Home BIG BREAKING

Category: BIG BREAKING

Post
ತಮ್ಮ ಸುಪುತ್ರನ ವಿರುದ್ಧವೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ರಾ ವಿ.ಎಸ್.ಪಾಟೀಲ್..?

ತಮ್ಮ ಸುಪುತ್ರನ ವಿರುದ್ಧವೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ರಾ ವಿ.ಎಸ್.ಪಾಟೀಲ್..?

ವಿ.ಎಸ್.ಪಾಟೀಲ್, ಈ ಹೆಸ್ರು ಕೇಳಿದ್ರೆ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ, ಅದ್ರಲ್ಲೂ ಯಲ್ಲಾಪುರ ಕ್ಷೇತ್ರದಲ್ಲಿ ಅದೇನೋ ಒಂದು ಅಭಿಮಾನ. ಅದೇನೋ ಒಂದು ಪ್ರೀತಿ. ಅವರ ಅಪ್ಪಟ ಜವಾರಿ ಭಾಷೆಯ ಮಾತುಗಳು, ನೇರ ನುಡಿಗಳು, ನಿಷ್ಕಲ್ಮಶ ಮನಸ್ಸು ಹೀಗೆ ಅವ್ರನ್ನ ನಾನು ಇವತ್ತಿಗೂ ಒಬ್ಬ ರಾಜಕಾರಣಿ ಅಂತಾ ನೋಡಿಯೇ ಇಲ್ಲ. ಅವ್ರು ನಮ್ಮ ಮಾರ್ಗದರ್ಶಿ ಸ್ಥಾನದಲ್ಲಿ ಯಾವಾಗ್ಲೂ ಇರ್ತಾರೆ. ಹೀಗಿರೋ ಅವ್ರಿಗೆ ಇಂತಹದ್ದೊಂದು ಪರಿಸ್ಥಿತಿ ಬಂದಿದೆಯಾ..? ಆ ಮಟ್ಟಿಗಿನ ಅನಿವಾರ್ಯತೆ ಎದುರಾಗಿದೆಯಾ..? ನಿಜಕ್ಕೂ ವಿ.ಎಸ್.ಪಾಟೀಲರ ಮನಸ್ಸು ಈ ಮಟ್ಟಿಗೆ...

Post
ಇಂದೂರು ಗ್ರಾಪಂ ಅಧ್ಯಕ್ಷರ ಬದಲಾವಣೆ ಪೀಕಲಾಟ, ಸಚಿವ ಹೆಬ್ಬಾರ್ ಭೇಟಿಗೆ ಹೋದ್ರು ಅಸಮಾಧಾನಿತರು..!

ಇಂದೂರು ಗ್ರಾಪಂ ಅಧ್ಯಕ್ಷರ ಬದಲಾವಣೆ ಪೀಕಲಾಟ, ಸಚಿವ ಹೆಬ್ಬಾರ್ ಭೇಟಿಗೆ ಹೋದ್ರು ಅಸಮಾಧಾನಿತರು..!

ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರ “ರಾಜೀ”ನಾಮೆ ಕೊಡಿಸುವ ವಿಚಾರ, ಲೊಕಲ್ ಬಿಜೆಪಿಗರಿಗೆ ಭಾರೀ ಪೀಕಲಾಟ ತಂದಿಟ್ಟಿದೆ. ನಾನು ರಾಜೀನಾಮೆ ಕೊಡಲ್ಲ ಅಂತಾ ಕಡ್ಡಿ‌ಮುರಿದಂತೆ ಹೇಳಿರೋ ಅಧ್ಯಕ್ಷೆ ಅನ್ನಪೂರ್ಣಾ ಬೆಣ್ಣಿ ಮೇಡಂ, ಇಂದೂರಿನ ಬಿಜೆಪಿಗರಿಗೆ ಬಿಸಿ ತುಪ್ಪವಾಗಿದ್ದಾರಾ..? ಹೇಗಾದ್ರೂ ಸರಿ ಮಾತು ಕೊಟ್ಟಂತೆ ನಡೆದುಕೊಳ್ಳಲೇ ಬೇಕು ಅಂತಾ ಜಿದ್ದಿಗೆ ಬಿದ್ದಿರೋ ಅಸಮಾಧಾನಿತ ಇ‌ಂದೂರಿನ ಸದಸ್ಯರಿಗೆ, ಅದ್ಯಾಕೋ ಏನೋ ಅಂದುಕೊಂಡಂತೆ ಆಗುತ್ತಲೇ ಇಲ್ಲ. ಮಾತು ಬದಲಿಸಿದ್ರಾ ಉಪಾಧ್ಯಕ್ಷ..? ಅಂದಹಾಗೆ, ಅಧ್ಯಕ್ಷರ ಬದಲಾವಣೆಗೆ ಪಣತೊಟ್ಟು ನಿಂತಿರೊ ಇಂದೂರಿನ ಬಿಜೆಪಿ ಬಳಗ, ಈಗಾಗಲೇ...

