Home BIG BREAKING

Category: BIG BREAKING

Post
ಬೋಟ್ ನಲ್ಲಿ ನದಿ ದಾಟುತ್ತಿದ್ದ ವೇಳೆ ನದಿಯಲ್ಲೇ ಸಿಲುಕಿದ ಐವರ ರಕ್ಷಣೆ..!

ಬೋಟ್ ನಲ್ಲಿ ನದಿ ದಾಟುತ್ತಿದ್ದ ವೇಳೆ ನದಿಯಲ್ಲೇ ಸಿಲುಕಿದ ಐವರ ರಕ್ಷಣೆ..!

ಕಾರವಾರ: ಗ್ರಾಮದಿಂದ ಗ್ರಾಮಕ್ಕೆ ನದಿಯಲ್ಲಿ ಬೋಟ್ ಮೂಲಕ ದಾಟುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಬೋಟು ಕೆಟ್ಟು ಐವರು ಗ್ರಾಮಸ್ಥರು ಗಂಗಾವಳಿ ನದಿಯ ಮಧ್ಯೆ ಸಿಲುಕಿಕೊಂಡಿದ್ದ ಘಟನೆ ನಡೆದಿದೆ.  ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯತಿ ವ್ಯಾಪ್ತಿಯ ರಾಮನಗುಳಿಯಿಂದ ಡೋಂಗ್ರಿಗೆ ಸಂಪರ್ಕಿಸುವ ತೂಗುಸೇತುವೆ ಕಳೆದ ಎರಡು ವರ್ಷಗಳ ಹಿಂದೆ ಗಂಗಾವಳಿಯ ನೆರೆಗೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಸದ್ಯ ಇಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ಕೂಡ ಪ್ರಗತಿಯಲ್ಲಿತ್ತು. ಆದ್ರೆ, ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ...

Post
ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ, ರಕ್ಷಣೆ ಮಾಡಿದ್ದು ಹೇಗೆ ಗೊತ್ತಾ..?

ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ, ರಕ್ಷಣೆ ಮಾಡಿದ್ದು ಹೇಗೆ ಗೊತ್ತಾ..?

ಕಾರವಾರ: ತಾಲೂಕಿನ ಗೋಟೆಗಾಳಿ ಗ್ರಾಮದಲ್ಲಿ ಬೃಹತ್ ಕಾಳಿಂಗ ಸರ್ಪ ಪತ್ತೆಯಾಗಿದೆ. ಇಲ್ಲಿನ ವಾಸು ಪೆಡ್ನೇಕರ್ ಎಂಬುವವರ ಮನೆಯ ಬಳಿ ಪ್ರತ್ಯಕ್ಷವಾಗಿದ್ದ ಕಾಳಿಂಗ ಸರ್ಪ ಕಂಡು ಕುಟುಂಬದವರು ಆತಂಕಗೊಂಡಿದ್ರು.  ಹಾಗೆ, ಕಾಳಿಂಗ ಸರ್ಪ ಕಂಡು ಅತಂಕಗೊಂಡ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಹೀಗಾಗಿ, ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾಳಿಂಗ ರಕ್ಷಣೆ ಮಾಡಲಾಗಿದೆ. ಬರೋಬ್ಬರಿ 12 ಅಡಿ..! ಅಲ್ಲಿ ಪ್ರತ್ಯಕ್ಷವಾಗಿದ್ದ ಕಾಳಿಂಗ ಸರ್ಪ ಬರೋಬ್ಬರಿ 12 ಅಡಿಗೂ ಹೆಚ್ಚು ಉದ್ದವಾಗಿದೆ. ಆಹಾರ ಹುಡುಕಿಕೊಂಡು ಜನವಸತಿ...

Post
ಭೀಕರ ಅಪಘಾತ, ನಿಡಸೋಸಿ ಮಠದ ಶ್ರೀಗಳು ಅದೃಷ್ಟವಶಾತ್ ಪಾರು..!

ಭೀಕರ ಅಪಘಾತ, ನಿಡಸೋಸಿ ಮಠದ ಶ್ರೀಗಳು ಅದೃಷ್ಟವಶಾತ್ ಪಾರು..!

