಪೊಲೀಸ್ ಅಧಿಕಾರಿಗಳು ಬೆಳಗಿನ ಮೂರು ಗಂಟೆಯಿಂದ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ಸರ್ಕಾರಿ ನಿವಾಸದ ಎದುರು ಬೀಡು ಬಿಟ್ಟಿದ್ದಾರೆ. ಏನದು...
ಡಿಸೇಲ್ ದರ ಹೆಚ್ಚಳವಾದ್ರೂ ಬಸ್ ದರ ಹೆಚ್ಚಳವಿಲ್ಲ- ಖಾಸಗಿ ಬಂಕ್ ಗಳಲ್ಲಿ ಡಿಸೇಲ್ ಖರೀದಿಗೆ ಚಿಂತನೆ- ವಿ.ಎಸ್.ಪಾಟೀಲ್
ಮುಂಡಗೋಡ: ಡಿಸೇಲ್ ದರ ಸಗಟು ಖರೀದಿದಾರರಿಗೆ ಪ್ರತೀ ಲೀಟರ್ ಗೆ 25 ರೂ. ಏರಿಕೆಯಾಗಿದೆ, ಇದ್ರಿಂದ ನಿಗಮಗಳಿಗೆ ಸಾಕಷ್ಟು ಹೊರೆಯಾಗಿದೆ ಆದ್ರೂ ಸಾರಿಗೆ ಬಸ್ ಟಿಕೇಟ್ ದರ ಹೆಚ್ಚಳ ಮಾಡಲ್ಲ, ಅಂತಾ ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ತಿಳಿಸಿದ್ರು. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿದ ಅವ್ರು, ಕೊರೋನಾ ಸಂದರ್ಭದಲ್ಲಿನ ಹಾನಿಯಿಂದ ಅದೇಷ್ಟೋ ನಿಗಮಗಳು ತೀವ್ರ ಸಂಕಷ್ಟದಲ್ಲಿವೆ. ಈ ಮದ್ಯೆ ಮತ್ತೆ ಸದ್ಯ ಡಿಸೆಲ್ ದರ ಹೆಚ್ಚಳವಾಗಿದ್ದು ಅದನ್ನ...
ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶವಿಲ್ಲ; ಹೈಕೋರ್ಟ್ ಮಹತ್ವದ ಐತಿಹಾಸಿಕ ತೀರ್ಪು
ಬೆಂಗಳೂರು: ಹಿಜಾಬ್ ವಿವಾದದ ಕುರಿತು ಹೈಕೋರ್ಟ ತ್ರಿಸದಸ್ಯ ಪೀಠ ಐತಿಹಾಸಿಕ ತೀರ್ಪು ಪ್ರಕಟವಾಗಿದೆ. ಹಿಜಾಬ್ ಅನ್ನೋದು ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವೇ ಅಲ್ಲ ಅಂತಾ ಮಹತ್ವದ ಆದೇಶ ನೀಡಿದೆ. ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಸರ್ಕಾರದ ವಸ್ತ್ರಸಂಹಿತೆಯನ್ನು ಪ್ರಶ್ನಿಸುವಂತಿಲ್ಲ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶವಿಲ್ಲ. ಮಹತ್ವದ ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್ ತ್ರಿಸದಸ್ಯ ಪೀಠ.
“ಮಳೆ ಬಂದು ಭೂಮಿತಾಯಿ ಉಡಿ ತುಂಬಿತಲೇ ಪರಾಕ್” ಚೌಡಳ್ಳಿ ಮೈಲಾರಲಿಂಗನ ಕಾರಣೀಕ..!
ಮುಂಡಗೋಡ: ತಾಲೂಕಿನ ಚೌಡಳ್ಳಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಮೈಲಾರಲಿಂಗೇಶ್ವರ ಕಾರಣೀಕ ನುಡಿ ಹೊರಬಿದ್ದಿದೆ. ವೃತಾಧಾರಿ ಜಗಧೀಶ್ ಮಡ್ಲಿ ಬಿಲ್ಲನ್ನೇರಿ, ಆಕಾಶದತ್ತ ಶೂನ್ಯ ದೃಷ್ಟಿಸುತ್ತ ಮತ್ತೆ ಕಾರಣೀಕ ನುಡಿದಿದ್ದಾರೆ. ತಾತ್ಪರ್ಯವೇನು..? “ಮಳೆ ಬಂದು ಭೂಮಿತಾಯಿ ಉಡಿ ತುಂಬಿತಲೇ ಪರಾಕ್” ಪ್ರಸಕ್ತ ವರ್ಷದ ಚೌಡಳ್ಳಿ ಮೈಲಾರಲಿಂಗನ ಕಾರಣೀಕವಿದು. ಅಂದಹಾಗೆ, ಪ್ರಸಕ್ತ ವರ್ಷದ ಕಾರಣೀಕದ ತಾತ್ಪರ್ಯ ಬಹುತೇಕ ರೈತರ ಕೃಷಿಗೆ ಸಂಬಂಧಿಸಿದಂತೆ ಹೊರಬಿದ್ದಿದೆ. ಮಳೆ, ಬೆಳೆಯ ಭವಿಷ್ಯ ನುಡಿಯಲಾಗಿದೆ. ಕಾರಣೀಕ ನುಡಿಯ...