Post
ಸಿಡ್ಲಗುಂಡಿ ಬಳಿ ಲಾರಿ, ಬೊಲೆರೊ ಮದ್ಯೆ ಮುಖಾಮುಕಿ ಡಿಕ್ಕಿ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ..!

ಸಿಡ್ಲಗುಂಡಿ ಬಳಿ ಲಾರಿ, ಬೊಲೆರೊ ಮದ್ಯೆ ಮುಖಾಮುಕಿ ಡಿಕ್ಕಿ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ..!

 ಮುಂಡಗೋಡ:ತಾಲೂಕಿನ ಯಲ್ಲಾಪುರ ರಸ್ತೆಯಲ್ಲಿ ಅಪಘಾತವಾಗಿದೆ. ಅಶೋಕ‌ ಲೈಲ್ಯಾಂಡ್ ಹಾಗೂ ಬುಲೆರೊ ವಾಹನದ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸಿಡ್ಲಗುಂಡಿ, ಮೈನಳ್ಳಿ ಸಮೀಪದ ಕಿರು ಸೇತುವೆ ಬಳಿ ಘಟನೆ ನಡೆದಿದ್ದು, ಅಪಘಾತದ ಭೀಕರತೆಗೆ, ಡಿಕ್ಕಿಯ ರಭಸಕ್ಕೆ ಅಶೋಕ ಲೈಲಾಂಡ್ ಲಾರಿ ಉರುಳಿ ಬಿದ್ದಿದೆ. ಇಷ್ಟಾದ್ರೂ, ಅದೃಷ್ವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬೊಲೆರೋ ವಾಹನದಲ್ಲಿ ಸಾಕಷ್ಟು ಜನ ಪ್ರಯಾಣಿಕರಿದ್ರು. ಆದ್ರೆ ಯಾರಿಗೂ ತೊಂದರೆಯಾಗಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ...

Post
ಇನ್ನೂ ಕೆಲಸ ಬಾಕಿ ಇದೆ, ಮುಗಿದ ಮೇಲೆಯೇ ರಾಜೀನಾಮೆ ಅಂದ್ರು ಇಂದೂರು ಗ್ರಾಪಂ ಅಧ್ಯಕ್ಷೆ..!

ಇನ್ನೂ ಕೆಲಸ ಬಾಕಿ ಇದೆ, ಮುಗಿದ ಮೇಲೆಯೇ ರಾಜೀನಾಮೆ ಅಂದ್ರು ಇಂದೂರು ಗ್ರಾಪಂ ಅಧ್ಯಕ್ಷೆ..!

 ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ರಾಜೀನಾಮೆ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಯಾವ ಲಕ್ಷಣಗಳೂ ತೋರುತ್ತಿಲ್ಲ. ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ “ಇನ್ನಷ್ಟು ಪ್ರಮುಖ ಕೆಲಸಗಳಿವೆ ಅವೇಲ್ಲ ಮುಗಿಯೋವರೆಗೆ ರಾಜೀನಾಮೆ ಕೊಡಲ್ಲ” ಅಂತಾ ಕಡ್ಡಿ ಮುರಿದಂತೆ ಹೇಳಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿರೋ ಅಧ್ಯಕ್ಷರು ಸ್ಪಷ್ಟವಾಗಿ ಉತ್ತರಿಸಿದ್ದಾರೆ. ನಮ್ಮಲ್ಲಿ ಗೊಂದಲವೇ ಇಲ್ಲ..! ಅಸಲು, ನಮ್ಮಲ್ಲಿ ಯಾವ ಗೊಂದಲವೇ ಇಲ್ಲ. ನಾವೇಲ್ಲರೂ ಒಗ್ಗಟ್ಟಾಗೇ ಇದ್ದಿವಿ. ನಂಗೆ ನಮ್ಮ ಸದಸ್ಯರೇಲ್ಲರೂ ಬೆಂಬಲ ಕೊಟ್ಟಿದ್ದಾರೆ. ಆದ್ರೆ, ಕೋವಿಡ್...