ಧಾರವಾಡ – ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರ ಅಂತ್ಯಕ್ರಿಯೆಗೆ ಬಂದಿದ್ದ ಶ್ರೀಗಳ ಕಾರು ಅಪಘಾತವಾಗಿದೆ. ಬೆಳಗಾವಿ ಹೊರವಲಯದ ತೇಗೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವಾಗಿದೆ. ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಪ್ರಯಾಣಿಸುತ್ತಿದ್ದ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿದ್ದು, ಕಾರ್ ಪಲ್ಟಿಯಾಗಿ ಕಾರ ನುಜ್ಜುಗುಜ್ಜಾಗಿದೆ. ಆದ್ರೆ ಏರಬ್ಯಾಗ ಇದ್ದಿದ್ದರಿಂದ ಅದೃಷ್ಟವಶಾತ್ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶ್ರೀಗಳ ಕಾಲಿಗೆ ಚಿಕ್ಕಪುಟ್ಟ ಗಾಯವಾಗಿದೆ. ಸದ್ಯ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ....

Post
ನಾಳೆ ಗುರುವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಿಸಿ ಡೀಸಿ ಆದೇಶ..!

ನಾಳೆ ಗುರುವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಿಸಿ ಡೀಸಿ ಆದೇಶ..!

ಮುಂಡಗೋಡ ತಾಲೂಕಿನಲ್ಲಿ ಮಳೆಯ ಅರ್ಬಟ ಮುಂದುವರೆದ ಹಿನ್ನೆಲೆಯಲ್ಲಿ ನಾಳೆ ಗುರುವಾರವೂ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಸೂಚನೆ‌ ನೀಡಲಾಗಿದ್ದು. ಹವಾಮಾನ ಇಲಾಖೆ ನೀಡಿರೋ ಮುನ್ಸೂಚನೆ ಹಿನ್ನೆಲೆಯಲ್ಲಿ, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನಾಳೆ ಗುರುವಾರವೂ ರಜೆ ಘೋಷಣೆ‌ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಭಾರೀ‌ಮಳೆ ಸುರಿಯೋ ಮುನ್ಸೂಚನೆ ನೀಡಲಾಗಿದ್ದು, ಎಚ್ಚರಿಕೆ ವಹಿಸುವಂತೆ ತಾಲೂಕಾಡಳಿತಗಳಿಗೆ ಸಂದೇಶ ರವಾನಿಸಲಾಗಿದೆ.

Post
ಭಾರೀ ಮಳೆ, ಗೋಕರ್ಣ ಬಳಿ ರಸ್ತೆ ಮೇಲೆ ಗುಡ್ಡ ಕುಸಿತ, ರಸ್ತೆ ಸಂಚಾರ ಅಸ್ತವ್ಯಸ್ತ..!

ಭಾರೀ ಮಳೆ, ಗೋಕರ್ಣ ಬಳಿ ರಸ್ತೆ ಮೇಲೆ ಗುಡ್ಡ ಕುಸಿತ, ರಸ್ತೆ ಸಂಚಾರ ಅಸ್ತವ್ಯಸ್ತ..!

 ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ, ಅವಾಂತರಗಳು ಸೃಷ್ಟಿಯಾಗಿವೆ. ಕುಮಟಾ ತಾಲೂಕಿನ ಗೋಕರ್ಣ ಕ್ರಾಸ್ ಬಳಿ ಗುಡ್ಡ ಕುಸಿತವಾಗಿದೆ. ಗೋಕರ್ಣದ ಮಾದನಗೇರಿಯ ಬಳಿ ಗುಡ್ಡ ಕುಸಿತವಾಗಿದ್ದು, ಐಆರ್‌ಬಿ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಗುಡ್ಡ ಕುಸಿತವಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಗುಡ್ಡ ಕುಸಿತದಿಂದಾಗಿ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು, ಹೀಗಾಗಿ, ವಾಹನಗಳಿಗೆ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೆದ್ದಾರಿಗೆ ಬಿದ್ದ ಮಣ್ಣನ್ನ ತೆರವುಗೊಳಿಸುವ ಕಾರ್ಯ ಚುರುಕುಗೊಳಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ,...

Post
ಮುಂದುವರೆದ ಮಳೆಯ ಅರ್ಭಟ ಹಿನ್ನೆಲೆ, ನಾಳೆ ಬುಧವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!

ಮುಂದುವರೆದ ಮಳೆಯ ಅರ್ಭಟ ಹಿನ್ನೆಲೆ, ನಾಳೆ ಬುಧವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಬುಧವಾರ ಹಾಗೂ ಗುರವಾರ ಭಾರೀ ಮಳೆಯ ಸೂಚನೆ‌ ನೀಡಲಾಗಿದೆ. ಹವಾಮಾನ ಇಲಾಖೆ ನೀಡಿರೋ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ, ನಾಳೆ ಬುಧವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಭಾರೀ‌ಮಳೆ ಸುರಿಯೋ ಮುನ್ಸೂಚನೆ ನೀಡಲಾಗಿದ್ದು, ಎಚ್ಚರಿಕೆ ವಹಿಸುವಂತೆ ತಾಲೂಕಾಡಳಿತಗಳಿಗೆ ಸಂದೇಶ ರವಾನಿಸಲಾಗಿದೆ.

Post
ಸಿನಿಮಿಯ ರೀತಿಯಲ್ಲಿ ಹಂತಕರ ಹೆಡೆಮುರಿ ಕಟ್ಟಿದ ಪೊಲೀಸರು, ಅಷ್ಟಕ್ಕೂ ಹತ್ಯೆ ನಂತರ ಪೊಲೀಸರಿಗೆ ಕರೆ ಮಾಡಿದ್ರಾ ಹಂತಕರು..?

ಸಿನಿಮಿಯ ರೀತಿಯಲ್ಲಿ ಹಂತಕರ ಹೆಡೆಮುರಿ ಕಟ್ಟಿದ ಪೊಲೀಸರು, ಅಷ್ಟಕ್ಕೂ ಹತ್ಯೆ ನಂತರ ಪೊಲೀಸರಿಗೆ ಕರೆ ಮಾಡಿದ್ರಾ ಹಂತಕರು..?

 ಬೆಳಗಾವಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಮಾಡಿ ಪರಾರಿಯಾಗುತ್ತಿದ್ದ ಹಂತಕರ ಅರೆಸ್ಟ್ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದ ಬಳಿ ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸ್ರು ಹಂತಕರನ್ನು ಹೆಡೆಮುರಿ ಕಟ್ಟಿದ್ದಾರೆ. ಚಂದ್ರಶೇಖರ್ ಗುರೂಜಿಯವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಹಂತಕರು, ಬಟ್ಟೆ ಬದಲಿಸಿ ಕಾರಲ್ಲೇ ಬೆಳಗಾವಿ ಮೂಲಕ ಮಹಾರಾಷ್ಟ್ರಕ್ಕೆ ತೆರಳುತ್ತಿದ್ರು. ಇದೇ ವೇಳೆ ಮೊಬೈಲ್ ಟವರ್ ಲೋಕೇಶನ್ ಆಧಾರದಲ್ಲಿ ಹತ್ಯೆಯಾದ ಕೇವಲ 4 ಗಂಟೆಯಲ್ಲೇ ಹಂತಕರನ್ನು ಎಳೆದು ತಂದಿದ್ದಾರೆ ಪೊಲೀಸರು. ಆರೋಪಿಗಳಿಂದಲೇ ಕರೆ..! ಇನ್ನು, ಹಾಗೆ ಗುರೂಜಿಯ ಹತ್ಯೆಯ...

Post
ಆಪ್ತರಿಂದಲೇ ಹತ್ಯೆಯಾದ್ರಾ ಚಂದ್ರಶೇಖರ ಗುರೂಜಿ..? ಬೇನಾಮಿ ಆಸ್ತಿಗಾಗಿ ಚುಚ್ಚಿ ಚುಚ್ಚಿ ಕೊಂದ್ರಾ ಹಂತಕರು..?

ಆಪ್ತರಿಂದಲೇ ಹತ್ಯೆಯಾದ್ರಾ ಚಂದ್ರಶೇಖರ ಗುರೂಜಿ..? ಬೇನಾಮಿ ಆಸ್ತಿಗಾಗಿ ಚುಚ್ಚಿ ಚುಚ್ಚಿ ಕೊಂದ್ರಾ ಹಂತಕರು..?