Post
ಇಂದೂರು ಗ್ರಾಪಂ ನಲ್ಲಿ 15-15 ರ ಹಾವು ಏಣಿಯಾಟ..! ಅಧ್ಯಕ್ಷ ಪಟ್ಟಕ್ಕಾಗಿ ಒಳಗೊಳಗೇ ಬೇಗುದಿ..?

ಇಂದೂರು ಗ್ರಾಪಂ ನಲ್ಲಿ 15-15 ರ ಹಾವು ಏಣಿಯಾಟ..! ಅಧ್ಯಕ್ಷ ಪಟ್ಟಕ್ಕಾಗಿ ಒಳಗೊಳಗೇ ಬೇಗುದಿ..?

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತಿಯಲ್ಲಿ ಒಳಗೊಳಗೇ ಅಸಮಾಧಾನದ ಹೊಗೆಯಾಡ್ತಿದೆಯಾ..? ಬಹುತೇಕ ಒಗ್ಗಟ್ಟಾಗಿದ್ದ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಒಳಗೊಳಗೆ ಕುದಿಯುವಂತಾಗಿದೆಯಾ..? ಒಳ ಒಪ್ಪಂದದಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಬದಲಾವಣೆಗಾಗಿ ಜಾತಕ ಪಕ್ಷಿಯಂತೆ ಕಾದು ಕೂರುವಂತಾಗಿದೆಯಾ..? ಹೌದು ಅಂತಿದೆ ಮೂಲಗಳು. ಬಿಜೆಪಿ ಸಾಮ್ರಾಜ್ಯ..! ಅಸಲು, ಇಂದೂರು ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತರ ಸಾಮ್ರಾಜ್ಯವಿದೆ. ಅದೇನೇ ತಿಪ್ಪರಲಾಗ ಹಾಕಿದ್ರೂ ಇಲ್ಲಿ ಬಿಜೆಪಿ ಬೆಂಬಲಿತರ ಅಧಿಕಾರ ಬಿಲ್ ಕುಲ್ ಬಿಜೆಪಿಗೇ ಇರತ್ತೆ. ಯಾಕಂದ್ರೆ, 16 ಸದಸ್ಯ ಬಲದ ಇಂದೂರು...

Post
ಬಾಚಣಕಿ ಗ್ರಾಪಂ ನೂತನ ಅಧ್ಯಕ್ಷರಾಗಿ ಸಂತೋಷ ಸಣ್ಣಮನಿಗೆ ಭರ್ಜರಿ  ಗೆಲುವು..!

ಬಾಚಣಕಿ ಗ್ರಾಪಂ ನೂತನ ಅಧ್ಯಕ್ಷರಾಗಿ ಸಂತೋಷ ಸಣ್ಣಮನಿಗೆ ಭರ್ಜರಿ ಗೆಲುವು..!

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸಂತೋಷ ಸಣ್ಣಮನಿ ಆಯ್ಕೆಯಾಗಿದ್ದಾರೆ‌. ಇದ್ರೊಂದಿಗೆ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ಭರ್ಜರಿ ಜಯ ಸಿಕ್ಕಿದೆ‌. 13 ಸದಸ್ಯರಲ್ಲಿ 9 ರ ಬಲ..! ಅಂದಹಾಗೆ, 13 ಸದಸ್ಯ ಬಲದ ಬಾಚಣಕಿ ಗ್ರಾಮ ಪಂಚಾಯತಿಯಲ್ಲಿ, ಈಗಾಗಲೇ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು, ಬಿಜೆಪಿ ಬೆಂಬಲಿತ 5 ಸದಸ್ಯರು ಇದ್ರು. ಆದ್ರೆ, ಇಂದು ನಡೆದ ಚುನಾವಣೆಯಲ್ಲಿ ಬರೋಬ್ಬರಿ 9 ಜನರ ಬೆಂಬಲದೊಂದಿಗೆ ಸಂತೋಷ ಸಣ್ಣಮನಿ...

Post
ಬಾಚಣಕಿ ಗ್ರಾಪಂ ಅಧ್ಯಕ್ಷ  ಚುನಾವಣೆ, ಸಂತೋಷ ಸಣ್ಣಮನಿಗೆ ಒಲಿಯತ್ತಾ ಖುರ್ಚಿ..?