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯರ ಬೀಕರ ಹತ್ಯೆಯ ಹಿಂದೆ ಬೇನಾಮಿ ಆಸ್ತಿಯ ನೆರಳಿದೆ. ಬಹುತೇಕ ಆಪ್ತರೇ ಹಂತಕರು ಅನ್ನೋ ಪ್ರಾಥಮಿಕ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಅಷ್ಟಕ್ಕೂ, ಹಂತಕ ಆರೋಪಿಗಳು ಕಲಘಟಗಿ ತಾಲೂಕಿನ ದುಮ್ಮವಾಡದ ನಿವಾಸಿಗಳು ಎನ್ನಲಾಗಿದೆ. ಬೇನಾಮಿ ಆಸ್ತಿ ಕಾರಣವಾ..? ಇ‌ನ್ನು, ಚಂದ್ರಶೇಖರ್ ಗುರೂಜಿ ವನಜಾಕ್ಷಿಯ ಹೆಸರಿಗೆ ಬೇನಾಮಿ ಆಸ್ತಿ ಮಾಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಹಾಗೆ ವನಜಾಕ್ಷಿ ಹೆಸರಲ್ಲಿ ಇದ್ದ ಆಸ್ತಿ ವಾಪಸ್ ಕೇಳಿದ್ದ ಕಾರಣಕ್ಕೆ ಇಂತಹ ಭೀಕರ ಹತ್ಯೆ ನಡೆದಿದೆ ಅನ್ನುವ...

Post
ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಬರ್ಬರ ಹತ್ಯೆ..! 60 ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಹಂತಕರು..!

ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಬರ್ಬರ ಹತ್ಯೆ..! 60 ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಹಂತಕರು..!

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಬೀಕರ ಹತ್ಯೆಯಾಗಿದೆ. ಹುಬ್ಬಳ್ಳಿಯ ಖಾಸಗಿ ಹೊಟೇಲಿನಲ್ಲಿ ಭಕ್ತರ ಸೋಗಿನಲ್ಲಿ ಬಂದ ವ್ಯಕ್ತಿಯಿಂದ ಕೊಲೆ ನಡೆದಿದೆ. ಕಾಲಿಗೆ ಬೀಳುವ ನೆಪದಲ್ಲಿ ಬಂದ ವ್ಯಕ್ತಿ ಕಾಲಿಗೆ ಬೀಳುತ್ತಿದ್ದಂತೆ, ಮತ್ತೊಂದು ವ್ಯಕ್ತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೇವಲ 40 ಸೆಕೆಂಡ್ ನಲ್ಲೆ 60 ಬಾರಿ ಎದೆಗೆ ಚೂರಿ ಇರಿತವಾಗಿದೆ. ಹೀಗಾಗಿ, ಸ್ಥಳದಲ್ಲೇ ಚಂದ್ರಶೇಖರ ಸ್ವಾಮೀಜಿ ಮೃತಪಟ್ಟಿದ್ದಾರೆ. ಕೊಲೆಗೆ ಕಾರಣವೇನು, ಕೊಲೆಗಾರರು ಯಾರು ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಲಾಬುರಾಮ್...

Post
ಪುತ್ರನ ವಿರುದ್ಧ ಪ್ರಕಟಣೆ ಹೊರಡಿಸಿದ್ದು ನಾನೇ ಅಂದ್ರು, ವಿ.ಎಸ್.ಪಾಟೀಲ್, ಮಾಜಿ ಶಾಸಕರ ಮನದಾಳದ ಮಾತು ಎಂಥಾದ್ದು ಗೊತ್ತಾ..?

ಪುತ್ರನ ವಿರುದ್ಧ ಪ್ರಕಟಣೆ ಹೊರಡಿಸಿದ್ದು ನಾನೇ ಅಂದ್ರು, ವಿ.ಎಸ್.ಪಾಟೀಲ್, ಮಾಜಿ ಶಾಸಕರ ಮನದಾಳದ ಮಾತು ಎಂಥಾದ್ದು ಗೊತ್ತಾ..?

ಮುಂಡಗೋಡ: ತಮ್ಮ ಸುಪುತ್ರನ ವಿರುದ್ಧ ಪ್ರಕಟಣೆ ಹೊರಡಿಸಿದ್ದು ನಾನೇ ಅಂತಾ ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ತಮ್ಮ ಮನದಾಳದ ನೋವು ಹಂಚಿಕೊಂಡಿರೋ ಪಾಟೀಲರು, ಮಮ್ಮಲ ಮರುಗಿದ್ದಾರೆ. ಯಾವ ತಂದೆಗೂ ಈ ಪರಿಸ್ಥಿತಿ ಬರೋದು ಬೇಡ ಅಂತ ಅಳಲು ತೋಡಿಕೊಂಡಿದ್ದಾರೆ.