ಬಾಚಣಕಿ ಗ್ರಾಪಂ ಅಧ್ಯಕ್ಷ ಚುನಾವಣೆ, ಸಂತೋಷ ಸಣ್ಣಮನಿಗೆ ಒಲಿಯತ್ತಾ ಖುರ್ಚಿ..?

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಇಂದು ಮದ್ಯಾನ 1 ಗಂಟೆಯ ನಂತರ ನಡೆಯಲಿರೋ ಚುನಾವಣೆಯಲ್ಲಿ ಯಾರ ಕೈಗೆ ಅಧಿಕಾರದ ಚುಕ್ಕಾಣಿ..? ಅನ್ನೋ ಕುತೂಹಲಕ್ಕೆ ಉತ್ತರ ಸಿಗಲಿದೆ. 13 ಸದಸ್ಯ ಬಲ..! ಅಂದಹಾಗೆ, 13 ಸದಸ್ಯ ಬಲದ ಬಾಚಣಕಿ ಗ್ರಾಮ ಪಂಚಾಯತಿಯಲ್ಲಿ, ಈಗಾಗಲೇ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು, ಬಿಜೆಪಿ ಬೆಂಬಲಿತ 5 ಸದಸ್ಯರು ಇದ್ರು. ಹೀಗಾಗಿನೇ ಕಾಂಗ್ರೆಸ್ ಬೆಂಬಲಿತ ನಾಗರಾಜ್ ಉಪಾದ್ಯೆ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ರು. ಅದ್ರಂತೆ, ಅರಶಿಣಗೇರಿಯ ತಿಪ್ಪವ್ವ ಢಾಕಪ್ಪ...

Post
9 ತಿಂಗಳ ಹಿಂದೆ ಸಿಕ್ಕಿದೆ ಅನಾಥ ಶವ, ಕೊಲೆಯಾಗಿ ನದಿಯಲ್ಲಿ ತೇಲಿಬಂದಿದೆ ಹೆಣ, ಈ ವ್ಯಕ್ತಿ ನಿಮಗೇನಾದ್ರೂ ಗೊತ್ತಾ..?

9 ತಿಂಗಳ ಹಿಂದೆ ಸಿಕ್ಕಿದೆ ಅನಾಥ ಶವ, ಕೊಲೆಯಾಗಿ ನದಿಯಲ್ಲಿ ತೇಲಿಬಂದಿದೆ ಹೆಣ, ಈ ವ್ಯಕ್ತಿ ನಿಮಗೇನಾದ್ರೂ ಗೊತ್ತಾ..?

ಬಹುಶಃ ಅದೊಂದು ಭೀಕರ ಕೊಲೆ. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಅದ್ಯಾರೋ ಗೊತ್ತಿಲ್ಲ, ಕುತ್ತಿಗೆಗೆ ಟವೇಲ್ ಬಿಗಿದು ಬರ್ಬರವಾಗಿ ಕೊಂದಿದ್ದಾರೆ ದುಷ್ಟರು. ಅದೇಲ್ಲಿ ಕೊಲೆ ಮಾಡಿದ್ದಾರೋ ಅದೂ ಕೂಡ ಇವತ್ತಿಗೂ ಗೊತ್ತಾಗಿಲ್ಲ. ಹಾಗೆ ನಿರ್ದಯವಾಗಿ ಕೊಲೆ ಮಾಡಿ, ಮಲಪ್ರಭಾ ನದಿಯಲ್ಲಿ ತಂದು ಬೀಸಾಕಿ ಹೋಗಿದ್ದಾರೆ. ಆ ಶವ ತೇಲುತ್ತ ಬಂದು ಬೆಳಗಾವಿ ಜಿಲ್ಲೆಯ ಚಾಪಗಾಂವ್ ಸಮೀಪದ ಮಲಪ್ರಭಾ ನದಿಯ ದಂಡೆಯ ಮೇಲೆ ಸಿಕ್ಕಿದೆ. 9 ತಿಂಗಳ ಹಿಂದೆ.. ಅಷ್ಟಕ್ಕೂ, ಈ ಶವ ಸಿಕ್ಕಿದ್ದು ನಿನ್ನೆ ಮೊನ್ನೆಯಲ್ಲ. ಬರೋಬ್ಬರಿ 9...

Post
ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಅವಿಶ್ವಾಸಕ್ಕೆ ಅರ್ಜಿ, ಹೆಬ್ಬಾರ್ ಸಾಹೇಬ್ರ ನಿರ್ಲಕ್ಷಕ್ಕೆ ಸಿಡಿದೆದ್ರಾ ಸದಸ್ಯರು..!

ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಅವಿಶ್ವಾಸಕ್ಕೆ ಅರ್ಜಿ, ಹೆಬ್ಬಾರ್ ಸಾಹೇಬ್ರ ನಿರ್ಲಕ್ಷಕ್ಕೆ ಸಿಡಿದೆದ್ರಾ ಸದಸ್ಯರು..!

ಸಚಿವ ಶಿವರಾಂ ಹೆಬ್ಬಾರ್ ಅದ್ಯಾಕೋ ಏನೋ ಕಾರ್ಯಕರ್ತರ ಮನಸಿನಾಳ ಅರ್ಥೈಸಿಕೊಳ್ಳುವಲ್ಲಿ ವಿಫಲರಾಗ್ತಿದಾರಾ..? ಇಂತಹದ್ದೊಂದು ಅನುಮಾನ, ಕ್ಷೇತ್ರದ ಸದ್ಯದ ಸ್ಥಿತಿ ನೋಡಿದ್ರೆ ಎಂಥವರಿಗೂ ಅರ್ಥವಾಗ್ತಿದೆ. ಅಸಲು, ಸಚಿವರು ಮಾಡಿರೋ ಸಣ್ಣದೊಂದು ನಿರ್ಲಕ್ಷಕ್ಕೆ ಮುಂಡಗೋಡ ಪಟ್ಟಣ ಪಂಚಾಯತಿ ಸದ್ಯ ಕೊತ ಕೊತ ಕುದಿಯುತ್ತಿದೆ. ಬಿಜೆಪಿಯೊಳಗಿನ ಆಂತರಿಕ ಬೇಗುದಿ ಸ್ಫೋಟಗೊಂಡಿದೆ. ಅವಿಶ್ವಾಸ ಮಂಡನೆಗೆ ಅರ್ಜಿ..! ಮುಂಡಗೋಡ ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಿಸಲು ಅರ್ಜಿ ಸಲ್ಲಿಕೆಯಾಗಿದೆ. ಅದ್ಯಕ್ಷೆ ರೇಣುಕಾ ರವಿ ಹಾವೇರಿ ಹಾಗೂ ಉಪಾಧ್ಯಕ್ಷ ಮಂಜುನಾಥ್ ಹರ್ಮಲಕರ್...

Post
ಭೀಕರ ರಸ್ತೆ ಅಪಘಾತ, ಕ್ರೂಸರ್ ನಾಲೆಗೆ ಬಿದ್ದು 9 ಜನರ ದಾರುಣ ಸಾವು, 8 ಜನರಿಗೆ ಗಾಯ..!

ಭೀಕರ ರಸ್ತೆ ಅಪಘಾತ, ಕ್ರೂಸರ್ ನಾಲೆಗೆ ಬಿದ್ದು 9 ಜನರ ದಾರುಣ ಸಾವು, 8 ಜನರಿಗೆ ಗಾಯ..!

 ಬೆಳಗಾವಿ: ಬೆಳ್ಳಂ ಬೆಳಿಗ್ಗೆ ಬೆಳಗಾವಿ ಸಮೀಪ ಕಣಬರಗಿ ಬಳಿ ಭೀಕರ ಅಪಘಾತವಾಗಿದೆ. ಕ್ರೂಸರ್ ನಾಲೆಗೆ ಉರುಳಿ ಬಿದ್ದ ಪರಿಣಾಮ, 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 8 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರು ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದವರು ಎನ್ನಲಾಗಿದೆ. ಕೂಲಿ ಕೆಲಸಕ್ಕಾಗಿ ಕ್ರೂಸರ್ ವಾಹನದಲ್ಲಿ ಬೆಳಗಾವಿಯತ್ತ ಬರುತ್ತಿದ್ರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ, ಬಳ್ಳಾರಿ ನಾಲೆಗೆ ಕ್ರೂಸರ್ ವಾಹನ ಪಲ್ಟಿಯಾಗಿ ಬಿದ್ದು 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಿನಗೂಲಿ ನೌಕರರು ರೈಲ್ವೆ ಬ್ರಿಡ್ಜ್...